12th India Festival Wisconsin : ಅಮೇರಿಕಾದಲ್ಲಿ ‘ಸ್ಪಿಂಡಲ್ ಇಂಡಿಯಾ’ದ ವತಿಯಿಂದ ‘೧೨ ನೇ ಭಾರತ ಮಹೋತ್ಸವ ವ್ಹಿಸ್ಕಾನ್ಸಿನ್’ ಆಚರಣೆ !

  • ಹಿಂದೂ ಸಂಸ್ಕೃತಿಯ ದರ್ಶನ ತೋರಿಸುವ ಪ್ರಯತ್ನ !

  • ರಾಜಕೀಯ ನಾಯಕರಿಂದ ಪ್ರಶಂಸೆ !

ಎಡದಿಂದ ಭಾರತ ಪ್ರಸಾದ, ಅರ್ಣವ ಬಾಗ, ಅಪರ್ಣಾ ಬಾಗ, ಮೇರಿ ಜೊ ಥಾಮಸನ್, ಲೋರ್ಡ್ಸ ಮ್ಯಾಕಯಿವಾನ, ಪೂರ್ಣಿಮಾ ನಾಥ, ಶುಭ್ರಾ ಪ್ರಸಾದ ಮತ್ತು ಆಶಿತಾ ವರ್ಮ

ಮಿಲವಾವುಕಿ (ಅಮೇರಿಕಾ) – ಅಮೇರಿಕಾದ ವ್ಹಿಸ್ಕಾನ್ಸಿನ್ ರಾಜ್ಯದಲ್ಲಿನ ಮಿಲವಾವುಕಿ ನಗರದಲ್ಲಿ ‘ಸ್ಪಿಂಡಲ್ ಇಂಡಿಯಾ’ ಈ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ೧೨ ನೇ ವಾರ್ಷಿಕ ‘ಭಾರತ ಮಹೋತ್ಸವ’ (ಇಂಡಿಯಾ ಫೇಸ್ಟ್ ) ಆಚರಿಸಲಾಯಿತು. ಇತ್ತೀಚಿಗೆ ನಡೆದಿರುವ ಭಾರತದ ೭೮ ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಈ ಮಹೋತ್ಸವದಲ್ಲಿ ಶ್ರೀ ಗಣೇಶ ವಂದನಾ ಮಾಡಿ ಹಿಂದೂ ಸಮುದಾಯದಲ್ಲಿನ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲಾಯಿತು.

ಈ ಸಮಯದಲ್ಲಿ ಭಾರತ ಮತ್ತು ಅಮೆರಿಕಾದ ರಾಷ್ಟ್ರಗೀತೆ ಹಾಡಲಾಯಿತು. ಅದರ ನಂತರ ದೇಶಭಕ್ತಿ ಗೀತೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. ಇದರ ಮಾಹಿತಿ ‘ಸ್ಪಿಂಡಲ್ ಇಂಡಿಯಾ’ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ನಾಥ್ ಇವರು ‘ಸನಾತನ ಪ್ರಭಾತ’ಗೆ ನೀಡಿದರು. ಈ ಮಹೋತ್ಸವ ಆಗಸ್ಟ್ ೨೪ ರಂದು ನೆರವೇರಿತು.

೧. ವ್ಹಿಸ್ಕಾನ್ಸಿನ ರಾಜ್ಯದ ಗವರ್ನರ್ ಟೋನಿ ಇವ್ಹರ್ಸ್ ಇವರು ಈ ಸಮಯದಲ್ಲಿ ಆಗಸ್ಟ್ ೧೫, ೨೦೨೪ ವನ್ನು ‘ಇಂಡಿಯಾ ಡೇ’ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

೨. ವ್ಹಿಸ್ಕಾನ್ಸಿನ್ ನಲ್ಲಿ ‘ಭಾರತ ಮಹೋತ್ಸವ’ ಆಚರಣೆಯ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು. ಈ ಕಾರ್ಯದ ಕುರಿತು ಗಮನ ಹರಿಸಿದವರಲ್ಲಿ ಮೀಲವಾವುಕಿ ಕಾವುಂಟಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಡಾವ್ಹಿಡ್ ಕ್ರಾವುಲೇ, ವೋಕೇಶಾ ಕಾವುಂಟಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಪಾಲ್ ಫಾರೋ, ಮಿಲವಾವುಕಿ ನಗರದ ಮಹಾಪೌರ ಕಾವ್ಹಲೀಯರ್ ಜಾನ್ಸನ್ ಮತ್ತು ಬ್ರುಕಫಿಲ್ದದ ಮಹಾಪೌರ ಸ್ಟೀವನ್ ಪೊಂಟೊ ಇವರು ಸಹಭಾಗಿಯಾಗಿದ್ದರು.

೩. ಈ ಕಾರ್ಯಕ್ರಮಕ್ಕೆ ಅಮೆರಿಕೆ ಕಾಂಗ್ರೆಸ್ಸಿನ ಸದಸ್ಯ (ಸಂಸದ) ಗ್ರಾಥಮನ್, ಸರಕಾರಿ ಅಧಿಕಾರಿ ವಿನೋದ್ ಗೌತಮ್, ಒಕೇಶ ಕೌಂಟಿಂಗ್ ಅಧ್ಯಕ್ಷ ಜೇಮ್ಸ್ ಹೆನರಿಚ್, ರಿಪಬ್ಲಿಕನ್ ಪಕ್ಷದ ‘ಕಾಂಗ್ರೆಶನಲ್ ಡಿಸ್ಟ್ರಿಕ್ಟ್ ೪’ರ ಅಧ್ಯಕ್ಷ ರಾಬರ್ಟ್ ಸ್ಪಿಂಡೆಲ್ ಮತ್ತು ವ್ಹಿಕ್ಸಸ್ನಿನ್ ರಾಜ್ಯದಲ್ಲಿನ ಕಾಂಗ್ರೆಸ್ ಸದಸ್ಯ (ಸಿನೇಟರ್) ಡ್ಯುಎ ಸ್ಟ್ರೈಬೆಲ್ ಇವರು ಉಪಸ್ಥಿತರಿದ್ದರು.

೪. ಎಲ್ಲರೂ ವ್ಹಿಸ್ಕಾನ್ಸಿನ್ ರಾಜ್ಯದಲ್ಲಿನ ಹಿಂದೂ ಜನಾಂಗವನ್ನು ಶ್ಲಾಘಿಸಿದರು ಮತ್ತು ಅಮೆರಿಕಾದ ಹಿತಕ್ಕಾಗಿ ಅವರು ನೀಡುತ್ತಿರುವ ಅಮೂಲ್ಯ ಕೊಡುಗೆಯ ಕುರಿತು ಆಭಾರ ಮನ್ನಿಸಿದರು.

೫. ೨೦೧೩ ರಿಂದ ‘ಸ್ಪಿಂಡಲ್ ಇಂಡಿಯಾ’ದ ವತಿಯಿಂದ ನಡೆಸಲಾಗುವ ಕಾರ್ಯಕ್ರಮದ ಮಾಧ್ಯಮದಿಂದ ಭಾರತೀಯ ಸಂಸ್ಕೃತಿ, ಪರಂಪರೆ, ಸಭ್ಯತೆಯ ದರ್ಶನ ಮಾಡುಸುತ್ತಿರುವುದರಿಂದ ಗಣ್ಯರು ಶ್ಲಾಘಿಸಿದರು.

೬. ಅಮೇರಿಕಾದಲ್ಲಿನ ಬಾಂಗ್ಲಾದೇಶದ ರಾಯಭಾರಿ ಮೋನೀರ್ ಚೌದರಿ ಮತ್ತು ನೇಪಾಳದ ರಾಯಭಾರಿ ಮಾರ್ವಿನ್ ಬ್ರಸ್ಟಿನ್ ಇವರು ಕೂಡ ಮಹೋತ್ಸವಕ್ಕೆ ಅವರ ಶುಭ ಸಂದೇಶಗಳನ್ನು ಕಳುಹಿಸಿದ್ದರು.

