೧. ಹಿಂದೂಗಳು ಮತಾಧಿಕಾರವನ್ನು ಜಾಗರೂಕತೆಯಿಂದ ಉಪಯೋಗಿಸುವುದು ಆವಶ್ಯಕ !
ಯಾವಾಗ ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತದೆಯೋ ಅಥವಾ ಮತಾಂಧರಿಂದ ಹಿಂದೂಗಳ ಹತ್ಯೆ ಆಗುತ್ತದೆಯೋ, ಆಗ ಅದು ಮುಖ್ಯ ವಾರ್ತೆಯಾಗುವುದಿಲ್ಲ. ಆ ವಾರ್ತೆಯನ್ನು ದಿನಪತ್ರಿಕೆಯ ಒಂದು ಮೂಲೆಯಲ್ಲಿ ಮುದ್ರಿಸಲಾಗುತ್ತದೆ. ಇದು ‘ಇಲೆಕ್ಟ್ರಾನಿಕ್’ ಮಾಧಯ್ ಮಗಳ ಯುಗವಾಗಿದೆ. ಅದರಲ್ಲಿಯೂ ಅನೇಕ ವಾರ್ತಾವಾಹಿನಿಗಳು ವಿದೇಶಿಯಾಗಿದ್ದು ಸಾಮ್ಯವಾದಿ ವಿಚಾರಶೈಲಿಯ ನಿಯಂತ್ರಣದಲ್ಲಿವೆ. ಒಂದು ದೂರಚಿತ್ರವಾಹಿನಿಯ ಒಬ್ಬ ಪತ್ರಕರ್ತನಿಗೆ ಜನರು, ‘ಹಿಂದೂಗಳ ಸಂಖ್ಯೆ ಕುಸಿಯುತ್ತಾ ಹೋಗುತ್ತಿದೆ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ’ ಎಂದು ಹೇಳಿದರು. ಆಗ ಅವನು, ‘ಅದರಿಂದ ಏನಾಗುವುದು ? ಮುಸಲ್ಮಾನರ ಸಂಖ್ಯೆ ಹೆಚ್ಚಾದರೆ ಬೆಟ್ಟ ಕುಸಿದು ಬೀಳುವುದೇ ?’ ಎಂದನು. ಇಂತಹ ಮೂರ್ಖನಂತೆ ಮಾತನಾಡುವವನು ತಾನೇ ವಿಚಾರ ಮಾಡಬೇಕು. ಹಿಂದೂಗಳು ದೇಶದಲ್ಲಿ ರಾಷ್ಟ್ರವಾದಿ ಹಿಂದುತ್ವನಿಷ್ಠ ವಿಚಾರಶೈಲಿಯ ಸರಕಾರವನ್ನು ತರದೆ ಇದ್ದಿದ್ದರೆ, ಸರ್ವೋಚ್ಚ ನ್ಯಾಯಾಲಯವೂ ನಿರ್ಣಯಗಳನ್ನು ತೆಗೆದುಕೊಳ್ಳಲು ಹಿಂದುಳಿಯುತ್ತಿತ್ತು. ನಾವು ನಮ್ಮ ಮತದಾನದ ಹಕ್ಕನ್ನು ಇನ್ನಷ್ಟು ಸಂಘಟಿತಗೊಳಿಸಬೇಕಾಗಿದೆ ಎಂದು ಸ್ಷಷ್ಟವಾಗಿ ತಿಳಿದುಕೊಳ್ಳಬೇಕು.
