ಸದ್ಯ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಉತ್ಸವ ೧೪೪ ವರ್ಷಗಳ ನಂತರ ಬಂದಿರುವುದರಿಂದ ಅದು ‘ಮಹಾಕುಂಭಮೇಳ’ವಾಗಿದೆ. ಸೂರ್ಯ ಮತ್ತು ಗುರು ಗ್ರಹಗಳು ೧೪೪ ವರ್ಷಗಳಿಗೊಮ್ಮೆ ಸಂಪರ್ಕಿಸುವ ವಿಶಿಷ್ಟ ರಾಶಿಗಳ ಸಂಬಂಧದಿಂದ ಈ ಯೋಗ ಬರುತ್ತದೆ. ಈ ಹಿಂದೆ ೧೮೮೧ ರಲ್ಲಿ ಮತ್ತು ಮುಂದಿನ ಮಹಾಕುಂಭ ೨೧೬೯ ರಲ್ಲಿ ನಡೆಯಲಿಕ್ಕಿರುವುದರಿಂದ ಎರಡು ಮಹಾಕುಂಭಗಳನ್ನು ನೋಡುವ ಭಾಗ್ಯ ಸಾಮಾನ್ಯ ಮಾನವನಿಗಿಲ್ಲ. ಆದರೂ ಅಂತಹ ಕೆಲವು ಯೋಗಿ ಮಹಾಪುರುಷರಿದ್ದಾರೆ, ಅವರು ದಿವ್ಯ ಭಾರತಭೂಮಿಯಲ್ಲಿನ ಹಿಮಾಲಯ ಅಥವಾ ಇನ್ನಿತರ ಅರಣ್ಯಗಳಲ್ಲಿದ್ದು ಕಳೆದ ನೂರಾರು ವರ್ಷಗಳಿಂದ ಸಾಧನಾನಿರತರಾಗಿದ್ದಾರೆ. ಅವರ ಪೈಕಿ ಕೆಲವರು ಇಂತಹ ಉತ್ಸವಗಳಿಗೆ ಬರುತ್ತಾ ಇರುತ್ತಾರೆ, ಎಂದು ಹೇಳಲಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಅವರು ಬರುವುದರಿಂದ ಕುಂಭಮೇಳದ ಚೈತನ್ಯ ಅನೇಕ ಪಟ್ಟು ಹೆಚ್ಚಾಗುತ್ತದೆ, ಇಂತಹ ಮಹಾತ್ಮರ ಸತ್ಸಂಗ ಅಜ್ಞಾನದಿಂದಾದರೂ ಸಾಮಾನ್ಯ ಹಿಂದೂ ಸಮಾಜಕ್ಕೆ ಸಿಗುವುದೆಂದರೆ ಇದು ಹಿಂದೂಗಳ ಮಹಾಭಾಗ್ಯವೆ ಆಗಿದೆ, ಎಂಬುದು ಗಮನಿಸುವ ಹಾಗಿದೆ. ಅಧ್ಯಾತ್ಮ, ತಪಶ್ಚರ್ಯ, ಅನಾಸಕ್ತಿ, ಶುದ್ಧ ಭಾವ, ಭಗವತ್ಪ್ರಾಪ್ತಿ, ಪುಣ್ಯಸಂಚಯ ಇತ್ಯಾದಿಗಳ ಸಮುಚ್ಚಯದ ಅಲೌಕಿಕ ದರ್ಶನ ಪಡೆಯುವ ಪೃಥ್ವಿಯ ಮೇಲಿನ ಸರ್ವೋತ್ಕೃಷ್ಟ, ಬಹುಶಃ ಏಕೈಕ ಸ್ಥಳವೆಂದರೆ ಈ ಮಹಾಕುಂಭಮೇಳ! ಮಹಾಕುಂಭಮೇಳದ ಅದ್ವಿತೀಯತೆಯನ್ನು ಶಬ್ದದಲ್ಲಿ ವ್ಯಕ್ತಪಡಿಸಲು ಎಂದಿಗೂ ಅಸಾಧ್ಯ ! ತೀರ್ಥಕ್ಷೇತ್ರಗಳ ರಾಜನಾಗಿರುವ ಪ್ರಯಾಗರಾಜದ ಸಂಗಮ ತೀರದಲ್ಲಿ ಈ ಅವಧಿಯಲ್ಲಿ ಆಚರಿಸುವ ‘ಕಲ್ಪವಾಸ’ ಹೆಸರಿನ ವ್ರತಾಚರಣೆ ‘ಮನುಷ್ಯನಿಗೆ ಒಂದು ಕಲ್ಪಕ್ಕೆ ಸಮಾನ ಅಂದರೆ ೪೩೨ ಕೋಟಿ ವರ್ಷಗಳಿಗೆ ಸಮಾನವಾದ ಫಲ ನೀಡುತ್ತದೆ’, ಎಂದು ನಮ್ಮ ಧರ್ಮಗ್ರಂಥಗಳಲ್ಲಿ ವರ್ಣಿಸಲಾಗಿದೆ. ಈ ಅತ್ಯಂತ ಕಠಿಣ ವ್ರತವನ್ನು ೧೫ ಲಕ್ಷ ಜನರು ಸಂಗಮ ತೀರದಲ್ಲಿದ್ದು ಮಾಡುತ್ತಿದ್ದಾರೆ. ಕುಂಭಮೇಳದಲ್ಲಿ ಪಾಲ್ಗೊಂಡು ಈ ಅದ್ವಿತೀಯತೆಯ ಸ್ವಲ್ಪಾಂಶವನ್ನಾದರೂ ಅನುಭವಿಸಬಹುದು. ಆದ್ದರಿಂದ ಭಾರತೀಯರಷ್ಟೆ ಅಲ್ಲ, ಜಗತ್ತಿನಾದ್ಯಂತದ ಜಿಜ್ಞಾಸು ಗಳು, ಭಕ್ತರು, ಸಾಧಕರು ಈ ಆಧ್ಯಾತ್ಮಿಕ ಸತ್ಸಂಗದ ಲಾಭ ಪಡೆಯಲು ಇಲ್ಲಿಗೆ ಬಂದಿದ್ದಾರೆ.
ಹಿಂದೂಗಳ ಪ್ರತಿಯೊಂದು ವಿಷಯದ ಮೇಲೆ ಕೆಸರನ್ನು ಎರಚುವ ಇಂದಿನ ಮಹಾನುಭಾವರೆಂದರೆ ‘ಬಿಬಿಸಿ’, ‘ವಾಶಿಂಗ್ಟನ್ ಪೋಸ್ಟ್’, ‘ಎನ್.ವೈ.ಟಿ.’ ಇಂತಹ ವಿದೇಶಿ ಪ್ರಸಾರಮಾಧ್ಯಮಗಳು !
