ಅಮೆರಿಕ: ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಪ್ರಥಮ ಬಾರಿಗೆ ವೇದಮಂತ್ರೋಚ್ಚಾರ !

ಚಿಕಾಗೋ – ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯ ಅಧಿಕೃತ ಘೋಷಣೆಗಾಗಿ ಆಯೋಜಿಸಲಾಗಿದ್ದ ‘ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್’ (ಡಿಎನ್‌ಸಿ)ಯ ಮೂರನೇ ದಿನದ ಕಲಾಪಗಳು ಪ್ರಥಮ ಬಾರಿಗೆ ವೇದ ಘೋಷದೊಂದಿಗೆ ಆರಂಭಗೊಂಡವು. ಭಾರತೀಯ-ಅಮೆರಿಕನ್ ಅರ್ಚಕರಾದ ರಾಕೇಶ್ ಭಟ್ ಅವರು ಮಾತ್ರೋಚ್ಚಾರದೊಂದಿಗೆ ಮೂರನೇ ದಿನದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಡೆಮಾಕ್ರಟಿಕ್ ಪಾರ್ಟಿಯ ಹಣಕಾಸು ವ್ಯವಹಾರಗಳ ವಿಭಾಗದ ಉಪ ಮುಖ್ಯಸ್ಥ ಅಜಯ ಭುಟೋರಿಯಾ ಮಾತನಾಡಿ, ಡಿಎನ್‌ಸಿಯಲ್ಲಿ ರಾಕೇಶ್ ಭಟ್ ಅವರ ವೈದಿಕ ಪದ್ದತಿಯಿಂದ ಪ್ರಾರ್ಥನೆ ಮಾಡುವುದು ಒಂದು ಪ್ರಮುಖ ಕ್ಷಣವಾಗಿದೆ. ಈ ಕೃತಿಯು ಪಕ್ಷದ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಗೆ ಬದ್ಧತೆಯನ್ನು ತೋರಿಸುತ್ತದೆ. “ಈ ಕ್ಷಣವು ಭಾರತೀಯ ಅಮೆರಿಕನ್ ಸಮುದಾಯದ ಹೆಚ್ಚುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಅಮೆರಿಕದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದರ ಮಹತ್ವದ ಕಾರ್ಯಕ್ರಮದ ಆರಂಭದಲ್ಲಿ ವೇದ ಮಂತ್ರ ಪಠಣ ಮಾಡಿರುವುದು ಹಿಂದೂಗಳಿಗೆ ಹೆಮ್ಮೆಯ ಸಂಗತಿ. ಅಲ್ಲಿನ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಹಿಂದೂಗಳ ಮತಕ್ಕಾಗಿ ಅನ್ಯ ಕಡೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಆಶ್ಚರ್ಯವೇನಿಲ್ಲ !