`ನಾವು ಪರಾತ್ಪರ ಗುರು ಡಾ. ಆಠವಲೆಯವರಿಗೆ ನಮ್ಮ ಕೊನೆಯ ಶ್ವಾಸವಿರುವ ವರೆಗೆ ಕೃತಜ್ಞರಾಗಿರಬೇಕು !’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

`ಕೃತಜ್ಞತೆ’ಯು ಶಬ್ದಗಳ ಆಚೆಗಿರುವುದರಿಂದ ಸಾಧನೆಯಲ್ಲಿ ಕೃತಜ್ಞತೆಗೆ ಬಹಳ ಮಹತ್ವವಿದೆ !

ಪ.ಪೂ.ಭಕ್ತರಾಜ ಮಹಾರಾಜರ ಚರಣಗಳಿಗೆ ಕೃತಜ್ಞತಾ ಭಾವದಿಂದ ಪ್ರಾರ್ಥನೆ ಮಾಡುತ್ತಿರುವ ಶಿಷ್ಯ ಡಾ. ಆಠವಲೆ

`ಒಮ್ಮೆ ನಾವು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿರುವ ಗುರುಸೇವೆಯ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದೆವು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಮುಂದಿನ ವಿಷಯ ಹೇಳಿದರು.

`ಸಂತ ಭಕ್ತರಾಜ ಮಹಾರಾಜರ ದೇಹತ್ಯಾಗದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಗುರುತತ್ತ್ವವನ್ನು ಅರಿತುಕೊಂಡು (ಗುರುತತ್ತ್ವದ ಅನುಸಂಧಾನದಲ್ಲಿದ್ದು) ವ್ಯಾಪಕ ಕಾರ್ಯವನ್ನು ಮಾಡಿದರು. ಪ್ರತ್ಯಕ್ಷದಲ್ಲಿ ಅವರಿಗೆ ಅವರ ಗುರುಗಳ ಒಡನಾಟ ಅತ್ಯಲ್ಪ ಕಾಲ ಲಭಿಸಿತು. ಅದರ ತುಲನೆಯಲ್ಲಿ ನಮ್ಮೆಲ್ಲರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಒಡನಾಟ ಬಹಳಷ್ಟು ಸಿಕ್ಕಿದೆ ಮತ್ತು ನಮಗೆ ಎಷ್ಟೋ ವಿಷಯಗಳು ಕಲಿಯಲೂ ಸಿಗುತ್ತಿವೆ. ಹಾಗಾಗಿ ನಾವೆಲ್ಲ ಸಾಧಕರು ಬಹಳ ಭಾಗ್ಯವಂತರಾಗಿದ್ದೇವೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

ಪರಾತ್ಪರ ಗುರು ಡಾ. ಆಠವಲೆ ಯವರು ಅಪಾರ ಪರಿಶ್ರಮಪಟ್ಟು ತಮ್ಮ ಶರೀರದ ಪರಿವೆ ಇಲ್ಲದೇ ಸಾಧಕರಿಗಾಗಿ ಎಲ್ಲವನ್ನೂ ಮಾಡಿದ್ದಾರೆ. ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನದ ಆಶ್ರಮಗಳನ್ನು ನಿರ್ಮಿಸಿದರು. ಎಲ್ಲ ಸಾಧಕರನ್ನು ಸಿದ್ಧಗೊಳಿಸಿದರು. ಅವರು ತೆಗೆದುಕೊಂಡ ಪರಿಶ್ರಮದಿಂದಲೇ ಇಂದು `ಸನಾತನ’ ಹೆಸರಿನ ಬೀಜವು ವಟವೃಕ್ಷದ ರೂಪವನ್ನು ಧರಿಸಿದೆ. ಇಂದು ನಾವು ಈ ವೃಕ್ಷದ ಫಲಗಳನ್ನು ಆನಂದದಿಂದ ಸೇವಿಸುತ್ತಿದ್ದೇವೆ. ನಮ್ಮ ಕೊನೆಯ ಶ್ವಾಸ ಇರುವವರೆಗೆ ನಾವು ಗುರುಗಳ ಚರಣಗಳಲ್ಲಿ ಕೃತಜ್ಞತೆಯಿಂದ ಇರಬೇಕು. ನಾವೆಲ್ಲ ಸಾಧಕರು ಇಷ್ಟೇ ಮಾಡಬಹುದು’.

`ಶಬ್ದಗಳ ಅಸ್ತಿತ್ವ ಮುಗಿಯುವುದೆಂದರೆ `ಕೃತಜ್ಞತೆ.’ ನಾವು ಭಾವವನ್ನು ಶಬ್ದಗಳಲ್ಲಿ ಮಂಡಿಸಬಹುದು, ನಾವು ಅದನ್ನು ವ್ಯಕ್ತಪಡಿಸಬಹುದು; ಆದರೆ ಕೃತಜ್ಞತೆಯು ಶಬ್ದಗಳ ಆಚೆಗಿರುವುದರಿಂದ ಅದು ಭಾವಕ್ಕಿಂತಲೂ ಮೇಲಿನದ್ದಾಗಿದೆ. ಶಬ್ದಗಳ ಆಚೆಗಿನ ಕೃತಜ್ಞತೆಯ ವಿಶ್ವವು ನಮ್ಮನ್ನು ದೇವರ ತನಕ ಕರೆದೊಯ್ಯು ತ್ತದೆ. ಶಬ್ದಗಳ ಆಚೆಗಿರುವ ವಿಶ್ವವು ನಿರಾಕಾರವಾಗಿರುತ್ತದೆ. ಈಶ್ವರನೂ ನಿರಾಕಾರನಾಗಿದ್ದಾನೆ. ಆದ್ದರಿಂದ ಸಾಧನೆಯಲ್ಲಿ ಕೃತಜ್ಞತೆಗೆ ಬಹಳ ಮಹತ್ವವಿದೆ

– ಶ್ರೀ. ವಿನಾಯಕ ಶಾನಭಾಗ

ಕೃತಜ್ಞತೆಯನ್ನು ಏಕೆ ವ್ಯಕ್ತಪಡಿಸಬೇಕು ?

೧. ಪ್ರತಿಯೊಂದು ಕ್ಷಣ ದೇವರು ಏನು ಕೊಡುತ್ತಾನೆಯೋ, ಅಮೂಲ್ಯ ವಿಚಾರವನ್ನು ಸೂಚಿಸುತ್ತಾನೆಯೋ, ಅವನ ನಾಮ ಮತ್ತು ಅನುಸಂಧಾನದ ನೆನಪು ಮಾಡಿಕೊಡುತ್ತಾನೆ ಹಾಗೂ ಅವನ ಅಸ್ತಿತ್ವದ ಅನುಭೂತಿ ನೀಡುತ್ತಾನೆಯೋ. ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೨. ದೇವರು ಕೇವಲ ಕೊಡುತ್ತಲೇ ಇರುತ್ತಾನೆ; ಆದರೆ ನಮಗೆ ಅದರ ಅರಿವೂ ಇರುವುದಿಲ್ಲ. `ದೇವರು ನನಗೆ ಕೊಟ್ಟಿದ್ದಾನೆ’, ಎಂದು ನನ್ನ ಮನಸ್ಸಿಗೆ ಸತತವಾಗಿ ಅರಿವಾಗಬೇಕು. ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

– ಸೌ. ಅನುಶ್ರೀ ಸಾಳುಂಕೆ (೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ.