ಬಾಂಗ್ಲಾದೇಶದಲ್ಲಿ ಬಂದ ನೆರೆಗೆ ಭಾರತವೇ ಕಾರಣ ಎಂದು ಹೇಳುತ್ತಾ18 ವರ್ಷದ ಮುಸಲ್ಮಾನ ವಿದ್ಯಾರ್ಥಿಯಿಂದ 3 ದೇವಸ್ಥಾನ ಧ್ವಂಸ

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಒಂದು ಮದರಸಾದ ವಿಧ್ಯಾರ್ಥಿಯು ಮೂರು ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದರಿಂದ ಬಂಧಿಸಲಾಗಿದೆ. ಕೃತ್ಯ ಎಸಗುವಾಗ, ಬಾಂಗ್ಲಾದೇಶದಲ್ಲಿ ಬಂದಿರುವ ನೆರೆ ಭಾರತ ಬಿಟ್ಟಿರುವ ನೀರಿನಿಂದ ಬಂದಿದೆಯೆಂದು ತಿಳಿದಿದ್ದರಿಂದ ನಾನು ದೇವಸ್ಥಾನಗಳನ್ನು ಗುರಿ ಮಾಡಿದೆನು ಎಂದು ಹೇಳಿದನು. 2 ದೇವಸ್ಥಾನಗಳ ಮೂರ್ತಿ ಮತ್ತು ಇತರ ವಸ್ತುಗಳನ್ನು ಧ್ವಂಸಗೊಳಿಸಿದ ಬಳಿಕ ಮೂರನೇಯ ದೇವಸ್ಥಾನವನ್ನು ಧ್ವಂಸಗೊಳಿಸುವಾಗ 18 ವರ್ಷ ವಯಸ್ಸಿನ ರಬ್ಬಿ ಹೊಸೆನನನ್ನು ಸ್ಥಳೀಯರು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಈ ಪ್ರಕರಣದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಅರುಣ ಸರಕಾರ ಇವರು ಅವನ ವಿರುದ್ಧ ದೂರು ದಾಖಲಿಸಿದ ಬಳಿಕ ಪೊಲೀಸರು ಅಪರಾಧ ದಾಖಲಿಸಿದರು.

1. ಈ ಘಟನೆಯು ರಾಜಶಾಹಿ ಬಾಘಾ ಉಪಜಿಲ್ಲೆಯ ಪಕುರಿಯಾ ಮತ್ತು ಕಾಲಿಗ್ರಾಮ ಪ್ರದೇಶದ ದೇವಸ್ಥಾನದಲ್ಲಿ ಆಗಸ್ಟ್ 23 ರ ಬೆಳಿಗ್ಗೆ ನಡೆಯಿತು. ಕಾಲಿಗ್ರಾಮ ಸರ್ವಜನೀನ ದುರ್ಗಾ ದೇವಸ್ಥಾನ, ಪಣಿಕಾಮಾರಾ ದೇವಸ್ಥಾನ ಮತ್ತು ಪಕುರಿಯಾ ದೇವಸ್ಥಾನಗಳು ದಾಳಿಗೊಳಗಾದ ಕೆಲವು ದೇವಸ್ಥಾನಗಳ ಹೆಸರಾಗಿದೆ. ವಿಶೇಷವೆಂದರೆ, ಉಪಜಿಲ್ಲಾ ನೆರೆ ಬಂದಿರುವ ಸ್ಥಳದಿಂದ ಬಹಳ ದೂರದಲ್ಲಿದೆ.

2. ಉಪಜಿಲ್ಲಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷ ಸುಜಿತ ಕುಮಾರ್ ಪಾಂಡೆ ಮಾತನಾಡಿ, ರಬ್ಬಿಯು ಮಾತನಾಡಿ, ಅವನು ತನ್ನ ಸಹೋದರಿಯ ಮೊಬೈಲ್‌ನಲ್ಲಿ ಭಾರತವು ನೀರು ಬಿಟ್ಟಿದ್ದರುಂದ ಬಾಂಗ್ಲಾದೇಶದ ಜನರು ನೆರೆ ನೀರಿಯಲ್ಲಿ ಮುಳುಗುತ್ತಿರುವುದು ನೋಡಿ ರಾತ್ರಿಯಿಡೀ ನಿದ್ದೆ ಬರಲಿಲ್ಲ. ಆದ್ದರಿಂದ ನಾನು ಈ ಕೃತ್ಯವನ್ನು ಮಾಡಿದ್ದಾಗಿ ಹೇಳಿದ್ದಾನೆ.

