ಅರ್ಬುದ ರೋಗದಿಂದ ಬಳಲುತ್ತಿರುವ ಸಾಧಕಿಯಿಂದಲೂ ಸಮಷ್ಟಿಗೆ ಕಲಿಸಲು ಮತ್ತು ಸಾಧನೆ ಬಗ್ಗೆ ದೃಷ್ಟಿಕೋನ ನೀಡುವ ಪರಾತ್ಪರ ಗುರು ಡಾ. ಆಠವಲೆಯವರ ತಳಮಳ  !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

(ಭಾಗ ೧೪)

೧. ‘ಅರ್ಬುದರೋಗದಿಂದ ಬಳಲುತ್ತಿರುವ ಓರ್ವ ಸಾಧಕಿಯು ಸತತ ಆನಂದದಲ್ಲಿ ಹೇಗೆ ಇರುತ್ತಾಳೆ ?’, ಇದರ ಕಾರಣ ಹುಡುಕಲು ಗುರುದೇವರು ಹೇಳುವುದು

‘ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಮೃತ್ಯುವಿನ ಸ್ಪಂದನಗಳ ಅಧ್ಯಯನ ಮಾಡಲು ಹೇಳಿದ್ದರು. ಆ ಸಮಯದಲ್ಲಿ ಫೊಂಡಾ (ಗೋವಾ)ದಲ್ಲಿನ ‘ಸುಖಸಾಗರ’ ಸೇವಾಕೇಂದ್ರದಲ್ಲಿ ಸೌ. ಮಂಜೂ ಸಿಂಹ ಹೆಸರಿನ ಸಾಧಕಿಯು ಅರ್ಬುದ ರೋಗದಿಂದ ಬಳಲುತ್ತಿದ್ದಳು. ಅವರಿಗೆ ದಿನವಿಡಿ ಅಪಾರ ವೇದನೆಯಾಗುತ್ತಿತ್ತು, ಆದರೂ ಅವಳು ಸತತವಾಗಿ ಆನಂದದಲ್ಲಿ ಇರುತ್ತಿದ್ದಳು. ಪರಾತ್ಪರ ಗುರು ಡಾಕ್ಟರರು ನಮಗೆ, ‘ಗುಣಪಡಿಸಲಾಗದ ಕಾಯಿಲೆಯಲ್ಲಿಯೂ ಅವಳು ಸತತವಾಗಿ ಹೇಗೆ ಆನಂದದಲ್ಲಿ ಇರುತ್ತಾಳೆ ? ಎಂಬುದರ ಕಾರಣವನ್ನು ಹುಡುಕಲು ಹೇಳಿದರು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೨. ಸತತ ಭಾವಾವಸ್ಥೆ ಮತ್ತು ಈಶ್ವರೀ ಅನುಸಂಧಾನದಿಂದ ದೇಹಬುದ್ಧಿ ಕಡಿಮೆ ಆಗಿ ಸಾಧಕಿಯ ಮುಖದಲ್ಲಿ ಸದಾ ಮಂದಹಾಸ ಇರುತ್ತದೆ ಎಂದು ತಿಳಿಯುವುದು

ಸೌ. ಮಂಜೂ ಸಿಂಹ ಇವರ ಪರೀಕ್ಷಣೆ ಮಾಡಿದ ನಂತರ ನಮ್ಮ ಗಮನಕ್ಕೆ ಬಂದಿದ್ದೇನೆಂದರೆ, ಅವರ ಅಂತರ್ಮನಸ್ಸಿನಲ್ಲಿ ದೇವರು ಮತ್ತು ಗುರುದೇವರ ಬಗ್ಗೆ ಎಷ್ಟೊಂದು ಭಾವವಿದೆ, ಅಂದರೆ ಅವರಿಗೆ ಸತತವಾಗಿ ಆಗುವ ವೇದನೆಗಳ ಬಗ್ಗೆ ಏನೂ ಅನಿಸುವುದಿಲ್ಲ. ಸತತವಾದ ಭಾವಾವಸ್ಥೆ ಮತ್ತು ಈಶ್ವರಿ ಅನುಸಂಧಾನದಿಂದ ಅವರಿಗೆ ದೇಹದ ಮೇಲಿನ ಆಸಕ್ತಿ ಕಡಿಮೆ ಆಗಿತ್ತು. ದೇಹಬುದ್ಧಿ ಕಡಿಮೆಯಾಗಿರುವುದರಿಂದ ಅವರ ಮುಖದ ಮೇಲೆ ಸತತ ಮಂದಹಾಸವಿರುತ್ತಿತ್ತು. ಇದರ ಬಗ್ಗೆ ನಮಗೆ ತುಂಬಾ ಆಶ್ಚರ್ಯವೆನಿಸುತ್ತಿತ್ತು.

