Kanwar Yatra : ಮುಜಫರನಗರ್ (ಉತ್ತರಪ್ರದೇಶ) ಕಾವಡಾ ಯಾತ್ರೆಯ ಮಾರ್ಗದಲ್ಲಿನ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರು ಬರೆಯಲು ರಾಜ್ಯ ಸರಕಾರದ ಆದೇಶ !

ಮುಸಲ್ಮಾನರ ಮೇಲೆ ಆರ್ಥಿಕ ಬಹಿಷ್ಕಾರ ಹಾಕುವ ಪ್ರಯತ್ನವಿದು ಎಂದು ವಿರೋಧ ಪಕ್ಷದ ಟೀಕೆ

ಮುಜಫರನಗರ್ (ಉತ್ತರಪ್ರದೇಶ) – ಸರಕಾರವು ನೀಡಿರುವ ಆದೇಶದ ನಂತರ ಮುಜಫರನಗರ ಜಿಲ್ಲೆಯಲ್ಲಿನ ಎಲ್ಲಾ ಅಂಗಡಿದಾರರು, ಡಾಬಾ ಮಾಲೀಕರು ಹಾಗೂ ಹಣ್ಣು ಮಾರಾಟಗಾರರು ಅವರವರ ಅಂಗಡಿಗಳ ಮೇಲೆ ಮತ್ತು ತಳ್ಳುವಗಾಡಿಯ ಮೇಲೆ ತಮ್ಮ ಮಾಲೀಕರ ಹೆಸರು ಬರೆಸಲು ಆರಂಭಿಸಿದ್ದಾರೆ. ಬರುವ ಜುಲೈ ೨೨ ರಂದು ಕಾವಡಾ ಯಾತ್ರೆ ಆರಂಭವಾಗುವುದು. ಇದರ ಹಿನ್ನೆಲೆಯಲ್ಲಿ ಸರಕಾರ ಈ ಆದೇಶ ನೀಡಿದೆ. ಯಾತ್ರಿಕರ ನಡುವಿನ ಗೊಂದಲ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರಕಾರ ಹೇಳಿದೆ. ಕೆಲವು ದಿನಗಳ ಹಿಂದೆ ಮುಜಫರನಗರ ಶಾಸಕ ಮತ್ತು ರಾಜ್ಯದ ಸಚಿವ ಕಪಿಲ್ ದೇವ್ ಅಗ್ರವಾಲ್ ಅವರು ಜಿಲ್ಲಾಮಟ್ಟದ ಸಭೆಯಲ್ಲಿ, ವಾದ ವಿವಾದವನ್ನು ತಪ್ಪಿಸುವುದಕ್ಕಾಗಿ ಮುಸಲ್ಮಾನರು ಅವರ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರನ್ನು ಇಡಬಾರದೆಂದು ಹೇಳಿದ್ದರು. ಅವರ ಈ ಹೇಳಿಕೆಯ ನಂತರ ಸರಕಾರವು ಈ ಮೇಲಿನ ಆದೇಶ ನೀಡಿದೆ.

೧. ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ ಸಿಂಹ ಅವರು, ಕಾವಡಾ ಯಾತ್ರೆಯ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾವಡಾ ಯಾತ್ರೆಯ ಮಾರ್ಗವು ಸುಮಾರು ೨೪೦ ಕಿಲೋಮೀಟರ್ ಉದ್ದ ಇದೆ. ಈ ಮಾರ್ಗದಲ್ಲಿರುವ ಎಲ್ಲಾ ಉಪಹಾರ ಗೃಹಗಳಲ್ಲಿ ಮಾಲೀಕರು ಅಥವಾ ಅಲ್ಲಿನ ಸಿಬ್ಬಂದಿಗಳ ಹೆಸರುಗಳನ್ನು ಬರೆಯುವುದು ಅವಶ್ಯಕವಾಗಿದೆ. ಈ ಆದೇಶ ಹೋಟೆಲ್, ಡಾಬಾ ಅಥವಾ ತಳ್ಳು ಗಾಡಿಗಳಿಗಾಗಿ ಹೊರಡಿಸಲಾಗಿದೆ. ಈ ಪ್ರದೇಶದಲ್ಲಿಯೇ ಕಾವಡಾ ಯಾತ್ರಿಕರು ಆಹಾರ ಪದಾರ್ಥ ಖರೀದಿಸುತ್ತಾರೆ.

೨. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾವಡಾ ಯಾತ್ರೆಯ ಸಿದ್ಧತೆಯ ವರದಿ ಪಡೆದರು. ಯಾತ್ರೆಯ ಮಾರ್ಗದಲ್ಲಿ ಉಳಿದಿರುವ ಕಾರ್ಯ ಮುಂದಿನ ೭೨ ಗಂಟೆಗಳಲ್ಲಿ ಪೂರ್ಣಗೊಳಿಸಲು ಸಾರ್ವಜನಿಕ ಕಟ್ಟಡ ಕಾಮಗಾರಿ, ನೀರಾವರಿ ಮತ್ತು ನಗರ ವಿಕಾಸ ಇಲಾಖೆಗೆ ಆದೇಶ ನೀಡಿದ್ದಾರೆ. ಸಂಪೂರ್ಣ ಕಾವಡಾ ಯಾತ್ರೆ ಮಾರ್ಗದಲ್ಲಿ ಸ್ವಚ್ಛತೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಈ ಆದೇಶವನ್ನು ಈ ತಿಂಗಳವರೆಗೆ ಮುಂದುವರಿಸಬೇಕೆಂದು ಸೂಚನೆ ನೀಡಿದ್ದಾರೆ ಹಾಗೂ ಮಾರ್ಗದಲ್ಲಿ ಬೆಳಕಿನ ವ್ಯವಸ್ಥೆ ಕೂಡ ಮಾಡಲು ಸೂಚಿಸಿದ್ದಾರೆ.

ಕಾವಾಡ ಯಾತ್ರೆ ಎಂದರೆ ಏನು ?


ಶ್ರಾವಣ ಮಾಸದಲ್ಲಿ ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನ್ ಈ ರಾಜ್ಯಗಳಿಂದ ಲಕ್ಷಾಂತರ ಭಕ್ತರು ನಡೆದುಕೊಂಡು ಉತ್ತರಖಂಡದಲ್ಲಿನ ಹರಿದ್ವಾರದ ಗಂಗಾ ನದಿಯ ಪವಿತ್ರ ಜಲ ತೆಗೆದುಕೊಂಡು ಅವರವರ ಜಿಲ್ಲೆಗಳಿಗೆ ಹೋಗುತ್ತಾರೆ. ಅಲ್ಲಿಯ ಸ್ಥಳೀಯ ದೇವಸ್ಥಾನದಲ್ಲಿ ಈ ಪವಿತ್ರ ಜಲದಿಂದ ಅಭಿಷೇಕ ಮಾಡುತ್ತಾರೆ. ಜಲ ತೆಗೆದುಕೊಂಡು ಹೋಗುವುದಕ್ಕಾಗಿ ಅವರು ಕಾವಡಾದ(ಒಂದು ಬಗೆಯ ಪಾತ್ರೆ) ಉಪಯೋಗ ಮಾಡುತ್ತಾರೆ ಆದ್ದರಿಂದ ಇದನ್ನು ‘ಕಾವಡಾ ಯಾತ್ರೆ’ ಎನ್ನುತ್ತಾರೆ.