3. ಬಾಂಗ್ಲಾದೇಶದ ಭಾರತದ್ವೇಷಿಗಳು ಇಂತಹ ಸುಳ್ಳು ಸುದ್ದಿಯನ್ನು ಹರಡಿದ್ದರು, ಭಾರತವು ತ್ರಿಪುರಾದ ಗುಮತಿ ನದಿಯ ಮೇಲಿನ ಡುಂಬೂರ ಜಲವಿದ್ಯುತ ಯೋಜನೆಯಿಂದ ನೀರನ್ನು ಬಿಟ್ಟಿದ್ದರಿಂದ ಬಾಂಗ್ಲಾದೇಶದ ಫೆನಿ, ಕುಮಿಲ್ಲಾ ಮತ್ತು ನೊಆಖಲಿ ಜಿಲ್ಲೆಗಳ್ಲಿ ನೆರೆಯಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸುಳ್ಳು ಸುದ್ದಿಯಿಂದ ವಿದ್ಯಾರ್ಥಿಯು ಭಾರತದ ವಿರುದ್ಧ ಪ್ರತಿಭಟನೆಯನ್ನು ಮಾಡಿದನು. ಭಾರತ ಸರಕಾರವು ಮಾತ್ರ ಈ ಹೇಳಿಕೆಯನ್ನು ತಿರಸ್ಕರಿಸಿದೆ.

ಹಿಂದೂಗಳ ಮೇಲೆ ಬೇರೆ ಪ್ರದೇಶಗಳಲ್ಲಿಯೂ ದಾಳಿ

ಬಾಂಗ್ಲಾದೇಶದ ಠಾಕೂರಗಾಂವ್ ಮತ್ತು ಪಂಚಮಢದಲ್ಲಿನ ಹಿಂದೂಗಳ ಮೇಲೆ ದಾಳಿ ನಡೆಸಲಾಯಿತು. ಇಲ್ಲಿನ ರಾಧಾಕೃಷ್ಣ ದೇವಸ್ಥಾನದಲ್ಲಿ ಮತಾಂಧ ಮುಸಲ್ಮಾನನು ಕಳ್ಳತನ ಮಾಡಿ ದೇವಸ್ಥಾನದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಾಗೂ ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ. ಠಾಕೂರಗಾಂವ್‌ನಲ್ಲಿರುವ ಹಿಂದೂಗಳ ಮನೆಗಳನ್ನು ಸುಡಲಾಯಿತು.

 

ಸಂಪಾದಕೀಯ ನಿಲುವು

ಕುಳಿತರೂ, ಎದ್ದರೂ ಯಾವುದೇ ಸಂಬಂಧವಿಲ್ಲದಿರುವಾಗಲೂ ಯಾವುದೇ ವಿಷಯದ ಬಗ್ಗೆ ಭಾರತವನ್ನು ಹಣೆಪಟ್ಟ ಕಟ್ಟುವುದು ಮತ್ತು ಅದರ ಸೇಡಾಗಿ ಹಿಂದೂ ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಸುವುದು. ಇದು ಹಿಂದೂದ್ವೇಷವೇ ಆಗಿದೆ. ಯಾವಾಗಲು ಹಿಂದೂಗಳಿಗೆ ಜಾತ್ಯತೀತದ ಉಪದೇಶ ನೀಡುವವರು ಈಗ ಈ ವಿಷಯದಲ್ಲಿ ಏನನ್ನೂ ಏಕೆ ಮಾತನಾಡುವುದಿಲ್ಲ ?