ಢಾಕಾ (ಬಾಂಗ್ಲಾದೇಶ)ದ ಭಾರತೀಯ ‘ವೀಸಾ ಸೆಂಟರ್’ನಲ್ಲಿ ಭಾರತ ವಿರೋಧಿ ಘೋಷಣೆ !

ಢಾಕಾ – ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಭಾರತೀಯ ‘ವೀಸಾ ಸೆಂಟರ್’ನಲ್ಲಿ ಆಗಸ್ಟ್ ೨೬ ರಂದು ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ಪ್ರತಿಭಟನಾಕಾರರು ವೀಸಾ ಸೆಂಟರ್ ಗೆ ನುಗ್ಗಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಢಾಕಾದಲ್ಲಿನ ಭಾರತೀಯ ಉಚ್ಚಾಯುಕ್ತರು ಈ ಪ್ರಕರಣವನ್ನು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದಲ್ಲಿ ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದಲ್ಲಿನ ಹಿಂಸಾಚಾರ ಮತ್ತು ಶೇಖ ಹಸೀನಾ ಸರಕಾರ ಪದಚ್ಯುತಗೊಂಡ ನಂತರ ಭಾರತವು ಬಾಂಗ್ಲಾದೇಶದಲ್ಲಿನ ವೀಸಾ ಕೇಂದ್ರದ ಕಾರ್ಯ ಗಣನೀಯವಾಗಿ ಕಡಿಮೆಗೊಳಿಸಿದೆ. ಕಳೆದ ವರ್ಷ ೧೬ ಲಕ್ಷ ಬಾಂಗ್ಲಾದೇಶಿ ಜನರು ಭಾರತಕ್ಕೆ ಭೇಟಿ ನೀಡಿದ್ದರು. ಇದರಲ್ಲಿನ ಶೇಕಡ ೬೦ ರಷ್ಟು ಜನರು ಭಾರತದಲ್ಲಿ ಪ್ರವಾಸಕ್ಕಾಗಿ ಬಂದಿದ್ದರು. ಶೇಖಡ ೩೦ ರಷ್ಟು ಜನರು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದರು ಹಾಗೂ ಶೇಕಡ ೧೦ ರಷ್ಟು ಜನರು ಇತರ ಕಾರಣಗಳಿಗಾಗಿ ಭಾರತಕ್ಕೆ ಬಂದಿದ್ದರು. (ಇದರಲ್ಲಿನ ಎಷ್ಟು ಜನರು ಬಾಂಗ್ಲಾದೇಶಕ್ಕೆ ಹಿಂತಿರುಗಿದ್ದಾರೆ, ಇದರ ಅಂಕಿ ಸಂಖ್ಯೆ ಕೂಡ ಭಾರತ ಸರಕಾರ ನೀಡಬೇಕು ಮತ್ತು ಅಕ್ರಮವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶಿ ನಾಗರಿಕರಿಗೆ ತಾಯ್ನಾಡಿಗೆ ಕಳುಹಿಸಲು ಕಠೋರ ಉಪಾಯ ಯೋಜನೆ ಮಾಡಬೇಕು, ಎಂದು ಭಾರತಿಯರಿಗೆ ಅನಿಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಭಾರತ ವಿರೋಧಿ ವಾತಾವರಣ ಹೆಚ್ಚುತ್ತಿದೆ, ಇದು ಇದರ ಉದಾಹರಣೆ ಆಗಿದೆ. ಇಂತಹ ಬಾಂಗ್ಲಾದೇಶಕ್ಕೆ ಸರಿಯಾದ ಪಾಠ ಕಲಿಸಲು ಭಾರತಾ ಕ್ರಮ ಕೈಗೊಳ್ಳಬೇಕು !