ಭಾರತೀಯ ಕ್ರಿಕೆಟ್ ತಂಡವು ೨೯ ಜೂನ್ ೨೦೨೪ ರಂದು ‘೨೦-೨೦ ಓವರ್’ನ್ ಕ್ರಿಕೆಟ್‌ನ ‘ವಿಶ್ವಕಪ್’ಅನ್ನು ಗೆದ್ದುಕೊಂಡಿತು ! ಪಂದ್ಯವನ್ನು ಗೆದ್ದ ನಂತರ ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹಲಿ ಇವರೊಂದಿಗೆ ಸಂದರ್ಶನಕಾರ ಜತಿನ್ ಸಪ್ರು ಇವರು ಸಂದರ್ಶನ ನಡೆಸಿದರು. ವಿರಾಟ್ ಇವರು ಆ ಸಮಯದಲ್ಲಿ ಏನು ಹೇಳಿದರೋ, ಅದರ ಸಾರವನ್ನು ನಾವು ಇಲ್ಲಿ ನೋಡೋಣ. ಅವರು, ”ನಾನು ಈ ವಿಜಯದ ಬಗ್ಗೆ ಈಶ್ವರನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಕಳೆದ ಕೆಲವು ತಿಂಗಳುಗಳಿಂದ ಈಶ್ವರನು ನನಗೆ ಬೇರೆ ಬೇರೆ ಪ್ರಸಂಗಗಳಿಂದ ಕಲಿಸುತ್ತಿದ್ದನು. ನನ್ನ ಅಹಂಕಾರಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿತ್ತು. ವಿವಿಧ ಪ್ರಸಂಗಗಳಲ್ಲಿ ನನಗೆ ನನ್ನ ಅಹಂಕಾರದ ಅರಿವಾಗುತ್ತಿತ್ತು. ಅನೇಕ ಬಾರಿ ನನಗೆ ಹಿಂದೆ ಸರಿಯಬೇಕಾಯಿತು. ಅದರಿಂದಲೂ ಈಶ್ವರನು ನನಗೆ ಶಕ್ತಿಯನ್ನು (ಊರ್ಜೆಯನ್ನು) ನೀಡಿದನು. ನಾನು ಕ್ರೀಡಾಪಟು ಎಂದು ನನ್ನ ಹೆಸರಿನಲ್ಲಿ ದಾಖಲೆಗಳು ನೋಂದಣಿಯಾಗುತ್ತಿದ್ದವು. ಆದರೆ ಈಶ್ವರನು ಲೀಲೆಯನ್ನು ರಚಿಸಿ ನನ್ನನ್ನು ಮನುಷ್ಯನೆಂದು ಹೆಚ್ಚೆಚ್ಚು ಪ್ರಬುದ್ಧಗೊಳಿಸುತ್ತಿದ್ದನು. ಕಡಿಮೆತನ ತೆಗೆದುಕೊಂಡರೆ ಆನಂದ ದೊರಕುತ್ತದೆ, ಎಂಬುದನ್ನು ನಾನು ಇಂದು ೨೦-೨೦ ಓವರ್‌ಗಳ ಕೊನೆಯ ಪಂದ್ಯವನ್ನು ಆಡುವಾಗ ಕಲಿತೆನು. ಈ ವಿಶ್ವಕಪ್‌ನಲ್ಲಿ ನಾನು ಬಯಸಿದಷ್ಟು ರನ್‌ಗಳು ಸಿಗಲಿಲ್ಲ, ಆದುದರಿಂದ ನಾನು ದುಃಖಿತನಾಗಿದ್ದೆ; ಆದರೆ ಈಶ್ವರನೇ ಈ ಪಂದ್ಯದಲ್ಲಿ ನನ್ನಿಂದ ೫೯ ಚೆಂಡೆಸೆತಗಳಲ್ಲಿ ೭೬ ರನ್‌ಗಳನ್ನು ಗಳಿಸುವಂತೆ ಮಾಡಿದ್ದಾನೆ. ನಾವು ತಳಮಳದಿಂದ ಪ್ರಯತ್ನಿಸುತ್ತೇವೆ; ಆದರೆ ಈಶ್ವರನು ತನಗೆ ಕೊಡಬೇಕೆಂದೆನಿಸಿದಾಗಲೇ ಕೊಡುತ್ತಾನೆ. ನಾವು ಪಂದ್ಯವನ್ನು ಗೆದ್ದ ವಿಧಾನಕ್ಕಾಗಿ ಪುನಃ ಈಶ್ವರನಿಗೆ ಧನ್ಯವಾದಗಳು !” ಎಂದು ಹೇಳಿದನು.
