ತೀವ್ರ ಶಾರೀರಿಕ ತೊಂದರೆಯಾಗುತ್ತಿರುವಾಗಲೂ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘೫.೧೧.೨೦೧೦ ಈ ದಿನದಂದು ನಾನು ಸಂತಪದದಲ್ಲಿ ವಿರಾಜಮಾನನಾದೆನು ಮತ್ತು ೧೯.೭.೨೦೧೬ ಈ ದಿನದಂದು ನನಗೆ ಸದ್ಗುರು ಪದವು ಪ್ರಾಪ್ತವಾಯಿತು. ಈ ಕಾಲಾವಧಿಯಲ್ಲಿ ನನಗೆ ತೀವ್ರ ಶಾರೀರಿಕ ತೊಂದರೆಯಾಯಿತು. ಈಗಲೂ ನನಗೆ ಶಾರೀರಿಕ ತೊಂದರೆಯಾಗುತ್ತದೆ; ಆದರೆ ಅದರ ತೀವ್ರತೆ ಬಹಳ ಕಡಿಮೆಯಾಗಿದೆ. ಆ ತೀವ್ರ ಶಾರೀರಿಕ ತೊಂದರೆಯ ಅವಧಿಯಲ್ಲಿಯೂ ಗುರುದೇವರು ನನ್ನಿಂದ ಸಾಧನೆಯನ್ನು ಮಾಡಿಸಿಕೊಂಡರು. ಸಂತಪದವಿಯನ್ನು ಪಡೆದ ನಂತರ ನಾನು ಒಂದು ವರ್ಷ ಪ್ರಚಾರದ ಸೇವೆಯನ್ನು ಮಾಡುತ್ತಿದ್ದೆನು. ಈ ಅವಧಿಯಲ್ಲಿಯೇ ನನ್ನ ಶಾರೀರಿಕ ಸ್ಥಿತಿ ಬಹಳ ಹದಗೆಟ್ಟಿತು. ಇಂತಹ ಸ್ಥಿತಿಯಲ್ಲಿ ಯಾರೂ ಸಮಷ್ಟಿ ಸಾಧನೆಯನ್ನು ಮಾಡಲು ಸಾಧ್ಯವೇ ಇಲ್ಲ; ಆದರೆ ಸರ್ವಶಕ್ತ ಮತ್ತು ಸಾಮರ್ಥ್ಯಶಾಲಿಗಳಾದ ಶ್ರೀ ಗುರುಗಳಿಗೆ ಯಾವುದೂ ಅಸಾಧ್ಯವಿಲ್ಲ. ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ಶ್ರೀ ಗುರುಗಳು ಸಾಧಕ ಮತ್ತು ಶಿಷ್ಯರಿಂದ ಅವರಿಗೆ ಅಪೇಕ್ಷಿತವಾದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅವರನ್ನು ಸಾಧನೆಯಲ್ಲಿ ಮುಂದುಮುಂದಿನ ಹಂತಕ್ಕೆ ಕರೆದುಕೊಂಡು ಹೋಗುತ್ತಾರೆ. ಯಾರಿಗೆ ‘ಶಾರೀರಿಕ ತೊಂದರೆಗಳಿಂದಾಗಿ ಸಾಧನೆಯಾಗುವುದಿಲ್ಲ’, ಎಂದು ಅನಿಸುತ್ತದೆಯೋ, ಅವರಿಗೆ ಈ ಲೇಖನವನ್ನು ಓದಿ ‘ಶಾರೀರಿಕ ಸಮಸ್ಯೆಗಳು ಸಾಧನೆಯಲ್ಲಿ ಅಡಚಣೆಯಾಗುವುದಿಲ್ಲ’, ಎಂದು ಗಮನಕ್ಕೆ ಬರುವುದು ಮತ್ತು ಅವರಿಗೆ ಉತ್ಸಾಹದಿಂದ ಸಾಧನೆ ಮಾಡಲು ಪ್ರೇರಣೆ ಸಿಗುವುದು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನನ್ನಿಂದ ಕಠಿಣ ಸಾಧನೆಯನ್ನು ಮಾಡಿಸಿಕೊಂಡು ನನಗೆ ಕೇವಲ ಸದ್ಗುರುಪದದಲ್ಲಿ ವಿರಾಜಮಾನ ಮಾಡಿದರಲ್ಲದೇ, ನನ್ನ ತೀವ್ರ ಪ್ರಾರಬ್ಧವನ್ನು ಸಹಿಸುವಂತೆ ಮಾಡಿದರು. ಈ ಬಗ್ಗೆ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ನೀಡಲಾಗಿದೆ.

