ಯೋಗ್ಯ ಅಭ್ಯರ್ಥಿಯನ್ನು ಆರಿಸಿ ತರಲು ಚುನಾವಣೆಯ ಪ್ರಕ್ರಿಯೆಯಲ್ಲಿ ಸುಧಾರಣೆ ಆವಶ್ಯಕ !

೧. ಮತದಾರರನ್ನು ಚುನಾವಣೆಯ ಪ್ರಕ್ರಿಯೆಯಿಂದ ವಂಚಿತರನ್ನಾಗಿಡುವುದು, ವ್ಯವಸ್ಥೆಯ ಅಣಕವಾಗಿದೆ !

ತೀವ್ರ ಬೇಸಿಗೆಯ ಕಾಲದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯ ವೇಳಾಪಟ್ಟಿಯನ್ನು ಯಾರು ತಯಾರಿಸಿದರು ? ಎನ್ನುವ ವಿಷಯದಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ. ಭಾರತದ ಬೇಸಿಗೆ ಎಷ್ಟು ತೀವ್ರವಾಗಿರುತ್ತದೆ, ಎಂಬುದರ ಅರಿವು ಅವರಿಗಿಲ್ಲವೆ ? ಅಥವಾ ಅವರು ಮತದಾರರನ್ನು ಚುನಾವಣಾಕ್ಷೇತ್ರದಿಂದ ದೂರವಿಡಲು ಉದ್ದೇಶಪೂರ್ವಕ ಈ ಉರಿಬಿಸಿಲಿನಲ್ಲಿ ಚುನಾವಣೆಯನ್ನು ಇಟ್ಟಿದ್ದರೇ ? ರಾಜಕೀಯ ಪಕ್ಷಗಳೊಂದಿಗೆ ಸಲಹೆಸೂಚನೆಗಳನ್ನು ಚರ್ಚಿಸಿಯೇ ಭಾರತೀಯ ಚುನಾವಣಾ ಆಯೋಗ ಚುನಾವಣೆಯ ವೇಳಾಪಟ್ಟಿಯನ್ನು ತಯಾರಿಸುತ್ತದೆ. ಈ ಉರಿಬಿಸಿಲಿನಲ್ಲಿ ಚುನಾವಣೆಯನ್ನಿಡುವುದರಲ್ಲಿ ರಾಜಕೀಯ ಪಕ್ಷಗಳು ಹಾಗೂ ಭಾರತೀಯ ಚುನಾವಣಾ ಆಯೋಗ ಇವೆರಡೂ ತಪ್ಪಿತಸ್ಥರಾಗಿವೆ. ೫ ವರ್ಷ ದಾರಿ ನೋಡುತ್ತಾ ಮತದಾನ ಮಾಡಿ ತನಗೆ ಇಷ್ಟವಾಗುವ ಸರಕಾರವನ್ನು ಆರಿಸಲು ಆತುರತೆಯಿಂದ ಕಾಯುತ್ತಿದ್ದರೂ, ಈ ತೀವ್ರ ಹವಾಮಾನದಿಂದಾಗಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ, ಇಂತಹ ಮತದಾರರಿಗೆ ಉತ್ತರ ನೀಡಲು ಇವರಿಬ್ಬರೂ ಜವಾಬ್ದಾರರಾಗಿದ್ದಾರೆ. ಆದ್ದರಿಂದ ಉದ್ದೇಶಪೂರ್ವಕ ಅಥವಾ ಯಾವುದೇ ಉದ್ದೇಶವಿಲ್ಲದೆ ಮತದಾರರಿಗೆ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ವಂಚಿಸಿರುವುದರಿಂದ ಇದು ಚುನಾವಣಾ ಪ್ರಕ್ರಿಯೆಯ ಅಣಕವಾಗಿದೆ.

ನ್ಯಾಯವಾದಿ (ಡಾ.) ಎಚ್‌.ಸಿ. ಉಪಾಧ್ಯಾಯ

೨. ಚುನಾವಣಾ ಆಯೋಗಕ್ಕೆ ನಿಜವಾದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯವನ್ನು ನೀಡುವ ವಿಷಯದಲ್ಲಿ ಸಂವಿಧಾನದಲ್ಲಿ ವ್ಯವಸ್ಥೆ ಇರಬೇಕು !

