ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಂದ ‘ಲಲಿತಾತ್ರಿಪುರ ಸುಂದರಿಯಂತ್ರದ ಪೂಜೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಿಂದ ಷೋಡಶ-ನಿತ್ಯದೇವಿಯಂತ್ರದ ಪೂಜೆ !

ಕಾಂಚೀಪುರಮ್‌ನ ಸನಾತನ ಸೇವಾಕೇಂದ್ರದಲ್ಲಿ ಪೂಜಿಸಲ್ಪಟ್ಟ ಲಲಿತಾತ್ರಿಪುರ ಸುಂದರಿ ಯಂತ್ರ

ಕಾಂಚಿಪುರಂ (ತಮಿಳುನಾಡು) – ಕಾಂಚಿಪುರಂನಲ್ಲಿರುವ ಸನಾತನ ಸೇವಾಕೇಂದ್ರದಲ್ಲಿ ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ್ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಜೂನ್ ೧೮ ರಂದು ‘ಸ್ವಾತಿ ನಕ್ಷತ್ರದ ಸಮಯದಲ್ಲಿ ‘ಲಲಿತಾತ್ರಿಪುರ ಸುಂದರಿಯಂತ್ರದ ಪೂಜೆಯನ್ನು ವಿಧಿವತ್ತಾಗಿ ಮಾಡಿದರು. ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸೂಕ್ಷ್ಮದಿಂದ ಬರುವ ಅಡೆತಡೆಗಳನ್ನು ನಿವಾರಿಸುವುದು ಮತ್ತು ಆ ಕುರಿತು ಸೇವೆ ಸಲ್ಲಿಸುತ್ತಿರುವ ಹಿಂದುತ್ವನಿಷ್ಠ ಮತ್ತು ಕಾರ್ಯಕರ್ತರಿಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶಕ್ತಿ ಸಿಗಬೇಕು, ಎಂಬ ಉದ್ದೇಶದಿಂದ ಈ ಪೂಜೆಯನ್ನು ಮಾಡಲಾಯಿತು.

‘ಷೋಡಶ-ನಿತ್ಯದೇವಿ ಯಂತ್ರದ ಪೂಜೆ ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ರಾಮನಾಥಿ (ಗೊವಾ) : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಹಸ್ತದಿಂದ ಜೂನ್ ೧೮ ರಂದು ಸ್ವಾತಿ ನಕ್ಷತ್ರದ ಸಮಯದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ನಿಮಿತ್ತ ‘ಷೋಡಶ – ನಿತ್ಯದೇವಿ ಯಂತ್ರದ ಪೂಜೆ ಮಾಡಬೇಕೆಂದು ಸಪ್ತರ್ಷಿಗಳು ಡಾ. ಉಲಗನಾಥನ್‌ರ ಮಾಧ್ಯಮದಿಂದ ಹೇಳಿದ್ದರು.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸೂಕ್ಷ್ಮದಿಂದ ಬರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಅದರ ಕುರಿತು ಸೇವೆ ಮಾಡುವ ಹಿಂದುತ್ವನಿಷ್ಠ ಮತ್ತು ಕಾರ್ಯಕರ್ತರಿಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಊರ್ಜೆ ಪ್ರಾಪ್ತಿಯಾಗಬೇಕು, ಎಂಬ ಉದ್ದೇಶದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಹಸ್ತದಿಂದ ಈ ಪೂಜೆಯನ್ನು ಮಾಡಲಾಯಿತು. ಸನಾತನ ಪುರೋಹಿತ ಪಾಠಶಾಲೆಯ ಸರ್ವಶ್ರೀ ಅಮರ ಜೋಶಿ ಮತ್ತು ಸಿದ್ದೇಶ ಕರಂದಿಕರ ಇವರು ಈ ಪೂಜೆಯ ಪುರೋಹಿತ್ಯವನ್ನು ನಿರ್ವಹಿಸಿದ್ದರು. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ‘ಷೋಡಶ- ನಿತ್ಯದೇವಿ ಯಂತ್ರದ ಪೂಜೆ ಮಾಡಿ ೧೬.೨.೨೦೨೪ ರಂದು ಅಂದರೆ ರಥಸಪ್ತಮಿ ತಿಥಿಯಂದು ಬ್ರಹ್ಮೋತ್ಸವಕ್ಕಾಗಿ ಸಿದ್ಧಪಡಿಸಿದ ರಥದಲ್ಲಿ ಇಡಬೇಕು ಎಂದು ಸಪ್ತರ್ಷಿಗಳು ಪೂ. ಡಾ. ಓಂ ಉಲಗನಾಥನ ಅವರ ಮಾಧ್ಯಮದಿಂದ ಹೇಳಿದ್ದರು.

ವೈಶಿಷ್ಟ್ಯಪೂರ್ಣ ಅಂಶಗಳು

ಕಾಂಚೀಪುರಮ್‌ದಲ್ಲಿ ಆಕಾಶದಲ್ಲಿ ಹೊರಹೊಮ್ಮುತ್ತಿರುವ ನೀಲಿ ಕಿರಣಗಳು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಜೂನ್ ೧೮ ರಂದು ಸಂಜೆ ಅಗ್ನಿಹೋತ್ರವನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯಕರ್ತರು ಮತ್ತು ಹಿಂದುತ್ವನಿಷ್ಠರಿಗೆ ಮಾಡಲಾಗುವ ಮಾರ್ಗದರ್ಶನ ಮುಂತಾದ ಕಾರ್ಯಗಳಿಗೆ ಭಗವಾನ್ ವಿಷ್ಣುವಿನ ಆಶೀರ್ವಾದ ಪ್ರಾಪ್ತವಾಗಲಿ; ಎಂದು ಅಗ್ನಿನಾರಾಯಣನಲ್ಲಿ ಪ್ರಾರ್ಥಿಸಿದರು. ಈ ಪ್ರಾರ್ಥನೆಯನ್ನು ಮಾಡಿದಾಕ್ಷಣ, ಪೂರ್ವದಿಕ್ಕಿನ ಆಕಾಶದಿಂದ ನೀಲಿ ಕಿರಣಗಳು ಹೊರಬಂದವು. ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ‘ಪಂಚಮಹಾಭೂತಗಳ ಆಶೀರ್ವಾದ ಸಿಕ್ಕಿತು, ಎಂದು ಅರಿವಾಯಿತು. (ಆ ಕುರಿತಾದ ಚಿತ್ರವನ್ನು ಮೇಲೆ ನೋಡಬಹುದು)