೩. ಅನಾರೋಗ್ಯಪೀಡಿತ ಸಾಧಕಿಯ ಪ್ರಯತ್ನಗಳ ಬಗ್ಗೆ ಸತ್ಸಂಗದಲ್ಲಿ ಹೇಳುವಂತೆ ಅವಳ ಅಕ್ಕನಿಗೆ ಪರಾತ್ಪರ ಗುರು ಡಾಕ್ಟರರು ಹೇಳುವುದು ಮತ್ತು ಅದರಿಂದ ಇತರ ಸಾಧಕರಿಗೆ ಸಾಧನೆಯಲ್ಲಿ ಪ್ರೋತ್ಸಾಹ ಸಿಗುವುದು

ಪರಾತ್ಪರ ಗುರು ಡಾಕ್ಟರರು ಸೌ. ಮಂಜೂ ಇವರ ನಿತ್ಯ ಜೀವನಕ್ರಮ ಮತ್ತು ಅವರಿಂದಾಗುತ್ತಿರುವ ಸಾಧನೆಯ ಪ್ರಯತ್ನಗಳ ಬಗ್ಗೆ ಅವರ ಅಕ್ಕ ಸೌ. ಅರುಣಾ ಸಿಂಹ ಇವರಿಗೆ ಪ್ರತಿಯೊಂದು ಸತ್ಸಂಗದಲ್ಲಿ ಮಾತನಾಡಲು ಹೇಳುತ್ತಿದ್ದರು. ಆದ್ದರಿಂದ ನಮಗೆ ಮಂಜೂ ಇವರ ಸಾಧನೆಯ ಪ್ರಯತ್ನಗಳು ಪ್ರತಿಯೊಂದು ಸತ್ಸಂಗದಲ್ಲಿ ತಿಳಿಯುತ್ತಿದ್ದವು ಮತ್ತು ನಮ್ಮ ಸಾಧನೆಗೂ ಪ್ರೋತ್ಸಾಹ ಸಿಗುತ್ತಿತ್ತು. ಸೌ. ಅರುಣಾ ಇವರು ಅತ್ಯಂತ ಸರಳ ಮತ್ತು ಸಹಜವಾಗಿ ಮಂಜೂ ಇವರ ಪ್ರಯತ್ನಗಳನ್ನು ವರ್ಣಿಸುತ್ತಿದ್ದರು. ‘ಈ ವರ್ಣನೆ ಕೇಳುತ್ತಲೇ ಇರಬೇಕು’, ಎಂದೆನಿಸುತ್ತಿತ್ತು.

(ಇದನ್ನು ಬರೆಯುವಾಗ ನನಗೆ ಮಲ್ಲಿಗೆಯ ಮಂದ ಪರಿಮಳ ಬಂದಿತು.)

೪. ‘ಮನಸ್ಸು ಈಶ್ವರನ ಅನುಸಂಧಾನದಲ್ಲಿದ್ದರೆ, ಅಸಹನೀಯ ವೇದನೆಗಳನ್ನು ಭೋಗಿಸುವ ಜೀವವೂ ತನ್ನ ಸಹವಾಸದಿಂದ ಇತರರಿಗೆ ಆನಂದ ನೀಡುತ್ತದೆ’, ಎಂಬುದನ್ನು ಮನಸ್ಸಿನಲ್ಲಿ ಬಿಂಬಿಸುವ ಪರಾತ್ಪರ ಗುರು ಡಾಕ್ಟರರು !

