೧. ಸಾಧಕರೇ, ಯಾರಿಂದಲೂ ಅಪೇಕ್ಷೆಯನ್ನಿಡದೇ ತಮ್ಮ ಸಾಧನೆಯ ಕಡೆಗೆ ಗಮನ ಕೊಡಬೇಕು !
‘ಒಂದು ಸಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗದಲ್ಲಿ ಅವರೊಂದಿಗೆ ನಡೆದ ಸಂಭಾಷಣೆಯನ್ನು ಕೆಳಗೆ ಕೊಟ್ಟಿದ್ದೇನೆ.
ಆಧುನಿಕ ವೈದ್ಯ ಉಜ್ವಲ್ ಕಾಪಡಿಯಾ : ಸೇವೆಯನ್ನು ಮಾಡುವಾಗ ನನಗೆ ಕೆಲವು ಪ್ರಸಂಗಗಳಲ್ಲಿ ಸಂಘರ್ಷವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿಮ್ಮ ಸಂಘರ್ಷ ನಿಮ್ಮಿಂದಾಗಿ ಆಗುತ್ತದೆಯೋ ಅಥವಾ ಇತರರಿಂದಾಗಿ ? ನಿಮ್ಮಿಂದಾಗಿ ಸಂಘರ್ಷ ಆಗುತ್ತಿದ್ದರೆ ನೀವು ಸುಧಾರಣೆ ಮಾಡಿಕೊಳ್ಳಬೇಕು.
ಆಧುನಿಕ ವೈದ್ಯ ಉಜ್ವಲ್ ಕಾಪಡಿಯಾ : ನನ್ನಿಂದಾಗಿಯೇ ಸಂಘರ್ಷವಾಗುತ್ತದೆ. ನನಗೆ ಸಹಸಾಧಕರಿಂದ ಅಪೇಕ್ಷೆ ಇರುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ದೇವರು ಯಾರಿಂದಲೂ ಯಾವುದೇ ಅಪೇಕ್ಷೆಯನ್ನು ಮಾಡುವುದಿಲ್ಲ, ನಾವು ಮಾತ್ರ ಇತರರಿಂದ ಅಪೇಕ್ಷೆಯನ್ನು ಮಾಡುತ್ತೇವೆ. ನಾವು ನಮ್ಮ ಸಾಧನೆಯನ್ನು ಮಾಡಬೇಕು. `ಇತರರು ಏನು ಮಾಡಬೇಕು ?’, ಇದರ ವಿಚಾರವನ್ನು ನಾವು ಮಾಡಬಾರದು. ನಾವು ಇದರ ಬಗ್ಗೆ ಜವಾಬ್ದಾರ ಸಾಧಕರಿಗೆ ಹೇಳಬೇಕು.
೨. ಸೇವೆಯನ್ನು ಮಾಡುವಾಗ ಘಟಿಸಿದ ಸಂಘರ್ಷದ ಪ್ರಸಂಗವನ್ನು ನೆನಪಿಸಿಕೊಳ್ಳುವಾಗ ಸಾಧಕನಿಗೆ ತಲೆ ಭಾರವಾಗಿ ನಿರುತ್ಸಾಹ ಅನಿಸುವುದು ಮತ್ತು ಸತ್ಸಂಗದ ಆನಂದವನ್ನು ಪಡೆಯಲು ಸಾಧ್ಯವಾಗದಿರುವುದು
ಆರಂಭದಲ್ಲಿ ನಾನು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಮೇಲಿನ ಅಂಶಗಳನ್ನು ಸ್ವೀಕರಿಸಿದೆನು. ಆಗ ನನ್ನ ಮನಸ್ಸಿನಲ್ಲಿ, `ಈಗ ಈ ಸತ್ಸಂಗದಲ್ಲಿ ಸಹಸಾಧಕರ ಯಾವ ಸ್ವಭಾವದೋಷಗಳಿಂದಾಗಿ ನನ್ನ ಮನಸ್ಸಿನಲ್ಲಿ ಸಂಘರ್ಷವಾಗುತ್ತದೆ, ಅದನ್ನೂ ನಾನು ಹೇಳಬೇಕು’, ಎಂಬ ವಿಚಾರ ಬಂದಿತು. ನಾನು ಸೇವೆಯನ್ನು ಮಾಡುವಾಗ ಘಟಿಸಿದ ಸಂಘರ್ಷದ ಪ್ರಸಂಗವನ್ನು ನೆನಪಿಸತೊಡಗಿದೆನು. ಸತ್ಸಂಗದಲ್ಲಿನ ೧೦ ನಿಮಿಷಗಳ ಕಾಲ ನನ್ನ ಮನಸ್ಸಿನಲ್ಲಿ ಇದೇ ವಿಚಾರಗಳು ನಡೆದಿದ್ದವು. ಹತ್ತು ನಿಮಿಷಗಳ ನಂತರ ನನಗೆ ಒಮ್ಮಿಂದೊಮ್ಮೆಲೆ ನಿರುತ್ಸಾಹ ಸಹ ಅನಿಸತೊಡಗಿತು. ಇಷ್ಟು ಹೊತ್ತು ಸತ್ಸಂಗದಲ್ಲಿ ನನಗೆ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತಿತ್ತು, ಅದು ೧೦ ನಿಮಿಷಗಳಲ್ಲಿಯೇ ಇಲ್ಲದಂತಾಯಿತು. ನನ್ನ ತಲೆ ಭಾರವಾಗುತ್ತಾ ಹೋಯಿತು. ನನಗೆ ನಿರುತ್ಸಾಹವೂ ಅನಿಸತೊಡಗಿತು. ಆದುದರಿಂದ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗದ ಆನಂದವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
೩. ಸತ್ಸಂಗದಲ್ಲಿ ಯಾರದ್ದೇ ಸ್ವಭಾವದೋಷಗಳನ್ನು ಹೇಳದೇ ಅಂತರ್ಮುಖರಾಗಿರಲು ನಿಶ್ಚಯಿಸಿದಾಗ ಉತ್ಸಾಹ ಮತ್ತು ಆನಂದದ ಅರಿವಾಗತೊಡಗುವುದು ಮತ್ತು ಪರಾತ್ಪರ ಗುರು ಡಾಕ್ಟರರ ಸತ್ಸಂಗದ ಲಾಭ ಪಡೆಯಲು ಸಾಧ್ಯವಾಗುವುದು
ನಾನು ಪರಾತ್ಪರ ಗುರು ಡಾಕ್ಟರರಿಗೆ ಪ್ರಾರ್ಥನೆ ಮಾಡಿದೆನು `ಗುರುದೇವರೇ, ನಾನೇನು ಮಾಡಲಿ ಎಂದು ನೀವೇ ಹೇಳಿ ?’ ಆಗ ನನಗೆ ಸೂಕ್ಷ್ಮದಲ್ಲಿ ಧ್ವನಿ ಕೇಳಿ ಬಂದಿತು, `ನೀನು ಇತರರ ಸ್ವಭಾವದೋಷಗಳನ್ನು ಹೇಳಬೇಡ.’ ಇದರ ನಂತರ ನಾನು ಸತ್ಸಂಗದಲ್ಲಿ ಇತರರ ಸ್ವಭಾವದೋಷಗಳನ್ನು ಹೇಳದೇ ಅಂತರ್ಮುಖನಾಗಿರಲು ನಿಶ್ಚಯಿಸಿದೆನು. ಇದರಿಂದ ನನಗೆ ಹಗುರ, ಉತ್ಸಾಹ ಮತ್ತು ಆನಂದವೆನಿಸತೊಡಗಿತು. ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಕಡೆಗೆ ನೋಡಿ ಆನಂದವೆನಿಸತೊಡಗಿತು ಮತ್ತು ನನಗೆ ಅವರ ಸತ್ಸಂಗದ ಲಾಭವನ್ನು ಪಡೆಯಲು ಸಾಧ್ಯವಾಯಿತು.’
– ಆಧುನಿಕ ವೈದ್ಯ ಉಜ್ವಲ್ ಪ್ರತಾಪ ಕಪಾಡಿಯಾ, ಫೋಂಡಾ, ಗೋವಾ.