Big breaking news : ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಹತ

  • ಇರಾನಿನ ರಾಜಧಾನಿ ತೆಹರಾನದಲ್ಲಿ ಕ್ಷಿಪಣಿ ಮೂಲಕ ದಾಳಿ

  • ಇಸ್ರೇಲ್ ಈ ಹತ್ಯೆ ನಡೆಸಿದೆ ಎಂದು ಹೇಳಲಾಗುತ್ತಿದೆ

ತೆಹರಾನ (ಇರಾನ್) – ಹಮಾಸ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಇವನನ್ನು ತೆಹರಾನದಲ್ಲಿ ಕ್ಷಿಪಣಿ ದಾಳಿಯಲ್ಲಿ ಹತಗೊಳಿಸಲಾಗಿದೆ. ಅವನ ಜೊತೆಗೆ ಅವನ ಅಂಗರಕ್ಷರನ್ನು ಕೂಡ ಹತಗೊಂಡಿದ್ದಾರೆ. ಹಾನಿಯಾ ಬಾಕಿ ಸಮಯದಲ್ಲಿ ಕತಾರ ದೇಶದಲ್ಲಿ ವಾಸಿಸುತ್ತಾನೆ ; ಆದರೆ ಇರಾನಿನ ಹೊಸ ರಾಷ್ಟ್ರಪತಿ ಮಸೂದ್ ಪೇಜೋಸ್ಕಿಯಾನ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕಾಗಿ ಅವನು ತೆಹರಾನಿಗೆ ಬಂದಿದ್ದನು ಆಗ ಈ ದಾಳಿ ನಡೆಸಲಾಗಿದೆ. ಈ ದಾಳಿಯ ಅಧಿಕೃತ ಜವಾಬ್ದಾರಿಯನ್ನು ಇಸ್ರೇಲ್ ತೆಗೆದುಕೊಂಡಿಲ್ಲ ಹಾಗೂ ಇರಾನ್ ಕೂಡ ಇಸ್ರೇಲ್ ದಾಳಿ ನಡೆಸಿದೆ ಎಂದು ಹೇಳಿಲ್ಲ. ಹಾಗಾಗಿ ಈ ದಾಳಿ ಯಾರು ನಡೆಸಿದ್ದಾರೆ ? ಎಂಬ ಪ್ರಶ್ನೆ ಉದ್ಭವಿಸಿದೆ. ಆದರೂ ಕೂಡ ಇಸ್ರೇಲ್ ಈ ಹತ್ಯೆ ನಡೆಸಿದೆ ಎಂಬ ಸಮಾಚಾರವಿದೆ. ರಾಜಕೀಯ ದೃಷ್ಟಿಯಿಂದ ಅಡಚಣೆ ಆಗಬಾರದೆಂದು ಎರಡು ದೇಶಗಳು ಈ ಬಗ್ಗೆ ಮೌನವಾಗಿವೆ.

೧. ೧೯೮೭ ರಲ್ಲಿ ಹಾನಿಯಾ ಹಮಾಸ್ ಗೆ ಸೇರಿದ್ದನು .೨೦೧೭ ರಲ್ಲಿ ಹಮಾಸಿನ ನೇತೃತ್ವ ವಹಿಸಿಕೊಂಡ ನಂತರ ಹಾನಿಯಾ ಡಿಸೆಂಬರ್ ೨೦೧೯ ರಲ್ಲಿ ಗಾಝಾ ಪಟ್ಟಿ ತೊರೆದನು.

೨. ಇಸ್ಮಾಯಿಲ್ ಹಾನಿಯಾದ ನೇತೃತ್ವದಲ್ಲಿ ಕಳೆದ ವರ್ಷ ಅಕ್ಟೋಬರ್ ೭ ರಂದು ಹಮಾಸ್ ಇಸ್ರೇಲ್ ಮೇಲೆ ೭೫ ವರ್ಷದಲ್ಲಿಯೇ ಅತ್ಯಂತ ಕ್ರೂರ ದಾಳಿ ನಡೆಸಿತ್ತು.

