ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಅನೇಕ ಸಾಧಕರನ್ನು ತಯಾರಿಸಿದ್ದಾರೆ. ‘ಅದನ್ನು ಅವರು ಹೇಗೆ ಮಾಡುತ್ತಾರೆ ?’ ಎನ್ನುವುದರ ಬಗ್ಗೆ ನನಗೆ ಬಹಳ ಕುತೂಹಲವಿತ್ತು; ಆದ್ದರಿಂದ ನಾನು ಕೆಲವು ಸಾಧಕಿಯರ ಬಳಿ ಕೆಲವು ದಿನಗಳ ಹಿಂದಷ್ಟೇ ಈ ಪ್ರಶ್ನೆ ಕೇಳಿದ್ದೆನು. ಆಗ ಅವರು ಯಾವುದೇ ಉತ್ತರವನ್ನು ನೀಡಿರಲಿಲ್ಲ. ಆದರೆ ಇಂದು ನೀನು (ಕು.ಗುಲಾಬಿ ಧುರಿ) ನೀಡಿರುವ ಉತ್ತರಗಳನ್ನು ಓದಿ, ನನಗೆ ಅನೇಕ ಉದಾಹರಣೆ ಗಳಿಂದ ಉತ್ತರ ಸಿಕ್ಕಿತು. ಈ ಬಗ್ಗೆ ನಿನ್ನನ್ನು ಎμÀಟ್Ä ಹೊಗಳಿದರೂ ಕಡಿಮೆಯಾಗಿದೆ. ಇದೇ ರೀತಿ ಶೀಘ್ರ ಪ್ರಗತಿ ಬಗ್ಗೆ ಶುಭಾಶಯಗಳು. – (ಪರಾತ್ಪರ ಗುರು ಡಾ. ಆಠವಲೆ) |
‘೨೦೨೨ ರ ದೀಪಾವಳಿಯ ಕಾಲಾವಧಿಯಲ್ಲಿ ನನಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತು. ಸೇವೆಯನ್ನು ಮಾಡುತ್ತಿರುವಾಗ ನನ್ನಿಂದ ಬಹಳಷ್ಟು ತಪ್ಪುಗಳಾದವು. ಆ ಸಮಯದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನನಗೆ ‘ತಪ್ಪುಗಳಾದ ಬಳಿಕ ಯೋಗ್ಯ ದೃಷ್ಟಿಕೋನ ಮತ್ತು ಯೋಗ್ಯ ವಿಚಾರ ಪ್ರಕ್ರಿಯೆ ಹೇಗಿರಬೇಕು ? ‘ತಪ್ಪುಗಳಾಗಬಾರದು’ ಎಂದು ಉಪಾಯ ಯೋಜನೆಯನ್ನು ಹೇಗೆ ಮಾಡಬೇಕು ?’ ಎನ್ನುವುದನ್ನು ಕಲಿಸಿದರು. ಈ ವಿಷಯದಲ್ಲಿ ಕೆಲವು ಅಂಶಗಳನ್ನು ಮುಂದೆ ನೀಡಲಾಗಿದೆ.