(ಭಾಗ ೧೪)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿhttps://sanatanprabhat.org/kannada/123093.html

೧. ಸಂತಪದವಿಯನ್ನು ಪಡೆದ ನಂತರ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ನಡೆಸಿದ ಆಧ್ಯಾತ್ಮಿಕ ಪ್ರವಾಸ

ನಾನು ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರಪದೇಶ ಮತ್ತು ತಮಿಳನಾಡು ಈ ೪ ರಾಜ್ಯಗಳಲ್ಲಿ ಧರ್ಮಪ್ರಚಾರದ ಸೇವೆಯನ್ನು ಮಾಡುತ್ತಿದ್ದೆನು. ನಾನು ಸಂತಪದವಿಯಲ್ಲಿ ವಿರಾಜಮಾನನಾದ ನಂತರ ಕೆಲವು ತಿಂಗಳು ಕರ್ನಾಟಕದಲ್ಲಿ ಪ್ರಚಾರಸೇವೆಯನ್ನು ಮಾಡಿದೆನು. ಏಪ್ರಿಲ್‌ ೨೦೧೧ ರಿಂದ ಪ.ಪೂ. ಗುರುದೇವರ ಕೃಪೆಯಿಂದ ನಾನು ಮಹಾರಾಷ್ಟ್ರದ ವಿದರ್ಭದ ಅಕೋಲಾ, ಅಮರಾವತಿ, ವರ್ಧಾ, ನಾಗಪುರ, ಯವತಮಾಳ ಮತ್ತು ಪಶ್ಚಿಮ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಹಾಪುರ, ಸಾಂಗಲಿ, ಸಾತಾರಾ, ಪುಣೆ, ಹಾಗೆಯೇ ನಾಸಿಕ ಮತ್ತು ಜಳಗಾವ ಈ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದೆನು. ಪ್ರವಾಸದಲ್ಲಿ ಆಯಾ ಊರಿನ ಸಾಧಕರನ್ನು ವೈಯಕ್ತಿಕವಾಗಿ ಸಂಪರ್ಕಿಸುವುದು, ಅವರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವುದು, ಸ್ವಭಾವದೋಷಗಳು ಮತ್ತು ಅಹಂ ನಿರ್ಮೂಲನಾ ಸತ್ಸಂಗವನ್ನು ತೆಗೆದುಕೊಳ್ಳುವುದು ಇತ್ಯಾದಿ ಸೇವೆಯನ್ನು ಮಾಡುತ್ತಿದ್ದೆನು.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೨. ಶಾರೀರಿಕ ತೊಂದರೆ ಆರಂಭವಾದ ನಂತರ ಮೊದಲು ಠಾಣೆ ಮತ್ತು ನಂತರ ದೇವದ, ಪನವೇಲನ ಸನಾತನದ ಆಶ್ರಮಕ್ಕೆ ಹಿಂತಿರುಗುವುದು

