ಬಾಂಗ್ಲಾದೇಶದಲ್ಲಿ ಹಿಂಸಾಚಾರಿಗಳಿಂದ ಹಿಂದುಗಳ ಬಳಿ ಬಂಗಾರ, ಹಣ ಮತ್ತು ಹುಡುಗಿಗಳ ಬೇಡಿಕೆ !

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿಗಳು ಈಗಲೂ ಮುಂದುವರಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ಸ್ಥಾಪನೆಯಾದ ನಂತರ ಕೂಡ ಹಿಂದುಗಳ ವಿರುದ್ಧ ಹಿಂಸಾಚಾರ ಮುಂದುವರೆದಿದೆ. ಹಿಂದೂಗಳ ಹತ್ತಿರ ವಸೂಲಿಯಲ್ಲಿ ಬಂಗಾರ, ಹಣ ಅಷ್ಟೇ ಅಲ್ಲದೆ ಅವರ ಹುಡುಗಿಯರನ್ನು ಕೇಳಲಾಗುತ್ತಿದೆ. ಇದರಿಂದ ಸಂತ್ರಸ್ತ ಹಿಂದೂಗಳು ಭಾರತದ ಬಳಿ ವೀಸಾ ಕೇಳುತ್ತಿದ್ದಾರೆ, ವೀಸಾ ಇಲ್ಲದಿದ್ದರೂ ಕೂಡ ಗಡಿ ದಾಟಲು ಸಿದ್ದರಿದ್ದಾರೆ. ಈ ಸಂದರ್ಭದಲ್ಲಿ ‘ದೈನಿಕ ಭಾಸ್ಕರ’ದ ಪ್ರತಿನಿಧಿಗಳು ಬಾಂಗ್ಲಾದೇಶಕ್ಕೆ ಹೋಗಿ ಮಾಹಿತಿ ಪಡೆದಿರುವಾಗ ಅನೇಕ ಘಟನೆಗಳು ಬೆಳಕಿಗೆ ಬಂದಿವೆ.

೧. ಓರ್ವ ಹಿಂದೂವು, ಆಗಸ್ಟ್ ೧೫ ರಂದು ೧೦ ರಿಂದ ೧೨ ಬೈಕ್ ಸವಾರರು ಚಾಕು, ಸುತ್ತಿಗೆ ಮತ್ತು ಕುಡಿಗೋಲು ತೆಗೆದುಕೊಂಡು ಮನೆಗೆ ಬಂದರು ಮತ್ತು ನಾನು ಮನೆಯಲ್ಲಿ ಇಲ್ಲದಿರುವುದು ಅವರಿಗೆ ತಿಳಿಯಿತು, ಆಗ ಅವರು ಹೊರಟು ಹೋದರು ಮತ್ತು ಕರೆಗಳು ಮಾಡಿ ಬೆದರಿಕೆ ನೀಡಿದರು. ಆದ್ದರಿಂದ ಆ ವ್ಯಕ್ತಿಗೆ ಸಂಬಂಧಿಕರ ಮನೆಯಲ್ಲಿಯೇ ಅಡುಗಿ ಕುಳಿತುಕೊಳ್ಳಬೇಕಾಯಿತು ಎಂದು ಹೇಳಿದರು.

