ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಜಿಹಾದಿ ಭಯೋತ್ಪಾದಕರ ದಾಳಿಯಲ್ಲಿ ೯ ಸೈನಿಕರು ವೀರಮರಣವನ್ನಪ್ಪಿದರು. ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದ ಜಮ್ಮು- ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹೆಚ್ಚು ಸಕ್ರಿಯರಾಗಿದ್ದಾರೆ.
ಈ ಮೂಲಕ ಅವರು ಮೋದಿ ಸರಕಾರಕ್ಕೆ ಸವಾಲೊಡ್ಡುತ್ತಿದ್ದಾರೆ. ಸರಿಸುಮಾರು ೧ ತಿಂಗಳು ಕಳೆದ ನಂತರ ಜಿಹಾದಿ ಭಯೋತ್ಪಾದಕರು ಮೇಲುಗೈ ಸಾಧಿಸಿದ್ದಾರೆ ಎಂದು ಕಳೆದ ಕೆಲವು ದಿನಗಳ ಘಟನೆಗಳಿಂದ ಗಮನಕ್ಕೆ ಬರುತ್ತಿದೆ. ‘ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ಹಿಂದಿನ ತುಲನೆಯಲ್ಲಿ ಕಡಿಮೆಯಾಗಿದೆ’, ಎಂದು ಭಾಜಪ ಸರಕಾರ ಹೇಳುತ್ತಿದೆ. ಕಾಂಗ್ರೆಸ್ ಸರಕಾರದ ಕಾಲಕ್ಕೆ ಹೋಲಿಸಿದರೆ ಇದು ಸ್ವಲ್ಪ ಮಟ್ಟಿಗೆ ನಿಜವಾಗಿದ್ದರೂ, ಅದು ಆದರ್ಶವಲ್ಲ ಎಂಬುದನ್ನು ಗಮನದಲ್ಲಿಡಬೇಕು. ಈ ೧೦ ವರ್ಷಗಳಲ್ಲಿ ಜಿಹಾದಿ ಭಯೋತ್ಪಾದಕರನ್ನು ಪೂರ್ತಿ ನಾಶ ಮಾಡಬೇಕಿತ್ತು, ಆದರೆ ಹೀಗಾಗದೇ ಹೊಸ ಭಯೋತ್ಪಾದಕರು ಬರುತ್ತಾರೆ ಮತ್ತು ಭಾರತೀಯ ಸೇನೆಯನ್ನು, ಹಿಂದೂಗಳನ್ನು ಗುರಿಯಾಗಿಸುವುದು ಮುಂದುವರೆದಿದೆ. ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ನಾಶವಾಗದಿರುವ ಹಿಂದೆ, ಸ್ಥಳೀಯ ಮುಸಲ್ಮಾನ ಜನತೆಯಿಂದ ಭಯೋತ್ಪಾದಕರಿಗಿರುವ ಗುಪ್ತ ಬೆಂಬಲವು ಕಾರಣವಾಗಿದೆ, ಹಾಗೆಯೇ ಭಯೋತ್ಪಾದಕರು ಜನರಿಗೆ ಭಯ ತೋರಿಸಿ ಅವರಿಗೆ ಸಹಾಯ ಮಾಡುವಂತೆ ಒತ್ತಾಯಿಸುವುದೂ ಕಂಡು ಬರುತ್ತದೆ. ‘ಭಯೋತ್ಪಾದನೆಗೆ ಧರ್ಮ ಇರುವುದಿಲ್ಲ’, ಎಂದು ಯಾರು ಎಷ್ಟೇ ಕೂಗಾಡಿದರೂ ಅದು ನಿಜವಲ್ಲ. ‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ ಮತ್ತು ಕಾಶ್ಮೀರದಲ್ಲಿ ಇದೇ ಧರ್ಮಪ್ರೇಮದಿಂದಾಗಿ ಜಿಹಾದಿ ಭಯೋತ್ಪಾದನೆ ಇಂದಿಗೂ ಸಕ್ರಿಯವಾಗಿದೆ ಮತ್ತು ಅದು ಹಿಂದೂ ಆಗಿರುವ ಭಾರತೀಯ ಸೇನೆಯನ್ನು, ಸರಕಾರ ಮತ್ತು ಭಾರತ ದೇಶವನ್ನು ಗುರಿಯಾಗಿಸುತ್ತಿದ್ದಾರೆ’, ಈ ಸತ್ಯವನ್ನು ಸ್ವೀಕರಿಸುವುದು ಆವಶ್ಯಕವಾಗಿದೆ. ಅದನ್ನು ಸ್ವೀಕರಿಸಿದರೆ ಆ ಸ್ತರಕ್ಕೆ ಹೋಗಿ ಕ್ರಮಗಳನ್ನು ಕೈಗೊಳ್ಳಬಹುದು; ಆದರೆ ಭಾರತ ಅದನ್ನು ಸ್ವೀಕರಿಸದ ಕಾರಣ ಈ ಭಯೋತ್ಪಾದನೆಯನ್ನು ನಾಶ ಮಾಡುವ ಪ್ರಯತ್ನಗಳು ವಿಫಲವಾಗುತ್ತಿವೆ.