ಇಂತಹ ಮಹೋತ್ಸವದಿಂದ ಭಾರತೀಯ ಸಂಸ್ಕೃತಿಯ ಕುರಿತು ಅಮೆರಿಕಾದಲ್ಲಿರುವವರ ತಪ್ಪು ತಿಳುವಳಿಕೆ ದೂರಗೊಳಿಸಲು ಸಹಾಯವಾಗುವುದು ! – ಪೂರ್ಣಿಮಾ ನಾಥ

‘ಸ್ಪಿಂಡಲ್ ಇಂಡಿಯಾ’ದ ಸಂಸ್ಥಾಪಕಿ ಪೂರ್ಣಿಮಾ ನಾಥ ಇವರು ಮಾತನಾಡುತ್ತಾ, ಮಹೋತ್ಸವದಲ್ಲಿ ಭಾರತ ಮತ್ತು ಅಮೆರಿಕಾದ ರಾಷ್ಟ್ರಧ್ವಜ ಹಾರಿಸಲಾಯಿತು. ಇದರಿಂದ ಎರಡು ದೇಶಗಳಲ್ಲಿನ ಸಂಬಂಧ ಸದೃಢ, ಹಾಗೂ ಪ್ರೀತಿ ಮತ್ತು ಗೌರವದ ದರ್ಶನವಾಗುತ್ತದೆ. ಎರಡು ದೇಶದ ಸಹಕಾರ ಸದೃಢ ಗೊಳಿಸಲು ಕೂಡ ಈ ಮಾಧ್ಯಮದಿಂದ ಪ್ರೋತ್ಸಾಹ ದೊರೆಯುತ್ತದೆ. ಅಮೇರಿಕಾದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಏನು ತಿಳಿದಿಲ್ಲ. ಸಂಶೋಧನೆ, ಹೊಸ ಸಂಶೋಧನೆ, ವಿಚಾರಧಾರೆ, ಎಲ್ಲರನ್ನು ಕೂಡಿಸಿ, ಸಹಿಷ್ಣುತೆ ಹಾಗೂ ಎಲ್ಲಕ್ಕಿಂತ ಪ್ರಾಚೀನ ನಾಗರಿಕ ಸಭ್ಯತೆ ಇಂತಹ ವೈಶಿಷ್ಟಗಳು ಇರುವ ಹಿಂದೂ ಧರ್ಮವನ್ನು ಇನ್ನು ಅಷ್ಟೇನು ಸ್ವೀಕರಿಸಿಲ್ಲ.

ಅಮೇರಿಕಾದ ನಾಗರೀಕರಲ್ಲಿ ದುರ್ದೈವದಿಂದ ಭಾರತ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಇನ್ನೂ ಕೂಡ ತಪ್ಪು ತಿಳುವಳಿಕೆಗಳು ಇದೆ. ಇಂತಹ ಕಾರ್ಯಕ್ರಮದ ಮೂಲಕ ಅಂತಹ ವಿಕಲ್ಪಗಳು ನಾಶಗೊಳಿಸಲು ಸಹಾಯವಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಸ್ಪಿಂಡಲ್ ಇಂಡಿಯಾ’ ಈ ಸಂಸ್ಥೆಯ ಅಭಿನಂದನೆ ! ಏಳುಸಮುದ್ರ ದಾಟಿ ಹೋಗಿರುವವರು ಹಿಂದೂ ಸಂಸ್ಕೃತಿಯನ್ನು ಕಾಪಾಡುತ್ತಾರೆ ಮತ್ತು ಸಂವರ್ಧನೆ ಮಾಡುವ ಈ ಪ್ರಯತ್ನ ಶ್ಲಾಘನೀಯವಾಗಿದೆ. ಇಂತಹ ಸಂಸ್ಥೆಗಳೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿವೆ !