ಹಿಂದುತ್ವನಿಷ್ಠ ಸಂಘಟನೆ ‘ಹಿಂದೂ ಆಕ್ಷನ್’ ನೇತೃತ್ವ ವಹಿಸಿದೆ !
ವಾಷಿಂಗ್ಟನ್ (ಅಮೆರಿಕ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ವಿಶ್ವದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಹಿಂದುತ್ವನಿಷ್ಠ ಸಂಘಟನೆ ‘ಹಿಂದೂ ಆಕ್ಷನ್’ ಆಗಸ್ಟ್ 9 ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಬಲವಾಗಿ ಪ್ರತಿಭಟನೆ ನಡೆಸಿತು. ಇದರೊಂದಿಗೆ ನ್ಯೂಯಾರ್ಕ್‌ನ ಹಲವೆಡೆ ಇದೇ ರೀತಿಯ ಪ್ರತಿಭಟನೆಗಳು ನಡೆದವು.
ಅಮೇರಿಕಾದ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯ ಪ್ಯಾಟ್ ಫಾಲನ್ ಅವರು ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಘಟನೆಗಳನ್ನು ಖಂಡಿಸಿದ್ದಾರೆ. ಈ ಸಮಯದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ‘ನಾನು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ಧಾರ್ಮಿಕ ಕಿರುಕುಳವನ್ನು ಬಲವಾಗಿ ಖಂಡಿಸುತ್ತೇನೆ. ನಾನು ಮಧ್ಯಂತರ ಸರಕಾರಕ್ಕೆ ಬಾಂಗ್ಲಾದೇಶದ ಜನರ ಸಾಮಾನ್ಯ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಈ ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸಲು ನಾನು ವಿನಂತಿಸುತ್ತೇನೆ ಎಂದು ಬರೆದಿದ್ದಾರೆ.
ಆಗಸ್ಟ್ 12ರ ಸೋಮವಾರ ಪ್ಯಾರಿಸ್ ನಲ್ಲಿ ಪ್ರತಿಭಟನೆ !
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಆಗಸ್ಟ್ 12 ರಂದು ಮಧ್ಯಾಹ್ನ 3 ಗಂಟೆಗೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಪ್ಯಾರಿಸ್‌ನಲ್ಲಿರುವ ಎಲ್ಲಾ ಹಿಂದೂಗಳು ಒಗ್ಗೂಡುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಇಲ್ಲಿನ ಪ್ರಸಿದ್ಧ ‘ಪ್ಲೇಸ್ ಡೆ ಲಾ ರಿಪಬ್ಲಿಕ್’ (ರಿಪಬ್ಲಿಕ್ ಸ್ಕ್ವೇರ್) ನಲ್ಲಿ ಈ ಆಂದೋಲನ ನಡೆಯಲಿದೆ ಎಂದು ಬಾಂಗ್ಲಾದೇಶದ ಹಿಂದುತ್ವನಿಷ್ಠರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದ್ದಾರೆ.
ಸಂಪಾದಕೀಯ ನಿಲುವುವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಗತ್ತಿನ ಹಿಂದೂಗಳು ಒಂದು ದೊಡ್ಡ ಮತ್ತು ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸಿದರೆ, ಪ್ರಪಂಚದ ಮೇಲಿನ ಹಿಂದೂ ದ್ವೇಷಿಗಳನ್ನು ಹದ್ದುಬಸ್ತಿನಲ್ಲಿಡಬಹುದು ಅಷ್ಟೇ ಸತ್ಯ ! |