ಆಡಳಿತಗಾರರಲ್ಲಿ ಇಚ್ಛಾಶಕ್ತಿಯ ಕೊರತೆ !
ಸದ್ಯ ಜಿಹಾದಿ ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿನ ಗುಹೆಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ಮತ್ತು ನಂತರ ಹೊರಗೆ ಬಂದು ಕೃತ್ಯಗಳನ್ನು ಎಸಗುತ್ತಾರೆಂಬ ಮಾಹಿತಿ ಸಿಕ್ಕಿದ ನಂತರ ಸರಕಾರದ ಆದೇಶದ ನಂತರ ಈಗ ಭಾರತೀಯ ಸೇನೆಯು ಈ ಗುಹೆಗಳನ್ನು ನಾಶ ಮಾಡುವ ಅಭಿಯಾನವನ್ನು ಆರಂಭಿಸಲಿದೆ. ಕಾಶ್ಮೀರದ ಈ ಗುಹೆಗಳು ಪ್ರಾಚೀನ ನೈಸರ್ಗಿಕ ಸಂಪತ್ತಾಗಿವೆ; ಆದರೆ ಅವುಗಳನ್ನು ಭಯೋತ್ಪಾದನೆಯಿಂದಾಗಿ ನಾಶ ಮಾಡಬೇಕಾಗಿರುವುದು ದುರದೃಷ್ಟಕರ. ಮೂಲದಲ್ಲಿ ಇದೆಲ್ಲವೂ ಮೇಲುಮೇಲಿನ ಉಪಾಯವಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಾಶ ಮಾಡಲು ಎಲ್ಲ ಸ್ತರಗಳಲ್ಲಿ ಸಮರೋಪಾದಿಯಲ್ಲಿ ಪ್ರಯತ್ನವಾಗಬೇಕಿತ್ತು. ಆದರೆ ಹೀಗಾಗಿರುವುದು ಕಂಡು ಬಂದಿಲ್ಲ.
ಅನೇಕ ಬಾರಿ ಸೇನೆ ಅಥವಾ ಪೊಲೀಸರು, ‘ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಂತಿಷ್ಟು ಭಯೋತ್ಪಾದಕರು ಕಾಶ್ಮೀರದಲ್ಲಿ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ’, ಎಂದು ಹೇಳುತ್ತಾರೆ. ಅನಂತರ ಸೇನೆ ಮತ್ತು ಪೊಲೀಸರು ಭಯೋತ್ಪಾದಕರು ಪ್ರವೇಶಿಸಬಾರದೆಂದು; ಜಾಗರೂಕತೆಯಿಂದ ಕಾವಲು ಕಾಯುತ್ತಾರೆ; ಆದರೆ ಭಯೋತ್ಪಾದಕರು ಎಂದಿನಂತೆ ಕಾಶ್ಮೀರದೊಳಗೆ ನುಸುಳುತ್ತಾರೆ ಮತ್ತು ಕೃತ್ಯವೆಸಗುತ್ತಾರೆ. ಸೇನೆ ಮತ್ತು ಪೊಲೀಸರು ನಂತರ ಅವರನ್ನು ಹುಡುಕಿ ತೆಗೆಯುತ್ತಾರೆ ಮತ್ತು ಕೊಲ್ಲುತ್ತಾರೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ‘ಯಾವಾಗ ಭಯೋತ್ಪಾದಕರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಲು ‘ಲಾಂಚ್ ಪ್ಯಾಡ್’ನಲ್ಲಿ ಸೇರುವರೋ, ಆಗಲೇ ಅವರ ಮೇಲೇಕೆ ದಾಳಿ ಮಾಡುವುದಿಲ್ಲ ?’, ಎಂಬ ಪ್ರಶ್ನೆ ಮೂಡುತ್ತದೆ. ಉರಿಯ ಸೇನಾ ನೆಲೆಯ ಮೇಲಿನ ದಾಳಿಯ ನಂತರ ‘ಭಾರತವು ‘ಸರ್ಜಿಕಲ್ ಸ್ಟ್ರೈಕ್’, ಮಾಡುವ ಮೂಲಕ ಇದೇ ಕೃತಿಯನ್ನು ಮಾಡಿತ್ತು. ಭಯೋತ್ಪಾದಕರ ‘ಲಾಂಚ್ ಪ್ಯಾಡ್’ಗೆ ಹೋಗಿ ಅವರನ್ನು ಕೊಂದು ಹಾಕಿತ್ತು. ಪುಲ್ವಾಮಾ ದಾಳಿಯ ನಂತರ, ವಾಯುಪಡೆಯು ಭಯೋತ್ಪಾದಕರಿಗೆ ತರಬೇತಿಯನ್ನು ನೀಡುವ ಪಾಕ್ ಆಕ್ರಮಿತ ಕಾಶ್ಮೀರದ ಬಹಾವಲ್‌ಪುರದ ಕೇಂದ್ರದ ಮೇಲೆ ದಾಳಿ ನಡೆಸಿ ಭಯೋತ್ಪಾದಕರನ್ನು ಕೊಂದು ಹಾಕಿತ್ತು. ಇವೆರಡೂ ಘಟನೆಗಳನ್ನು ಭಾರತವು ಪೆಟ್ಟು ತಿಂದ ನಂತರ ಮಾಡಿತು. ‘ಆ ಪೆಟ್ಟನ್ನು ತಿನ್ನುವ ಮೊದಲೆ ಏಕೆ ಮಾಡಲಿಲ್ಲ ಮತ್ತು ಅನಂತರವೂ ಇಂದಿನವರೆಗೆ ನಾವು ಪಾಕ್‌ನೊಳಗೆ ನುಗ್ಗಿ ಕಾರ್ಯಾಚರಣೆ ಏಕೆ ನಡೆಸುತ್ತಿಲ್ಲ ?’, ಎಂಬ ಪ್ರಶ್ನೆ ಮೂಡುತ್ತದೆ. ಪಾಕಿಸ್ತಾನವು ಕಳೆದ ೩ ದಶಕಗಳಿಂದ ಭಯೋತ್ಪಾದಕರನ್ನು ತಯಾರಿಸುತ್ತಿದೆ ಮತ್ತು ಕಾಶ್ಮೀರಕ್ಕೆ ಕಳುಹಿಸುತ್ತದೆ. ಅಂದರೆ ಭಯೋತ್ಪಾದನೆಯ ಉತ್ಪತ್ತಿಯ ಸ್ಥಾನ ಎಲ್ಲಿದೆ ಎಂದು ಭಾರತಕ್ಕೆ ಗೊತ್ತಿದೆ, ಹಾಗಾದರೆ ಇದೇ ಕೇಂದ್ರ ಸ್ಥಾನದ ಮೇಲೆ ಭಾರತ ಏಕೆ ದಾಳಿ ಮಾಡಿಲ್ಲ ? ಒಂದು ವೇಳೆ ಭಾರತದ ಸ್ಥಾನದಲ್ಲಿ ಇಸ್ರೈಲ್ ಇದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಎಲ್ಲ ಭಯೋತ್ಪಾದಕರ ನೆಲೆಗಳು ಈಗಾಗಲೆ ನಾಶವಾಗಿ ಆ ಪ್ರದೇಶ ಪುನಃ ಭಾರತದಲ್ಲಿ ಜೋಡಿಸಲ್ಪಡುತ್ತಿದ್ದವು; ಆದರೆ ಭಾರತಕ್ಕೆ ಇಂದಿಗೂ ಆ ರೀತಿ ಮಾಡಲು ಆಗಲಿಲ್ಲ, ಇದು ನಾಚಿಕೆಗೇಡಿನ ವಿಷಯವಾಗಿದೆ. ಇದರಿಂದ ಸಾವಿರಾರು ಭಾರತೀಯ ಸೈನಿಕರು ಹುತಾತ್ಮರಾಗಬೇಕಾಗುತ್ತಿದೆ ಮತ್ತು ಇದೇ ಸ್ಥಿತಿ ಮುಂದುವರಿಯಲಿದೆ ಎಂಬಂತಹ ಚಿತ್ರಣವಿದೆ. ಯಾವುದೇ ಭಯೋತ್ಪಾದನಾ ದಾಳಿಯಾದ ನಂತರ ರಕ್ಷಣಾಸಚಿವರು, ಗೃಹಸಚಿವರು ಮುಂತಾದವರು ಸಭೆಗಳನ್ನು ನಡೆಸುವ ಔಪಚಾರಿಕತೆಯನ್ನು ತೋರಿಸುತ್ತಾರೆ ಮತ್ತು ನಂತರ ಅದರತ್ತ ದುರ್ಲಕ್ಷಿಸಲಾಗುತ್ತದೆ, ಇದೇ ರೀತಿ ಮುಂದುವರೆದಿದೆ. ‘ಯಾವುದೇ ವಿಷಯಕ್ಕೆ ಶಾಶ್ವತ ಪರಿಹಾರವೇ ಇಲ್ಲ’, ಎಂಬಂತಹ ಮನಸ್ಥಿತಿ ಭಾರತೀಯ ಆಡಳಿತಗಾರರದ್ದಾಗಿದೆ. ಇದೇ ಕಂಡು ಬರುತ್ತಿರುತ್ತದೆ. ಇಸ್ರೈಲ್ ಹಮಾಸ್ ನ್ನು ನಾಶ ಮಾಡಲು ಗಾಝಾ ಪಟ್ಟಿಯನ್ನು ಧ್ವಂಸ ಮಾಡಿದೆ. ಪಾಕಿಸ್ತಾನವು ಸದ್ಯ ದಿವಾಳಿತನದ ಅಂಚಿನಲ್ಲಿದೆ. ಅವರ ಸೇನೆಯ ಬಳಿ ಯುದ್ಧ ಮಾಡಲು ಮದ್ದುಗುಂಡುಗಳಿಲ್ಲ ಅಲ್ಲದೇ ವಾಹನಗಳಲ್ಲಿ ತುಂಬಲು ಇಂಧನವೂ ಇಲ್ಲ. ಇಂತಹ ಪಾಕ್ನ್ನು ಹೊಸಕಿಹಾಕಲು ಭಾರತಕ್ಕೆ ಎಷ್ಟು ಸಮಯ ಬೇಕು ? ಆದರೆ ಭಾರತೀಯ ಆಡಳಿತಗಾರರ ಬಳಿ ಇಚ್ಛಾಶಕ್ತಿಯೇ ಇಲ್ಲ, ಎಂಬುದು ಕಂಡು ಬರುತ್ತದೆ. ಭಾರತೀಯ ಆಡಳಿತಗಾರರು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತಮ್ಮ ಇಚ್ಛಾಶಕ್ತಿ ಇಲ್ಲದ ಮಾನಸಿಕತೆಯನ್ನು ಮರೆಮಾಚುತ್ತಿರುವುದು, ಗಮನಕ್ಕೆ ಬರುತ್ತದೆ.
ಹಿಂದೂಗಳ ಒತ್ತಡ ಬೇಕು !
ಕಾಶ್ಮೀರದಲ್ಲಿ ಮುಷ್ಠಿಯಷ್ಟು ಭಯೋತ್ಪಾದಕರು ಬರುತ್ತಾರೆ ಮತ್ತು ಕೃತ್ಯವೆಸಗುತ್ತಾರೆ. ಅವರಿಂದ ಕಳೆದ ಮೂರು ದಶಕಗಳಿಂದ ಕಾಶ್ಮೀರ ಅಶಾಂತವಿದೆ. ನಾಲ್ಕೂವರೆ ಲಕ್ಷ ಹಿಂದೂಗಳು ನಿರಾಶ್ರಿತರಾಗಿದ್ದಾರೆ. ಅವರು ಇಂದಿಗೂ ತಮ್ಮ ಮೂಲ ಸ್ಥಳಕ್ಕೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ ಮತ್ತು ಮುಂದೆ ಯಾವಾಗ ಹಿಂದಿರುಗುವರು, ಎಂಬ ಯಾವುದೇ ಲಕ್ಷಣ ಸದ್ಯ ಕಂಡು ಬರುತ್ತಿಲ್ಲ. ಇದು ಭಾರತೀಯ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಸ್ಥಿತಿಯನ್ನು ಬದಲಾಯಿಸಲು ಯಾವುದೇ ಆಡಳಿತಗಾರರು ಗಮನವಿಟ್ಟು ಆಯೋಜನೆ ರಚಿಸಿಲ್ಲ ಅಥವಾ ಅದಕ್ಕಾಗಿ ಸಮರೋಪಾದಿಯಲ್ಲಿ ಪ್ರಯತ್ನಿಸಿಲ್ಲ, ಇದು ಕಾಶ್ಮೀರಿ ಹಿಂದೂಗಳಷ್ಟೇ ಅಲ್ಲ, ಆದರೆ ಎಲ್ಲ ದೇಶಪ್ರೇಮಿ ಭಾರತೀಯರಿಗೆ ಖೇದದ ಸಂಗತಿಯಾಗಿದೆ. ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದನಾ ಕಾರ್ಯಾಚರಣೆ ಬೇಗನೆ ನಿಲ್ಲುವುದು ಎಂದು ಅನಿಸುವುದಿಲ್ಲ, ಏಕೆಂದರೆ ಮೋದಿಯವರು ಪುನಃ ಪ್ರಧಾನಿ ಯಾದುದರಿಂದ ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ದಾಳಿಗಳನ್ನು ಹೆಚ್ಚಿಸಿದೆ. ಇದನ್ನು ಗಮನದಲ್ಲಿಟ್ಟಾದರೂ ಮೋದಿ ಸರಕಾರವು ಭಯೋತ್ಪಾದಕರ ಮೇಲೆ ಕಠಿಣ ಕ್ರಮಕೈಗೊಂಡು ಪ್ರತ್ಯುತ್ತರ ನೀಡಲು ಪ್ರಯತ್ನಿಸಬೇಕಿತ್ತು, ಇದು ಕಳೆದ ತಿಂಗಳಾದ್ಯಂತ ಕಂಡು ಬಂದಿಲ್ಲ. ಇದರಿಂದ ಸರಕಾರದ ಮಾನಸಿಕತೆ ಕಂಡು ಬರುತ್ತದೆ ಮತ್ತು ಮುಂದೆ ಏನಾಗಲಿದೆ ಎಂಬುದೂ ಸ್ಪಷ್ಟವಾಗುತ್ತದೆ. ಆದುದರಿಂದ ಕಾಶ್ಮೀರ ಅಶಾಂತವಿದೆ ಮತ್ತು ಮುಂದೆ ಸಹ ಅಶಾಂತವೇ ಇರಲಿದೆ, ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಈ ಸ್ಥಿತಿಯನ್ನು ಹೇಗೆ ಬದಲಾಯಿಸುವುದು ? ಇದಕ್ಕೇನು ಪರಿಹಾರ ಮಾಡಬೇಕು ? ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕಾಗಿ ಭಾರತೀಯ ಜನತೆಯು ವಿಶೇಷವಾಗಿ ಹಿಂದೂಗಳು ಸರಕಾರದ ಮೇಲೆ ಒತ್ತಡ ತಂದು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಬೇರುಸಹಿತ ನಾಶ ಮಾಡಲು ಬಾಧ್ಯ ಮಾಡಬೇಕು. ಪೆಟ್ಟು ತಿಂದ ಮೇಲಲ್ಲ, ಆದರೆ ಪೆಟ್ಟು ಕೊಡುವವರನ್ನು ನಾಶ ಮಾಡಲು ಕೃತಿ ಮಾಡಬೇಕು, ಇದಕ್ಕಾಗಿ ಜನತೆಯು ರಸ್ತೆಗೆ ಇಳಿಯಬೇಕು. ದುರದೃಷ್ಟವಶಾತ್ ಈ ರೀತಿ ಮಾಡಲು ಭಾರತೀಯರು ಅಂದರೆ ಹಿಂದೂಗಳು ಸಂಘಟಿತರಿಲ್ಲ ಮತ್ತು ಸಿದ್ಧ ಸಹ ಇಲ್ಲ. ಯಾವುದೇ ಭಯೋತ್ಪಾದನಾ ದಾಳಿಯಾದ ನಂತರ ಒಂದು-ಎರಡು ಸಂಘಟನೆಗಳು ಇದರ ವಿರುದ್ಧ ೧ ಗಂಟೆಯ ಮಟ್ಟಿಗೆ ಆಂದೋಲನ ಮಾಡುತ್ತವೆ ಮತ್ತು ನಂತರ ಸುಮ್ಮನೆ ಕುಳಿತುಕೊಳ್ಳುತ್ತವೆ. ಇದರಿಂದ ಕಾಶ್ಮೀರದ ಭಯೋತ್ಪಾದನೆ ಕೊನೆಗೊಳ್ಳುವುದಿಲ್ಲ !