ನಾಗಾ ಸಾಧುಗಳನ್ನು ಟೀಕಿಸುವುದು ಅವರ ಹವ್ಯಾಸವಾಗಿದೆ ಎಂದು ಹೇಳಬಹುದು ! ಹಿಂದೂಗಳ ಕುಂಭಮೇಳವನ್ನು ನಕಾರಾತ್ಮಕವಾಗಿ ಚಿತ್ರಿಸುವುದು ಅವರ ಕುತಂತ್ರವಾಗಿದೆ, ಎಂಬುದು ಜಗಜ್ಜಾಹೀರಾಗಿದೆ. ಧರ್ಮಶಿಕ್ಷಣದ ಅಭಾವದಿಂದ ಇಂದಿನ ಯುವ ಪೀಳಿಗೆ ಅದಕ್ಕೆ ಬಲಿಯಾಗುತ್ತಿದೆ, ಎಂಬುದು ನಮ್ಮಂತಹ ಶ್ರದ್ಧಾವಂತ ಹಿಂದೂಗಳಿಗೆ ಮಾತ್ರ ಚಿಂತೆಯ ವಿಷಯವಾಗಿದೆ. ಕುಂಭಮೇಳದಲ್ಲಿನ ಚೈತನ್ಯದಿಂದ ಮತ್ತು ವಿದೇಶಿ ಭಕ್ತರಿಗೆ ಭಾರತ ಮತ್ತು ಹಿಂದೂ ಧರ್ಮದ ಮೇಲಿರುವ ಉತ್ಕೃಷ್ಟ ಭಾವದಿಂದಾಗಿ ಧರ್ಮದ ಮಹಾತ್ಮೆಯ ಅರಿವು ಮೂಡಲು ಯುವಕರಲ್ಲಿ ಜಿಜ್ಞಾಸೆಯ ಕಿಡಿ ಉತ್ಪನ್ನವಾಗಬೇಕು. ಧಾರ್ಮಿಕ ಜೀವನ ನಡೆಸಲು ಅವರು ಪ್ರೇರಣೆ ಪಡೆಯಬೇಕು; ಆದರೆ ಹಾಗಾಗುತ್ತದೆಯೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂದು ಧರ್ಮಶಿಕ್ಷಣದ ಅಭಾವದಿಂದ ಇಂದಿನ ಯುವಪೀಳಿಗೆ ಹೇಗೆ ದಾರಿ ತಪ್ಪಿದೆಯೋ, ಅದೇ ಗತಿ ಭಾರತೀಯ ಪ್ರಸಾರಮಾಧ್ಯಮ ಗಳದ್ದೂ ಆಗಿದೆ ! ಮಹಾಕುಂಭಮೇಳದ ಕಣ್ಣು ಕುಕ್ಕುವ ಆಧ್ಯಾತ್ಮಿಕ ಸಮೃದ್ಧಿ, ಅದರ ಜೊತೆಗೆ ಭಾರತದ ಸಾಂಸ್ಕೃತಿಕ ಹಾಗೂ ದೈವೀ ಮಹಾತ್ಮೆಯನ್ನು ಜಗತ್ತಿಗೆ ಸಾರುವ ಸುವರ್ಣಾವಕಾಶ ಇದಾಗಿದೆ. ಅದನ್ನು ಕಡೆಗಣಿಸಿ ಅರ್ಥಹೀನ ವಿಚಾರಗಳಿಂದ ಪ್ರೇರಣೆ ಪಡೆದು ಅನೇಕ ಪ್ರಸಾರಮಾಧ್ಯಮಗಳು ಕುಂಭಮೇಳಕ್ಕೆ ಮಸಿಬಳಿಯುವ ಸ್ಪರ್ಧೆ ನಡೆಸುತ್ತಿವೆ.
ಹಳದಿ ಪತ್ರಿಕೋದ್ಯಮ !
