‘ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ‘ಚಲೇ ಜಾವ್’ ಚಳುವಳಿಯಿಂದಲ್ಲ, ಸಶಸ್ತ್ರ ಸೇನೆಯ ಬಂಡಾಯದಿಂದ !

೧. ೧೯೪೨ ನೇಯ ಚಳುವಳಿ ಕೇವಲ ೩-೪ ತಿಂಗಳುಗಳ ಆಟ ಮತ್ತು ಬಹುಸಂಖ್ಯಾತ ಯುವಕರ ಆಸಕ್ತಿ ಬ್ರಿಟಿಷ ಸೈನ್ಯದಲ್ಲಿ ಭರ್ತಿಯಾಗುವುದರ ಕಡೆಗೆ !

‘ಸ್ವಾತಂತ್ರ್ಯ ಚಳುವಳಿಯ ಮಿತಿಯನ್ನು ದತ್ತಪ್ರಸಾದ ದಾಭೋಲಕರ ಸ್ಪಷ್ಟಪಡಿಸುತ್ತಾರೆ. ಖಾದಿಯನ್ನು ಇಷ್ಟು ಪ್ರಚಾರ ಮಾಡಿದರೂ ದೇಶದಲ್ಲಿ ಕೇವಲ ಶೇ. ೧ ರಷ್ಟು ಜನರು ಮಾತ್ರ ಖಾದಿಯನ್ನು ಉಪಯೋಗಿಸುತ್ತಿದ್ದರು. ‘೧೯೪೨ ನೇ ಚಳುವಳಿಯ ಆಟ ೩-೪ ತಿಂಗಳು ನಡೆಯಿತು ಮತ್ತು ಬ್ರಿಟಿಷರಿಗೆ ದೇಶ ಬಿಟ್ಟು ಹೋಗುವಂತೆ ಗಾಂಧೀಜಿಯವರು ಹೇಳುತ್ತಿದ್ದರು. ಅದೇ ಸಮಯದಲ್ಲಿ ಆಗಸ್ಟ್ ೮ ರಂದು ನಮ್ಮ ಸೇನೆಯಲ್ಲಿ ಭರ್ತಿಯಾಗಲು ಸಾಧ್ಯವಾಗಬೇಕೆಂದು ಹಿಂದೂ-ಮುಸಲ್ಮಾನ ಯುವಕರು ಬಹಳ ಜನದಟ್ಟನೆ ಮಾಡುತ್ತಿದ್ದರು’, ಇದನ್ನು ಚರ್ಚಿಲರು ರೂಸವೆಲ್ಟರಿಗೆ ಬರೆದ ಪತ್ರದಲ್ಲಿನ ವಾಕ್ಯವನ್ನು ಅವರು ಉಲ್ಲೇಖಿಸುತ್ತಾರೆ’ (ಈ ಕಾಲದಲ್ಲಿ ಸೈನ್ಯದಲ್ಲಿ ಭರ್ತಿಯಾಗಲು ಸಾವರಕರರು ಕರೆ ನೀಡಿದ್ದರು. – ಸಂಕಲನಕಾರರು)

೨. ಗಾಂಧಿಯವರ ‘ಚಲೇ ಜಾವ್’ ಚಳುವಳಿಯ ಮೌಲ್ಯವು ಬ್ರಿಟಿಷರ ದೃಷ್ಟಿಯಲ್ಲಿ ‘ಸ್ವಲ್ಪ ಕಿರಿಕಿರಿ’ ಯಾಚೆಗೆ ಮತ್ತಿನ್ನೇನು ಆಗಿರಲಿಲ್ಲ !