ಇಂದು ಕೇಂದ್ರದಲ್ಲಿ ಹಿಂದುತ್ವನಿಷ್ಠ ಸರಕಾರ ಇದೆ; ಅದರೆ ಅವರಿಗೆ ವೈಯಕ್ತಿಕವಾಗಿ ೩೦೩ ಸ್ಥಾನಗಳು ಮಾತ್ರ ಸಿಕ್ಕಿವೆ. ಇಂದಿರಾ ಗಾಂಧಿಯ ಹತ್ಯೆಯ ನಂತರ ದೇಶದಲ್ಲಿ ಕಾಂಗ್ರೆಸ್ಸಿನ ೪೦೦ ಕ್ಕಿಂತ ಹೆಚ್ಚು ಸಂಸದರು ಅರಿಸಿ ಬಂದಿದ್ದರು. ನಾವು ಈ ಪ್ರಜಾಪ್ರಭುತ್ವದ ಪದ್ಧತಿಯಲ್ಲಿ ದೇವತಾ ಸಮಾನ ಧರ್ಮದ ಅನುಯಾಯಿಗಳಾಗಿದ್ದೇವೆ. ಇಂದು ಜನರು ಹೇಳುತ್ತಾರೆ, ‘ಸಾರ್ ನಾವು ಕೇವಲ ಧರ್ಮದ ಮರ್ಮವನ್ನು ತಿಳಿದುಕೊಳ್ಳಬೇಕು.’ ಆಗ ನನಗೆ ಹಿಂದುತ್ವನಿಷ್ಠ ವ್ಯಾಖ್ಯಾನಕಾರರಾದ ಶ್ರೀ. ಪುಷ್ಪೇಂದ್ರ ಕುಲಶ್ರೇಷ್ಠರ ಒಂದು ವಾಕ್ಯ ತುಂಬಾ ಇಷ್ಟವಾಗುತ್ತದೆ. ಅವರು ಹೇಳಿದ್ದಾರೆ, ‘ನಮಗೆ ನಮ್ಮ ಶತ್ರುವನ್ನು ಚೆನ್ನಾಗಿ ತಿಳಿದುಕೊಳ್ಳಲು ಬರಬೇಕು.’
೨. ಭಾರತದಲ್ಲಿನ ಧರ್ಮನಿರಪೇಕ್ಷತೆ ಹಿಂದೂಗಳಿಗೆ ಒಂದು ಗಂಡಾಂತರ !
ಅಮೇರಿಕಾ ಒಂದು ಕ್ರೈಸ್ತ ದೇಶವಾಗಿದೆ ಹಾಗೂ ಅದರ ರಾಷ್ಟ್ರಾಧ್ಯಕ್ಷನನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರಾಧ್ಯಕ್ಷ ಎಂದು ಪರಿಗಣಿಸಲಾಗುತ್ತದೆ. ‘ಇಸ್ಲಾಮಿಕ್ ಭಯೋತ್ಪಾದನೆ ಸಂಪೂರ್ಣ ಜಗತ್ತಿನಲ್ಲಿ ಹರಡಿದೆ ಹಾಗೂ ನಾವು ಅದರೊಂದಿಗೆ ಹೋರಾಡ ಬೇಕು’, ಎಂದು ಅವರು ಹೇಳಿದ್ದಾರೆ, ಹೀಗೆ ಹೇಳುವ ಧೈರ್ಯ ನಮ್ಮಲ್ಲಿಲ್ಲ; ಏಕೆಂದರೆ ನಮ್ಮ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ೨೫ ಕೋಟಿಯನ್ನು ಮೀರಿದೆ. ಆದ್ದರಿಂದ ನಾವು ಧರ್ಮನಿರಪೇಕ್ಷತೆಯ ಹೊದಿಕೆ ಹೊದ್ದುಕೊಂಡು ಬಂಧುತ್ವದ ಮಾತುಗಳನ್ನು ಆಡುತ್ತೇವೆ, ಈ ಬಂಧುತ್ವಭಾವವನ್ನು ಹರಡಲು ಇಷ್ಟಪಡುತ್ತೇವೆ. ಮ. ಗಾಂಧಿಯವರು ‘ಯಂಗ್ ಇಂಡಿಯಾ’ದಲ್ಲಿ ಹೀಗೆ ಹೇಳಿದ್ದರು, ‘ಹಿಂದೂಗಳು ಮೂಲತಃ ಹೆದರುಪುಕ್ಕರಾಗಿ ದ್ದಾರೆ, ಆದರೆ ಮುಸಲ್ಮಾನರ ವೃತ್ತಿ ಭಯೋತ್ಪಾದನೆಯದ್ದಾಗಿದೆ. (ಹಿಂದೂ ಈಸ್ ಕವರ್ಡ ಬೈ ನೇಚರ ಮುಸಲ್ಮಾನ ಈಸ್ ಮಿಲಿಟೆಂಟ ಬೈ ನೇಚರ) ನಾನು ಹೇಳುವುದರ ತಾತ್ಪರ್ಯವೇನೆಂದರೆ, ಒಂದು ವೇಳೆ ನಮ್ಮ ಸೈನ್ಯ ಕೈಯಲ್ಲಿ ಶಸ್ತ್ರವಿಲ್ಲದೆ ಅವರ ಸಮೀಪ ಹೋಗಿ ‘ನಾವು ಪರಸ್ಪರ ಸಾಮರಸ್ಯ ಮೂಡಿಸಲು ಇಚ್ಚಿಸುತ್ತೇವೆ, ಪರಸ್ಪರ ಬಂಧುಭಾವ ಮೂಡಿಸುವ ವಿಚಾರ ಮಾಡುತ್ತೇವೆ’, ಎಂದು ಹೇಳಿದರೆ, ಅಲ್ಲಿ ನಮ್ಮ ಸೈನಿಕರು ಜೀವಂತ ಉಳಿಯಬಹುದೇ ?
೩. ಪ್ರಸಾರಮಧ್ಯಮಗಳು ಮತ್ತು ನ್ಯಾಯವ್ಯವಸ್ಥೆಯಿಂದ ಹಿಂದೂ ಸಂತರ ವಿಷಯದಲ್ಲಿ ಮಲತಾಯಿ ನಿಲುವು
ಭಾರತೀಯ ಪತ್ರಕರ್ತರು ಸತ್ಯದಿಂದ ತುಂಬಾ ದೂರ ಹೋಗಿದ್ದಾರೆ. ಅವರು ಕುರಾನಿನ ಅಭ್ಯಾಸ ಮಾಡಬೇಕು; ಆದರೆ ಅವರು ನಮ್ಮ ಹಿಂದೂ ಧರ್ಮದಲ್ಲಿನ ಕೊರತೆಗಳನ್ನು ನೋಡಲು ಅತಿ ಉತ್ಸುಕರಾಗಿರುತ್ತಾರೆ. ಯಾವುದಾದರೊಂದು ದೇವಸ್ಥಾನ ಅಥವಾ ಸಂತರ ವಿಷಯದಲ್ಲಿ ಕ್ಷುಲ್ಲಕ ವಿಷಯ ಸಿಕ್ಕಿದರೂ ಆ ವಿಷಯದಲ್ಲಿ ದೂರಚಿತ್ರವಾಹಿನಿಯಲ್ಲಿ ಅನೇಕ ದಿನಗಳ ವರೆಗೆ ಚರ್ಚೆ ನಡೆಯುತ್ತದೆ. ಇನ್ನೊಂದು ಕಡೆಯಲ್ಲಿ ಕ್ರೈಸ್ತರು ಅಥವಾ ಮುಸಲ್ಮಾನರಿಂದ ಏನಾದರೂ ಅಹಿತ ಘಟಿಸಿದರೆ, ಆ ವಾರ್ತೆಯನ್ನು ಅದುಮಿಡಲು ಪ್ರಯತ್ನಿಸುತ್ತಾರೆ. ಈ ಹಿಂದೆ ಒಬ್ಬ ಬಿಶಪ್‌ನು ಓರ್ವ ನನ್‌ಳ ಮೇಲೆ ಬಲಾತ್ಕಾರ ಮಾಡಿದನೆಂಬ ಆರೋಪ ಮಾಡಲಾಗಿತ್ತು. ಅವನ ವಿರುದ್ಧ ಸಂತ್ರಸ್ತೆ ನ್ಯಾಯಾಲಯಕ್ಕೆ ಹೋಗಿದ್ದಳು, ಹೀಗಿದ್ದರೂ ಅವನಿಗೆ ಜಾಮೀನು ಸಿಕ್ಕಿತು.
