ಶಿಮ್ಲಾದಲ್ಲಿನ ಅಕ್ರಮ ಮಸೀದಿ ವಿರುದ್ಧದ ಪ್ರತಿಭಟನೆ ಮತ್ತಷ್ಟು ಉಲ್ಬಣ!
ಶಿಮ್ಲಾ (ಹಿಮಾಚಲ ಪ್ರದೇಶ) – ರಾಜಧಾನಿ ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ 5 ಅಂತಸ್ತಿನ ಅಕ್ರಮ ಮಸೀದಿಯನ್ನು ಕೆಡವಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಸೆಪ್ಟೆಂಬರ್ 11 ರ ಬೆಳಿಗ್ಗೆ, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಯತ್ತ ನಡೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಪೊಲೀಸರು ಹಿಂದೂ ಜಾಗರಣ ಮಂಚ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಕಮಲ ಗೌತಮ್ ಅವರನ್ನು ಬಂಧಿಸಿದರು. ಇದರಿಂದ ಆಕ್ರೋಶಗೊಂಡ ಹಿಂದೂಗಳು ತಮ್ಮ ಆಂದೋಲನವನ್ನು ತೀವ್ರಗೊಳಿಸಿದರು. ಪೊಲೀಸರು ಹಿಂದೂಗಳನ್ನು ತಡೆದು ಲಾಠಿ ಪ್ರಹಾರ ಮಾಡಿದರು. ಹಾಗೆಯೇ ನೀರಿನ ಫಿರಂಗೀ ಹೊಡೆದರು. ಇದರಲ್ಲಿ ಅನೇಕ ಹಿಂದೂಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
1. ಹಿಂದೂಗಳು ಈ ಅಕ್ರಮ ಮಸೀದಿಯನ್ನು ವಿರೋಧಿಸಬಾರದು ಎಂದು ರಾಜ್ಯದ ಕಾಂಗ್ರೆಸ್ ಸರಕಾರವು ಈ ಪ್ರದೇಶವನ್ನು ಕ್ಯಾಂಪ್ ಆಗಿ ಪರಿವರ್ತಿಸಿತ್ತು. ಇಲ್ಲಿ ಹೆಚ್ಚಿನ ಸಂಖ್ಯೆಯ ತಡೆಗೋಡೆಗಳನ್ನು (ಬ್ಯಾರಿಕೇಡ್) ಹಾಕಲಾಗಿತ್ತು.
2. ನಿರಾಯುಧ ಹಿಂದೂ ಪ್ರತಿಭಟನಾಕಾರರು ಸಂಜೌಲಿ ತಲುಪುತ್ತಲೇ, ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ಮಾಡಿದರು. (ಇಂತಹ ಪ್ರತಿಭಟನೆ ಮತಾಂಧ ಮುಸಲ್ಮಾನರು ಮಾಡುತ್ತಿದ್ದರೆ ಪೊಲೀಸರು ಈ ರೀತಿ ಲಾಠಿ ಚಾರ್ಜ್ ಮಾಡುತ್ತಿದ್ದರೇ ? ಹಿಂದೂಗಳು ನಿರಾಯುಧರಾಗಿ ಪ್ರತಿಭಟನೆ ಮಾಡುತ್ತಾರೆ. ಇದರಿಂದ ಅವರ ಮೇಲೆ ಆಯುಧಗಳನ್ನು ಪ್ರಯೋಗಿಸಲಾಗುತ್ತದೆಯೇ ಎಂಬ ಬಗ್ಗೆಯೂ ಈಗ ವಿಚಾರ ಮಾಡಬೇಕೆ ? – ಸಂಪಾದಕರು)
3. ಕಳೆದ ವಾರದಿಂದ ಸಂಜೌಲಿ ಮಸೀದಿ ವಿವಾದಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳಲು ಸರಕಾರಕ್ಕೆ ಸಾಧ್ಯವಾಗಿಲ್ಲ.
ಏನಿದು ಪ್ರಕರಣ ?
ಆಗಸ್ಟ್ 31 ರಂದು ಸ್ಥಳೀಯ ಯುವಕ ಯಶಪಾಲಗೆ ಕೆಲವು ಮುಸ್ಲಿಂ ಹುಡುಗರೊಂದಿಗೆ ವಾಗ್ವಾದವಾಗಿತ್ತು. ಇದಾದ ನಂತರ ಮುಸ್ಲಿಮರು ಯಶಪಾಲ್ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆ ಬಳಿಕ ಈ ಯುವಕರು ಸಂಜೌಲಿಯ ಮಸೀದಿಯಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆಬಂದಿದೆ. ಈ ಸ್ಥಳದಲ್ಲಿ ಜಮಾಯಿಸಿದ ಹಿಂದೂಗಳು, ಈ ಯುವಕರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಈ ಮಸೀದಿಯು ಅಕ್ರಮವಾಗಿದೆ ಎಂದು ಹೇಳಿದರು. ಪೊಲೀಸರು ಗುಲನವಾಜ್, ಸಾರಿಕ್, ಸೈಫ್ ಅಲಿ ಮತ್ತು ರೋಹಿತ್ ಎಂಬ ನಾಲ್ಕು ಜನರನ್ನು ಬಂಧಿಸಿದರು; ಆದರೆ ಈ ಘಟನೆಯಿಂದಾಗಿ ಕೇಂದ್ರಸ್ಥಾನಕ್ಕೆ ಬಂದ ಈ ಮಸೀದಿಯ ವಿರುದ್ಧ ತಗಾದೆ ತೆಗೆದರು. 5 ಅಂತಸ್ತಿನ ಈ ಮಸೀದಿಯ 2 ಮಹಡಿಗಳು ಮಾತ್ರ ಕಾನೂನುಬದ್ಧವಾಗಿವೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಉಳಿದ 3 ಮಹಡಿಗಳನ್ನು 2010 ರ ನಂತರ ನಿರ್ಮಿಸಲಾಗಿದೆ. ನಿರ್ಮಾಣ ನಡೆಯುತ್ತಿರುವಾಗ; ಶಿಮ್ಲಾ ಮುನಿಸಿಪಲ್ ಕಾರ್ಪೊರೇಷನ್ ಮಸೀದಿಗೆ 30-35 ನೋಟೀಸ್‌ಗಳನ್ನು ಕಳುಹಿಸಿತ್ತು. ಆದರೆ ನಿರ್ಮಾಣ ಕಾರ್ಯ ನಿಂತಿಲ್ಲ. ಮಹಾನಗರ ಪಾಲಿಕೆಯು ಅಕ್ಕ ಪಕ್ಕದಲ್ಲಿನ ಅಕ್ರಮ ಕಟ್ಟಡಗಳನ್ನು ಕೆಡವಿದರು; ಆದರೆ ಈ ಮಸೀದಿಯ ಮೇಲೆ ಒಂದೇ ಒಂದು ಸುತ್ತಿಗೆಯನ್ನು ಹೊಡೆಯಲಿಲ್ಲ. ಇಂದು ಈ 5 ಅಂತಸ್ತಿನ ಮಸೀದಿಯು ನಗರದ ಮಧ್ಯಭಾಗದಲ್ಲಿದೆ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಹೇಳಿ ರಾಜ್ಯದ ಕಾಂಗ್ರೆಸ್ ಸರಕಾರ ಕೈ ಚೆಲ್ಲಿದೆ.
ಸಂಪಾದಕೀಯ ನಿಲುವು
|