ಆಂಗ್ಲರು ನಡೆಸಿದ ಒಂದು ಗುಪ್ತ ಪರಿಶೀಲನೆಯ ಸಂದರ್ಭವನ್ನು ಉಲ್ಲೇಖಿಸಿ, ದಾಭೋಲ್ಕರ್‌ರು ಹೇಳುವುದೇನೆಂದರೆ, “೧೯೩೦ ರ ಸುಮಾರಿಗೆ, ಆಂಗ್ಲರು ‘ಸ್ಕಾಟ್ಲೆಂಡ್‌ ಯಾರ್ಡ್‌’ನ ಪ್ರಸಿದ್ಧ ಗೂಢಚರರನ್ನು ಭಾರತದಾದ್ಯಂತ ಸುತ್ತಾಡಿಸಿದ್ದರು. ಅವರು ಕನಿಷ್ಟ ೨೦೫೦ರ ವರೆಗೆ ನಮ್ಮ (ಬ್ರಿಟಿಷರ) ಹಿಂದುಸ್ಥಾನದಲ್ಲಿನ ಆಡಳಿತಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ವರದಿ ನೀಡಿದ್ದರು. ಗಾಂಧೀಜಿಯವರ ಸತ್ಯಾಗ್ರಹ ಮತ್ತು ೧೯೪೨ರ ಸ್ವಾತಂತ್ರ್ಯ ಹೋರಾಟದ ಮೌಲ್ಯ ಕಡಿಮೆಯೇನಲ್ಲ; ಆದರೆ ಬ್ರಿಟಿಷ ಆಡಳಿತಗಾರರ ದೃಷ್ಟಿಯಲ್ಲಿ ಸ್ವಲ್ಪ ಕಿರಿಕಿರಿ ಯಾಚೆಗೆ ಅದಕ್ಕೆ ಮತ್ತಿನ್ಯಾವುದೇ ಮಹತ್ವವಿರಲಿಲ್ಲ. ಈ ಪ್ರಯತ್ನದಿಂದ ನಿಜವಾಗಿಯೂ ಸ್ವಾತಂತ್ರ್ಯ ಸಿಗಬಹುದಿತ್ತೇ ?

೩. ಬ್ರಿಟಿಷರ ಸೇನೆ ಕೊಲ್ಲಲ್ಪಟ್ಟಿದ್ದರಿಂದ ಮತ್ತು ಆಜಾದ್‌ ಹಿಂದ ಸೇನೆಯಿಂದಾಗಿ ಭಾರತೀಯ ಸೇನೆಯ ಮೇಲೆ ವಿಶ್ವಾಸವಿಲ್ಲದ ಕಾರಣ, ಹಾಗೆಯೇ ಅದೇ ಸಮಯದಲ್ಲಿ ನಾವಿಕರ ತಂಡ ನಡೆಸಿದ ಬಂಡಾಯದಿಂದಾಗಿ ಆಂಗ್ಲರಿಗೆ ಭಾರತವನ್ನು ಬಿಡಬೇಕಾಯಿತು. !

ಆದರೆ ವಿಧಿಯು ಹಿಟ್ಲರನ ಸೈನ್ಯವನ್ನು ಮುಂದೆ ಮಾಡಿತು. ಆಂಗ್ಲರು ಯುದ್ಧವನ್ನು ಗೆದ್ದರು; ಆದರೆ ಅವರ ಸೈನಿಕರು ಅಪಾರ ಸಂಖ್ಯೆಯಲ್ಲಿ ಕೊಲ್ಲಲ್ಪಟ್ಟಿದ್ದರು. ಇದರಿಂದ ಆಂಗ್ಲರ ಬಳಿ ಹಿಂದುಸ್ಥಾನಕ್ಕೆ ಕಳುಹಿಸುವಷ್ಟು ಸೈನಿಕರು ಇರಲಿಲ್ಲ. ಸುಭಾಷ ಬಾಬುರವರ ಆಝಾದ ಹಿಂದ್‌ ಸೇನೆಯಿಂದಾಗಿ ಅವರಿಗೆ ಅವರ ಕಪ್ಪು ಸೇನೆಯ ಮೇಲಿದ್ದ ವಿಶ್ವಾಸದ ಅಡಿಪಾಯ ಅಲುಗಾಡಿತು. ಮುಂಬಯಿಯಲ್ಲಿ ನಡೆದ ನೌಕಾ ದಳದ ಬಂಡಾಯವೂ ಅದಕ್ಕೆ ಮತ್ತಷ್ಟು  ಒತ್ತು ನೀಡಿತ್ತು. ಆಗ ಹಿಂದುಸ್ಥಾನದಿಂದ ಆ ಕ್ಷಣದಲ್ಲಿ ಶಾಂತವಾಗಿ ಹೊರಟು ಹೋಗುವುದರಲ್ಲಿಯೇ ಬಹಳ ದೊಡ್ಡ ವ್ಯಾವಹಾರಿಕ ಜಾಣತನವಿತ್ತು.’

– ಡಾ. ದತ್ತಪ್ರಸಾದ ದಾಭೋಲಕರ (ಚೌಫೇರ ಸಮಾಚಾರ, ದೀಪಾವಳಿ ಸಂಚಿಕೆ)