ಸತ್ಯಸಂಗತಿಯೇನೆಂದರೆ ಭಾರತದ ಸಂವಿಧಾನದಲ್ಲಿ ಚುನಾವಣಾ ಆಯೋಗಕ್ಕೆ ಸ್ವಾಯತ್ತೆ ಮತ್ತು ಸ್ವಾತಂತ್ರ್ಯ ನೀಡುವ ಬಗ್ಗೆ ವ್ಯವಸ್ಥೆ ಇರಬೇಕಾಗಿತ್ತು. ಅದರಲ್ಲಿ ‘ಚುನಾವಣಾ ಆಯೋಗದ ನಿಲುವನ್ನು ತಕ್ಷಣ ಹಾಗೂ ಯೋಗ್ಯ ರೀತಿಯಲ್ಲಿ ನಿರ್ಣಯಕ್ಕನುಸಾರ ಕೃತಿ ಮಾಡಲು, ಆದೇಶ ನೀಡಲು ಮತ್ತು ಸೂಚನೆ ನೀಡಲು ಚುನಾವಣಾ ಆಯೋಗದ ಕೈಕೆಳಗೆ ವಿಶೇಷ ವಿಭಾಗ ಇರಬೇಕು’, ಎನ್ನುವ ವ್ಯವಸ್ಥೆ ಸಂವಿಧಾನದಲ್ಲಿ ಇರಬೇಕು. ಸದ್ಯ ಚುನಾವಣಾ ಆಯೋಗದ ಕೈಕೆಳಗೆ ರಾಜ್ಯವ್ಯವಸ್ಥಾಪನೆ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಅಪೇಕ್ಷೆಗನುಸಾರ ಪರಿಣಾಮ ಸಿಗುವುದಿಲ್ಲ, ಎಂದು ಪುನಃ ಹೇಳುವ ಅವಶ್ಯಕತೆಯಿಲ್ಲ. ಸರಕಾರಿ ಅಧಿಕಾರಿಗಳು ಮತ್ತು ಇತರ ನೌಕರರು ಚುನಾವಣೆ ಮುಗಿದ ತಕ್ಷಣ ಅವರು ರಾಜಕಾರಣಿಗಳ ಕೈಕೆಳಗೆ ಕೆಲಸ ಮಾಡಬೇಕಾಗುತ್ತದೆ, ಎಂಬುದು ತಿಳಿದಿರುತ್ತದೆ. ಆದ್ದರಿಂದ ಸಾಮಾನ್ಯವಾಗಿ ರಾಜ್ಯದ ಸರಕಾರಿ ವ್ಯವಸ್ಥೆಯು ಸ್ವಲ್ಪ ಕಾಲಾವಧಿಗಾಗಿ ತಮ್ಮ ಅಧಿಕಾರಿ ಗಳಾಗಿರುವ ಚುನಾವಣಾ ಆಯೋಗದ ಅಧಿಕಾರಿಗಳ ಸೂಚನೆಗಳನ್ನು ಸ್ವೀಕರಿಸಲು ಇಷ್ಟಪಡುವುದಿಲ್ಲ. ಅಷ್ಟು ಮಾತ್ರವಲ್ಲ, ರಾಜ್ಯ ಸರಕಾರದ ವ್ಯವಸ್ಥೆಯಲ್ಲಿನ ಅಧಿಕಾರಿ ಗಳು ತಮ್ಮ ರಾಜ್ಯದ ಯಾವುದಾದರೂ ರಾಜಕೀಯ ಪಕ್ಷದ ವಿಚಾರಶೈಲಿಯೊಂದಿಗೆ ಜೋಡಿಸಲ್ಪಟ್ಟಿರುತ್ತಾರೆ. ಆದ್ದರಿಂದ ಅವರು ನಿಷ್ಪಕ್ಷಪಾತರಾಗಿರುತ್ತಾರೆ, ಎಂದು ಹೇಳಲು ಸಾಧ್ಯವಿಲ್ಲ.

೩. ಚುನಾವಣೆಯಲ್ಲಿ ಅಪರಾಧಿಗಳು ಮತ್ತು ಅಲ್ಪ ಶಿಕ್ಷಣ ಪಡೆದ ಅಭ್ಯರ್ಥಿಗಳಿರುವುದು ಈ ವ್ಯವಸ್ಥೆಗೆ ನಾಚಿಕೆಗೇಡು !

ಇದರ ನಂತರದ ಮಹತ್ವದ ಪ್ರಶ್ನೆ ಎಂದರೆ, ರಾಜಕೀಯ ಪಕ್ಷಗಳ ‘ಚುನಾವಣೆಯ ಕಣಕ್ಕಿಳಿದ ಅಭ್ಯರ್ಥಿಗಳ ಗುಣಮಟ್ಟ ! ಚುನಾವಣೆಯಲ್ಲಿನ ಅಭ್ಯರ್ಥಿಗಳ ಗುಣಮಟ್ಟ ಚೆನ್ನಾಗಿರಬೇಕು’, ಎಂದು ಸರ್ವೋಚ್ಚ ನ್ಯಾಯಾಲಯ ಅನೇಕ ಬಾರಿ ನಮೂದಿಸಿದೆ; ಏಕೆಂದರೆ ಈ ಜನರು ಸಂಪೂರ್ಣ ದೇಶಕ್ಕಾಗಿ ಕಾನೂನು ಮಾಡುವವರಾಗಿರುತ್ತಾರೆ; ಆದರೆ ದುರದೃಷ್ಠವಶಾತ್‌ ರಾಜಕೀಯ ಪಕ್ಷಗಳು ಚುನಾವಣೆಯ ಕಣಕ್ಕಿಳಿಸಿದ ಅಭ್ಯರ್ಥಿಗಳ ಕಡೆಗೆ ದೃಷ್ಟಿ ಹಾಯಿಸಿದರೆ, ಅವರು ಸರ್ವೋಚ್ಚ ನ್ಯಾಯಾಲಯದ ಈ ಸಲಹೆಯತ್ತ ಗಂಭೀರವಾಗಿ ಗಮನ ಹರಿಸಿಲ್ಲವೆಂಬುದು ತಿಳಿಯುತ್ತದೆ. ದುಃಖದ ವಿಷಯವೆಂದರೆ, ಹೆಚ್ಚುಕಡಿಮೆ ಎಲ್ಲ ಪಕ್ಷಗಳು ಅಪರಾಧಿ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಟಿಕೇಟ್‌ ನೀಡಿವೆ. ಆದ್ದರಿಂದ ಚಿಲ್ಲರೆ ಅಪರಾಧಿಗಳಿಂದ ಹಿಡಿದು ಅತೀ ಭಯಂಕರ ಅಪರಾಧಿಗಳ ಸಮಾವೇಶವಿದೆ. ಅವರಲ್ಲಿ ಕೆಲವರು ಜಾಮೀನಿನಲ್ಲಿ ಹೊರಗಿದ್ದಾರೆ, ಕೆಲವರು ಅಲ್ಪಸ್ವಲ್ಪ ಶಿಕ್ಷಣವಿರುವವರು, ಕೆಲವರು ಅವಿದ್ಯಾವಂತರಾಗಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ಮುಗ್ಧ ಮತದಾರರಿಂದ ಮತ ಗಳಿಸುತ್ತಿದ್ದಾರೆ.

೪. ಚುನಾವಣಾ ಆಯೋಗಕ್ಕೆ ಸ್ವತಂತ್ರ ಕಾರ್ಯ ಮಾಡುವ ವ್ಯವಸ್ಥೆ ಇರಬೇಕು !

ಚುನಾವಣೆಯ ಪ್ರಕ್ರಿಯೆ ಅರ್ಥಪೂರ್ಣ ಹಾಗೂ ಪಾರದರ್ಶಕವಾಗಲು ಈ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಇದರಲ್ಲಿ ಹಣದ ಶಕ್ತಿಯನ್ನು ಉಪಯೋಗಿಸದಂತೆ ನಿರ್ಬಂಧ ಹೇರಬೇಕು, ಚುನಾವಣೆಯ ಸ್ಥಾನಗಳನ್ನು ಹೆಚ್ಚಿಸುವುದು, ಚುನಾವಣಾಕ್ಷೇತ್ರದ ಆಕಾರವನ್ನು ಕಡಿಮೆ ಮಾಡುವುದು ಹಾಗೂ ರಾಜ್ಯದ ವ್ಯವಸ್ಥೆಯನ್ನು ಅವಲಂಬಿಸಿರದೆ ಆಯೋಗದ ನಿಯಂತ್ರಣದಲ್ಲಿಯೇ ಎಲ್ಲ ಚುನಾವಣಾ ಪ್ರಕ್ರಿಯೆ ನಡೆಯುವಂತಹ ಚುನಾವಣ ಆಯೋಗದ ಸ್ವತಂತ್ರ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಸಿದ್ಧಪಡಿಸುವುದು ಇವೆಲ್ಲ ಒಳಗೊಂಡಿರಬೇಕು

– ನ್ಯಾಯವಾದಿ (ಡಾ.) ಎಚ್‌.ಸಿ. ಉಪಾಧ್ಯಾಯ, ಭಾಗ್ಯನಗರ