ಬುದ್ಧಿಪ್ರಾಮಾಣ್ಯವಾದಿಗಳ ಬಹುದೊಡ್ಡ ಎರಡು ದೋಷಗಳೆಂದರೆ, ಜಿಜ್ಞಾಸೆಯ ಅಭಾವ ಮತ್ತು ‘ನನಗೆಲ್ಲವೂ ತಿಳಿದಿದೆ’ ಎಂಬ ಅಹಂಭಾವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನಾನು ಸಹ ೪೧ ನೆಯ ವಯಸ್ಸಿನ ತನಕ ದೇವರನ್ನು ನಂಬುತ್ತಿರಲಿಲ್ಲ. ಮುಂದೆ ಸಮ್ಮೋಹನ ಉಪಚಾರಶಾಸ್ತ್ರದ ಇತಿಮಿತಿ ತಿಳಿದ ನಂತರ ನಾನು ಸಾಧನೆಯನ್ನು ಆರಂಭಿಸಿದೆ. ಆಗ ಜಿಜ್ಞಾಸೆಯಿಂದ ಸಂತರಲ್ಲಿ ಸಾವಿರಾರು ಪ್ರಶ್ನೆಗಳನ್ನು ಕೇಳಿಕೊಂಡು ಮತ್ತು ಸಾಧನೆಯನ್ನು ಮಾಡಿ ಅಧ್ಯಾತ್ಮಶಾಸ್ತ್ರವನ್ನು ತಿಳಿದುಕೊಂಡೆ. ಇಲ್ಲದಿದ್ದರೆ ನಾನು ಸಹ ಒಬ್ಬ ಬುದ್ಧಿಹೀನ ಬುದ್ಧಿಪ್ರಾಮಾಣ್ಯವಾದಿಯಾಗಿರುತ್ತಿದ್ದೆ’.

ಭಯೋತ್ಪಾದಕರ ಕಾರ್ಯಪದ್ಧತಿ

‘ವಿಮಾನ, ರಾಕೆಟ್, ಬಾಂಬ್ ಇತ್ಯಾದಿಗಳ ಬಲದಿಂದಲ್ಲ, ಸ್ವತಃ ತಯಾರು ಮಾಡಿರುವ ಭಯೋತ್ಪಾದಕರ ಶಕ್ತಿಯ ಬಲದಿಂದ ಭಯೋತ್ಪಾದಕರು ಜಗತ್ತಿನ ಎಲ್ಲ ದೇಶಗಳಲ್ಲಿ ಭಯ ವನ್ನುಂಟು ಮಾಡುತ್ತಿದ್ದಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