ಕುಮಾರಿ ಹುಡುಗಿಯರ ಪೂಜೆಯು ನವರಾತ್ರಿ ವ್ರತದ ಪ್ರಾಣವಾಗಿದೆ. ಸಾಧ್ಯವಿದ್ದರೆ ನವರಾತ್ರಿ ಮುಗಿಯುವ ವರೆಗೆ ಪ್ರತಿದಿನ ಅಥವಾ ಸಪ್ತಮಿಯಂದು ಕುಮಾರಿಯರ ಕಾಲುಗಳನ್ನು ತೊಳೆದು ಅವರಿಗೆ ಮೃಷ್ಟಾನ್ನ ಭೋಜನವನ್ನು ನೀಡಬೇಕು. ‘ಸ್ಕಂದ ಪುರಾಣದಲ್ಲಿ ಹೇಳಿರುವಂತೆ ಕುಮಾರಿಯರ ವಯಸ್ಸಿಗನುಸಾರ ಅವರ ವಿಧಗಳು –
೧. ೨ ವರ್ಷ – ಕುಮಾರಿ
೨. ೩ ವರ್ಷ – ತ್ರಿಮೂರ್ತಿಣಿ
೩. ೪ ವರ್ಷ – ಕಲ್ಯಾಣಿ
೪. ೫ ವರ್ಷ – ರೋಹಿಣಿ
೫. ೬ ವರ್ಷ – ಕಾಲಿ
೬. ೭ ವರ್ಷ – ಚಂಡಿಕಾ
೭. ೮ ವರ್ಷ – ಶಾಂಭವಿ
೮. ೯ ವರ್ಷ – ದುರ್ಗಾ
೯. ೧೦ ವರ್ಷ – ಸುಭದ್ರೆ.
– ಜ್ಯೋತಿಷಿ ಶ್ರೀ. ಬ.ವಿ. ಚಿಂತಾಮಣಿ ದೇಶಪಾಂಡೆ (ಗುರೂಜಿ), ಪುಣೆ
(ಆಧಾರ : ‘ಧಾರ್ಮಿಕ, ದೀಪಾವಳಿ ವಿಶೇಷಾಂಕ ೨೦೧೭)