೩. ಹಾನಿಯಾ ಎರಡು ವಿವಾಹ ಮಾಡಿಕೊಂಡಿದ್ದನು. ಓರ್ವ ಪತ್ನಿಯಿಂದ ಅವನಿಗೆ ೧೩ ಮಕ್ಕಳಿದ್ದಾರೆ. ತನ್ನ ಸ್ನೇಹಿತನ ಪತ್ನಿಯ ಜೊತೆ ಈತ ತನ್ನ ಎರಡನೇ ವಿವಾಹ ಮಾಡಿಕೊಂಡನು. ಹಾನಿಯಾನಾ ಆ ಸ್ನೇಹಿತನನ್ನು ಇಸ್ರೇಲಿ ಸೈನಿಕರು ಹತಗೊಳಿಸಿದ್ದರು. ಹಾನಿಯಾನ ಬಹಳಷ್ಟು ಸಂಬಂಧಿಕರನ್ನು ಈ ಹಿಂದೆಯೇ ಹತ ಗೊಳಿಸಲಾಗಿದೆ.

೪. ಕಳೆದ ನವೆಂಬರದಲ್ಲಿ ಇಸ್ಮಾಯಿಲ್ ಹಾನಿಯಾನ ಗಾಝಾದಲ್ಲಿಯ ಮನೆಯನ್ನು ಕೂಡ ಇಸ್ರೇಲ್ ಧ್ವಂಸ ಮಾಡಿತ್ತು. ಭಯೋತ್ಪಾದಕ ಚಟುವಟಿಕೆಗಾಗಿ ಹಾನಿಯಾದ ಮನೆಯ ಉಪಯೋಗವಾಗುತ್ತಿದೆ ಎಂದು ಇಸ್ರೇಲ್ ಹೇಳಿತ್ತು.

ಸೇಡು ತೀರಿಸಿಕೊಳ್ಳುವೆವು ! – ಹಮಾಸ್

ಹಮಾಸದ ರಾಜಕೀಯ ಬ್ಯೂರೋ ಸದಸ್ಯ ಮೌಸ ಅಬು ಮಾರಝೌಕ ಈ ಹತ್ಯೆ ಬಗ್ಗೆ ಮಾತನಾಡಿ, ಹಾನಿಯಾ ಸಾವಿನ ಸೇಡು ತೀರಿಸಿಕೊಳ್ಳುವೆವು. ಹೇಡಿತನದಿಂದ ಹಾನಿಯಾ ಹತ್ಯೆ ಮಾಡಿರುವುದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದ್ದಾನೆ.

ದಾಳಿ ಮಾಡಿದವರಿಗೆ ಅವರ ಕೃತ್ಯದ ಬಗ್ಗೆ ಪಶ್ಚಾತಾಪ ಆಗುವ ಹಾಗೆ ಮಾಡುವೆವು – ಇರಾನ್ ಅಧ್ಯಕ್ಷ ಮಸೂದ್ ಪೇಜೋಶ್ಕಿಯಾನ

ಇರಾನಿನ ಅಧ್ಯಕ್ಷ ಮಸೂದ ಪೇಜೋಶ್ಕಿಯಾನ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಿನ್ನೆ (ಜುಲೈ ೩೦ ರಂದು) ನಾನು ಹಾನಿಯಾ ಅವರ ಜೊತೆಗೆ ಇದ್ದೆ ಮತ್ತು ಇಂದು ನಾನು ಅವರ ಅಂತ್ಯಸಂಸ್ಕಾರದಲ್ಲಿ ಹೆಗಲು ನೀಡುವ ಪರಿಸ್ಥಿತಿ ಬಂದಿದೆ. ನಾವು ಇದನ್ನು ಮರೆಯುವುದಿಲ್ಲ. ಇರಾನ್ ತನ್ನ ಪ್ರಾದೇಶಿಕ ಅಖಂಡತೆ, ಪ್ರತಿಷ್ಠೆ, ಗೌರವ ಮತ್ತು ಅಭಿಮಾನದ ರಕ್ಷಣೆ ಮಾಡುವುದು ಎಂದು ಹೇಳಿದರು. ಈ ದಾಳಿಕೋರರಿಗೆ ಅವರ ಕೃತ್ಯದ ಪಶ್ಚಾತಾಪ ಆಗುವಂತೆ ನಾವು ಮಾಡುತ್ತೇವೆ ಎಂದು ನಾನು ಮಾತು ಕೊಡುತ್ತೇನೆ ಎಂದರು.

