ಭಾರತಕ್ಕೆ ಬೆದರಿಕೆ ಹಾಕಿದ ಬಾಂಗ್ಲಾದೇಶದ ಮಧ್ಯಂತರ ಸರಕಾರ

‘ತಿಸ್ತಾ ನದಿಯ ನೀರು ಸಿಗದಿದ್ದರೆ ಅಂತರಾಷ್ಟ್ರೀಯ ವೇದಿಕೆಗೆ ಹೋಗುತ್ತೇವೆ !’ (ಅಂತೆ)

ಢಾಕಾ (ಬಾಂಗ್ಲಾದೇಶ) – ಮಹಮ್ಮದ ಯೂನಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಸ್ಥಾಪಿಸಲಾದ ಮಧ್ಯಂತರ ಸರಕಾರವು ತೀಸ್ತಾ ನದಿ ನೀರಿನ ವಿವಾದವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವುದಾಗಿ ಬೆದರಿಕೆ ಹಾಕಿದೆ. ಮಧ್ಯಂತರ ಸರಕಾರದ ಜಲ ಮತ್ತು ಪರಿಸರ ಸಚಿವ ರಿಜವಾನಾ ಹಸನ ಇವರು ಮಾತನಾಡಿ, ಬಾಂಗ್ಲಾದೇಶ ತೀಸ್ತಾ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಾಂಗ್ಲಾದೇಶ ಅಂತರರಾಷ್ಟ್ರೀಯ ವೇದಿಕೆಗೆ ಹೋಗಲು ವಿಚಾರ ಮಾಡಬಹುದು ಎಂದು ಬೆದರಿಕೆ ಹಾಕಿದ್ದಾರೆ. ನಾವು ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳುತ್ತೇವೆ; ಆದರೆ ನಾವು ನಮ್ಮ ದಾವೆಗಳನ್ನು ದೃಢವಾಗಿ ಮಂಡಿಸುತ್ತೇವೆ ಮತ್ತು ನಮ್ಮ ನ್ಯಾಯಯುತ ಬೇಡಿಕೆಗಾಗಿ ಅಂತರರಾಷ್ಟ್ರೀಯ ವೇದಿಕೆಗೂ ಹೋಗುತ್ತೇವೆ. ತೀಸ್ತಾ ನದಿಯು ಹಿಮಾಲಯದಿಂದ ಉಗಮವಾಗುತ್ತದೆ. ಈ ನದಿಯು ಭಾರತದ ಸಿಕ್ಕಿಂ ಮತ್ತು ಬಂಗಾಳ ರಾಜ್ಯಗಳಿಂದ ಹರಿಯುತ್ತಾ ಬಾಂಗ್ಲಾದೇಶಕ್ಕೆ ಹೋಗುತ್ತದೆ.

1. ತೀಸ್ತಾ ವಿಷಯದಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿಲುವನ್ನು ಉಲ್ಲೇಖಿಸಿದ ರಿಜವಾನಾ ಇವರು, ಮಮತಾ ಬ್ಯಾನರ್ಜಿ ಅವರು, ಜನರನ್ನು ನೀರಿನಿಂದ ವಂಚಿತಗೊಳಿಸಿ ಇತರರಿಗೆ (ಬಾಂಗ್ಲಾದೇಶಕ್ಕೆ) ನೀರನ್ನು ಕೊಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ತೀಸ್ತಾದ ದಡದಲ್ಲಿರುವ ನಮ್ಮ ಜನರ ತೊಂದರೆಯನ್ನು ನಾವು ಮುಂದೆ ಮಂಡಿಸುತ್ತೇವೆ. ತೀಸ್ತಾ ನದಿಯ ನೀರಿನ ಮೇಲೆ ಬಾಂಗ್ಲಾದೇಶದ ಹಕ್ಕಿದೆಯೆಂದು ಹೇಳಲು ನಾವು ಹಿಂಜರಿಯುವುದಿಲ್ಲ.

2. ರಿಜವಾನಾ ಹಸನ ಇವರು ಮಾತನಾಡಿ, ಬಾಂಗ್ಲಾದೇಶದ ನೂತನ ಸರಕಾರವು ತೀಸ್ತಾದೊಂದಿಗೆ ಸಮಕಾಲೀನ ನದಿಗಳ ಸಂದರ್ಭದಲ್ಲಿ ಭಾರತ ಸರಕಾರದೊಂದಿಗೆ ಚರ್ಚೆ ಮಾಡುವುದು ಎಂದು ಹೇಳಿದ್ದಾರೆ. ‘ಜಾಯಿಂಟ್ ರಿವರ್ ಕಮಿಷನ್’ ತಿಸ್ತಾದ ನೀರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ ನಾವು ಬಾಂಗ್ಲಾದೇಶದ ತೀಸ್ತಾದ ದಡದಲ್ಲಿರುವ ಜನರನ್ನು ಸೇರಿಸಿಕೊಳ್ಳುತ್ತೇವೆ. ನಮಗೆ ನೀರು ಸಿಗುತ್ತದೋ ಇಲ್ಲವೋ ಅದು ನಮ್ಮ ಕೈಯಲ್ಲಿಲ್ಲ. ನಾವು ಈ ವಿಷಯದ ಕುರಿತು ಮಾತನಾಡುತ್ತೇವೆ. ನಾವು ನಮ್ಮ ಅಭಿಪ್ರಾಯವನ್ನು ಭಾರತಕ್ಕೆ ಬಹಳ ಸ್ಪಷ್ಟವಾಗಿ ತಿಳಿಸುತ್ತೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ಪ್ರಾರಂಭವಷ್ಟೆ, ಇನ್ನು ಮುಂದೆ ಬಾಂಗ್ಲಾದೇಶದಿಂದ ಇದೇ ರೀತಿ ಕೇಳಬೇಕಾಗುವುದು. ಇದನ್ನು ಭಾರತವು ಗಮನಕ್ಕೆ ತೆಗೆದುಕೊಂಡು ಅದಕ್ಕೆ ತಕ್ಕ ಪಾಠವನ್ನು ಕಲಿಸಲು ಸಿದ್ಧರಾಗಬೇಕು !