೧. ಇತರರ ವಿಚಾರ ಮಾಡುವುದು : ಶ್ರೀ ಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಹಾಪ್ರಸಾದದ ಸಮಯವಾದಾಗ ನಾನು ಅವರಿಗಾಗಿ ಮಹಾಪ್ರಸಾದವನ್ನು ತೆಗೆದುಕೊಂಡು ಕೋಣೆಗೆ ಹೋದೆನು. ಅವರು ಮಹಾಪ್ರಸಾದವನ್ನು ಸೇವಿಸುತ್ತಿರುವಾಗ ನಾನು ಪಕ್ಕದಲ್ಲಿ ನಿಂತಿರುವುದನ್ನು ನೋಡಿ, ಅವರು ನನಗೆ ‘ನೀನು ಏಕೆ ನಿಂತಿದ್ದೀಯಾ ? ಪಕ್ಕದ ಕುರ್ಚಿಯಲ್ಲಿ ಕುಳಿತುಕೋ. ನಿಂತುಕೊಂಡು ನಿನ್ನ ಕಾಲು ನೋಯಬಹುದು. ನನಗೆ ಏನಾದರೂ ಬೇಕಿದ್ದರೆ ನಾನು ನಿನ್ನಲ್ಲಿ ಕೇಳುತ್ತೇನೆ’’ ಎಂದು ಹೇಳಿದರು. ಅವರು ಮಹಾಪ್ರಸಾದ ಸ್ವೀಕರಿಸಿದ ಬಳಿಕ ನನಗೆ ಎಲ್ಲ ಪಾತ್ರೆಗಳನ್ನು ಒಂದೇ ಸಲ ತೆಗೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಆಗ ಅವರು ನನಗೆ ಸಹಾಯ ಮಾಡಲು ಇನ್ನೊಬ್ಬ ಸಾಧಕಿಯನ್ನು ಕರೆದರು.
೨. ಮನಮುಕ್ತವಾಗಿ ಮಾತನಾಡಲು ಕಲಿಸಿ ಸಹಾಯ ಮಾಡುವುದು : ದೀಪಾವಳಿಯ ಕಾಲಾವಧಿಯಲ್ಲಿ ಸಾಧಕರ ಸಂಖ್ಯೆ ಕಡಿಮೆ ಯಿದ್ದುದರಿಂದ ನನಗೆ ಅರ್ಧ ಸಮಯ ಅತಿಥಿಗಳ ಸೇವೆ ಮತ್ತು ಅರ್ಧ ಸಮಯ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಸೇವೆ ಸಿಕ್ಕಿತು. ಆಗ ನನಗೆ ಬಹಳ ಓಡಾಟವಾಗುತ್ತಿತ್ತು. ಆ ವಿμÀಯದಲ್ಲಿ ನಾನು ಮನಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಒಂದು ದಿನ ಅತಿಥಿಗಳ ಸೇವೆ ಮಾಡುತ್ತಿರುವಾಗ ನನಗೆ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಒಂದು ಸೇವೆಗೆ ಹೋಗಲು ವಿಳಂಬವಾಯಿತು. ಅವರು ‘ನೀನು ಇಲ್ಲಿಯತನಕ ಎಲ್ಲಿದ್ದೆ ?’ ಎಂದು ಕೇಳಿದಾಗ ನನಗೆ ಏನೂ ಮಾತನಾಡಲು ಸಾಧ್ಯವಾಗಲಿಲ್ಲ ಮತ್ತು ನಾನು ಅಳತೊಡಗಿದೆನು. ಆ ಸಮಯದಲ್ಲಿ ಅವರು ನನಗೆ ಮನಮುಕ್ತವಾಗಿ ಮಾತನಾಡಲು ಹೇಳಿದರು. ಅವರು ನನ್ನ ಸ್ಥಿತಿಯನ್ನು ಅರಿತು, ನಾನು ಮಾಡುತ್ತಿದ್ದ ಕೆಲವು ಸೇವೆಗಳನ್ನು ಇತರ ಸಾಧಕರಿಗೆ ನೀಡಿದರು.