೧. ಆಕ್ರಮಣಕಾರಿ ಸ್ವಭಾವದ ವಿರಾಟ !
ವಿರಾಟ್ ಇವರ ಅಭಿಪ್ರಾಯವು ವ್ಯಾವಹಾರಿಕ ದೃಷ್ಟಿಯಿಂದ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ೨೦೦೮ ರಲ್ಲಿ ವಿರಾಟ್ ಇವರು ತಮ್ಮ ನೇತೃತ್ವದಲ್ಲಿ ೧೯ ವರ್ಷಗಳ ಕೆಳಗಿನ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಭಾರತಕ್ಕೆ ವಿಶ್ವಕಪ್ ಅನ್ನು ಗೆದ್ದು ತಂದಿದ್ದರು. ಆಗ ಭಾರತರತ್ನ ಸಚಿನ್ ತೆಂಡುಲಕರರ ವೃತ್ತಿ ಜೀವನದ ಕೊನೆಯ ಹಂತ ನಡೆಯುತ್ತಿತ್ತು. ‘ವಿರಾಟ್ ಸಚಿನ್‌ನ ಉತ್ತರಾಧಿಕಾರಿಯಾಗುತ್ತಾರೆ’, ಎಂದು ಎಲ್ಲರೂ ಊಹಿಸಿದ್ದರು; ಆದರೆ ಅದು ಕೇವಲ ರನ್‌ಗಳ ಅಂಕಿಅಂಶಗಳ ವಿಷಯದಲ್ಲಿ ಮಾತ್ರ ನಿಜವಾಯಿತು. ಮನುಷ್ಯನೆಂದು ವಿರಾಟ್ ಸಚಿನ್‌ಗಿಂತ ಬಹಳ ಭಿನ್ನವಾಗಿದ್ದರು. ವಿರಾಟ್‌ರ ಸ್ವಭಾವ ಆಕ್ರಮಣಕಾರಿಯಾಗಿತ್ತು ! ಅವರಲ್ಲಿ ಎಷ್ಟು ಕೌಶಲ್ಯವು ತುಂಬಿಕೊಂಡಿತ್ತೋ, ಅಷ್ಟೇ ಅಹಂಕಾರವೂ ತೀವ್ರವಾಗಿತ್ತು.
೨. ವಿರಾಟ್‌ನಿಗೆ ಮತ್ತು ದೇಶಕ್ಕೆ ಆಗಿರುವ ಹಾನಿ
ವಿರಾಟ್ ಇವರ ಅಹಂಕಾರದಿಂದಾಗಿ ಕೆಲವು ಮಹತ್ವಪೂರ್ಣ ಸ್ಪರ್ಧೆಗಳಲ್ಲಿ ದೇಶಕ್ಕೆ ಹಾನಿಯೂ ಆಯಿತು. ೨೦೧೫ ರ ವಿಶ್ವಕಪ್ ಸೆಮಿಫೈನಲ್ ನ್ಯೂಜಿಲೆಂಡ್ ವಿರುದ್ಧ ಇತ್ತು. ವಿರಾಟ್ ನಾಯಕತ್ವ ವಹಿಸಿದ್ದರು. ಭಾರತೀಯ ತಂಡದ ಆಗಿನ ತರಬೇತುದಾರರಾಗಿದ್ದ ಅನಿಲ ಕುಂಬಳೆ ಇವರು ಸಲಹೆ ನೀಡಿದರೂ, ಸ್ಪಿನ್ನರ್ ಕುಲದೀಪ ಯಾದವ ಇವರನ್ನು ತಂಡದಲ್ಲಿ ಸೇರಿಸಿಕೊಳ್ಳಲಿಲ್ಲ. ಆದುದರಿಂದ ನ್ಯೂಜಿಲ್ಯಾಂಡ್‌ಗೆ ಬಹಳಷ್ಟು ಸ್ಕೋರ್ ಮಾಡಲು ಸಾಧ್ಯವಾಯಿತು. ಭಾರತವು ಸೋಲನ್ನು ಅನುಭವಿಸಬೇಕಾಯಿತು. ಅನೀಲರಂತಹ ಅತ್ಯಂತ ಸಭ್ಯ, ಯಶಸ್ವಿ ಮತ್ತು ಅನುಭವಿ ವ್ಯಕ್ತಿಯು ರಾಜೀನಾಮೆ ನೀಡಿದರು. ಮುಂದೆ ರವಿ ಶಾಸ್ತ್ರಿಯವರು ತರಬೇತುದಾರರಾದ ನಂತರ ಅವರ ಮತ್ತು ವಿರಾಟ್ ನಡುವೆ ಬಹಳ ಹೊಂದಾಣಿಕೆಯಾಯಿತು. ವಿರಾಟ್ ದೇಶಕ್ಕಾಗಿ ಚೆನ್ನಾಗಿ ಆಡಿದರು; ಆದರೆ ವ್ಯಕ್ತಿಯೆಂದು ವಿರಾಟ್‌ರ ಅಪ್ರಬುದ್ಧತೆ ಕೆಲವು ಪ್ರಸಂಗಗಳಲ್ಲಿ ಕಂಡು ಬಂದವು. ವಿರಾಟ್ ‘ಇಂಡಿಯನ್ ಪ್ರೀಮಿಯರ ಲೀಗ್’ನಲ್ಲಿ ೧೫ ವರ್ಷಗಳ ಕಾಲ ಬೆಂಗಳೂರು ತಂಡದ ನಾಯಕರಾದರು; ಆದರೆ ಅವರಿಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅವರಲ್ಲಿರುವ ಅಹಂಕಾರದ ವಿವಿಧ ಅಭಿವ್ಯಕ್ತಿಗಳ ಪ್ರಕಟೀಕರಣವೇ ಇದಕ್ಕೆ ಕಾರಣವಾಗಿದೆ. ಸೌರಭ ಗಾಂಗುಲಿ ಭಾರತೀಯ ತಂಡದ ತರಬೇತಿದಾರರಾದ ನಂತರ ಅವರೊಂದಿಗೆ ವಿರಾಟ್‌ರ ಮನಸ್ತಾಪವಾಯಿತು. ವಿರಾಟ್‌ರು ಕೆಲವು ಸಹ ಕ್ರೀಡಾಪಟುಗಳು, ಇತರ ತಂಡದ ಕ್ರೀಡಾಪಟುಗಳು, ಹಿರಿಯ ಕ್ರೀಡಾಪಟುಗಳು ಮುಂತಾದವರೊಂದಿಗೆ ಜಗಳವಾಡುತ್ತಿದ್ದರು. ಅನೀಲ ಕುಂಬಳೆಯವರಂತೆ ಸೌರಭರು ವಿರಾಟ್‌ರ ಪ್ರಾಬಲ್ಯಕ್ಕೆ ಬಗ್ಗಲಿಲ್ಲ. ಅವರು ವಿರಾಟ್‌ನ ನಾಯಕತ್ವವನ್ನು ಕಿತ್ತುಕೊಂಡರು. ರೋಹಿತ್ ಶರ್ಮಾ ಭಾರತೀಯ ತಂಡದ ನೇತೃತ್ವ ವಹಿಸಲು ಸಿದ್ಧರಿರಲಿಲ್ಲ. ಸೌರಭ ಇವರು ರೋಹಿತ್‌ರಿಗೆ ನೇತೃತ್ವದ ಮಹತ್ವವನ್ನು ತಿಳಿಸಿಕೊಟ್ಟು ಅದನ್ನು ವಹಿಸುವಂತೆ ಶ್ರಮಿಸಿದರು. ಮುಂದೆ ಭಾರತೀಯ ಕ್ರಿಕೆಟ್ ತಂಡವು ರಾಹುಲ ದ್ರ್ರಾವಿಡ್‌ರಂತಹ ಅತ್ಯುತ್ತಮ ಕ್ರೀಡಾಪಟು ಮತ್ತು ಶಾಂತ, ಸಭ್ಯ ಗೃಹಸ್ಥನನ್ನು ತರಬೇತುದಾರರೆಂದು ಪಡೆಯಿತು. ‘ನಾಯಕ ಹೇಗಿರಬೇಕು’, ಎಂದು ವಿರಾಟ್‌ರ ಸಹಚರ ರೋಹಿತ ಶರ್ಮಾ ಇವರು ತಮ್ಮ ಕೃತಿಯಿಂದ ೨೯ ಜೂನ್ ೨೦೨೪ ಈ ದಿನದಂದು ಮತ್ತು ಕಳೆದ ೨ ವರ್ಷಗಳಲ್ಲಿ ತೋರಿಸಿಕೊಟ್ಟರು. ಮನುಷ್ಯನೆಂದು ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ರೋಹಿತ್ ಶರ್ಮಾ ಮತ್ತು ಆದರ್ಶ ಕ್ರೀಡಾಪಟು ರಾಹುಲ ದ್ರಾವಿಡ್ ಇವರ ಮೈತ್ರಿಯು ಯಶಸ್ವಿಯಾಯಿತು. ಇವರಿಬ್ಬರೂ ೩ ವರ್ಷಗಳಲ್ಲಿಯೇ ರೀತಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಎಲ್ಲ ಅಗ್ರಸ್ಥಾನಕ್ಕೆ ತಂದರು.