ನವೆಂಬರ್‌ ೨೦೧೧ ರಲ್ಲಿ ಠಾಣೆ, ಮುಂಬಯಿ ಮತ್ತು ರಾಯಗಡ ಈ ಜಿಲ್ಲೆಗಳಿಗೆ ಪ್ರವಾಸ ಮಾಡುವಾಗ ನನ್ನ ಶಾರೀರಿಕ ತೊಂದರೆ ಬಹಳ ಹೆಚ್ಚಾಯಿತು. ಸೊಂಟ ಮತ್ತು ಬೆನ್ನು ನೋವಿನಿಂದ ನನಗೆ ಕುಳಿತುಕೊಳ್ಳಲೂ ಅಸಾಧ್ಯವಾಗತೊಡಗಿತು. ನನ್ನ ಕುತ್ತಿಗೆ ಸಹ ಬಹಳ ನೋಯುತ್ತಿತ್ತು. ಆದುದರಿಂದ ಈ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ನಾನು ಠಾಣೆ ಸೇವಾಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋದೆನು. ಅಲ್ಲಿ ಚಿಕಿತ್ಸೆ ನಡೆದಿರುವಾಗಲೇ ಪ.ಪೂ. ಗುರುದೇವರು ಸಾಧಕರ ಮೂಲಕ ನನಗೆ, ‘ನೀವು ತಕ್ಷಣ ದೇವದ ಆಶ್ರಮಕ್ಕೆ ಹೊರಡಿ’, ಎಂಬ ಸಂದೇಶ ಕಳುಹಿಸಿದರು. ಅವರ ಆಜ್ಞೆಯ ಪಾಲನೆ ಮಾಡುತ್ತಾ ನಾನು ಪನವೇಲನ ದೇವದ ಎಂಬಲ್ಲಿರುವ ಸನಾತನದ ಆಶ್ರಮಕ್ಕೆ ಹೋದೆನು.

೩. ನನಗಾಗುತ್ತಿರುವ ಶಾರೀರಿಕ ತೊಂದರೆ !

ಶಾರೀರಿಕ ನೋವಿನ ತೀವ್ರತೆ ಹೆಚ್ಚಾದುದರಿಂದ ನನಗೆ ಸ್ವಲ್ಪ ಹೊತ್ತು ಸಹ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಆದುದರಿಂದ ನನಗೆ ಯಾವಾಗಲೂ ಮಲಗಿಯೇ ಇರಬೇಕಾಗುತ್ತಿತ್ತು. ನಾನು ಕೇವಲ ನಿತ್ಯಕರ್ಮಗಳನ್ನು ಮತ್ತು ಪ್ರಸಾದ-ಮಹಾಪ್ರಸಾದ ಇವುಗಳಿಗೆ ಹೇಗಾದರೂ ಎದ್ದು ಕುಳಿತುಕೊಳ್ಳುತ್ತಿದ್ದೆನು. ದಿನವಿಡಿ ನಾನು ಮಂಚದ ಮೇಲೆ ಮಲಗಿರುತ್ತಿದ್ದೆನು. ಆಶ್ರಮದಲ್ಲಿ ನನ್ನ ಮೇಲೆ ವಿವಿಧ ರೀತಿಯ ಉಪಚಾರಗಳು (ಚಿಕಿತ್ಸೆಗಳು) ನಡೆದಿದ್ದವು; ಆದರೆ ಅವುಗಳಿಗೆ ನನ್ನ ಶರೀರ ವಿಶೇಷವಾಗಿ ಸ್ಪಂದಿಸುತ್ತಿರಲಿಲ್ಲ. ನಾನು ಸೊಂಟಕ್ಕೆ ಪಟ್ಟಿ ಕಟ್ಟಿಕೊಂಡು ೪ – ೫ ನಿಮಿಷಗಳ ಕಾಲ ಎದ್ದು ನಿಂತರೂ ನನ್ನ ಸೊಂಟ ನೋಯುತ್ತಿತ್ತು. ನನ್ನ ಊಟ ಸಹ ಬಹಳ ಕಡಿಮೆಯಾದುದರಿಂದ ನನಗೆ ಬಹಳ ಅಶಕ್ತತೆ ಬಂದಿತು. ನನ್ನ ಕೈ-ಕಾಲುಗಳು ತಣ್ಣಗಾಗುತ್ತಿದ್ದವು. ನನ್ನ ಸ್ನಾಯುಗಳ ಶಕ್ತಿ ಎಷ್ಟು ಕಡಿಮೆಯಾಯಿತೆಂದರೆ, ‘ನನಗೆ ದೈನಿಕ ‘ಸನಾತನ ಪ್ರಭಾತ’ವನ್ನು ಕೈಯಲ್ಲಿ ಹಿಡಿದು ಓದಲು ಸಾಧ್ಯವಾಗುತ್ತಿರಲಿಲ್ಲ. ಓರ್ವ ಸಾಧಕನು ನನಗೆ ಅದನ್ನು ಓದಿ ಹೇಳುತ್ತಿದ್ದನು.’