೩. ತಪ್ಪುಗಳಿಂದ ಕಲಿತು ಅವುಗಳಲ್ಲಿನ ಆನಂದವನ್ನು ಪಡೆಯಲು ಹೇಳುವುದು : ನನ್ನಲ್ಲಿದ್ದ ‘ಪ್ರತಿμಠ್É ಕಾಪಾಡುವುದು’ ಮತ್ತು ‘ಸ್ಪಷ್ಟೀಕರಣ ನೀಡುವುದು’ ಈ ಅಹಂನ ಅಂಶಗಳಿಂದ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಸೇವೆಯನ್ನು ಮಾಡುವಾಗ ನನಗೆ ಸಹಜವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಅವರು ನನ್ನ ತಪ್ಪನ್ನು ಹೇಳಿದಾಗ ”ಅವರ ಬಳಿಗೆ ಹೇಗೆ ಹೋಗುವುದು ?’, ಎನ್ನುವ ವಿಚಾರದಿಂದ ನಾನು ಒತ್ತಡಕ್ಕೆ ಒಳಗಾದೆನು. ಆ ಸಮಯದಲ್ಲಿ ಅವರು ನನಗೆ ಒಂದು ಸೇವೆಗಾಗಿ ಕರೆದರು ಮತ್ತು ನನ್ನನ್ನು ವಿಚಾರಿಸಿ, ಅವರು ಮುಂದಿನಂತೆ ಹೇಳಿದರು, ”ನನ್ನ ಮಾತು ಗಳಿಂದ ನಿನಗೆ ಒತ್ತಡವೆನಿಸುತ್ತಿಲ್ಲವಲ್ಲ. ನೀನು ಕಲಿಯಬೇಕು. ಸಮಷ್ಟಿಯ ದೃಷ್ಟಿಯಿಂದ ನೀನು ವಿಚಾರ ಮಾಡಬೇಕು. ಸಂಕುಚಿತ ವೃತ್ತಿಯನ್ನು ಬಿಟ್ಟು ನಿನ್ನ ಸಾಧನೆ ವಿಕಸಿತಗೊಳ್ಳಬೇಕು. ಆದ್ದರಿಂದ ನಾನು ನಿನ್ನಿಂದ ಆಗಿರುವ ತಪ್ಪುಗಳನ್ನು ಆಯಾ ಸಮಯದಲ್ಲಿ ನಿನ್ನ ಗಮನಕ್ಕೆ ತರುತ್ತೇನೆ. ನೀನು ಒತ್ತಡದಲ್ಲಿ ಇರಬೇಡ. ಕಲಿಯುವುದರಲ್ಲಿನ ಆನಂದವನ್ನು ಪಡೆದುಕೊ.’’ ಅವರ ಇಂತಹ ಮಾತುಗಳಿಂದ ನನ್ನ ಮನಸ್ಸಿನ ಒತ್ತಡವು ಕ್ಷಣದಲ್ಲಿಯೇ ನಷ್ಟವಾಯಿತು.
೪. ಸಾಧಕಿಗೆ ಅವಳ ಸಂಕುಚಿತ ವೃತ್ತಿಯನ್ನು ಗಮನಕ್ಕೆ ತಂದು ಕೊಡುವುದು : ನಾನು ಬಹಳಷ್ಟು ಸಲ ಶ್ರೀಸತ್ಶಕ್ತಿ (ಸೌ.) ಸಿಂಗಬಾಳರ ಕೋಣೆಗೆ ಹೋಗುತ್ತೇನೆ ಮತ್ತು ನನ್ನ ನಿಯೋಜಿತ ಸೇವೆಯನ್ನು ಮಾಡಿ ವಾಪಾಸು ಬರುತ್ತೇನೆ. ಒಮ್ಮೆ ಅವರು ತಲೆಯಲ್ಲಿ ಹಾಕಿಕೊಂಡಿದ್ದ ಹೂವುಗಳನ್ನು ಮೇಜಿನ ಮೇಲೆ ಇಟ್ಟಿದ್ದರು. ‘ಆ ಹೂವುಗಳನ್ನು ಏನು ಮಾಡಬೇಕು ?’, ಎಂದು ನಾನು ಅವರಲ್ಲಿ ಕೇಳಲಿಲ್ಲ. ಮರುದಿನ ಅವರು ನನ್ನ ಈ ತಪ್ಪನ್ನು ಹೇಳಿ, ನನ್ನ ಸಂಕುಚಿತ ವೃತ್ತಿಯನ್ನು ನನ್ನ ಗಮನಕ್ಕೆ ತಂದುಕೊಟ್ಟರು.