ಕುಂಭಮೇಳದಲ್ಲಿ ವಿಪರೀತ ಪ್ರಸಿದ್ಧಿ ಗಳಿಸಿದ ಹರ್ಷಾ ರಿಚರಿಯಾ, ಸನ್ಯಾಸಿ ಅಭಯ ಸಿಂಹ ಮತ್ತು ಮೋನಾಲಿಸಾ ಭೋಸಲೆ ಎಂಬ ಹೆಸರಿನ ಜಪಮಾಲೆ ಮಾರಾಟ ಮಾಡುವ ಮಧ್ಯಪ್ರದೇಶದ ಇಂದೂರಿನ ಓರ್ವ ಹುಡುಗಿಯ ಉದಾಹರಣೆ ತೆಗೆದುಕೊಳ್ಳಿ ! ಅವಳು ಮಹಾಕುಂಭಮೇಳದಲ್ಲಿ ಜಪಮಾಲೆ ಮಾರಾಟ ಮಾಡುತ್ತಿರುವಾಗ ಅವಳ ಸೌಂದರ್ಯದಿಂದ ಪ್ರಸಾರ ಮಾಧ್ಯಮಗಳು ಅವಳನ್ನು ಹಿಂಬಾಲಿಸಿದವು. ಇದರಲ್ಲಿ ಬೀದಿ ಬೀದಿಗಳಲ್ಲಿನ ಯೂ-ಟ್ಯೂಬ್ ಚಾನಲ್ಸ್ ಮಾತ್ರವಲ್ಲ, ಪ್ರತಿಷ್ಠಿತ ‘ಸೋಕಾಲ್ಡ್ ಮೇನ್ ಸ್ಟ್ರೀಮ್’ (ಕಾಲ್ಪನಿಕ ಮುಖ್ಯ ಪ್ರವಾಹದಲ್ಲಿನ) ಪ್ರಸಾರಮಾಧ್ಯಮಗಳ ಪಾಲು ಕೂಡ ಇದೆ. ಬಿಹಾರದ ‘ಭೋಜಪುರಿಯಾ ಜವಾನ ೪೫’ ಎಂಬ ಹೆಸರಿನ ಯೂ ಟ್ಯೂಬ್ ಚಾನಲ್ ವಿಚಿತ್ರವಾಗಿ ವರ್ತಿಸಿತು. ಅದು ‘ನಾಗಾ ಸಾಧುಗಳು ಮತ್ತು ಅಘೋರಿ ಬಾಬಾರನ್ನು ಬಿಟ್ಟು ಭಕ್ತೆ ಮೋನಾಲಿಸಾಳ ಹಿಂದೆ ಬಿದ್ದರು’, ಎನ್ನುವ ಅತ್ಯಂತ ನಾಚಿಕೆಕೇಡಿನ ವಾರ್ತೆಯನ್ನು ನೀಡಿತು. ಆ ವಿಡಿಯೋವನ್ನು ಕೇವಲ ೪ ದಿನಗಳಲ್ಲಿ ಎರಡುವರೆ ಲಕ್ಷ ಜನರು ನೋಡಿದರು. ಇಂತಹ ವಾರ್ತೆಗಳಲ್ಲಿ ಧರ್ಮ, ಅಧ್ಯಾತ್ಮಗಳ ಎಳ್ಳಷ್ಟೂ ಅಂಶ ಇಲ್ಲ; ಆದರೆ ಅವುಗಳು ಸಮಾಜವನ್ನು ಅಶ್ಲೀಲತೆಯ ಕಡೆಗೆ ಒಯ್ಯುತ್ತಿವೆ. ಇದರ ಪರಿಣಾಮದಿಂದ ಮೋನಾಲಿಸಾಳಿಗೆ ರಾತ್ರಿ ಬೆಳಗಾಗುವ ಮುನ್ನ ಸಿಕ್ಕಿದ ಅಪ್ರತಿಮ ಪ್ರಸಿದ್ಧಿಯಿಂದಾಗಿ ಅವಳಿಗೆ ತನ್ನ ವ್ಯವಸಾಯವನ್ನು ಬಾಚಿಕೊಂಡು ಊರಿಗೆ ಹಿಂತಿರುಗಬೇಕಾಯಿತು. ಧರ್ಮವನ್ನು ಕಳಂಕಿಸಿ ಪಾಪ ಮಾಡುವ ಈ ಪ್ರಸಾರಮಾಧ್ಯಮಗಳು ಈ ಹುಡುಗಿಯ ಹೊಟ್ಟೆಗೆ ಬಿಂಕಿ ಇಟ್ಟಿದ್ದಾರೆ. ಇಂತಹ ಹಳದಿ ಪತ್ರಿಕೋದ್ಯಮ ಮಾಡುವವರಿಗೆ ಪಾಠಕಲಿಸಲು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ಏಕೆ ಮಾಡಬಾರದು ? ಇನ್ನೊಂದು ಉದಾಹರಣೆಯೆಂದರೆ ‘ೈಟಿ ಬಾಬಾ’ ! ಅಭಯ ಸಿಂಹ ಹೆಸರಿನ ಈ ಮಧ್ಯಮ ವಯಸ್ಸಿನ ಯುವಕ ಮೂಲತಃ ‘ೈಟಿ ಮುಂಬೈಯಿ’ಯಿಂದ ಶಿಕ್ಷಣ ಪಡೆದಿರುವ ಇಂಜಿನೀಯರ್. ಅವನ ವಿಷಯ ಆರಂಭದಲ್ಲಿ ಜಗತ್ತಿನ ಮುಂದೆ ಬಂದಾಗ ಕೆನಡಾದ ೩೬ ಲಕ್ಷ ವಾರ್ಷಿಕ ವೇತನ ಪಡೆದುಕೊಳ್ಳುತ್ತಿದ್ದ ಒಬ್ಬ ಯಶಸ್ವಿ ಇಂಜಿನೀಯರ್ ಎಲ್ಲವನ್ನೂ ತ್ಯಜಿಸಿ ಅವನು ಅಧ್ಯಾತ್ಮಮಾರ್ಗಕ್ಕೆ ಸಮರ್ಪಿಸಿಕೊಂಡಿರುವುದರಿಂದ ಅನೇಕ ಧರ್ಮಪ್ರೇಮಿ ಹಿಂದೂಗಳಿಗೆ ಅವನ ಸಾರ್ಥಕತೆ ಅಭಿಮಾನ ಪಡುವ ಹಾಗಿತ್ತು; ಆದರೆ ಮುಂದೆ ಥಿಲ್ಲರ್ ಪತ್ರಿಕೋದ್ಯಮ ಮಾಡುವ ಕೆಲವು ಪತ್ರಕರ್ತರು ‘ಅಭಯ ಸಿಂಹ ಈ ಮಾರ್ಗವನ್ನು ಹೇಗೆ ಅಂಗೀಕರಿಸಿದನು ?’, ‘ಅವನಿಗೆ ಗರ್ಲ್‌ಫ್ರೆಂಡ್ ಇದ್ದಾಳೆಯೇ ?’, ಇಂತಹ ಅತ್ಯಂತ ನೀಚತನದ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು. ಈಗ ಅಭಯ ಸಿಂಹನ ಈ ಉದಾಹರಣೆಯಿಂದ ಎಲ್ಲ ಸಾಧುಗಳು ಹೀಗೆಯೆ ಇರುತ್ತಾರೆ, ಎಂದು ಹೇಳಲು ನಮ್ಮ (ಅ)ಪ್ರಗತಿಪರರ ಪಂಗಡ ಮುಕ್ತವಾಗಿದೆ ! ಇದರಿಂದ ಹಿಂದೂ ಧರ್ಮದ ಪುನರುತ್ಥಾನ ಸಾಧ್ಯವಾಗಬಹುದೇ ಅಥವಾ ಹಿಂದೂ ಧರ್ಮ ನಿಂದನೆಗೊಳಗಾಗುವುದಿಲ್ಲವೇ ?
ಇದು ಲಾಂಛನಾಸ್ಪದ !