೪. ಮತಾಂಧ ನುಸುಳುಕೋರರಿಗೆ ಆಶ್ರಯ ನೀಡಿರುವುದರಿಂದ ಯುರೋಪ್‌ನಲ್ಲಿ ಭಯೋತ್ಪಾದನೆಯಲ್ಲಿ ಹೆಚ್ಚಳ
ಕುರಾನ್‌ನ ವಿಷಯದಲ್ಲಿ ಭಾರತೀಯ ಪತ್ರಕರ್ತರು ಮಾತನಾಡಲು ಹಿಂಜರಿಯುತ್ತಾರೆ. ಸಮುದ್ರ ತೀರದಲ್ಲಿ ಒಬ್ಬ ಸಣ್ಣ ಹುಡುಗನ ಛಾಯಾಚಿತ್ರ ಜಗತ್ತಿನಾದ್ಯಂತ ಪ್ರಸಾರವಾಯಿತು. ಅದರ ಹಿಂದೆ ಒಂದು ಷಡ್ಯಂತ್ರವಿತ್ತು. ಸಮುದ್ರ ತೀರದಲ್ಲಿ ಅವನ ಛಾಯಾಚಿತ್ರ ತೆಗೆಯಲು ಯಾರು ಹೋಗಿದ್ದರು ? ‘ಈಗ ಅವರು ಮಾನವತಾವಾದಿ ದೃಷ್ಟಿಕೋನವನ್ನು ಅಂಗೀಕರಿಸಬೇಕಾಗುತ್ತದೆ’ ಎಂದು ಸಂಪೂರ್ಣ ಕ್ರೈಸ್ತ ಜನತೆ ಹೇಳಿತು. ಅನಂತರ ಯುರೋಪ್ ದೇಶಗಳು ಶರಣಾರ್ಥಿ ಮುಸಲ್ಮಾನರಿಗೆ ಆಶ್ರಯ ನೀಡಿದವು. ಅನಂತರ ಸಂಪೂರ್ಣ ಯುರೋಪ್‌ನ ಸ್ಥಿತಿ ತುಂಬಾ ಹದಗೆಟ್ಟಿತು. ಈಗ ಅಲ್ಲಿನ ಜರ್ಮನ್, ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳು ಭಯೋತ್ಪಾದನೆಯಿಂದ ನಲುಗಿ ಹೋಗಿವೆ. ಫ್ರಾನ್ಸ್‌ನಲ್ಲಿ ‘ಚಾರ್ಲೀ ಹೆಬ್ದೋ’ ಈ ಪತ್ರಿಕೆಯು ಪ್ರವಾದಿ ಮಹಮ್ಮದರ ಚಿತ್ರ ಪ್ರಕಾಶನ ಮಾಡಿತು. ಅನಂತರ ಮತಾಂಧರು ಆ ನಿಯತಕಾಲಿಕೆಯ ಕಾರ್ಯಾಲಯದ ಮೇಲೆ ಆಕ್ರಮಣ ಮಾಡಿದರು. ಅದರಲ್ಲಿ ೧೩ ಪತ್ರಕರ್ತರು ಸಾವನ್ನಪ್ಪಿದರು. ಇದು ಇಸ್ಲಾಮಿಕ್ ಭಯೋತ್ಪಾದನೆಯಾಗಿದೆ.