ವಿರೋಧ ಪಕ್ಷದಿಂದ ಟೀಕೆ

ಈ ಆದೇಶವನ್ನು ನ್ಯಾಯಾಲಯವು ಸ್ವತಃ ಗಮನಹರಿಸಬೇಕಂತೆ – ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಖಿಲೇಶ್ ಯಾದವ್ ಅವರು ಈ ಆದೇಶವನ್ನು ಟೀಕಿಸುತ್ತಾ ಪೋಸ್ಟ್ ಮಾಡಿ,

ನ್ಯಾಯಾಲಯವು ಸ್ವತಃ ಈ ಆದೇಶದೆಡೆ ಗಮನಹರಿಸಿ ಸರಕಾರದ ಉದ್ದೇಶದ ಕುರಿತು ವಿಚಾರಣೆ ನಡೆಸಿ ಯೋಗ್ಯ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಸಾಮರಸ್ಯ ಮತ್ತು ಶಾಂತಿ ಹದಗೆಡಲು ಕಾರಣವಾಗಿರುವ ಆದೇಶ ನೀಡುವುದು ಸಾಮಾಜಿಕ ಅಪರಾಧವಾಗಿದೆ ಎಂದಿದ್ದಾರೆ. (ಮಸೀದಿಯ ಸ್ಥಳದಲ್ಲಿ ಹಿಂದುಗಳ ಧಾರ್ಮಿಕ ಮೆರವಣಿಗೆ ನಡೆದಾಗ ಮುಸಲ್ಮಾನರಿಂದ ದಾಳಿಗಳು ನಡೆಯುತ್ತವೆ, ಆಗ ಸಾಮರಸ್ಯದ ವಾತಾವರಣ ಹದಗೆಡುವುದಿಲ್ಲವೇ? ಆಗ ಅಖಿಲೇಶ್ ಯಾದವ್ ಯಾವ ಬಿಲದಲ್ಲಿ ಅಡಗಿ ಕುಳಿತಿರುತ್ತಾರೆ ? – ಸಂಪಾದಕರು )

೨. ಪ್ರಸಿದ್ಧ ಗೀತ ರಚನೆಕಾರರಾದ ಜಾವೇದ್ ಅಕ್ತರ್ ಪೋಸ್ಟ್ ಮಾಡಿ,

ನಾಜಿ (ಜರ್ಮನಿಯಲ್ಲಿನ ಹಿಟ್ಲರ್ ಆಡಳಿತ) ಆಡಳಿತದಲ್ಲಿ ಅಂಗಡಿಗಳ ಮೇಲೆ ಇದೇ ರೀತಿ ಫಲಕ ಹಾಕಲು ಹೇಳಲಾಗಿತ್ತು. (ನಾಜಿಗಳು ಕೋಟ್ಯಾಂತರ ಜ್ಯೂ ಜನರನ್ನು ಗ್ಯಾಸ್ ಚೇಂಬರ್ ನಲ್ಲಿ ಹಾಕಿ ಕೊಂದಿದ್ದರು. ಭಾರತದಲ್ಲಿ ತದ್ವಿರುದ್ಧ ಮತಾಂಧ ಮುಸಲ್ಮಾನರು ಹಿಂದುಗಳನ್ನು ಕೊಲ್ಲುತ್ತಿದ್ದಾರೆ. ಆದ್ದರಿಂದ ಜಾವೇದ್ ಅಕ್ತರ್ ಉದ್ದೇಶಪೂರ್ವಕವಾಗಿಯೇ ಹಿಂದೂಗಳನ್ನು ನಾಜಿ ಎಂದು ಹೇಳಿ, ಮತಾಂಧ ಮುಸಲ್ಮಾನರನ್ನು ರಕ್ಷಿಸುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ ! – ಸಂಪಾದಕರು)

೩ . ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಮತ್ತು ಎಂಐಎಂ ಪಕ್ಷಗಳು ಈ ಆದೇಶವನ್ನು ವಿರೋಧಿಸಿದ್ದಾರೆ.