೪. ವೈದ್ಯಕೀಯ ಪರೀಕ್ಷೆಯಲ್ಲಿ ‘ಬಾಂಬು ಸ್ಪೈನ್‌’ನ (ಬೆನ್ನುಮೂಳೆಯು ಬಿದಿರಿನಂತೆ ಸೆಟೆದು ಕೊಳ್ಳುವುದು) ಲಕ್ಷಣಗಳಿವೆ’, ಎಂದು ತಿಳಿಯುವುದು

ನನ್ನ ವೈದ್ಯಕೀಯ ಪರೀಕ್ಷೆ ಮಾಡಿದಾಗ ನನಗೆ ‘ಬಾಂಬು ಸ್ಪೈನ್‌’ನ ಲಕ್ಷಣಗಳು ಆರಂಭವಾಗಿದೆ’, ಎಂದು ತಿಳಿಯಿತು. ಇದರಲ್ಲಿ ಬೆನ್ನುಮೂಳೆಯು ಕ್ರಮೇಣ ಬಿದಿರಿನಂತೆ ಸೆಟೆದು ಕೊಂಡು ಮತ್ತು ಗಟ್ಟಿಯಾಗಲು ಆರಂಭವಾಗುತ್ತದೆ. ಆದುದರಿಂದ ವ್ಯಕ್ತಿಗೆ ಕುಳಿತುಕೊಳ್ಳಲು, ಮಲಗಲು ಮತ್ತು ಮಲಗಿದ ನಂತರ ಎದ್ದು ಕುಳಿತುಕೊಳ್ಳಲು ಬಹಳ ಕಠಿಣ ಮತ್ತು ತೊಂದರೆದಾಯಕವಾಗಿರುತ್ತದೆ.

೫. ಶಾರೀರಿಕ ತೊಂದರೆಯಲ್ಲಿ ಹೆಚ್ಚಳ !

ದಿನಗಳು ಕಳೆದಂತೆ ನನ್ನ ಶಾರೀರಿಕ ತೊಂದರೆ ಹೆಚ್ಚಾಗತೊಡಗಿತು. ನನ್ನ ಶರೀರದ ಬಲ ಬದಿ, ಅಂದರೆ ಕತ್ತಿನ ಬಲಭಾಗದಿಂದ ಬಲಗಾಲಿನ ಹಿಮ್ಮಡಿಯವರೆಗೆ ಎಲ್ಲ ಭಾಗಗಳು ಬಹಳ ನೋಯುತ್ತಿದ್ದವು. ನನಗೆ ಬಲಗಾಲನ್ನು ಮೇಲೆ ಮಾಡಲು ಬರುತ್ತಿರಲಿಲ್ಲ. ನನ್ನ ಬೆನ್ನಿನ ೧೦ ಬೆನ್ನುಮೂಳೆಗಳೂ ಬಲಬದಿಗೆ ಸರಿದಿದ್ದವು. ಬೆನ್ನಿನ ಬಲಬದಿಯ ಸ್ನಾಯು ಗಟ್ಟಿಯಾಗಿತ್ತು. ಅಲ್ಲಿ ಮತ್ತು ಕತ್ತು ಊದಿಕೊಂಡು ವೇದನೆಯಾಗುತ್ತಿತ್ತು. ಬೆನ್ನಿನ ಮೇಲೆ ಮಲಗಿದಾಗ ಬಲಗಾಲಿಗೆ ಒತ್ತಡವಾಗುತ್ತಿತ್ತು ಮತ್ತು ಕಾಲು ಮತ್ತು ಸೊಂಟ ಬಿಗಿಯುತ್ತಿತ್ತು. ಎಡ ಮಗ್ಗಲಿಗೆ ಮಲಗಿದಾಗ ಬಲಬದಿಗೆ ಬಹಳ ನೋವಾಗುತ್ತಿತ್ತು. ಆದುದರಿಂದ ಯಾವಾಗಲೂ ಕೇವಲ ಬಲಮಗ್ಗಲಿಗೆ ಮಲಗಿರಬೇಕಾಗುತ್ತಿತ್ತು. ಆ ರೀತಿ ಮಲಗಿದಾಗಲೂ ಕತ್ತು ಸ್ವಲ್ಪ ಅಲುಗಾಡಿದರೂ ಕತ್ತಿನಲ್ಲಿ ಶೂಲೆ ಬರುತ್ತಿತ್ತು.