೫. ಹಿಂದೂ ಧರ್ಮವನ್ನು ಗುರಿ ಮಾಡಲು ಕ್ರೈಸ್ತ ಮತ್ತು ಮುಸಲ್ಮಾನರಿಂದ ಪ್ರಯತ್ನ
ಈ ಪೃಥ್ವಿಯ ಮೇಲೆ ಲೆಬೆನಾನ್‌ನಿಂದ ಹಿಡಿದು ಸಂಪೂರ್ಣ ಜಗತ್ತಿನಾದ್ಯಂತ ಹಾಹಾಕಾರ ಪಸರಿಸಿದೆ. ಅಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ನರೇಂದ್ರ ಮೋದಿ ಅಥವಾ ಯೋಗಿ ಆದಿತ್ಯನಾಥರು ಎಲ್ಲಿದ್ದಾರೆ ? ಶಿಯಾ ಪಂಥದವರು ಸುನ್ನಿಯರನ್ನು ನೋಡಲು ಇಷ್ಟಪಡುವುದಿಲ್ಲ ಹಾಗೂ ಸುನ್ನೀ ಶಿಯಾರನ್ನು ನೋಡಲು ಇಷ್ಟಪಡುವುದಿಲ್ಲ. ಅಹಮದೀಯರನ್ನಂತೂ ಮುಸಲ್ಮಾನರು ಧರ್ಮಬಾಹ್ಯರೆಂದು ಹೇಳಿ ದೂರವಿಟ್ಟಿದ್ದಾರೆ. ನಾವು ನಮ್ಮ ಜ್ಞಾನಚಕ್ಷುಗಳನ್ನು ತೆರೆಯಬೇಕಾಗಿದೆ. ಈಗ ಕಣ್ಣು ಮುಚ್ಚಿಕೊಂಡರೆ ಕೆಲಸ ಆಗುವುದಿಲ್ಲ. ಇಂದು ಕ್ರೈಸ್ತ ಮತ್ತು ಮುಸಲ್ಮಾನ ಇವರಿಬ್ಬರೂ ನಮ್ಮನ್ನು ನುಂಗಲು ನೋಡುತ್ತಿದ್ದಾರೆ; ಆದರೆ ಕ್ರೈಸ್ತರ ಸಂಖ್ಯೆ ಬಹಳ ಕಡಿಮೆಯಿದೆ. ಆದ್ದರಿಂದ ಈಗ ನಾವು ಹಿಂದೂಗಳು ಜಾಗರೂಕರಾಗಿದ್ದು ನ್ಯಾಯ ಮಾರ್ಗದಿಂದ ಅವರೊಂದಿಗೆ ಹೋರಾಡಬೇಕು.
೬. ಹಿಂದೂಗಳು ಸ್ವಸಂರಕ್ಷಣ ತರಬೇತಿಯೊಂದಿಗೆ ಸಂಘಟನೆಯ ಕಡೆಗೆ ಗಮನ ಹರಿಸುವುದು ಆವಶ್ಯಕ !
ನಾವು ಹಿಂದೂಗಳು ನಮ್ಮ ಸ್ವಸಂರಕ್ಷಣೆಗಾಗಿ ಜಾಗರೂಕರಾಗಿರಬೇಕು, ನಾವು ಇತರರ ಕೊಲೆ ಮಾಡಲಿಕ್ಕಲ್ಲ, ನಾವು ನಮ್ಮ ಆತ್ಮರಕ್ಷಣೆಗಾಗಿ ಬಹಳಷ್ಟು ಮಾಡಬಹುದು. ಸ್ವಸಂರಕ್ಷಣೆಯೊಂದಿಗೆ ಹಿಂದೂಗಳ ಸಂಘಟನೆ ಮಹತ್ವದ್ದಾಗಿದೆ. ಯಾವಾಗಲೂ ಮಂದಿರಗಳಲ್ಲಿ ಗರಡಿಮನೆ ಇರಬೇಕು. ಹಿಂದಿನ ಕಾಲದಲ್ಲಿ ಗರಡಿಮನೆಯೆಂದರೆ ಹನುಮಾನ ದಳ ಇರುತ್ತಿತ್ತು, ಅದರಲ್ಲಿ ನಮ್ಮ ಮಕ್ಕಳಿಗೆ ಖಡಗವನ್ನು ಕಟ್ಟುತ್ತಿದ್ದರು. ಅದರ ಮೂಲಕವೂ ಹಿಂದೂಗಳಿಗೆ ಸ್ವಸಂರಕ್ಷಣೆ ಕಲಿಸಲಾಗುತ್ತಿತ್ತು.’ – ಶ್ರೀ. ಅಶೋಕ ಲೋಹಿಯಾ, ಹಿರಿಯ ಪತ್ರಕರ್ತ, ದೈನಿಕ ‘ಭಾಸ್ಕರ’, ಗೋರಖಪುರ, ಉತ್ತರಪ್ರದೇಶ.
ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವ ೫ ವರ್ಷಗಳ ಹಿಂದೆ ನನ್ನನ್ನು ಕೆಲವು ಮಿತ್ರರು ಆಗ್ರಹದಿಂದ ಗೋವಾಗೆ ಕರೆದುಕೊಂಡು ಹೋಗಿದ್ದರು. ಅವರು ನಮಗಾಗಿ ಸಮುದ್ರ ತೀರದಲ್ಲಿನ ಒಂದು ಹೊಟೇಲ್ ಆರಿಸಿದ್ದರು. ನಾನು ಅಲ್ಲಿ ಒಬ್ಬ ಟ್ಯಾಕ್ಸಿಚಾಲಕನಿಗೆ ‘ಇಲ್ಲಿ ದುರ್ಗಾಮಂದಿರವಿದೆಯಲ್ಲ, ನನಗೆ ಅಲ್ಲಿಗೆ ಹೋಗಬೇಕು’, ಎಂದು ಹೇಳಿದೆ, ಆದರೆ ಅವನು ನನ್ನನ್ನು ಮಂದಿರಕ್ಕೆ ಕರೆದುಕೊಂಡು ಹೋಗದೆ ಚರ್ಚ್‌ಗೆ ಕರೆದುಕೊಂಡು ಹೋದನು. ಅಲ್ಲಿ ಗಯಾದಲ್ಲಿನ ಒಂದು ಹಿಂದೂ ನವವಿವಾಹಿತ ಜೋಡಿ ಮೇಣದಬತ್ತಿ ಹಚ್ಚುವುದು ನನಗೆ ಕಾಣಿಸಿತು. ಅಲ್ಲಿ ಮೇಣದ ಬತ್ತಿ ಮಾರಾಟ ಮಾಡುವ ಹಿಂದೂ ಮಹಿಳೆಯೂ ನನಗೆ ಮೇಣದಬತ್ತಿ ಖರೀದಿಸಲು ಒತ್ತಾಯಪಡಿಸುತ್ತಿದ್ದಳು; ಆದರೆ ನಾನು ನಿರಾಕರಿಸಿದೆ. ೩-೪ ತಿಂಗಳ ಹಿಂದೆ ವಿವಾಹವಾಗಿರುವ ಆ ನವವಿವಾಹಿತ ಜೋಡಿ ಯಲ್ಲಿನ ಹುಡುಗಿಗೆ ನಾನು ಕೋಪದಿಂದ ಹೇಳಿದೆ, ‘ನಿನಗೆ ಯಾವ ದೇವತೆಗಳ ಕೊರತೆಯಿದೆ; ನೀನು ಇಲ್ಲಿಗೆ ಬಂದು ಮೇಣದಬತ್ತಿ ಹಚ್ಚುತ್ತಿದ್ದೀಯ ?’ ಅವಳು ಹೇಳಿದಳು, ”ನಮ್ಮ ಜೊತೆಗೆ ಬಂದಿರುವ ಜನರು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದರು.” ಆಗ ನಾನು ದುರ್ಗಾ ಮಂದಿರ ಮಾತ್ರವಲ್ಲ, ಅಲ್ಲಿನ ಇತರ ಮಂದಿರಗಳು ಮತ್ತು ಇನ್ನೊಂದು ಆಶ್ರಮವನ್ನೂ ಭೇಟಿ ಮಾಡಿದೆನು. ಇದರಿಂದ ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವ ಎಷ್ಟಿದೆ, ಎಂಬುದು ಗಮನಕ್ಕೆ ಬಂದಿತು.
