ಧರ್ಮದಲ್ಲಿರುವ ಕರ್ಮಕಾಂಡಗಳನ್ನು ಇಂದಿನ ಧಾವಂತದ ಜೀವನ ಪದ್ಧತಿಯಲ್ಲಿ ಉಳಿಸಿಕೊಳ್ಳಲು ಏನು ಮಾಡಬೇಕು ?

ಧರ್ಮದ ವಿಷಯದಲ್ಲಿನ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶಕ ಲೇಖನ !

ಪ.ಪೂ. ಸ್ವಾಮಿ ವರದಾನಂದ ಭಾರತಿ

‘ಕರ್ಮಕಾಂಡ ಇದು ಕೇವಲ ಧರ್ಮದಲ್ಲಿಯೇ ಇರುತ್ತದೆ, ಎಂದು ತಿಳಿದುಕೊಳ್ಳುವ ಆವಶ್ಯಕತೆ ಇಲ್ಲ. ಕೆಲವು ಕಟ್ಟುನಿಟ್ಟಿನ ಆಗ್ರಹಗಳು, ವಿಶೇಷವಾಗಿ ಯಾವುದರಿಂದ ನಮಗೆ ಕಿರುಕುಳವೆನಿಸುತ್ತದೆಯೋ, ಅದನ್ನು ನಾವು ಕರ್ಮಕಾಂಡ ಎನ್ನುತ್ತೇವೆ. ಅದಲ್ಲದೆ ಇಂದು ನಾವು ಫ್ಯಾಶನ್‌ನ ಹೆಸರಿನಲ್ಲಿ ಅನೇಕ ಪ್ರಕಾರದ ಕರ್ಮಕಾಂಡಗಳನ್ನು ಸ್ವೀಕರಿಸುತ್ತೇವೆ; ಆದರೆ ಅವುಗಳಿಗೆ ನಾವು ಕರ್ಮಕಾಂಡವೆಂದು ಹೇಳುವುದಿಲ್ಲ ಅಷ್ಟೇ !

೧. ಪ್ರತಿಯೊಬ್ಬರೂ ತಮ್ಮ ‘ವಿಹಿತ (ನಿಯುಕ್ತ) ಕರ್ಮ’ವನ್ನು ಯೋಗ್ಯ ಪದ್ಧತಿಯಲ್ಲಿ ಮಾಡುವುದೇ ಧರ್ಮ !

ಮೂಲದಲ್ಲಿ ಯಾವುದಕ್ಕೆ ನಾವು (ಧಾರ್ಮಿಕ) ಕರ್ಮಕಾಂಡವೆಂದು ಹೇಳುತ್ತೇವೆಯೋ, ಅದು ಧರ್ಮದ ಸರ್ವಸ್ವವಾಗಿಲ್ಲ. ಹೆಚ್ಚಾಗಿ ಅದು ಪೂಜಾಪದ್ಧತಿ ಅಥವಾ ಉಪಾಸನೆಯ ಒಂದು ಅಂಶವಾಗಿದ್ದು ಅದಕ್ಕೆ ಸ್ವಲ್ಪ ಮಹತ್ವವೂ ಇದೆ. ಉಪಾಸನೆಯ ಕೆಲವು ಫಲಗಳನ್ನು ಹೇಳಲಾಗಿದೆ. ನಿಮಗೆ ಅದರ ಫಲ ಬೇಕಾಗಿದ್ದರೆ, ಅದರಲ್ಲಿ ಹೇಳಿರುವ ಕರ್ಮ ಅಥವಾ ಕರ್ಮಕಾಂಡವನ್ನು ಮಾಡಲೇ ಬೇಕು. ಇದನ್ನು ಮಾಡಲು ಇಷ್ಟವಿಲ್ಲದಿದ್ದರೆ ಅಥವಾ ಸಾಧ್ಯವಾಗದಿದ್ದರೆ, ಅದರ ಫಲಾಪೇಕ್ಷೆ ಮಾಡಬಾರದು; ಇಂದು ನಮ್ಮ ಮಾನಸಿಕತೆ ಹೇಗಾಗಿದೆಯೆಂದರೆ, ನಮಗೆ ಫಲಾಪೇಕ್ಷೆ ಇದೆ; ಆದರೆ ಅದಕ್ಕಾಗಿ ಏನು ಹೇಳಲಾಗಿದೆಯೋ, ಅದನ್ನು ಮಾಡಲು ಇಷ್ಟವಿಲ್ಲ. ಸಾಮಾನ್ಯ ವ್ಯವಹಾರದಲ್ಲಿಯೂ ಹೀಗೆ ನಡೆಯುವುದಿಲ್ಲ. ಧರ್ಮಶಾಸ್ತ್ರ ಹೇಳುತ್ತದೆ, `ಪ್ರತಿಯೊಬ್ಬರೂ ತಮ್ಮ `ವಿಹಿತ ಕರ್ಮ’ವನ್ನು ಯೋಗ್ಯ ಪದ್ಧತಿಯಲ್ಲಿ ಮಾಡಬೇಕು, ಇದುವೇ ಅವನ ಧರ್ಮವಾಗಿದೆ.’