ಎಂಐಎಂ ನ ಸಂಸದ ಅಸುದ್ದುದ್ದೀನ್ ಓವೈಸಿ, ಈ ಆದೇಶವನ್ನು ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದದ ಜೊತೆಗೆ ತುಲನೆ ಮಾಡಿದ್ದಾರೆ. (ಕಾಶ್ಮೀರದಲ್ಲಿನ ಮುಸಲ್ಮಾನರು ಹಿಂದೂಗಳನ್ನು ಪಲಾಯನ ಮಾಡಲು ಅನಿವಾರ್ಯಗೊಳಿಸಿದ್ದರು. ಆ ಬಗ್ಗೆ ಓವೈಸಿ ಎಂದಾದರೂ ಮಾತನಾಡಿದ್ದಾರೆಯೆ? ಅದು ಅವರ ಯಾವ ದ್ವೇಷವಾಗಿತ್ತು ಎಂಬುದನ್ನು ಅವರು ಎಂದಿಗೂ ಹೇಳುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ! – ಸಂಪಾದಕರು)

೪ . ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೋಯಿತ್ರಾ ಅವರು ಈ ಆದೇಶವನ್ನು ಸಂವಿಧಾನ ವಿರೋಧಿ ಎಂದು ಟೀಕಿಸಿದ್ದಾರೆ. (ಬಂಗಾಳದಲ್ಲಿ ಪ್ರತಿದಿನ ನಡೆಯುತ್ತಿರುವ ಘಟನೆಗಳೆಲ್ಲಾ ಸಂವಿಧಾನದ ಪ್ರಕಾರವೇ ನಡೆಯುತ್ತಿದೆ, ಎಂದು ಮೋಯಿತ್ರಾ ಅವರು ಹೇಳ ಬಯಸುತ್ತಿದ್ದಾರೆಯೆ? – ಸಂಪಾದಕರು)

ಸಂಪಾದಕೀಯ ನಿಲುವು

ಇಡೀ ದೇಶದಲ್ಲಿಯೇ ಈ ಬಗ್ಗೆ ಕಾನೂನು ರೂಪಿಸಿ, ಅಂಗಡಿಗಳು , ಹೋಟೆಲ್ ಗಳು ಅಷ್ಟೇ ಅಲ್ಲದೆ, ತಳ್ಳುವಗಾಡಿಯ ಮೇಲೆ ಕೂಡ ಅವರ ಹೆಸರು ಬರೆಯುವುದನ್ನು ಅನಿವಾರ್ಯಗೊಳಿಸಬೇಕು. ಉತ್ತರಪ್ರದೇಶ ಅಷ್ಟೇ ಅಲ್ಲದೆ, ದೇಶದ ಅನೇಕ ರಾಜ್ಯಗಳಲ್ಲಿ ಮುಸಲ್ಮಾನರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಯ ಹೆಸರನ್ನಿಟ್ಟು ಹಿಂದೂಗಳನ್ನು ದಾರಿ ತಪ್ಪಿಸುತ್ತಾರೆ, ಇದನ್ನು ತಡೆಯುವುದಕ್ಕಾಗಿ ಈ ಕ್ರಮ ಆವಶ್ಯಕವಾಗಿದೆ.

ಉಗುಳು ಜಿಹಾದ್, ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಜಿಹಾದ್ ಗಳನ್ನು ತಡೆಯುವುದಕ್ಕಾಗಿ ಇದು ಉತ್ತಮ ಮಾರ್ಗವಾಗಿದೆ.

ಹಿಂದೂಗಳಿಗೆ ಆವಶ್ಯಕತೆ ಇಲ್ಲದಿದ್ದರೂ ಕೂಡ ಹಲಾಲ್ ಪ್ರಮಾಣಪತ್ರವಿರುವ ಉತ್ಪಾದನೆಗಳನ್ನು ಖರೀದಿಸಲು ಅನಿವಾರ್ಯಗೊಳಿಸುತ್ತಿರುವಾಗ ವಿರೋಧ ಪಕ್ಷದವರು ಈ ಬಗ್ಗೆ ಬಾಯಿ ತೆರೆಯುವುದಿಲ್ಲ; ಆದರೆ ಈಗ ಸರಕಾರವೇ ಅಧಿಕೃತವಾಗಿ ನಿಜವಾದ ಹೆಸರು ಬರೆಯುವಂತೆ ಆದೇಶ ನೀಡಿದ್ದರೆ ಅವರಿಗೆ ಹೊಟ್ಟೆ ಉರಿ ಏಕೆ?