೩. ಅಹಂಕಾರದ ಬಲೂನ್ ಒಡೆದರೆ ಗೆಲುವು ನಮ್ಮದೇ !
ವಿರಾಟ್‌ರ ಮೇಲಿನ ಹೇಳಿಕೆಯಿಂದ ಅವರು ಕಳೆದ ಕೆಲವು ತಿಂಗಳುಗಳಿಂದ ಯಾವ ಮಾನಸಿಕತೆಯಿಂದ ಪ್ರಯಾಣ ಮಾಡುತ್ತಿದ್ದರು ಎಂಬುದರ ಕಲ್ಪನೆ ಬರುತ್ತದೆ. ವೈಯಕ್ತಿಕ ಸ್ತರದಲ್ಲಿ ಶಾರೀರಿಕ ಸಕ್ಷಮತೆ (ಫಿಟ್‌ನೆಸ್), ಕೌಶಲ್ಯ, ಜಿಗುಟುತನ, ಆಟದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು, ರನ್‌ಗಳ ಹಂಬಲ ಇತ್ಯಾದಿಗಳಿಗೆ ಸಂಬಂಧಿಸಿದಂತೆ ವಿರಾಟ್ ಜಗತ್ತಿನಲ್ಲಿ ಮುಂದೆ ಇದ್ದರು; ಆದರೆ ಅಹಂಕಾರದ ಬಲೂನ್ ಒಡೆಯಲು ಅವರಿಗೆ ವೃತ್ತಿಜೀವನದ ಕೊನೆಯ ಸಮಯದವರೆಗೆ ಕಾಯಬೇಕಾಯಿತು. ‘ವಿರಾಟ್ ಈಗ ಅಂತರ್ಮುಖರಾಗುತ್ತಿದ್ದಾರೆ, ಈಶ್ವರನೆದುರು ನತಮಸ್ತಕರಾಗುತ್ತಿದ್ದಾರೆ’, ಇದು ಅವರ ಮೇಲಿನ ಹೇಳಿಕೆಗಳಿಂದ ಗಮನಕ್ಕೆ ಬರುತ್ತದೆ. ಇಷ್ಟು ದೊಡ್ಡ ವಿಜಯದ ನಂತರವೂ ಮನಸ್ಸು ಬಿಚ್ಚಿ ತಮ್ಮಲ್ಲಿನ ಕೊರತೆಯ ವಿಶ್ಲೇಷಣೆಯನ್ನು ಎಲ್ಲರೆದುರು ಪ್ರಸ್ತುತಪಡಿಸಿದ ಬಗ್ಗೆ ವಿರಾಟ್ ಇವರನ್ನು ಎಷ್ಟು ಶ್ಲಾಘಿಸಿದರೂ ಅದು ಕಡಿಮೆಯೇ ಆಗಿದೆ. ಅವರ ಈ ವಿಶ್ಲೇಷಣೆ, ಅದರ ನಿರ್ಮಲತೆಯೇ ಅವರಲ್ಲಿನ ಹಿರಿಮೆ ಮತ್ತು ಪ್ರಬುದ್ಧತೆಯನ್ನು ತೋರಿಸುತ್ತದೆ ! ಇಂತಹ ಅನೇಕ ಗುಣಗಳಿಂದಾಗಿಯೇ ಅವರನ್ನು ‘ಕಿಂಗ್ ಕೊಹಲಿ’ (ಕ್ರಿಕೆಟ್‌ನ ರಾಜ) ಎಂದೂ ಕರೆಯುತ್ತಾರೆ ! ಆಟವಾಗಿರಲಿ, ವ್ಯವಹಾರವಿರಲಿ ಅಥವಾ ಅಧ್ಯಾತ್ಮವೇ ಆಗಿರಲಿ, ಅಹಂಕಾರದ ಬಲೂನ್ ಒಡೆಯದ ಹೊರತು ಅಂತರ್ವಿಜಯದ ಅಂದರೆ ಆನಂದದ ಬೆಳ್ಳಿಕಪ್ ದೊರಕುವುದಿಲ್ಲ, ಇದನ್ನೇ ಈ ವಿಶ್ವಕಪ್ ಎಲ್ಲರಿಗೂ ಕಲಿಸಿತು !
– ಶ್ರೀ. ಸಾಗರ ನಿಂಬಾಳಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೬.೨೦೨೪)