ಎಲ್ಲೆಡೆ ಆದರ್ಶ ಗಣೇಶೋತ್ಸವವನ್ನು ಆಚರಿಸುವ ಸಲುವಾಗಿ ಹಮ್ಮಿಕೊಂಡಿರುವ ಆಂದೋಲನದಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾಗಿರಿ !

ವಾಚಕರು, ಹಿತಚಿಂತಕರು ಮತ್ತು ರಾಷ್ಟ್ರಪ್ರೇಮಿ ಹಿಂದೂಗಳಿಗೆ ಸತ್ಸೇವೆಯ ಸುವರ್ಣಾವಕಾಶ !

‘೭.೯.೨೦೨೪ ರಂದು ಶ್ರೀ ಗಣೇಶಚತುರ್ಥಿ ಇದೆ. ಶ್ರೀ ಗಣೇಶಚತುರ್ಥಿಯಂದು ಹಾಗೂ ಗಣೇಶೋತ್ಸವದ ಅವಧಿಯಲ್ಲಿ ಪೃಥ್ವಿಯಲ್ಲಿ ನಿತ್ಯದ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಗಣೇಶತತ್ತ್ವ ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಅನೇಕ ಗಣೇಶಭಕ್ತರು ಈ ಅವಧಿಯಲ್ಲಿ ಹೆಚ್ಚೆಚ್ಚು ಸೇವೆ ಮಾಡಿ ಸುಖಕರ್ತಾ, ದುಃಖಕರ್ತಾ ಹಾಗೂ ಅಷ್ಟದಿಕ್ಕುಗಳ ಅಧಿಪತಿಯಾಗಿರುವ ಗಣೇಶನ ಕೃಪೆಯನ್ನು ಸಂಪಾದಿಸಲು ಪ್ರಯತ್ನಿಸುತ್ತಾರೆ.

ಗಣೇಶಭಕ್ತರು ಗಣೇಶೋತ್ಸವವನ್ನು ಧರ್ಮಶಾಸ್ತ್ರಕ್ಕನುಸಾರ ಯೋಗ್ಯ ಪದ್ಧತಿಯಲ್ಲಿ ಆಚರಿಸಿದರೆ ಅದರಿಂದ ಅವರಿಗೆ ನಿಜವಾಗಿಯೂ ಲಾಭವಾಗುತ್ತದೆ. ಈ ಉತ್ಸವದ ಮೂಲಕ ಹಿಂದೂಗಳ ಪ್ರಭಾವಪೂರ್ಣ ಸಂಘಟನೆ ಮತ್ತು ಸಮಾಜದಲ್ಲಿ ಜಾಗೃತಿ ನಿರ್ಮಾಣವಾಗಬೇಕಾದರೆ ಉತ್ಸವದಲ್ಲಿ ನಡೆಯುವ ಅಯೋಗ್ಯ ಆಚರಣೆಗಳನ್ನು ದೂರಗೊಳಿಸುವ ಅವಶ್ಯಕತೆಯಿದೆ. ಧರ್ಮಶಿಕ್ಷಣ ನೀಡಿ ಹಿಂದೂ ಬಾಂಧವರಲ್ಲಿ ಜಾಗೃತಿ ನಿರ್ಮಾಣ ಮಾಡುವ ಹಿಂದೂ ಜನಜಾಗೃತಿ ಸಮಿತಿಯು ಇದೇ ಉದ್ದೇಶದಿಂದ ಸಂಘಟನೆಗಾಗಿ ಪ್ರಯತ್ನಿಸುತ್ತಿದೆ.

ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಎಲ್ಲೆಡೆ ಆದರ್ಶ ಗಣೇಶೋತ್ಸವ ನೆರವೇರಬೇಕೆಂದು ಪ್ರಯತ್ನಿಸಲಾಗುತ್ತಿದೆ. ಆವೆಮಣ್ಣಿನ ಸಾತ್ತ್ವಿಕ ಗಣೇಶಮೂರ್ತಿಯ ಆಧ್ಯಾತ್ಮಿಕ ಹಾಗೂ ಪರಿಸರಕ್ಕಾಗುವ ಲಾಭದ ವಿಷಯದಲ್ಲಿ ಸಮಿತಿ ಸಮಾಜದಲ್ಲಿ ಪ್ರಬೋಧನೆ ಮಾಡುತ್ತಿದೆ. ಅಸಾತ್ತ್ವಿಕ ಮೂರ್ತಿಗಿಂತ ಆವೆಮಣ್ಣಿನ ಮೂರ್ತಿಯಿಂದ ಅನೇಕಪಟ್ಟು ಹೆಚ್ಚು ಗಣೇಶತ್ತ್ವ ಪ್ರಕ್ಷೇಪಣೆಯಾಗುವುದರಿಂದ ಗಣೇಶಭಕ್ತರಿಗೆ ಹೆಚ್ಚು ಲಾಭವಾಗುತ್ತದೆ. ಈ ವಿಷಯದಲ್ಲಿ ಗಣೇಶಭಕ್ತರು ಇತರರಿಗೆ ಪ್ರಬೋಧನೆ ಮಾಡಿ ಸಾತ್ತ್ವಿಕ ಗಣೇಶಮೂರ್ತಿಯ ಬಗ್ಗೆ ಪ್ರಸಾರ ಮಾಡಬಹುದು.

‘ಗಣೇಶೋತ್ಸವದಲ್ಲಿನ ಅಯೋಗ್ಯ ಕೃತಿಗಳನ್ನು ದೂರಗೊಳಿಸಿ ಆದರ್ಶ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ? ಆದರ್ಶ ಮೆರವಣಿಗೆ ಹೇಗೆ ತೆಗೆಯಬೇಕು ? ಮೂರ್ತಿದಾನ ಏಕೆ ಮಾಡಬಾರದು ? ಕೃತಕ ಕೊಳದ ಬದಲು ಹರಿಯುವ ನೀರಿನಲ್ಲಿ ಮೂರ್ತಿಗಳ ವಿಸರ್ಜನೆ ಏಕೆ ಮಾಡಬೇಕು ?’, ಇತ್ಯಾದಿ ವಿಷಯಗಳ ಬಗ್ಗೆ ಸಮಿತಿಯ ಕಾರ್ಯಕರ್ತರು ಎಲ್ಲೆಡೆ ಪ್ರಬೋಧನಾತ್ಮಕ ಆಂದೋಲನಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿ ವಿವಿಧ ಗಣೇಶೋತ್ಸವ ಮಂಡಲಿಗಳ ಸಂಪರ್ಕ, ರಾಷ್ಟ್ರ-ಧರ್ಮ ಹಾಗೂ ಅಧ್ಯಾತ್ಮಕ್ಕೆ ಸಂಬಂಧಿಸಿದ ಪ್ರವಚನಗಳ ನಿಯೋಜನೆ; ‘ಗಣೇಶೋತ್ಸವ ವಾಸ್ತವ ಮತ್ತು ಆದರ್ಶ’ ಈ ಧ್ವನಿ-ಚಿತ್ರಸುರುಳಿಯ ಪ್ರದರ್ಶನ; ಇತರ ವರ್ತಮಾನಪತ್ರಿಕೆಗಳಲ್ಲಿ ಗಣಪತಿಯ ವಿಷಯದಲ್ಲಿ ಲೇಖನಗಳನ್ನು ಪ್ರಕಟಿಸಲು ಕೊಡುವುದು; ಕ್ರಾಂತಿಕಾರಿಗಳ ಕಾರ್ಯ ಮತ್ತು ಧರ್ಮಶಿಕ್ಷಣದ ವಿಷಯದ ‘ಫ್ಲೆಕ್ಸ್‌’ ಪ್ರದರ್ಶನಗಳ ಆಯೋಜನೆ, ಇತ್ಯಾದಿಗಳಿಂದ ಧರ್ಮರಕ್ಷಣೆಯ ಪ್ರಯತ್ನ ಮಾಡಲಾಗುತ್ತಿದೆ.

ಶ್ರೀಗಣೇಶನ ಕೃಪೆಯನ್ನು ಸಂಪಾದಿಸಲು ಎಲ್ಲ ವಾಚಕರು, ಹಿತಚಿಂತಕರು, ಹಾಗೂ ರಾಷ್ಟ್ರಪ್ರೇಮಿಗಳು ತಮ್ಮ ತಮ್ಮ ಪರಿಸರದಲ್ಲಿ ಈ ಸೇವೆಯಲ್ಲಿ ಭಾಗವಹಿಸಬಹುದು. ಇಚ್ಛೆಯುಳ್ಳವರು ಸನಾತನ ಪ್ರಭಾತದ ವಿತರಕರನ್ನು ಅಥವಾ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಅಥವಾ [email protected] ಈ ವಿ-ಅಂಚೆ ವಿಳಾಸಕ್ಕೆ ತಮ್ಮ ಪರಿಚಯವನ್ನು ಕಳುಹಿಸ ಬಹುದು. ಈ ವಿಷಯದಲ್ಲಿ ಏನಾದರೂ ಸಂಶಯವಿದ್ದರೆ ೯೩೪೩೦೧೭೦೦೧ ಈ ಕ್ರಮಾಂಕದಲ್ಲಿ ವಿಚಾರಿಸಬಹುದು.’