೨. ಜಸೋರ ಇಲ್ಲಿನ ಒಂದು ಆಶ್ರಮದ ಮತ್ಸಪಾಲನೆ ವ್ಯವಸಾಯಕ್ಕೆ ಸಂಬಂಧಿಸಿದ ೨ ಹಿಂದುಗಳು, ಅವರಿಂದ ೨-೩ ಲಕ್ಷ ರೂಪಾಯಿ ಕೇಳುತ್ತಿದ್ದಾರೆ, ಕೊಡದಿದ್ದರೆ ನಿನ್ನ ಹುಡುಗನ ಅಪಹರಣ ಮಾಡುವೆವು’ ಎಂದು ಬೆದರಿಕೆ ನೀಡುತ್ತಿದ್ದಾರೆ. ‘ಬಾಂಗ್ಲಾದೇಶದಲ್ಲಿ ನಮಗೆ ಭವಿಷ್ಯವಿಲ್ಲ ಮತ್ತು ನಮ್ಮ ಎಲ್ಲಾ ಭೂಮಿ ಮತ್ತು ಸಂಪತ್ತಿ ಬಿಟ್ಟು ಭಾರತದಲ್ಲಿ ವಾಸಿಸಬೇಕಿದೆ’, ಎಂದು ಅವರು ಹೇಳಿದರು. ಅಲ್ಲಿಯ ಅವರ ಕೆಲಸಗಳು ಕೂಡ ನಿಂತು ಹೋಗಿವೆ.

೩. ಮತ್ಸಪಾಲನೆ ಕಂಪನಿಯಲ್ಲಿ ಕೆಲಸ ಮಾಡುವ ಓರ್ವ ಹಿಂದೂ, ನಮ್ಮ ಮಾಲೀಕರಿಗೆ ಬೆದರಿಕೆ ನೀಡಲಾಗುತ್ತಿದೆ, ‘ಮಾಲೀಕರಿಂದ ಹಣ ಕಿತ್ತುಕೊಳ್ಳಿ, ಇಲ್ಲವಾದರೆ ಅವರ ಹಸುಗಳನ್ನು ತೆಗೆದುಕೊಂಡು ಹೋಗಿ’ ಎಂದು ನಮಗೆ ಹೇಳಲಾಗಿದೆ. ಮಾಲೀಕರಿಗೆ ಬೆದರಿಕೆ ನೀಡುವವರು ಈ ಕಂಪನಿಯಲ್ಲಿ ಕೆಲಸ ಮಾಡುವ ಹಿಂದುಗಳ ಪರಿಚಯದವರಾಗಿದ್ದಾರೆ, ಅವರು ಬಾಂಗ್ಲಾದೇಶದ ನ್ಯಾಷನಲ್ ಪಾರ್ಟಿಯ (ಬಿ.ಎಂ.ಪಿ. ಜೊತೆಗೆ) ಸಂಬಂಧ ಪಟ್ಟವರಾಗಿದ್ದಾರೆ. ಅವರು ಬಂಗಾರ, ಹಣ ಮತ್ತು ಹುಡುಗಿಯರನ್ನು ಕೇಳುತ್ತಿದ್ದಾರೆ. ಅನೇಕ ಹುಡುಗಿಯರ ಮೇಲೆ ಬಲಾತ್ಕಾರಗಳ ಆಗಿವೆ; ಆದರೆ ಅವರ ವೇದನೆ ಅವರು ಹೇಳಲು ಸಾಧ್ಯವಾಗುತ್ತಿಲ್ಲ. ನಾವು ಬಿ.ಎಂ.ಪಿ. ಯ ಜನರಿಗೆ ಹಣ ಕೂಡ ನೀಡಿದ್ದೇವೆ. ಹೊಸ ಸರಕಾರದ ಮೇಲೆ ನಮಗೆ ಸ್ವಲ್ಪವೂ ನಂಬಿಕೆ ಇಲ್ಲ. ಈಗ ಬಾಂಗ್ಲಾದೇಶದಲ್ಲಿನ ಹಿಂದುಗಳಿಗೆ ಉದ್ಯೋಗವು ದೊರೆಯಲು ಸಾಧ್ಯವಿಲ್ಲ. ಸರಕಾರಿ ಜನರೇ ನಮಗೆ ಕಿರುಕುಳ ನೀಡುತ್ತಿದ್ದಾರೆ. ಸೈನ್ಯ ಮತ್ತು ಪೊಲೀಸರು ಪತ್ತೆಯೇ ಇರುವುದಿಲ್ಲ. ಒಂದು ಪ್ರಾಥಮಿಕ ಶಿಕ್ಷಕರ ಮೇಲೆ ಕೂಡ ದಾಳಿ ನಡೆದಿದೆ. ಇದರಿಂದ ಅವರು ಓಡಿ ಹೋಗಬೇಕಾಯಿತು. ಗ್ರಾಮದಲ್ಲಿನ ದೇವಸ್ಥಾನದ ರಕ್ಷಣೆ ಮಾಡಬೇಕಾಗಿದೆ. ಪೊಲೀಸ ಅಧಿಕಾರಿಗಳು ಕೂಡ ಸಂತ್ರಸ್ತ ಹಿಂದುಗಳಿಗೆ ಭೇಟಿ ಆಗಲು ಸಿದ್ದರಿಲ್ಲ ಎಂದು ಹೇಳಿದರು.