೨. ವಿಹಿತ ಕರ್ಮವೇ ಕಿರುಕುಳವೆನಿಸುತ್ತಿದ್ದರೆ ತನ್ನ ಮಾನಸಿಕತೆಯನ್ನು ಪರಿಶೀಲಿಸಬೇಕು !

ತಯಾ ಸರ್ವಾತ್ಮಕಾ ಈಶ್ವರಾ | ಸ್ವಕರ್ಮಕುಸುಮಾಂಚೀ ವೀರಾ |
ಪೂಜಾ ಕೆಲೀ ಹೋಯ ಅಪಾರಾ | ತೋಷಾಲಾಗೀಂ ||

– ಜ್ಞಾನೇಶ್ವರೀ, ಅಧ್ಯಾಯ ೧೮, ದ್ವಿಪದಿ ೯೧೭ (ಮರಾಠಿ)

ಅರ್ಥ : ಹೇ ವೀರ ಅರ್ಜುನಾ, ಆ ಸರ್ವವ್ಯಾಪಿ ಈಶ್ವರನಿಗೆ ಸ್ವಕರ್ಮರೂಪಿ ಹೂವಿನ ಪೂಜೆ ಮಾಡಿದರೆ, ಆ ಪೂಜೆಯಿಂದ ಅವನಿಗೆ ಅಪಾರ ಸಂತೋಷವಾಗುತ್ತದೆ. ಈಗ ನಮ್ಮ ವಿಹಿತ ಕರ್ಮವೇ ಕಿರುಕುಳವೆಂದು ಹಾಗೂ ಕರ್ಮಕಾಂಡವಾಗಿದೆ ಎಂದು ಅನಿಸಿದರೆ, ನಾವು ನಮ್ಮ ಮಾನಸಿಕತೆಯನ್ನು ಪರಿಶೀಲಿಸಿಕೊಳ್ಳಬೇಕು. ಪ್ರತಿಯೊಬ್ಬರ ವಿಹಿತ ಕರ್ಮ ದೇಶ-ಕಾಲ-ಪರಿಸ್ಥಿತಿ, ಅಧಿಕಾರ ಮತ್ತು ಕ್ಷಮತೆಗನುಸಾರ ವಿಭಿನ್ನವಾಗಿರುತ್ತದೆ. ಅದನ್ನು ಸಂತವಾಙ್ಮಯದ ಅಭ್ಯಾಸದಿಂದ ನಿರ್ಧರಿಸಬೇಕು ಅಥವಾ ಜ್ಞಾನಿಗಳು ಅಥವಾ ಸದ್ಗುರುಗಳಿಂದ ತಿಳಿದುಕೊಳ್ಳಬೇಕು.