ಸರ್ವಸ್ವವನ್ನೂ ತ್ಯಾಗ ಮಾಡಿ ಸನ್ಯಾಸ ಸ್ವೀಕರಿಸಲು ಭಾರತ ದಲ್ಲಿ ಉಚ್ಚತಮ ಸ್ಥಾನವಿದೆ. ಅನೇಕ ಆಧ್ಯಾತ್ಮಿಕ ಜನರು ನಾಗಾ ಸಾಧುಗಳು, ಸಾಧ್ವಿಗಳಾಗಿ ಅನಾಸಕ್ತರಾಗಿ ಜೀವನ ನಡೆಸುತ್ತಿದ್ದಾರೆ. ಸ್ವಾರ್ಥ, ಹಣ, ಹುದ್ದೆ, ಸಾಮಾಜಿಕ ಪ್ರತಿಷ್ಠೆಯಂತಹ ಜೀವನಶೈಲಿಯಿಂದ ದೂರ ಹೋಗಿ ಭಗವತ್ಪ್ರಾಪ್ತಿಯ ಮಾರ್ಗ ಸುಖಕರವಾಗಬೇಕೆಂದು ಅನೇಕರು ಇಂತಹ ಮಾರ್ಗವನ್ನು ಅನುಸರಿಸುವದೆಂದರೆ ಇದು ಪ್ರವಾಹದ ವಿರುದ್ಧ ಈಜುವ ಹಾಗಿದೆ. ಹೀಗಿರುವಾಗ ಯಾರೊ ಹರ್ಷಾ ರಿಛಾರಿಯಾ ಎಂಬ ಹೆಸರಿನ ‘ಮೋಡೆಲ್’ ಒಂದು ಆಖಾಡದ ಮೂಲಕ ಸಾಧನೆ ಮಾಡುತ್ತಿದ್ದರೆ ನಮ್ಮ ನಾಚಿಕೆಕೆಟ್ಟ ಪ್ರಸಾರಮಾಧ್ಯಮಗಳು ಅವಳನ್ನು ‘ಎಲ್ಲರಿಗಿಂತ ಸುಂದರ ಸಾಧ್ವಿ’ ಎನ್ನುತ್ತಾ ಅಲೆದಾಡು ತ್ತಿವೆ. ಅದರಲ್ಲಿ ಈಗ ತೊಂಬತ್ತರ ದಶಕದ ಚಲನಚಿತ್ರ ನಟಿ ಮಮತಾ ಕುಲಕರ್ಣಿ ಇವರ ಹೆಸರನ್ನೂ ಜೋಡಿಸಲಾಗಿದೆ. ಕುಲ್ಕರ್ಣಿ ಇವರು ಕಳೆದ ೨೫ ವರ್ಷ ಅಮೇರಿಕಾದಲ್ಲಿದ್ದರು. ಅಮಲು ಪದಾರ್ಥಕ್ಕೆ ಬಲಿಯಾಗಿ ಅವರು ಇಷ್ಟು ವರ್ಷ ಅದರ ಕಳ್ಳಸಾಗಾಣಿಕೆದಾರÀ ವಿಕೀ ಗೋಸ್ವಾಮಿಯೊಂದಿಗೆ ವಾಸ ಮಾಡಿದರು. ಇತ್ತೀಚೆಗೆ ಭಾರತಕ್ಕೆ ಹಿಂತಿರುಗಿದ ನಂತರ ಅವರು ಈಗ ಕಿನ್ನರ ಆಖಾಡಾದ ದೀಕ್ಷೆ ತೆಗೆದುಕೊಂಡಿದ್ದಾರೆ ಹಾಗೂ ‘ಮಹಾಮಂಡಲೇಶ್ವರ ಮಾಯಿ ಮಮತಾನಂದ ಗಿರಿ’ ಆಗಿದ್ದಾರೆ. ಅನಂತರ ಅದರಿಂದ ಉಚ್ಛಾಟನೆಯೂ ಆಯಿತು; ಆದರೆ ಈಗ ಎಲ್ಲ ಪ್ರಸಾರಮಾಧ್ಯಮಗಳು ಎಲ್ಲವನ್ನೂ ಬಿಟ್ಟು ಅವರ ಪ್ರಸಿದ್ಧಿಯನ್ನೇ ಮಾಡುತ್ತಿವೆ. ಕುಂಭಮೇಳದಿಂದ ‘ಅರ್ಥ’ ಮತ್ತು ‘ಕಾಮ’ ದ ‘ಗ್ಲಾಮರ್’ ಅಲ್ಲ, ‘ಧರ್ಮ’ ಮತ್ತು ‘ಮೋಕ್ಷ’ದ ಅನಿವಾರ್ಯತೆಯನ್ನು ಎತ್ತಿ ತೋರಿಸಬೇಕಾಗಿದೆ. ಸದ್ಯ ಹೀಗೆ ಆಗುತ್ತಿರುವುದು ಕಾಣಿಸುವುದಿಲ್ಲ, ಅದು ಹಿಂದೂಗಳ ದುರ್ಭಾಗ್ಯವಲ್ಲದೆ ಇನ್ನೇನು !