ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಭೀಕರ ದಾಳಿ: ಇಬ್ಬರು ಹಿಂದೂ ಕಾರ್ಪೊರೇಟರ್‌ಗಳ ಹತ್ಯೆ

  • 4 ದೇವಾಲಯಗಳ ಧ್ವಂಸ

  • 27 ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ ದಾಳಿ

ಢಾಕಾ (ಬಾಂಗ್ಲಾದೇಶ) – ಆಗಸ್ಟ್ 4ರಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ನಾಲ್ಕು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ, ಅನೇಕ ಹಿಂದೂಗಳ ಮೇಲೆ ದಾಳಿ ನಡೆದಿದೆ ಮತ್ತು ಇಬ್ಬರು ಹಿಂದೂಗಳ ಹತ್ಯೆ ಮಾಡಲಾಗಿದೆ. ಈ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಢಾಕಾದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಲಾಗಿದೆ. ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ನಂತರ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯಿಂದ ಹಿಂದೂ ಸಮುದಾಯದ ಕೆಲ ಮುಖಂಡರು ಭಯಭೀತರಾಗಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ಶೇಖ್ ಹಸೀನಾ ಅವರ ಆವಾಮಿ ಲೀಗ್‌ನ ಬೆಂಬಲಿಗರು ಎಂದು ಪರಿಗಣಿಸಲಾಗಿದೆ.

(ಮೇಲೆ ತೋರಿಸಲಾದ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡಿರುವುದಾಗಿರದೇ ನೈಜ ಸ್ಥಿತಿ ತಿಳಿಸಲು ಹಾಕಲಾಗಿದೆ – ಸಂಪಾದಕರು)

 

೧.ಬಾಂಗ್ಲಾದೇಶದ ಒಂದು ವಾರ್ತಾ ಪತ್ರಿಕೆ ‘ಡೈಲಿ ಸ್ಟಾರ್’ ನ ವರದಿಯ ಪ್ರಕಾರ, ಪರಶುರಾಮ್ ಠಾಣಾ ಆವಾಮಿ ಲೀಗ್‌ನ ಸದಸ್ಯ ಮತ್ತು ರಂಗಪುರ ಸಿಟಿ ಕಾರ್ಪೊರೇಷನ್‌ನ ವಾರ್ಡ್ 4ರ ಕಾರ್ಪೊರೇಟರ್ ಹರಧನ್ ರಾಯ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ರಂಗಪುರದ ಮತ್ತೊಬ್ಬ ಕಾರ್ಪೊರೇಟರ್ ಕಾಜಲ್ ರಾಯ್ ಕೂಡ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ.

2. ‘ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್’ ನಾಯಕಿ ಕಾಜೋಲ್ ದೇಬನಾಥ್ ಅವರ ಪ್ರಕಾರ, ದೇಶಾದ್ಯಂತ ಕನಿಷ್ಠ ನಾಲ್ಕು ಹಿಂದೂ ದೇವಾಲಯಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಹೇಳಿದ್ದಾರೆ. ಖಾನ್ಸಾಮಾ ಉಪಜಿಲ್ಲೆಯಲ್ಲಿ ಮೂರು ಹಿಂದೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

3. ಬಾಂಗ್ಲಾದೇಶದ 27 ಜಿಲ್ಲೆಗಳಲ್ಲಿ ಹಿಂದೂ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮಾಡಿ ಬೆಲೆಬಾಳುವ ವಸ್ತುಗಳನ್ನು ಪ್ರತಿಭಟನಾಕಾರರು ದೋಚಿದ್ದಾರೆ. ಲಾಲ್ಮೊನಿರ್ಹತ್ ಸದರ್ ಉಪಜಿಲ್ಲೆಯಲ್ಲಿ ಧಾರ್ಮಿಕ ಹಿಂದೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪೂಜಾ ಸಮಿತಿಯ ಕಾರ್ಯದರ್ಶಿ ಪ್ರದೀಪ್ ಚಂದ್ರ ರಾಯ್ ಅವರ ಮನೆಗೆ ನುಗ್ಗಿ ಧ್ವಂಸ ಹಾಗೂ ಲೂಟಿ ಮಾಡಲಾಗಿದೆ.

4. ಮುಸ್ಲಿಂ ಗಲಭೆಕೋರರು ಮುನಿಸಿಪಲ್ ಕೌನ್ಸಿಲರ್ ಮುಹಿನ್ ರಾಯ್ ಅವರ ಅಂಗಡಿಯನ್ನು ಧ್ವಂಸಗೊಳಿಸಿದರು ಮತ್ತು ಲೂಟಿ ಮಾಡಿದರು. ಕಲಿಗಂಜ್ ಉಪಜಿಲ್ಲೆಯ ಚಂದ್ರಾಪುರ ಗ್ರಾಮದಲ್ಲಿ ನಾಲ್ಕು ಹಿಂದೂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಲಾಗಿದೆ. ಹಾತಿಬಂಧ ಉಪಜಿಲ್ಲೆಯ ಪುರ್ಬೊ ಸರ್ದುಬಿ ಗ್ರಾಮದಲ್ಲಿ ಹಿಂದೂಗಳ 12 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

5. ಪಂಚಗಢದಲ್ಲಿ ಅನೇಕ ಹಿಂದೂ ಮನೆಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಲೂಟಿ ಮಾಡಲಾಯಿತು. ಓಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮೊನೀಂದ್ರ ಕುಮಾರ್ ನಾಥ್ ಅವರು ಈ ಬಗ್ಗೆ ಮಾತನಾಡಿ, ಹಿಂದೂಗಳ ಮೇಲೆ ಹಲ್ಲೆ ನಡೆಯದ ಪ್ರದೇಶ ಅಥವಾ ಜಿಲ್ಲೆಯೇ ಉಳಿದಿಲ್ಲ. ವಿವಿಧ ಭಾಗಗಳಿಂದ ನಿರಂತರವಾಗಿ ದಾಳಿಗಳು ವರದಿಯಾಗುತ್ತಿವೆ ಎಂದರು.

6. ಹಿಂದೂಗಳನ್ನು ಅವರ ಮನೆಗಳಿಂದ ಹೊರಗೆಳೆದು ಕೊಲ್ಲಲಾಗುತ್ತಿದೆ. ಹಿಂದೂಗಳು ಭಯದ ನೆರಳಲ್ಲಿ ಬದುಕುತ್ತಿದ್ದಾರೆ. ದಿನಾಜ್‌ಪುರ ನಗರ ಮತ್ತು ಇತರ ಉಪ ಜಿಲ್ಲೆಗಳಲ್ಲಿ 10 ಹಿಂದೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ದಿನಾಜಪುರ ನಗರದ ರೈಲ್‌ಬಜಾರ್‌ಹತ್‌ನಲ್ಲಿರುವ ದೇವಸ್ಥಾನವನ್ನೂ ಧ್ವಂಸಗೊಳಿಸಲಾಗಿದೆ.

7. ಲಕ್ಷ್ಮೀಪುರದ ಗೌತಮ್ ಮಜುಂದಾರ್ ಅವರು, 200ರಿಂದ 300ಕ್ಕೂ ಹೆಚ್ಚು ದಾಳಿಕೋರರು ನಮ್ಮ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹಚ್ಚಿದರು ಎಂದು ಮಾಹಿತಿ ನೀಡಿದರು.

