Love Jihad – Life Imprisonment : ಇನ್ನುಮುಂದೆ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಆರೋಪಿಗೆ ಜೀವಾವಧಿ ಶಿಕ್ಷೆ!

ಕಾನೂನು ತಿದ್ದುಪಡಿ ಮಸೂದೆಗೆ ಅನುಮೋದನೆ !

(ಸೌಜನ್ಯ – MBM Vadodara)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರಕಾರವು ‘ಉತ್ತರ ಪ್ರದೇಶ ಅಕ್ರಮ ಮತಾಂತರ ತಡೆ (ತಿದ್ದುಪಡಿ) ಮಸೂದೆ’ಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಇದು ‘ಲವ್ ಜಿಹಾದ್’ ನಂತಹ ಅಪರಾಧಗಳಿಗೆ ಜೀವಾವಧಿ ಶಿಕ್ಷೆಯನ್ನು ಒದಗಿಸುತ್ತದೆ. ಮೂಲ ಮಸೂದೆಯನ್ನು 2021 ರಲ್ಲಿ ಅಂಗೀಕರಿಸಲಾಗಿತ್ತು. ಆಗ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸುವ ಅವಕಾಶವಿತ್ತು. ಸರಕಾರ ಜಾರಿಗೆ ತಂದ ಸುಧಾರಣೆಗಳಿಂದ ಶಿಕ್ಷೆ ಮತ್ತು ದಂಡ ಎರಡನ್ನೂ ಹೆಚ್ಚಿಸಲಾಗಿದೆ.

1. ಈ ಹಿಂದೆ ಮತಾಂತರ ಮತ್ತು ಮೋಸದ ವಿವಾಹಕ್ಕೆ 1 ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡ ಇತ್ತು. ಈಗ ಈ ಅಪರಾಧಕ್ಕೆ 3 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಯರು ಅಥವಾ ಮಹಿಳೆಯರೊಂದಿಗೆ ‘ಲವ್ ಜಿಹಾದ್’ ಮಾಡಿದರೆ 2ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸುವ ನಿಯಮವಿತ್ತು. ಈಗ ಅದನ್ನು 5 ರಿಂದ 14 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ಇರಲಿದೆ.

3. ಪ್ರಸ್ತುತ ಅಕ್ರಮ ಸಾಮೂಹಿಕ ಮತಾಂತರಕ್ಕೆ 3 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ಇತ್ತು ಅದನ್ನು ಈಗ 7 ರಿಂದ 14 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ವರೆಗೆ ಹೆಚ್ಚಿಸಲಾಗಿದೆ.

4. ಯಾರಾದರೂ ಜೀವ ಅಥವಾ ಆಸ್ತಿಯ ಭಯವನ್ನು ತೋರಿಸಿದರೆ, ಬಲವಂತವಾಗಿ ಅಥವಾ ಯಾರಿಗಾದರೂ ಮತಾಂತರಕ್ಕೆ ಒತ್ತಡ ಹೇರಿದರೆ, ಅವರು ಜೀವಾವಧಿ ಶಿಕ್ಷೆ ಮತ್ತು ದಂಡವನ್ನೂ ತೆತ್ತಬೇಕು.

5. ಸರಕಾರದ ಪ್ರಕಾರ, ಅಪರಾಧದ ಗಂಭೀರತೆ, ಸಾಮಾಜಿಕ ಸ್ಥಾನಮಾನ ಮತ್ತು ಮಹಿಳೆಯರ ಘನತೆ, ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಕ್ರಮ ಮತಾಂತರವನ್ನು ತಡೆಯಲು ಶಿಕ್ಷೆ ಮತ್ತು ದಂಡವನ್ನು ಹೆಚ್ಚಿಸುವ ಅಗತ್ಯವಿದೆ. ಅದಕ್ಕಾಗಿಯೇ ಈ ಮಸೂದೆ ಮಂಡಿಸಲಾಗುತ್ತಿದೆ. ತಿದ್ದುಪಡಿ ವಿಧೇಯಕದ ಅಡಿಯಲ್ಲಿ, ಸಂತ್ರಸ್ತರ ವೈದ್ಯಕೀಯ ವೆಚ್ಚ ಮತ್ತು ಪುನರ್ವಸತಿಗಾಗಿ ನ್ಯಾಯಾಲಯವು ದಂಡದ ಮೊತ್ತವನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.

ವಿದೇಶಿ ಸಂಸ್ಥೆಯಿಂದ ಹಣ ಪಡೆದರೂ ಕ್ರಮ

ಅಕ್ರಮ ಮತಾಂತರಕ್ಕೆ ಹಣ ನೀಡುವುದನ್ನೂ ಈ ಕಾಯಿದೆಯಡಿ ಅಪರಾಧದ ವರ್ಗಕ್ಕೆ ಸೇರಿಸಲಾಗಿದೆ. ಯಾವುದೇ ವಿದೇಶಿ ಸಂಸ್ಥೆ ಅಥವಾ ಯಾವುದೇ ಅಕ್ರಮ ಸಂಸ್ಥೆಯಿಂದ ಮತಾಂತರಕ್ಕೆ ಹಣ ಪಡೆದರೆ, ಈ ಕಾಯಿದೆಯಡಿ ಸಂಸ್ಥೆಯ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶ ಸರಕಾರ ಏನು ಸಾಧ್ಯವಿದೆಯೋ, ಅದು ಇತರ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ ? ಹಿಂದೂಗಳ ರಕ್ಷಣೆ ತಮ್ಮ ಕರ್ತವ್ಯವಲ್ಲ ಎಂದು ಅವರು ಭಾವಿಸುತ್ತಾರೆಯೇ ?

ಉತ್ತರ ಪ್ರದೇಶ ಸರಕಾರ ಕಾನೂನಿನಲ್ಲಿ ಶಿಕ್ಷೆಯ ತೀವ್ರತೆಯನ್ನು ಹೆಚ್ಚಿಸಿದೆ ಇದು ಒಳ್ಳೆಯದೇ ಆಗಿದೆ. ಆದರೆ, ಎಷ್ಟೇ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದರೂ ಮತಾಂಧ ಮುಸ್ಲಿಮರು ಕಾನೂನಿನ ಭಯದಿಂದ ಅಪರಾಧಗಳನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ತೋರುತ್ತದೆ. ಈ ಕಾರಣದಿಂದಾಗಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಕಾನೂನು ರಚಿಸುವುದು ಅನಿವಾರ್ಯವಾಗುತ್ತದೆ !