ಬ್ರಿಟಿಷ್ ಚುನಾವಣೆಯಲ್ಲಿ ಕಿರ್ ಸ್ಟಾರ್ಮರ್ ಸೇರಿದಂತೆ ಅನೇಕರಿಂದ ಶ್ಲಾಘನೆ !
ಲಂಡನ್ (ಬ್ರಿಟನ್) – ರಿಷಿ ಸುನಕ್ ಅವರ ಪಕ್ಷವನ್ನು ಸೋಲಿಸಿ ಬ್ರಿಟನ್‌ನಲ್ಲಿ ಕೀರ್ ಸ್ಟಾರ್ಮರ್ ಅವರ ಪಕ್ಷವು ಅಧಿಕಾರಕ್ಕೆ ಬಂದಿದೆ. ಬ್ರಿಟನ್‌ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ, ‘ಕರುಲ್ಕರ್ ಪ್ರತಿಷ್ಠಾನ’ದ ಅಧ್ಯಕ್ಷ ಪ್ರಶಾಂತ್ ಕರುಲ್ಕರ್ ಮತ್ತು ಪ್ರತಿಷ್ಠಾನದ ಉಪಾಧ್ಯಕ್ಷೆ ಶೀತಲ್ ಕರುಲ್ಕರ್ ಅವರ ಪುತ್ರ ವಿವಾನ್ ಕರುಲ್ಕರ್ 16 ನೇ ವಯಸ್ಸಿನವನು ‘ಸನಾತನ ಧರ್ಮ: ಸೋರ್ಸ್ ಆಫ್ ಆಲ್ ಸೈನ್ಸ್'(ಸನಾತನ ಧರ್ಮ : ಎಲ್ಲಾ ವಿಜ್ಞಾನದ ಮೂಲ) ಪುಸ್ತಕ ಬರೆದನು. ಪುಸ್ತಕವು ಸಹ ಬಹಳ ಮೆಚ್ಚುಗೆಯನ್ನು ಪಡೆಯಿತು. ಸ್ಟಾರ್‌ಮರ್‌ಗೆ ಲಂಡನ್‌ನ ಹಿರಿಯ ಪತ್ರಕರ್ತ ಹರಿದತ್ತ ಜೋಶಿ ಅವರು ಪುಸ್ತಕವನ್ನು ನೀಡಿದರು. ಸ್ಟಾರ್ಮರ್ ಕೂಡ ಪುಸ್ತಕವನ್ನು ಶ್ಲಾಘಿಸಿದರು ಮತ್ತು ವಿವಾನ್ ನ ಪ್ರಯತ್ನಗಳಿಗಾಗಿ ಶ್ಲಾಘಿಸಿದರು. ಪ್ರಶಾಂತ್ ಕರುಲ್ಕರ್ ಅವರು ಗೆಲುವು ಸಾಧಿಸಿದ ಸ್ಟಾರ್ಮರ್ ಅವರನ್ನು ಅಭಿನಂದಿಸಿದರು ಮತ್ತು ಚುನಾವಣೆಯಲ್ಲಿ ಭಾರತೀಯರನ್ನು ಆಕರ್ಷಿಸಲು ಎಲ್ಲಾ ಅಭ್ಯರ್ಥಿಗಳು ಹಿಂದೂ ಧರ್ಮದಲ್ಲಿ ಶ್ರದ್ಧೆಯನ್ನು ತೋರಿಸುತ್ತಿದ್ದಾರೆ. ಬ್ರಿಟನ್ ನ ಅಭ್ಯರ್ಥಿಗಳಲ್ಲಿ ಹಿಂದುತ್ವದ ಬಗ್ಗೆ ಕುತೂಹಲ ಎದ್ದು ಕಾಣುತ್ತಿತ್ತು. ಪ್ರಚಾರದ ವೇಳೆ ಹಲವು ಅಭ್ಯರ್ಥಿಗಳು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಆ ಸಮಯದಲ್ಲಿ ವಿವಾನ್ ಅವನ ಪುಸ್ತಕದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಪುಸ್ತಕವನ್ನು ಬರೆದ ವಿವಾನ್ ಅವರಿಗೆ ಅಭಿನಂದನೆಗಳು ನೀಡಿದರು.