ತದ್ವಿರುದ್ಧ ಇಸ್ಲಾಮ್‌ನಲ್ಲಿ ಹೀಗೆ ಕಲಿಸಲಾಗುತ್ತದೆ, ರಮ್ಜಾನ್‌ನ ಒಂದು ತಿಂಗಳು ಚಾಂದ್ರವರ್ಷ ಇರುತ್ತದೆ, ಅದು ಪ್ರತಿ ಸಲ ಬದಲಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಚಳಿಗಾಲದಲ್ಲಿ ಬರುತ್ತದೆ, ಕೆಲವೊಮ್ಮೆ ಮಳೆಗಾಲದಲ್ಲಿ ಬರುತ್ತದೆ ಮತ್ತು ಕೆಲವೊಮ್ಮೆ ಬೇಸಿಗೆಯಲ್ಲಿ ಬರುತ್ತದೆ. ಅದರಲ್ಲಿ ಅವರು ಸಾಯಂಕಾಲ ಭೋಜನ ಮಾಡುತ್ತಾರೆ ಹಾಗೂ ಬೆಳಗಿನ ೪ ಗಂಟೆಗೆ ಅದನ್ನು ಪರಸ್ಪರರಿಗೆ ಹಂಚುತ್ತಾರೆ ಹಾಗೂ ನೀರು ಕುಡಿಯುತ್ತಾರೆ. ಅನಂತರ ಎಂಜಲನ್ನು ನುಂಗುವುದೂ ಪಾಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುಸಲ್ಮಾನರು ಅವರ ಪಂಥದ ವಿಷಯದಲ್ಲಿ ಕಟ್ಟರ್ ಆಗಿರುತ್ತಾರೆ.
– ಶ್ರೀ. ಅಶೋಕ ಲೋಹಿಯಾ
ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವ೫ ವರ್ಷಗಳ ಹಿಂದೆ ನನ್ನನ್ನು ಕೆಲವು ಮಿತ್ರರು ಆಗ್ರಹದಿಂದ ಗೋವಾಗೆ ಕರೆದುಕೊಂಡು ಹೋಗಿದ್ದರು. ಅವರು ನಮಗಾಗಿ ಸಮುದ್ರ ತೀರದಲ್ಲಿನ ಒಂದು ಹೊಟೇಲ್ ಆರಿಸಿದ್ದರು. ನಾನು ಅಲ್ಲಿ ಒಬ್ಬ ಟ್ಯಾಕ್ಸಿಚಾಲಕನಿಗೆ ‘ಇಲ್ಲಿ ದುರ್ಗಾಮಂದಿರವಿದೆಯಲ್ಲ, ನನಗೆ ಅಲ್ಲಿಗೆ ಹೋಗಬೇಕು’, ಎಂದು ಹೇಳಿದೆ, ಆದರೆ ಅವನು ನನ್ನನ್ನು ಮಂದಿರಕ್ಕೆ ಕರೆದುಕೊಂಡು ಹೋಗದೆ ಚರ್ಚ್‌ಗೆ ಕರೆದುಕೊಂಡು ಹೋದನು. ಅಲ್ಲಿ ಗಯಾದಲ್ಲಿನ ಒಂದು ಹಿಂದೂ ನವವಿವಾಹಿತ ಜೋಡಿ ಮೇಣದಬತ್ತಿ ಹಚ್ಚುವುದು ನನಗೆ ಕಾಣಿಸಿತು. ಅಲ್ಲಿ ಮೇಣದ ಬತ್ತಿ ಮಾರಾಟ ಮಾಡುವ ಹಿಂದೂ ಮಹಿಳೆಯೂ ನನಗೆ ಮೇಣದಬತ್ತಿ ಖರೀದಿಸಲು