ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೧. ನಾಮಸಾಧನೆಯ ಜೊತೆಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಗೆ ತುಂಬಾ ಮಹತ್ವವಿದೆ !

‘ನಾಮಸಾಧನೆ ಇದ್ದರೂ, ನಾಮಸ್ಮರಣೆಯ ಜೊತೆಗೆ ನಮ್ಮ ಸ್ವಭಾವದೋಷ ಮತ್ತು ಅಹಂನ  ನಿರ್ಮೂಲನೆಗಾಗಿ ದಿನವಿಡಿ ಪ್ರಯತ್ನಿಸದಿದ್ದರೆ, ನಮ್ಮಿಂದಾಗುವ ತಪ್ಪುಗಳ ನಿವಾರಣೆಗಾಗಿ ನಾಮಜಪದಿಂದ ದೊರಕಿದ ಸಾಧನೆಯ ಊರ್ಜೆ ವ್ಯರ್ಥವಾಗುತ್ತದೆ. ಹೀಗಾಗಬಾರದೆಂದು ನಾಮಸಾಧನೆಯ ಜೊತೆಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವ ಪ್ರಕ್ರಿಯೆಗೆ ತುಂಬಾ ಮಹತ್ವವಿದೆ. ಕೇವಲ ನಾಮಸಾಧನೆಯಿಂದ ಪ್ರಗತಿಯಾಗುವುದಿಲ್ಲ. ಸಮಾಜದಲ್ಲಿ ಅನೇಕ ನಾಮಧಾರಕರಿರುತ್ತಾರೆ; ಆದರೆ ಅವರನ್ನು ನೋಡಿದಾಗ ನಮಗೆ ‘ಅಹಂ’ನ ಅರಿವಾಗುತ್ತದೆ; ಏಕೆಂದರೆ ಅವರಿಗೆ ಅವರ ಸ್ವಭಾವದೋಷಗಳ ಕಡೆಗೆ ಗಮನವಿರುವುದಿಲ್ಲ. ಅವರು ಅನೇಕ ಬಾರಿ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ದುಃಖಿತರಾಗಿರುವುದು ಕಾಣಿಸುತ್ತದೆ. ಇದರ ಬದಲು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಸತತವಾಗಿ ನಡೆಸುವ ಸಾಧಕರ ನಾಮಸ್ಮರಣೆಯೂ ಚೆನ್ನಾಗಿ ಆಗುತ್ತದೆ ಮತ್ತು ಅವರನ್ನು ನೋಡಿ ಆನಂದವೂ ಅನಿಸುತ್ತದೆ.’

೨. ನಮ್ಮ ಅಸ್ತಿತ್ವದ ಮರೆವು ಮತ್ತು ದೇವರ ಅಸ್ತಿತ್ವದ ಅರಿವು ಎಂದರೆ ಸಾಧನೆ !

‘ಇತರರೊಂದಿಗೆ ಮಾತನಾಡುವಾಗ ಅವರವರಾಗಿಯೇ (ಅವರೊಂದಿಗೆ ಆತ್ಮೀಯವಾಗಿ) ಮಾತನಾಡಬೇಕಾಗುತ್ತದೆ. ಇದರಿಂದ ನಮಗೆ ನಮ್ಮ ಅಸ್ತಿತ್ವವನ್ನು ಮರೆತು ಸೇವೆಯನ್ನು ಮಾಡುವ ಅಭ್ಯಾಸವಾಗುತ್ತದೆ. ಒಮ್ಮೆ ನಮಗೆ ನಮ್ಮ ಅಸ್ತಿತ್ವವನ್ನು ಮರೆಯುವ ಅಭ್ಯಾಸವಾದರೆ, ದೇವರ ಹೆಚ್ಚು ಸಮೀಪ ಹೋಗಬಹುದು ಮತ್ತು ದೇಹದಲ್ಲಿ ಅವನ ಅಸ್ತಿತ್ವದ ಅರಿವಾಗತೊಡಗುತ್ತದೆ. ನಮ್ಮ ಅಸ್ತಿತ್ವದ ಮರೆವು ಮತ್ತು ದೇವರ ಅಸ್ತಿತ್ವದ ಅರಿವು ಎಂದರೆ ಸಾಧನೆಯಾಗಿದೆ.’

೩. ‘ಸಮಾಜಸೇವೆಯನ್ನು ‘ಈಶ್ವರಸೇವೆ’ ಎಂದು ನಿರ್ಮಲ ಮತ್ತು ನಿರಪೇಕ್ಷ ಭಾವದಿಂದ ಮಾಡಿದರೆ ಮಾತ್ರ ಅದರಿಂದ ಸಾಧನೆಯಾಗುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೪.೪.೨೦೨೦)