೪. ಓರ್ವ ವಿದ್ಯಾರ್ಥಿಯು, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮನೆಯ ಮೇಲೆ ಚಿಹ್ನೆಗಳು ಹಚ್ಚಲಾಗಿದೆ ಮತ್ತು ವಸೂಲಿ ಮಾಡಲಾಗುತ್ತಿದೆ. ಈ ವಿದ್ಯಾರ್ಥಿಯ ಪೋಷಕರು ವೃದ್ಧರಾಗಿದ್ದು ಅವರು ಚಿತಗಾವದಲ್ಲಿ ವಾಸಿಸುತ್ತಾರೆ ಎಂದು ಹೇಳಿದರು.

೫. ಮಹಾರಾಷ್ಟ್ರದಲ್ಲಿನ ಒಂದು ಕಾಲೇಜಿನಲ್ಲಿನ ಇಂಜಿನಿಯರಿಂಗ್ ಶಿಕ್ಷಣ ಪಡೆದು ಢಾಕಾದಲ್ಲಿ ನೌಕರಿ ಮಾಡುವ ಈ ಹಿಂದೂ ವಿದ್ಯಾರ್ಥಿಯ ಕುಟುಂಬಕ್ಕೆ ಬಾಂಗ್ಲಾದೇಶ ಬಿಟ್ಟು ಹೋಗಲು ಹೇಳಲಾಗಿದೆ. ೫ ಲಕ್ಷ ರೂಪಾಯಿ ಕೇಳಲಾಗಿರುವ ವ್ಯಕ್ತಿಯು ದೂರವಾಣಿಯಲ್ಲಿ ತನ್ನ ಪರಿಚಯ ಇಸ್ಲಾಮಿ ಗುಂಪಿನ ಸದಸ್ಯ ಎಂದು ಹೇಳುತ್ತಾನೆ. ಇತರ ಹಿಂದುಗಳಿಗೂ ಕೂಡ ಇಂತಹ ದೂರವಾಣಿ ಕರೆಗಳು ಬರುತ್ತವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದಾಳಿಗಳು ನಿಲ್ಲುವುದಿಲ್ಲ; ಕಾರಣ ಅದು ೧೯೪೭ ರಿಂದ (ಪಾಕಿಸ್ತಾನದ ಸ್ಥಾಪನೆ ಆದಾಗಿನಿಂದ) ಮುಂದುವರೆದಿದೆ ಮತ್ತು ಹಿಂದೂ ನಾಶ ಆಗುವವರೆಗೂ ಅದು ಮುಂದುವರೆಯುತ್ತದೆ; ಕಾರಣ ಅವರಿಗೆ ಇಷ್ಟು ವರ್ಷದಲ್ಲಿ ಯಾರೂ ಕೂಡ ರಕ್ಷಿಸಲು ಪ್ರಯತ್ನ ಮಾಡಲಿಲ್ಲ, ಈಗಲೂ ಕೂಡ ಯಾರು ಮಾಡುತ್ತಿಲ್ಲ ಮತ್ತು ಮುಂದೆ ಕೂಡ ಮಾಡುವರು ಎಂದು ಅನಿಸುತ್ತಿಲ್ಲ, ಇದು ವಾಸ್ತವ ಪರಿಸ್ಥಿತಿ ಆಗಿದೆ !