ಬಾಂಗ್ಲಾದೇಶದಿಂದ ಭಾರತದ ವಿದ್ಯುತ್ ಕಂಪನಿಗೆ ೯,೫೦೦ ಕೋಟಿಗೂ ಹೆಚ್ಚು ಹಣ ಬಾಕಿ !

ಢಾಕಾ – ಭಾರತದ ವಿದ್ಯುತ್ ಕಂಪನಿಗೆ ಬಾಂಗ್ಲಾದೇಶ ೯, ೫೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣ ಪಾವತಿಸಬೇಕಿದೆ. ಶೇಖ್ ಹಸೀನಾ ಸರಕಾರವನ್ನು ಬುಡಮೇಲು ಮಾಡಿದ ನಂತರ ಈ ಹಣ ಪಾವತಿಸುವುದು ನಿಂತಿದೆ. ಅದಾನಿ ವಿದ್ಯುತ್ ಕಂಪನಿಯ ಸುಮಾರು ೬,೭೦೦ ಕೋಟಿ ರೂಪಾಯಿ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿದೆ. ಸದ್ಯ ಭಾರತೀಯ ಕಂಪನಿಗಳು ಬಾಂಗ್ಲಾದೇಶಕ್ಕೆ ಸಾಲದ ಮೇಲೆ ವಿದ್ಯುತ್ ಪೂರೈಸುತ್ತಿವೆ.

೧. ವಾರ್ತಾ ಸಂಸ್ಥೆಯೊಂದು ಪ್ರಸಾರಗೊಳಿಸಿದ ವರದಿಯ ಪ್ರಕಾರ, ಅದಾನಿ ಪವರ್, ಪಿಟಿಸಿ ಇಂಡಿಯಾ, ಎನ್‌.ಟಿ.ಪಿ.ಸಿ, ಎಸ್.ಈ.ಐ.ಎಲ್, ಮತ್ತು ಪವರ್ ಗ್ರಿಡ್ ಮುಂತಾದ ಭಾರತೀಯ ಕಂಪನಿಗಳಿಗೆ ಬಾಂಗ್ಲಾದೇಶ ಸರ್ಕಾರವು ೯,೫೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಬಾಕಿ ಹಣ ನೀಡಬೇಕಾಗಿದೆ.

೨. ಬಾಂಗ್ಲಾದೇಶದಲ್ಲಿನ ಈಗಿನ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯುತ್ ಪೂರೈಕೆಯ ಹಣ ಬಾಕಿ ಉಳಿಸಿದಿದೆ. ಅಧಿಕಾರ ಹಸ್ತಾಂತರ ಹಾಗೂ ಆರ್ಥಿಕ ಸಮಸ್ಯೆಯಿಂದ ಬಾಂಗ್ಲಾದೇಶ ಸದ್ಯ ಹೋರಾಡುತ್ತಿದೆ. ಬಾಂಗ್ಲಾದೇಶದ ವಿದೇಶಿ ಕರೆನ್ಸಿ ಸಂಗ್ರಹದ ಮೇಲೆ ಕೂಡ ಪರಿಣಾಮ ಬೀರಿದೆ. ಈ ಸಮಸ್ಯೆ ನಿವಾರಣೆಗಾಗಿ ಬಾಂಗ್ಲಾದೇಶವು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಹಾಯ ಕೇಳಿದೆ.

೩. ಬಾಂಗ್ಲಾದೇಶದಲ್ಲಿ ನಿರಂತರ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಬೀದಿಗಿಳಿದಿರುವ ಅಶಾಂತಿ ಈಗ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.

ಸಂಪಾದಕೀಯ ನಿಲುವು

ಭಾರತವನ್ನು ಟೀಕಿಸುವ ಬಾಂಗ್ಲಾದೇಶದಿಂದ ಭಾರತವು ಈಗ ಈ ಹಣ ವಸೂಲಿ ಮಾಡುವುದು ಆವಶ್ಯಕವಾಗಿದೆ !