ಜವಾಬ್ದಾರರಿಗೆ ಪ್ರತ್ಯುತ್ತರ ನೀಡಲಾಗುವುದು ! – ಇರಾನಿನ ಸರ್ವೋಚ್ಚ ನಾಯಕ ಆಯಾತುಲ್ಲಾ ಖೋಮೆನಿ

ಇರಾನಿನ ಸರ್ವೋಚ್ಚ ನಾಯಕ ಅಯಾತುಲ್ಲಾ ಖೋಮೆನಿ, ಇರಾನಿನ ಗಡಿಯಲ್ಲಿ ವೀರ ಗತಿ ಪಡೆದಿರುವುದರಿಂದ ನ್ಯಾಯ ದೊರಕಿಸಿ ಕೊಡುವುದು ನಮ್ಮ ಕರ್ತವ್ಯ ಎಂದು ತಿಳಿಯುತ್ತೇವೆ. ಇದಕ್ಕೆ ಜವಾಬ್ದಾರರಾದವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದರು.

ವಿಶ್ವಸಂಸ್ಥೆ ಇಸ್ರೇಲ್ ಅನ್ನು ತಡೆಯಲು ಕ್ರಮ ಕೈಗೊಳ್ಳಬೇಕು ! – ಟರ್ಕಿ

ಟರ್ಕಿ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಗಾಝಾದಲ್ಲಿನ ಯುದ್ಧವನ್ನು ಪ್ರಾದೇಶಿಕ ಮಟ್ಟದಲ್ಲಿ ನಡೆಸುವುದೇ ಈ ಹತ್ಯೆಯ ಉದ್ದೇಶವಾಗಿದೆ. ವಿಶ್ವ ಸಂಸ್ಥೆ ಇಸ್ರೇಲನ್ನು ತಡೆಯುವದಕ್ಕಾಗಿ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಪ್ರದೇಶಗಳಿಗೆ ಇನ್ನೂ ಹೆಚ್ಚಿನ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಟರ್ಕಿ ಪ್ಯಾಲೆಸ್ತೀನಿ ಜನರ ನ್ಯಾಯಯುತ ನಿಲುವಿಗೆ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದೆ.

ಅಮೇರಿಕಾದಿಂದ ಇಸ್ರೇಲ್ ಗೆ ಬಹಿರಂಗ ಸಮರ್ಥನೆ !

ಇಸ್ರೇಲ್ ಮೇಲೆ ಯಾವುದೇ ದಾಳಿ ನಡೆದರೆ, ನಾವು ಅದಕ್ಕೆ ಉತ್ತರ ನೀಡುವೆವು ಎಂದು ಅಮೇರಿಕಾ ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

೭ ಅಕ್ಟೋಬರ್ ೨೦೨೪ ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಪ್ರಮುಖ ಸೂತ್ರದಾರನಾದ ಹಮಾಸ್ ನ ಮುಖ್ಯಸ್ಥನನ್ನು ಒಂದು ಇಸ್ಲಾಮಿಕ್ ದೇಶದ ರಾಜಧಾನಿಯಲ್ಲಿ ಕ್ಷಿಪಣಿ ಬಳಸಿ ಹತಗೊಳಿಸಿ ಇಸ್ರೇಲ್ ಸೇಡು ತೀರಿಸಿಕೊಂಡಿದೆ. ತನ್ನ ಶತ್ರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ಅವರಿಗೆ ಪಾಠ ಕಲಿಸುವ ಇಸ್ರೇಲ್ ನಿಂದ ಭಾರತ ಯಾವಾಗ ಪಾಠ ಕಲಿಯುವುದು ?