೬. ನಿಸರ್ಗೋಪಚಾರ ತಜ್ಞ ದೀಪಕ ಜೋಶಿ ಇವರು ಮಾಡಿದ ಉಪಚಾರ !

ನಿಸರ್ಗೋಪಚಾರ ತಜ್ಞರಾದ ದೀಪಕ ಜೋಶಿ ಇವರು ನನಗೆ ಒಂದು ವರ್ಷ ಉಪಚಾರ ನೀಡಿದರು. ನನ್ನ ಸರಿದ ಬೆನ್ನುಮೂಳೆಗಳನ್ನು ಸರಿಪಡಿಸಲು ಅವರು ಹಿಂದಿನ ರಾತ್ರಿ ನನ್ನ ಪೂರ್ಣ ಬೆನ್ನಿಗೆ ಖಜ್ಜುರದ ದಪ್ಪನೆಯ ಲೇಪನವನ್ನು ಹಚ್ಚು ತ್ತಿದ್ದರು. ಆ ಲೇಪನವನ್ನು ಬೆಳಗ್ಗೆ ತೆಗೆಯುತ್ತಿದ್ದರು. ನಂತರ ಆ ಬೆನ್ನುಮೂಳೆಗಳು ಮತ್ತು ನರಗಳ ಮೇಲೆ ಈರುಳ್ಳಿಗಳನ್ನು ಇಟ್ಟು ಅವುಗಳ ಮೇಲೆ ವಿಶೇಷವಾದ ಒತ್ತಡ ನೀಡಿ ಬೆನ್ನುಮೂಳೆಗಳನ್ನು ಸ್ವಸ್ಥಾನಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಎಲ್ಲ ಬೆನ್ನುಮೂಳೆಗಳನ್ನು ಒಂದು ಸರಳ ರೇಖೆಯಲ್ಲಿ ತರಲು ಒಂದು ಸಲಕ್ಕೆ ಸರಾಸರಿ ೨೫-೩೦ ಈರುಳ್ಳಿಗಳು ಬೇಕಾಗುತ್ತಿದ್ದವು. ಆರಂಭದಲ್ಲಿ ವಾರದಲ್ಲಿ ಎರಡು ಬಾರಿ ಈ ಉಪಾಯವನ್ನು ಮಾಡಲಾಗುತ್ತಿತ್ತು. ಪ್ರತಿ ಬಾರಿ ಉಪಚಾರ ಮಾಡಿ ಬೆನ್ನುಮೂಳೆಗಳನ್ನು ಸ್ವಸ್ಥಾನಕ್ಕೆ ತಂದ ನಂತರ ೨-೩ ದಿನಗಳಲ್ಲಿಯೇ ಅವು ಮತ್ತೆ ತಮ್ಮ ಜಾಗವನ್ನು ಬಿಡುತ್ತಿದ್ದವು. ಆದುದರಿಂದ ನಿರಂತರವಾಗಿ ಉಪಚಾರ ಮಾಡಬೇಕಾಗುತ್ತಿತ್ತು. ಹೀಗೆ ಉಪಚಾರವನ್ನು ಸುಮಾರು ವರ್ಷವಿಡಿ ಮಾಡಲಾಯಿತು. ಈ ಉಪಚಾರ ಬಹಳ ತೊಂದರೆದಾಯಕವಾಗಿತ್ತು.’

(ಮುಂದುವರಿಯುವುದು)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೨.೩.೨೦೨೪)