ಒತ್ತಾಯಪಡಿಸುತ್ತಿದ್ದಳು; ಆದರೆ ನಾನು ನಿರಾಕರಿಸಿದೆ. ೩-೪ ತಿಂಗಳ ಹಿಂದೆ ವಿವಾಹವಾಗಿರುವ ಆ ನವವಿವಾಹಿತ ಜೋಡಿ ಯಲ್ಲಿನ ಹುಡುಗಿಗೆ ನಾನು ಕೋಪದಿಂದ ಹೇಳಿದೆ, ‘ನಿನಗೆ ಯಾವ ದೇವತೆಗಳ ಕೊರತೆಯಿದೆ; ನೀನು ಇಲ್ಲಿಗೆ ಬಂದು ಮೇಣದಬತ್ತಿ ಹಚ್ಚುತ್ತಿದ್ದೀಯ ?’ ಅವಳು ಹೇಳಿದಳು, ”ನಮ್ಮ ಜೊತೆಗೆ ಬಂದಿರುವ ಜನರು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದರು.” ಆಗ ನಾನು ದುರ್ಗಾ ಮಂದಿರ ಮಾತ್ರವಲ್ಲ, ಅಲ್ಲಿನ ಇತರ ಮಂದಿರಗಳು ಮತ್ತು ಇನ್ನೊಂದು ಆಶ್ರಮವನ್ನೂ ಭೇಟಿ ಮಾಡಿದೆನು. ಇದರಿಂದ ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವ ಎಷ್ಟಿದೆ, ಎಂಬುದು ಗಮನಕ್ಕೆ ಬಂದಿತು. ತದ್ವಿರುದ್ಧ ಇಸ್ಲಾಮ್‌ನಲ್ಲಿ ಹೀಗೆ ಕಲಿಸಲಾಗುತ್ತದೆ, ರಮ್ಜಾನ್‌ನ ಒಂದು ತಿಂಗಳು ಚಾಂದ್ರವರ್ಷ ಇರುತ್ತದೆ, ಅದು ಪ್ರತಿ ಸಲ ಬದಲಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಚಳಿಗಾಲದಲ್ಲಿ ಬರುತ್ತದೆ, ಕೆಲವೊಮ್ಮೆ ಮಳೆಗಾಲದಲ್ಲಿ ಬರುತ್ತದೆ ಮತ್ತು ಕೆಲವೊಮ್ಮೆ ಬೇಸಿಗೆಯಲ್ಲಿ ಬರುತ್ತದೆ. ಅದರಲ್ಲಿ ಅವರು ಸಾಯಂಕಾಲ ಭೋಜನ ಮಾಡುತ್ತಾರೆ ಹಾಗೂ ಬೆಳಗಿನ ೪ ಗಂಟೆಗೆ ಅದನ್ನು ಪರಸ್ಪರರಿಗೆ ಹಂಚುತ್ತಾರೆ ಹಾಗೂ ನೀರು ಕುಡಿಯುತ್ತಾರೆ. ಅನಂತರ ಎಂಜಲನ್ನು ನುಂಗುವುದೂ ಪಾಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುಸಲ್ಮಾನರು ಅವರ ಪಂಥದ ವಿಷಯದಲ್ಲಿ ಕಟ್ಟರ್ ಆಗಿರುತ್ತಾರೆ. – ಶ್ರೀ. ಅಶೋಕ ಲೋಹಿಯಾ |