8. ಖುಲ್ನಾದಲ್ಲಿ ಬಿಮನ್ ಬಿಹಾರಿ ಅಮಿತ್ ಮತ್ತು ಅನಿಮೇಶ್ ಸರ್ಕಾರ್ ಅವರ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ರೂಪಶಾ ಪೊಲೀಸ್ ಠಾಣಾ ವ್ಯಾಪ್ತಿಯ ಹೈಸ್ಗತಿ ಗ್ರಾಮದ ಶ್ಯಾಮಲ ಕುಮಾರ ದಾಸ್ ಮತ್ತು ಸ್ವಜನ ಕುಮಾರ ದಾಸ್ ಅವರ ಮನೆಗಳ ಮೇಲೂ ದಾಳಿ ನಡೆಸಿ ಲೂಟಿ ಮಾಡಲಾಗಿದೆ.

ಬಾಂಗ್ಲಾದೇಶದ ಸೇನೆಯು ಹಿಂದೂಗಳನ್ನು ರಕ್ಷಿಸಬೇಕು ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಜ್ಯೋತಿಶ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ, ಬಾಂಗ್ಲಾದೇಶದ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ನಮಗೆ ಮಾಹಿತಿಯಿದೆ. ಬಾಂಗ್ಲಾದೇಶ ಮಿಲಿಟರಿ ಆಡಳಿತವನ್ನು ಹೊಂದಿದೆ. ನಾಗರಿಕರ ಸುರಕ್ಷತೆಗಾಗಿ ಸೇನೆಯು ತನ್ನ ಕರ್ತವ್ಯವನ್ನು ಖಂಡಿತವಾಗಿಯೂ ನಿರ್ವಹಿಸುತ್ತದೆ ಎಂಬ ಭರವಸೆ ನಮಗಿದೆ. ಶೇ. 8ರಷ್ಟು ಹಿಂದೂಗಳು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಸುರಕ್ಷತೆ ಮುಖ್ಯವಾಗಿದೆ ಎಂಬುದನ್ನು ಖಚಿತಪಡಿಸಿಳ್ಳಿ ಎಂದು ನಾವು ಬಾಂಗ್ಲಾದೇಶದ ಸೈನ್ಯವನ್ನು ಕೇಳಲು ಬಯಸುತ್ತೇವೆ ಎಂದು ಕೋರಿದರು.

ಭಾರತದಿಂದ ಬಾಂಗ್ಲಾದೇಶಕ್ಕೆ ರೈಲು ಸೇವೆ ಸ್ಥಗಿತ

ಬಾಂಗ್ಲಾದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆಯು ಬಾಂಗ್ಲಾದೇಶಕ್ಕೆ ಹೋಗುತ್ತಿದ್ದ ಎಲ್ಲಾ ರೈಲುಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ರೈಲ್ವೇ ಸಚಿವಾಲಯದ ಪ್ರಕಾರ, ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಮೈತ್ರಿ ಎಕ್ಸ್‌ಪ್ರೆಸ್, ಬಂಧನ ಎಕ್ಸ್‌ಪ್ರೆಸ್ ಮತ್ತು ಮಿತಾಲಿ ಎಕ್ಸ್‌ಪ್ರೆಸ್‌ಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ; ಆದರೆ ಈಗ ರದ್ದುಗೊಳಿಸುವ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದೂಗಳನ್ನು ನಿರ್ನಾಮ ಮಾಡುವವರೆಗೂ ಈ ದಾಳಿ ಮುಂದುವರಿಯುತ್ತದೆ; ಏಕೆಂದರೆ ಅಲ್ಲಿನ ಹಿಂದೂಗಳಿಗೆ ಪ್ರತಿರೋಧಿಸುವ ಸಾಮರ್ಥ್ಯವಿಲ್ಲ. ಭಾರತದ ಸೆಕ್ಯುಲರ್ ಸರಕಾರ ಎಂದಿಗೂ ಅವರಿಗೆ ಸಹಾಯ ಮಾಡುವುದಿಲ್ಲ ಮತ್ತು ವಿಶ್ವ ಸಮುದಾಯವು ಅವರತ್ತ ತಪ್ಪಿಯೂ ನೋಡುವುದಿಲ್ಲ !