೫. ಸೇವೆಯನ್ನು ಮಾಡುವಾಗ ಸರ್ವತೋಮುಖ ವಿಚಾರ ಮಾಡಲು ಕಲಿಸುವುದು : ಎರಡು ದಿನಗಳ ಬಳಿಕ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಸೇವೆ ಮಾಡುತ್ತಿದ್ದ ಕೋಣೆಯ ಪಕ್ಕದ ಕೋಣೆಯಲ್ಲಿ ಹೂವಿನ ಒಂದು ಮಾಲೆಯನ್ನು ಇಟ್ಟಿದ್ದರು. ಆ ಮಾಲೆಯನ್ನು ನಾನು ಅವರಿಗೆ ತೋರಿಸದೆಯೇ, ‘ಪಕ್ಕದ ಕೋಣೆಯಲ್ಲಿ ಒಂದು ಹೂವಿನ ಮಾಲೆಯಿದೆ. ಅದನ್ನು ಏನು ಮಾಡಲಿ ?’ ಎಂದು ಅವರಲ್ಲಿ ಕೇಳಿದೆನು. ಆಗ ಅವರು ನನಗೆ ”ಆ ಮಾಲೆಯ ಸ್ಥಿತಿ ಇಲ್ಲಿ ಕುಳಿತುಕೊಂಡೇ ನಾನು ಹೇಗೆ ಹೇಳಬಹುದು ? ಅದಕ್ಕಾಗಿ ಆ ಮಾಲೆಯನ್ನು ಇಲ್ಲಿ ತಂದು ತೋರಿಸಬೇಕು’’ ಎಂದು ಹೇಳಿದರು, ಇದರಿಂದ ನನಗೆ ‘ಕೇವಲ ಹೇಳಿದ್ದಷ್ಟನ್ನೇ ಮಾಡುವುದು ಮತ್ತು ಸೋಮಾರಿತನದ ವೃತ್ತಿಯಿಂದ ಸೇವೆ ಮಾಡಿದರೆ, ಅದರ ಫಲಿತಾಂಶ ಅಲ್ಪವಾಗುತ್ತದೆ. ಆದ್ದರಿಂದ ವಿಚಾರ ಮಾಡಿ ಸೇವೆಯನ್ನು ಮಾಡಬೇಕು’, ಎನ್ನುವುದನ್ನು ನಾನು ಕಲಿತೆನು.
೬. ನನ್ನ ಸಾಧನೆ ವಿಕಸಿತವಾಗಲು ಸೇವೆಯನ್ನು ಮಾಡುವಾಗ ಅಂತರ್ಮುಖಳಾಗಿ ಚಿಂತನೆ ಮಾಡಲು ಹೇಳುವುದು : ಓರ್ವ ಧರ್ಮಪ್ರೇಮಿಯು ಶ್ರೀಸತ್ಶಕ್ತಿ (ಸೌ.) ಸಿಂಗಬಾಳರಿಗೆ ಒಂದು ಗ್ರಂಥವನ್ನು ಉಡುಗೊರೆಯಾಗಿ ನೀಡಿದ್ದರು. ಆ ಗ್ರಂಥದಲ್ಲಿ ಓರ್ವ ಸಾಧಕಿಯ ಲೇಖನವಿತ್ತು. ನಾನು ಆ ಗ್ರಂಥವನ್ನು ಅವರ ಕೈಗಿಡುತ್ತಾ, ‘ಈ ಗ್ರಂಥದಲ್ಲಿ ಓರ್ವ ಸಾಧಕಿಯ ಲೇಖನವಿದೆ’ ಎಂದು ಹೇಳಿದೆನು. ಆಗ ಅವರು ನನಗೆ ”ನೀನು ಗ್ರಂಥದಲ್ಲಿರುವ ಆ ಲೇಖನವನ್ನು ನೋಡಿದ್ದರೆ, ಆ ಲೇಖನವಿರುವ ಪುಟದೊಳಗೆ ಒಂದು ಚಿಕ್ಕ ಕಾಗದವನ್ನಿಟ್ಟು ಗುರುತು ಮಾಡಿದ್ದರೆ, ಆ ಲೇಖನವನ್ನು ಹುಡುಕಲು ನನ್ನ ಸಮಯ ಉಳಿತಾಯವಾಗುತ್ತಿತ್ತು. ‘ಇದು ನಿನ್ನ ತಪ್ಪು ಎಂದಲ್ಲ’, ಆದರೆ ಹೀಗೆ ಮಾಡಿದ್ದರೆ ನಿನ್ನ ಸಾಧನೆಯ ವಿಕಾಸ ಆಗುತ್ತಿತ್ತು, ಅದಕ್ಕಾಗಿ ಅಂತರ್ಮುಖಳಾಗಿದ್ದು ನಿನ್ನ ಬಗ್ಗೆ ಚಿಂತನೆ ಮಾಡಲು ಬರಬೇಕು’ ಎಂದು ಹೇಳಿದರು.