೩. ಇಂದಿನ ಒತ್ತಡಮಯ ಜೀವನದಲ್ಲಿಯೂ ಧರ್ಮವು ಕರ್ಮಕಾಂಡದ ವಿಷಯದಲ್ಲಿ ಸುಲಭಸಾಧ್ಯವಾದ ನಿಯಮಗಳನ್ನು ಹೇಳಿರುವುದು

ನಮ್ಮ ಧಾವಂತದ ಜೀವನವನ್ನು ನಾವು ವಿಪರೀತ ಭಾವನೆಗೊಳಪಡಿಸಿದ್ದೇವೆ. ವಾಸ್ತವಿಕವೆಂದರೆ ಮಾನವ ತನ್ನ ಜೀವನದಲ್ಲಿ ಕಾರ್ಯಮಗ್ನನಾಗಿರಲೇ ಬೇಕು. ನಿರುದ್ಯೋಗಿಯಾಗಿರುವುದು ಯೋಗ್ಯವಲ್ಲ. ಇಂದಿನ ಓಡಾಟವನ್ನು ಬಹುಶಃ ಅಸಹಾಯಕತೆಯಿಂದ ಮಾಡಲಾಗುತ್ತದೆ. ಅದನ್ನು ಕೂಡ ಒಂದು ಕರ್ಮಕಾಂಡವೆಂದೇ ಹೇಳಬೇಕಾಗುತ್ತದೆ. ನಮ್ಮ ಅವಶ್ಯಕತೆಗಳನ್ನು ಸ್ವಲ್ಪ ಕಡಿಮೆ ಮಾಡಿದರೆ ಮತ್ತು ಅಚರಣೆಯಲ್ಲಿ ಸ್ವಲ್ಪ ತಾಳ್ಮೆ ವಹಿಸಿದರೆ ಒತ್ತಡವನ್ನು ಸ್ವಲ್ಪ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಅಂದರೆ ಯಾರ ದಿನಚರಿ ನಿಜವಾಗಿಯೂ (ಪ್ರಾಮಾಣಿಕವಾಗಿ) ಅತ್ಯಂತ ಧಾವಂತದ್ದಾಗಿದೆಯೋ, ಅವನಿಗೂ ಧರ್ಮಶಾಸ್ತ್ರ ಸೌಲಭ್ಯಗಳನ್ನು ಮಾಡಿಕೊಟ್ಟಿದೆ. ಧರ್ಮದಲ್ಲಿನ ಯಾವುದೇ ಕರ್ಮದ ವಿಚಾರ ಮಾಡಿದರೂ, ಆ ಕರ್ಮದ ಆಚಾರವನ್ನು ಕರ್ಮಕಾಂಡ ಹೇಳಿರುತ್ತದೆ, ಅದನ್ನು ಅತ್ಯಂತ ಸುಲಭ ಹಾಗೂ ಸಾಂದ್ರತೆಯಿಂದ ಹೇಗೆ ಮಾಡಬೇಕು, ಎಂಬುದನ್ನೂ ಹೇಳಿರುತ್ತದೆ. ವಿಶೇಷವೆಂದರೆ ಅಡಚಣೆಯ ಸಮಯದಲ್ಲಿ ಆಪದ್ಧರ್ಮವನ್ನೂ ಹೇಳಲಾಗಿದೆ. ಆದರೆ ಆಪತ್ತು ಇಲ್ಲದಿರುವಾಗ ಆಪದ್ಧರ್ಮವನ್ನು ಉಪಯೋಗಿಸಬಾರದು.’

– ಪ.ಪೂ. ಸ್ವಾಮಿ ವರದಾನಂದ ಭಾರತಿ (೧೯೯೮) (ಆಧಾರ : ಗ್ರಂಥ `ಜಿಜ್ಞಾಸಾ’, ಶ್ರೀವರದಾನಂದ ಪ್ರತಿಷ್ಠಾನ, ಶ್ರೀ ಕ್ಷೇತ್ರ ಪಂಢರಪುರ)