ಶೇಖ ಹಸೀನಾಳನ್ನು ಬಾಂಗ್ಲಾದೇಶಕ್ಕೆ ಒಪ್ಪಿಸಿ ! – ಬಾಂಗ್ಲಾದೇಶ ನ್ಯಾಶನಲ ಪಾರ್ಟಿ

‘ಬಾಂಗ್ಲಾದೇಶ ನ್ಯಾಶನಲ ಪಾರ್ಟಿ’ಯಿಂದ ಭಾರತಕ್ಕೆ ಕರೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ `ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ಯ (‘ಬಿ.ಎನ್‌.ಪಿ.’ಯ) ಕಾರ್ಯದರ್ಶಿ ಮಿರ್ಝಾ ಫಖರುಲ ಇಸ್ಲಾಮ ಆಲಮಗೀರ ಇವರು ಶೇಖ ಹಸೀನಾರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಹೇಳಿದ್ದಾರೆ. ಅವರು ಮಾತನಾಡಿ, ಶೇಖ ಹಸೀನಾ ಇವರನ್ನು ಕಾನೂನು ಮಾರ್ಗಗಳ ಮೂಲಕ ಬಾಂಗ್ಲಾದೇಶ ಸರಕಾರಕ್ಕೆ ಹಸ್ತಾಂತರಿಸಬೇಕೆಂಬುದು ಭಾರತದ ಬಳಿ ನಾವು ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.

1. ಮಿರ್ಜಾ ಫಖರುಲ್ ಇವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಶೇಖ ಹಸೀನಾ ಅವರಿಗೆ ಆಶ್ರಯ ನೀಡುವ ಮೂಲಕ ಭಾರತವು ಪ್ರಜಾಪ್ರಭುತ್ವದ ಕುರಿತು ಇರುವ ವಚನಬದ್ಧತೆಯನುಸಾರ ನಡೆದುಕೊಳ್ಳುತ್ತಿರುವಂತೆ ಕಾಣಿಸುತ್ತಿಲ್ಲ. ಶೇಖ್ ಹಸೀನಾ ಅವರು ಭಾರತದಲ್ಲಿ ನೆಲೆಸಿ, ಬಾಂಗ್ಲಾದೇಶದಲ್ಲಿನ ಚಳವಳಿಯನ್ನು ದಮನಗೊಳಿಸಲು ಹಲವು ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2. ಫಖರುಲ್ ಮಾತು ಮುಂದುವರಿಸಿ, ಬಾಂಗ್ಲಾದೇಶದ ಜನರು ಶೇಖ ಹಸೀನಾ ಅವರ ಅಪರಾಧವನ್ನು ಚಿಕ್ಕದೆಂದು ಪರಿಗಣಿಸುವುದಿಲ್ಲ. ಹಸೀನಾ ಅವರ ಅಧಿಕಾರಾವಧಿಯಲ್ಲಿ ಬಾಂಗ್ಲಾದೇಶದ ಮೇಲೆ 18 ಲಕ್ಷ ಕೋಟಿ ರೂಪಾಯಿ ಸಾಲವಾಗಿದೆ. ಅಂದಾಜು 1 ಸಾವಿರ ಕೋಟಿ ಡಾಲರ್‌ಗಳನ್ನು ದೇಶದಿಂದ ಕಸಿದುಕೊಳ್ಳಲಾಗಿದೆ. ಅವರ ಆಳ್ವಿಕೆಯಲ್ಲಿ ದೇಶದ ಎಲ್ಲಾ ಸಂಸ್ಥೆಗಳು ನಾಶವಾಗಿವೆ.

3. ಬಾಂಗ್ಲಾದೇಶದ ‘ಅಂತಾರಾಷ್ಟ್ರೀಯ ಅಪರಾಧ ಪ್ರಾಧಿಕಾರ’ ಶೇಖ್ ಹಸೀನಾ ಮತ್ತು ಇತರ 23 ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಅವರ ವಿರುದ್ಧ ಅಂತರಾಷ್ಟ್ರೀಯ ಅಪರಾಧ ಪ್ರಾಧಿಕರಣ ದಾಖಲಿಸಿರುವ ಇದು ನಾಲ್ಕನೇ ಅಪರಾಧವಾಗಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಎಂ.ಎಚ್. ತಮೀಮ ಇವರು ಮಾತನಾಡಿ, ಪ್ರಾಥಮಿಕ ತನಿಖೆಯ ನಂತರ ಆರೋಪಿಗಳ ವಿರುದ್ಧ ಬಂಧಿಸಲು ನೋಟಿಸ್ ಜಾರಿ ಮಾಡಲಾಗುವುದು’, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈಗ ಈ ರೀತಿ ಕರೆ ನೀಡುವ ಬಾಂಗ್ಲಾದೇಶ ನಂತರ ಭಾರತದ ವಿರುದ್ಧ ಕ್ರಮಕ್ಕೆ ಮುಂದಾಗುವುದರಲ್ಲಿ ಸಂಶಯವಿಲ್ಲ !