೭. ತಪ್ಪು ಆದ ಬಳಿಕ ಕೇವಲ ಕ್ಷಮೆ ಕೇಳುವುದರ ಬದಲು ಆ ವಿμÀಯದ ಬಗ್ಗೆ ಚಿಂತನೆಯನ್ನು ಮಾಡಲು ಕಲಿಸುವುದು : ನನ್ನಿಂದ ಏನಾದರೂ ತಪ್ಪಾದರೆ ನಾನು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರಿಗೆ ಕೇವಲ ‘ಅಕ್ಕಾ ಕ್ಷಮಿಸಿರಿ’ ಎಂದು ಹೇಳುತ್ತಿದ್ದೆನು. ಒಮ್ಮೆ ಅವರು ನನಗೆ ಮುಂದಿನಂತೆ ಹೇಳಿದರು,’ ಕೇವಲ ‘ಕ್ಷಮಿಸಿರಿ’ ಎಂದು ಹೇಳಿದರೆ ಸಾಕಾಗುವುದಿಲ್ಲ. ‘ಈ ತಪ್ಪು ನನ್ನಿಂದ ಹೇಗೆ ಆಯಿತು ? ನಾನು ಯಾವ ವಿಚಾರದಲ್ಲಿದ್ದೆನು ?’ ಎಂದು ಪ್ರತಿಯೊಂದು ಕ್ಷಣ ಚಿಂತನೆ ಆಗಬೇಕು. ಇದರರ್ಥ ‘ಕ್ಷಮೆ ಕೇಳಬಾರದು’ ಎಂದಲ್ಲ; ಆದರೆ ಕೇವಲ ‘ಕ್ಷಮಿಸಿರಿ’ ಎಂದು ಹೇಳುವುದರಿಂದ ನಾವು ಕಲಿಯುವುದಿಲ್ಲ. ಆದ ತಪ್ಪುಗಳ ಚಿಂತನೆಯಾದರೆ ಕೂಡಲೇ ನಮ್ಮ ಗಮನಕ್ಕೆ ಬರುತ್ತದೆ ಮತ್ತು ನಾವು ಅದರಿಂದ ಕಲಿಯುತ್ತೇವೆ’’.
‘ಹೇ ಶ್ರೀಸತ್ಶಕ್ತಿ ಬಿಂದಾ ಮಾತೆ, ನೀವು ಸಾಧಕರನ್ನು ಸಾಧನೆಯಲ್ಲಿ ಮುಂದಕ್ಕೆ ಕರೆದೊಯ್ಯಲು ಅವಿರತವಾಗಿ ಕಾರ್ಯ ನಿರತರಾಗಿದ್ದೀರಿ, ಆದರೆ ನಾವು ಕಡಿಮೆ ಬೀಳುತ್ತೇವೆ. ಹೇ ಮಾತೆ, ‘ನೀವೇ ನಮ್ಮಿಂದ ಸೇವೆ ಮತ್ತು ಸಾಧನೆಯನ್ನು ಮಾಡಿಸಿಕೊಳ್ಳಿರಿ’ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ’.
– ಕು. ಗುಲಾಬಿ ಧುರಿ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೯.೧೧.೨೦೨೨)