‘ಗಡಿಯಲ್ಲಿ ಗಡಿ ಭದ್ರತಾ ಪಡೆ ಬಾಂಗ್ಲಾದೇಶಿ ಜನರನ್ನು ಕೊಲ್ಲುತ್ತದೆಯಂತೆ !’

  • ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ ಹಿರಿಯ ನಾಯಕ ಮಿರ್ಜಾ ಇಸ್ಲಾಂ ಅಲಂಗೀರ್ ಅವರ ಸುಳ್ಳು ಹೇಳಿಕೆ

  • ಒಂದು ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ `ಪ್ರಜಾಪ್ರಭುತ್ವವನ್ನು ಸುಭದ್ರಗೊಳಿಸುತ್ತೇವೆ’ ಎನ್ನುವ ಹೇಳಿಕೆ ನೀಡಿದ್ದರು, ಆದರೆ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಶಬ್ದವನ್ನೂ ನುಡಿಯಲಿಲ್ಲ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಮತ್ತು ಭಾರತ ನಡುವಿನ ಸಂಬಂಧಗಳು ಅಧಿಕ ಬಲಗೊಳ್ಳುತ್ತವೆ. ಆದರೂ ಉಭಯ ದೇಶಗಳ ನಡುವೆ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವುದು ಆವಶ್ಯಕವಾಗಿದೆ. ನೀರಿನ ಹಂಚಿಕೆ, ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಂದ ಬಾಂಗ್ಲಾದೇಶಿ ಜನರ ಹತ್ಯೆ ಮತ್ತು ವ್ಯಾಪಾರ ಅಸಮತೋಲನವನ್ನು ದೂರಗೊಳಿಸುವುದು ಆವಶ್ಯಕವಾಗಿದೆ. ಬಾಂಗ್ಲಾದೇಶದ ವಿರೋಧ ಪಕ್ಷದ `ಬಾಂಗ್ಲಾದೇಶ ನ್ಯಾಶನಲಿಸ್ಟ ಪಾರ್ಟಿ’ ಯ ಹಿರಿಯ ನಾಯಕ ಮತ್ತು ಪಕ್ಷದ ಮುಖ್ಯ ಕಾರ್ಯದರ್ಶಿ ಮಿರ್ಜಾ ಇಸ್ಲಾಂ ಅಲಂಗೀರ ಈ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಒಂದು ಪ್ರಸಾರ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುವ ದೌರ್ಜನ್ಯದ ಬಗ್ಗೆ ಮಾತ್ರ ಚಕಾರ ಶಬ್ದವನ್ನೂ ಉಚ್ಚರಿಸಿಲ್ಲ.

ಮಿರ್ಜಾ ಇಸ್ಲಾಂ ಅಲಂಗೀರ್ ಅವರು ಮಾತನಾಡುತ್ತಾ,

1. ನಮ್ಮ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ಅನುಮತಿ ನಿಡಿದರೆ ವೈದ್ಯಕೀಯ ಚಿಕಿತ್ಸೆಗಾಗಿ ಅವರು ವಿದೇಶಕ್ಕೆ ಹೋಗಬಹುದು. ಒಂದು ವೇಳೆ ಅವರು ಮರಳಿ ಬರದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ತಾರಿಕ ರೆಹಮಾನ್ ಅವರು ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.

2. ದೇಶದ ವಿದ್ಯಾರ್ಥಿಗಳು ಮತ್ತು ನಾಗರಿಕರು ದಂಗೆಯೆದ್ದರು. ಆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪೊಲೀಸರು ಸುಮಾರು 1 ಸಾವಿರ ವಿದ್ಯಾರ್ಥಿಗಳನ್ನು ಕೊಂದರು ಮತ್ತು ಅಂದಾಜು 12 ಸಾವಿರ ಜನರನ್ನು ಬಂಧಿಸಿದರು.

3. ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಯೂನಸ್ ಇವರು ಮಧ್ಯಂತರ ಸರಕಾರವನ್ನು ಮುನ್ನಡೆಸುತ್ತಿದ್ದಾರೆ. ಮಧ್ಯಂತರ ಸರಕಾರ ಖಂಡಿತವಾಗಿಯೂ ಪರಿಸ್ಥಿತಿಯನ್ನು ಸ್ಥಿರಗೊಳಿಸುತ್ತದೆ ಮತ್ತು ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಮಧ್ಯಂತರ ಸರಕಾರದ ಮುಖ್ಯ ಕಾರ್ಯವೆಂದರೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಆಗಿದೆ.

4. ಭ್ರಷ್ಟಾಚಾರವನ್ನು ನಾಶ ಮಾಡಲು ನಮ್ಮ ಪಕ್ಷ ಪ್ರಯತ್ನಿಸಲಿದೆ. ನಾವು ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಭಾರತದ ಗಡಿ ಭದ್ರತಾ ಪಡೆಯ ಸೈನಿಕರು ಬಾಂಗ್ಲಾದೇಶದ ಜನರನ್ನು ಕೊಂದಿದ್ದರೆ, ಭಾರತದಲ್ಲಿ 5 ಕೋಟಿ ಮುಸ್ಲಿಮ ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿದ್ದರೇ ? ಇಂತಹ ಭಾರತದ್ವೇಷಿಗಳಿಂದ ತುಂಬಿರುವ ಪಕ್ಷ ಬಾಂಗ್ಲಾದೇಶದಲ್ಲಿ ಅಧಿಕಾರಕ್ಕೆ ಬಂದರೆ, ಭಾರತಕ್ಕೆ ಅದು ದೊಡ್ಡ ತಲೆನೋವಾಗುತ್ತದೆಯೆನ್ನುವುದು ಇಂತಹ ಹೇಳಿಕೆಗಳಿಂದ ಗಮನಕ್ಕೆ ಬರುತ್ತದೆ.
  • ಹಿಂದೂ ಸಮುದಾಯವನ್ನು ನಷ್ಟಗೊಳಿಸಲು ಬಾಂಗ್ಲಾದೇಶದ ಕಟ್ಟರವಾದಿ ಮುಸ್ಲಿಮರು ಟೊಂಕಕಟ್ಟಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ಅಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಭಾರತವು ಬಾಂಗ್ಲಾದೇಶದ ಮೇಲೆ ದೊಡ್ಡ ಪ್ರಮಾಣದಲ್ಲಿ ಒತ್ತಡ ಹೇರಬೇಕು !