ಒಟಾವಾ (ಕೆನಡಾ) – ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧವನ್ನು ವಿಶ್ವದಾದ್ಯಂತ ಪ್ರತಿಭಟಿಸಲಾಗುತ್ತಿದೆ. ಭಾರತದಾದ್ಯಂತ ಕನಿಷ್ಠ 200 ನಗರಗಳಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಆಗಸ್ಟ್ 12 ರಂದು ಅಮೆರಿಕದ ಮಿಚಿಗನ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಇದೇ ರೀತಿಯ ಪ್ರತಿಭಟನೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಮತ್ತು ಆಗಸ್ಟ್ 16 ರಂದು ಸ್ವಿಟ್ಜರ್ಲೆಂಡ್‌ನ ಜಿನೀವಾ, ಆಗಸ್ಟ್ 17 ರಂದು ಐರ್ಲೆಂಡ್ ರಾಜಧಾನಿ ಡಬ್ಲಿನ್ ಮತ್ತು ಆಗಸ್ಟ್ 18 ರಂದು ಕೆನಡಾದ ಮಾಂಟ್ರಿಯಲ್ ಮತ್ತು ಟೊರೊಂಟೊದಲ್ಲಿ ನಡೆಯಿತು. ಇದೇ ರೀತಿಯ ಪ್ರತಿಭಟನೆಗಳು ಬ್ರಿಟನ್, ಬೆಲ್ಜಿಯಂ, ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ನಡೆದವು. ಈ ಪ್ರತಿಭಟನೆಗಳಲ್ಲಿ, ಆಯಾ ನಗರಗಳಲ್ಲಿ ನೂರಾರು ಹಿಂದೂಗಳು ಬಾಂಗ್ಲಾದೇಶಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರು ಮತ್ತು ಆಯಾ ದೇಶಗಳಲ್ಲಿನ ಬಾಂಗ್ಲಾದೇಶ ರಾಯಭಾರ ಕಚೇರಿಗೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.
ಸಂಪಾದಕೀಯ ನಿಲುವುಪ್ರಪಂಚದಾದ್ಯಂತ ಇರುವ ಹಿಂದೂಗಳ ಕಡೆ ವಕ್ರದೃಷ್ಟಿಯಿಂದ ನೋಡದಂತೆ ಹಿಂದೂಗಳು ವರ್ಚಸ್ಸನ್ನು ನಿರ್ಮಾಣ ಮಾಡಬೇಕು ! |