ಬಾಂಗ್ಲಾದೇಶ: ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಅವರ ಆಶ್ವಾಸನೆ !

ನಮ್ಮ ಸರಕಾರ ಧರ್ಮ ಮತ್ತು ರಾಜಕೀಯ ಅಭಿಪ್ರಾಯದ ಆಧಾರದ ಮೇಲೆ ಭೇದ ಭಾವ ಮಾಡುವುದಿಲ್ಲ !

ಢಾಕಾ (ಬಾಂಗ್ಲಾದೇಶ) – ನಮ್ಮ ಸರಕಾರ ಬೇರೆ ಧರ್ಮದ ಪಾಲನೆ ಮಾಡುವವರ ಅಥವಾ ಬೇರೆ ರಾಜಕೀಯ ಅಭಿಪ್ರಾಯ ಹೊಂದಿರುವವರ ಜೊತೆಗೆ ಯಾವುದೇ ತಾರತಮ್ಯ ಮಾಡುವುದಿಲ್ಲ. ನಾವು ದೇಶದಲ್ಲಿನ ಎಲ್ಲಾ ನಾಗರಿಕರನ್ನು ಒಂದೇ ಕುಟುಂಬದಲ್ಲಿ ಸೇರಿಸುವ ವಿಚಾರ ಹೊಂದಿದ್ದೇವೆ. ಹೊಸ ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ಜನಾಂಗ ಮತ್ತು ಉಪೇಕ್ಷಿತ ಜನಾಂಗದವರು ಸಮಾನ ನಾಗರಿಕರಾಗಿದ್ದು ಅವರಿಗೆ ಸಮಾನ ಅಧಿಕಾರವಿರುವುದು, ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಪ್ರಾ. ಮಹಮ್ಮದ್ ಯುನೂಸ್ ಅವರು ಆಗಸ್ಟ್ ೨೫ ರಂದು ದೇಶದ ದೂರ ದರ್ಶನದ ವಾಹಿನಿಯಿಂದ ಮಾತನಾಡುವಾಗ ಜನತೆಗೆ ಆಶ್ವಾಸನೆ ನೀಡಿದರು.

ಢಾಕಾದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ಹಿಂದುಗಳು ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಢಾಕಾದಲ್ಲಿ ಜನ್ಮಾಷ್ಟಮಿಯ ಪ್ರಯುಕ್ತ ದೊಡ್ಡ ಮೆರವಣಿಗೆ ಆಯೋಜಿಸಲಾಯಿತು. ಬಾಂಗ್ಲಾದೇಶದಲ್ಲಿ ಆಗಸ್ಟ್ ೫ ರಂದು ಶೇಖ್ ಹಸೀನಾ ಸರಕಾರ ಪದಚ್ಯುತಗೊಂಡ ನಂತರ ಜಾತಿಯ ಸೌಹಾರ್ದತೆ ಹದಗೆಟ್ಟಿರುವುದರಿಂದ ಈ ವರ್ಷದ ಜನ್ಮಾಷ್ಟಮಿಯ ಕಾರ್ಯಕ್ರಮದ ಬಗ್ಗೆ ಅನೇಕ ಪ್ರಶ್ನೆ ಚಿಹ್ನೆಗಳು ನಿರ್ಮಾಣವಾಗಿದ್ದವು, ಇಂತಹ ಪರಿಸ್ಥಿತಿಯಲ್ಲಿ ಮಹಮ್ಮದ್ ಯುನೂಸ್ ಅವರ ಭಾಷಣದ ನಂತರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಢಾಕಾದಲ್ಲಿ ಜನ್ಮಾಷ್ಟಮಿ ಆಚರಿಸಲಾಯಿತು.

ಸಂಪಾದಕೀಯ ನಿಲುವು

ಈ ಹೇಳಿಕೆ ಮೇಲೆ ವಿಶ್ವಾಸ ಇಡುವವರ್ಯಾರು? ಪ್ರಾ .ಯುನೂಸ್ ಅವರು ಮೊದಲು ಸಂತ್ರಸ್ತ ಹಿಂದುಗಳಿಗೆ ಪರಿಹಾರ ನೀಡಿ ಅವರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ತೋರಿಸಲಿ !