ಓಟಾವಾ (ಕೆನಡಾ) – ಕೆನಡಾದಲ್ಲಿನ ಎಡಮಂಟನ್ ಇಲ್ಲಿ ಖಲಿಸ್ತಾನಿಗಳು ಸ್ವಾಮಿ ನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡುವುದರ ಜೊತೆಗೆ ದೇವಸ್ಥಾನದ ಗೋಡೆಗಳ ಮೇಲೆ ಚಿತ್ರಗಳು ಬರೆದು ಅದನ್ನು ಹಾಳುಮಾಡಿದ್ದಾರೆ. ಈ ಘಟನೆ ಜುಲೈ ೨೨ ರಂದು ನಡೆದಿದೆ. ಕೆನಡಾದಲ್ಲಿನ ವಿಶ್ವ ಹಿಂದೂ ಪರಿಷತ್ತಿನ ‘ಎಕ್ಸ್’ ಖಾತೆಯಿಂದ ಈ ಮಾಹಿತಿ ನೀಡಲಾಗಿದೆ. ಈ ಘಟನೆಯನ್ನು ಖಂಡಿಸುತ್ತಾ ಕೆನಡಾ ಸರಕಾರದ ಬಳಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ತು ಆಗ್ರಹಿಸಿದೆ. ಖಲಿಸ್ತಾನಿಗಳು ಕೆನಡಾದಲ್ಲಿ ಈ ಹಿಂದೆ ಅನೇಕ ದೇವಸ್ಥಾನಗಳನ್ನು ಗುರಿ ಮಾಡಿದ್ದರು.
೧. ಕಳೆದ ವರ್ಷ ಕೆನಡಾದಲ್ಲಿನ ಮಿಸಿಸೋಂಗಾ ಇಲ್ಲಿಯ ಶ್ರೀರಾಮ ಮಂದಿರವನ್ನು ಧ್ವಂಸಗೊಳಿಸಿ ಅದರಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದಿರುವ ಘಟನೆ ನಡೆದಿತ್ತು. ಈ ಘಟನೆಯ ನಂತರ ಟೊರೆಂಟೊ ಇಲ್ಲಿಯ ಭಾರತದ ವಾಣಿಜ್ಯ ರಾಯಭಾರಿ ಕಚೇರಿಯು ಖಂಡಿಸಿತ್ತು. ಹಾಗೂ ರಾಯಭಾರಿ ಕಚೇರಿಯಿಂದ ಈ ಘಟನೆಯಲ್ಲಿನ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಲಾಗಿತ್ತು.
೨. ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಟೊರೆಂಟೊದ ಸ್ವಾಮಿನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡಲಾಗಿತ್ತು.
೩. ಈ ವರ್ಷ ಜನವರಿಯಲ್ಲಿ ಬ್ರಮ್ಪ್ಟ್ ನ್ ಇಲ್ಲಿಯ ಒಂದು ದೇವಸ್ಥಾನದ ವಿಡಂಬನೆ ಮಾಡಲಾಗಿತ್ತು. ಈ ದೇವಸ್ಥಾನದ ಗೋಡೆಯ ಮೇಲೆ ಭಾರತದ ವಿರುದ್ಧ ಘೋಷಣೆಗಳನ್ನು ಬರೆಯಲಾಗಿತ್ತು.
Khalistanis vandalize BAPS Swaminarayan Mandir in Edmonton, Canada !
During the last few years, many Hindu temples have been vandalized with hateful graffiti in Canada.
What ji#@adi terrorists don’t do abroad, Khalistanis are doing.
The Indian Government should make efforts to… pic.twitter.com/DVGrXC05ac
— Sanatan Prabhat (@SanatanPrabhat) July 23, 2024
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕರು ಯಾವುದು ವಿದೇಶದಲ್ಲಿ ಮಾಡುವುದಿಲ್ಲ, ಅದನ್ನು ಖಾಲಿಸ್ತಾನಿಗಳು ಮಾಡುತ್ತಿದ್ದಾರೆ. ಇಂತಹವರ ಮೇಲೆ ಅಂಕುಶವಿಡಲು ಭಾರತ ಸರಕಾರವೆ ಪ್ರಯತ್ನ ಮಾಡಬೇಕು ! |