ಅಂತರ್ಮುಖವಾಗಲು ಮತ್ತು ಅಧ್ಯಯನಕ್ಕಾಗಿ ಉತ್ತಮ ಕಾಲವೆಂದರೆ ಚಾತುರ್ಮಾಸ !

೧೭ ಜುಲೈ ೨೦೨೪ ಈ ದಿನದಿಂದ ‘ಚಾತುರ್ಮಾಸ ಪ್ರಾರಂಭ’ವಾಗಿದೆ. ಆ ನಿಮಿತ್ತದಿಂದ….

ದೇವಶಯನಿ (ಆಷಾಢ) ಏಕಾದಶಿಯಿಂದ ಕಾರ್ತಿಕ ಏಕಾದಶಿ ವರೆಗೆ ಚಾತುರ್ಮಾಸವಿದೆ. ಇದು ಆಧ್ಯಾತ್ಮಿಕ ಖಜಾನೆಯನ್ನು ತುಂಬುವ ಕಾಲವಾಗಿದೆ. ಮಳೆಗಾಲದಲ್ಲಿ ಹೆಚ್ಚು ಹಸಿವಾಗುವುದಿಲ್ಲ; ಆದ್ದರಿಂದ ಉಪವಾಸ ಅಥವಾ ಒಂದು ಹೊತ್ತು ಭೋಜನವನ್ನು ಮಾಡಲಾಗುತ್ತದೆ. ಆಹಾರವನ್ನು ಜೀರ್ಣಿಸಲು ಜೀವಶಕ್ತಿಯನ್ನು ಹೆಚ್ಚು ವೆಚ್ಚ ಮಾಡದಿದ್ದರೆ, ಅದು ಸಂಗ್ರಹವಾಗಿರುತ್ತದೆ. ಶ್ರಾವಣ ಮಾಸದಲ್ಲಿ ಅನುಷ್ಠಾನ ಇತ್ಯಾದಿಗಳನ್ನು ಮಾಡಲು ಋಷಿಮುನಿಗಳು ಹೇಳಿದ್ದಾರೆ. ಈ ದಿನಗಳಲ್ಲಿ ನಾವು ನಮ್ಮ ಈಶ್ವರಪ್ರಾಪ್ತಿಯ ನಿಷ್ಠೆಯನ್ನು ಹೆಚ್ಚಿಸಬೇಕು. ಒಂದು ವಾರ, ಎರಡು ವಾರ, ನಾಲ್ಕು ವಾರ ಹೀಗೇನಾದರೂ ಒಂದು ನಿಯಮವನ್ನು ಮಾಡಿ ಇಂದ್ರಿಯಗಳ ಆರೈಕೆಯಲ್ಲಿ ಮುಳುಗದೇ ಸರಳ ಜೀವನ ಪಾಲಿಸಿ ನಮ್ಮ ಸುಖರೂಪ ಅಂತರ್ಮುಖ ಆತ್ಮವು-ಪರಮಾತ್ಮನಲ್ಲಿ ಬರಲು ಅಧ್ಯಯನ ಮಾಡಿರಿ. ಜ್ಞಾನವನ್ನು ಕೇಳುವುದರಿಂದ ಮೋಕ್ಷ ಸಿಗುವುದಿಲ್ಲ, ಅದನ್ನು ಕೇಳಿದ ನಂತರ ಅದರಲ್ಲಿ ಸ್ಥಿರವಾಗುವುದರಿಂದ (ಆಚರಣೆ ಮಾಡಿದ್ದರಿಂದ) ಮುಕ್ತಿಯ ಅನುಭವ ಬರುತ್ತದೆ. ಒಂದು ವೇಳೆ ಕೇಳಿದ ಜ್ಞಾನವನ್ನು ಜೀರ್ಣಿಸಲು ಸಮಯ ನೀಡದಿದ್ದರೆ, ಯಾವ ಪರಮಪದವಿಯ ಪ್ರಾಪ್ತಿಯ ಲಾಭವಾಗಬೇಕೋ, ಅದರಿಂದ ನೀವು ವಂಚಿತರಾಗುತ್ತೀರಿ.

ಸಾಧನೆಗಾಗಿ ಅಮೃತಮಯವಾದ ಚಾತುರ್ಮಾಸದ ಕಾಲ !

ನಾವು ವೇದಗಳ ಜ್ಞಾನವನ್ನು ಎಷ್ಟು ಕೇಳಿದ್ದೇವೆಯೋ, ಅದರ ೧೦ ಪಟ್ಟು ಅದರ ಮನನವನ್ನು ಮಾಡಬೇಕು. ೧೦ ಪಟ್ಟು, ಅಂದರೆ ಶ್ರವಣದ ೧೦೦ ಪಟ್ಟು ನಿಜಧ್ಯಾಸವನ್ನು ಮಾಡಬೇಕು. ಮನನದ ಫಲವೇನು ? ಆತ್ಮಪ್ರಾಪ್ತಿ ಮತ್ತು ತನ್ನ ಸ್ವರೂಪಪ್ರಾಪ್ತಿಯ ಬಗ್ಗೆ ಏನೆಲ್ಲ ಸಂದೇಹವಿರುತ್ತದೆಯೋ, ಅದು ಸ್ವಲ್ಪ ಸ್ವಲ್ಪವಾಗಿ ತಾನಾಗಿಯೇ ದೂರವಾಗುತ್ತ ಹೋಗುತ್ತದೆ. ನಿಜಧ್ಯಾಸದ ಫಲವೇನೆಂದರೆ ಆನಂದ ಸಿಗುತ್ತದೆ. ಸಾಧನೆಗಾಗಿ ಅಮೃತಮಯವಾಗಿರುವ ಚಾತುರ್ಮಾಸ ಕಾಲದ ಲಾಭವನ್ನು ಪಡೆದು ಪರಮಾತ್ಮಪ್ರಾಪ್ತಿಯ ಮಾರ್ಗದಲ್ಲಿ ಶೀಘ್ರವಾಗಿ ಮುನ್ನಡೆಯಿರಿ!’ ಎಂದು ಶಾಸ್ತ್ರವು ಹೇಳುತ್ತದೆ.

(ಆಧಾರ : ‘ಋಷಿಪ್ರಸಾದ’, ೧೦ ಜುಲೈ ಯಿಂದ ೫ ನವೆಂಬರ್‌ ೨೦೨೩)