ಇದರಿಂದ ಪರಾತ್ಪರ ಗುರು ಡಾಕ್ಟರರಲ್ಲಿ ಸಾಧಕರಿಗೆ ಕಲಿಸುವ ಮತ್ತು ಅವರಲ್ಲಿ ಸಾಧನೆ ವಿಷಯದ ದೃಷ್ಟಿಕೋನ ನೀಡುವ ತಳಮಳ ಕಂಡುಬರುತ್ತದೆ. ಪರಾತ್ಪರ ಗುರು ಡಾಕ್ಟರರು ‘ಸಾಧಕರ ಪ್ರತಿಯೊಂದು ಸ್ಥಿತಿಯಿಂದ ಸಮಷ್ಟಿಗೆ ಏನು ಲಾಭ ಮಾಡಿಕೊಡಬಹುದು?’, ಎಂಬುದನ್ನು ನೋಡುತ್ತಿದ್ದರು. ನಿಜ ಹೇಳುವುದಾದರೆ ವ್ಯವಹಾರದಲ್ಲಿ ಅರ್ಬುದರೋಗದಿಂದ ಬಳಲುತ್ತಿರುವ ರೋಗಿಯನ್ನು ಒಂದು ದುಃಖಿ ಜೀವವೆಂದೇ ನೋಡಲಾಗುತ್ತದೆ; ಆದರೆ ಇಲ್ಲಿ ಮಾತ್ರ ಎಲ್ಲವೂ ವಿರುದ್ಧವೇ ಆಗಿತ್ತು. ಮಂಜೂ ಇವರ ಸಹವಾಸದಲ್ಲಿ ಎಲ್ಲರಿಗೂ ಆನಂದವಾಗುತ್ತಿತ್ತು. ಇದರಿಂದ ಪರಾತ್ಪರ ಗುರು ಡಾಕ್ಟರರು ಎಲ್ಲ ಸಾಧಕರ ಮನಸ್ಸಿನ ಮೇಲೆ ‘ರೋಗವು ಕೇವಲ ದೇಹಕ್ಕೆ ಇರುತ್ತದೆ; ಆದರೆ ಮನಸ್ಸು ಮಾತ್ರ ಈಶ್ವರನ ಅನುಸಂಧಾನದಲ್ಲಿ ಆನಂದದಲ್ಲಿದ್ದರೆ, ಇಂತಹ ಗುಣಪಡಿಸಲಾಗದ ಅಸಹನೀಯ ವೇದನೆಗಳನ್ನು ಭೋಗಿಸುವ ಜೀವವೂ ತನ್ನ ಸಹವಾಸದಿಂದ ಇತರರಿಗೆ ಆನಂದವನ್ನು ಕೊಡುತ್ತದೆ, ಆ ಜೀವದಲ್ಲಿ ಅಷ್ಟೊಂದು ಶಕ್ತಿಯು ಸಾಧನೆಯಿಂದ ನಿರ್ಮಾಣವಾಗುತ್ತದೆ’, ಎಂದು ಬಿಂಬಿಸಿದರು.

‘ತೀವ್ರ ರೋಗವಿರುವ ಸಾಧಕರಿಂದ, ಹಾಗೆಯೇ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಂದ ಏನು ಕಲಿಯಬೇಕು ?’, ಎಂಬುದನ್ನು ಗುರುದೇವರು ನಮಗೆ ಕಲಿಸಿದರು. ‘ಜೀವನದಲ್ಲಿ ಏನು ಕಲಿಯಬೇಕು ?’, ಅದೂ ತಿಳಿಯಬೇಕು. ಅದಕ್ಕಾಗಿಯೇ ಗುರುಗಳ ಆವಶ್ಯಕತೆ ಇರುತ್ತದೆ. ‘ಗುರುಗಳನ್ನು ಬಿಟ್ಟರೆ ಬೇರೆ ಆಧಾರವಿಲ್ಲ |’, ಇದೇ ನಿಜವಾಗಿದೆ !’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೯.೨.೨೦೨೨)

(ಮುಂದುವರಿಯುವುದು)

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.