New Indian Penal Code: ನೂತನ ಭಾರತೀಯ ದಂಡ ಸಂಹಿತೆಯಲ್ಲಿ ಮಹಿಳೆಯರಿಗೆ ಮೋಸ ಮಾಡುವುದನ್ನು ತಡೆಯಬಹುದು

ಧರ್ಮವನ್ನು ಮರೆಮಾಚಿ ವಿವಾಹವಾಗಿ ವಂಚಿಸುವವರಿಗೆ ಹೊಸ ಕಾನೂನಿನಲ್ಲಿ 10 ವರ್ಷಗಳ ಶಿಕ್ಷೆಯ ಅವಕಾಶ!

ನವದೆಹಲಿ – ಹೊಸ ಭಾರತೀಯ ದಂಡ ಸಂಹಿತೆಯ ಪ್ರಕಾರ, ಯಾವುದೇ ಧರ್ಮದ ವ್ಯಕ್ತಿ ತನ್ನ ಧಾರ್ಮಿಕ ಗುರುತನ್ನು ಮರೆಮಾಚಿ ಮದುವೆಯಾದರೆ ಅಥವಾ ದಾರಿ ತಪ್ಪಿಸುವಂತೆ ಮಾಡಿದರೆ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆಯ ಆರ್ಟಿಕಲ್ 69 ಇದನ್ನು ವಿವರಿಸುತ್ತದೆ ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಕೀಲ ರುದ್ರ ವಿಕ್ರಮ್ ಸಿಂಗ್ ಅವರು, ಮದುವೆಯ ನೆಪದಲ್ಲಿ ವಂಚನೆ ಮಾಡಿ ಅಥವಾ ಗುರುತು ಮರೆಮಾಚಿ ಮದುವೆಯಾದರೆ ಅದನ್ನು ಅಪರಾಧ ಎಂದು ಘೋಷಿಸಿದ್ದಾರೆ. ‘ಲವ್ ಜಿಹಾದ್’ ಪಿತೂರಿಗಳನ್ನು ಎದುರಿಸಲು ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುವ ವ್ಯಕ್ತಿಗೆ ಈಗ ಗಲ್ಲುಶಿಕ್ಷೆ

ಭಾರತೀಯ ದಂಡ ಸಂಹಿತೆಯ 63 ನೇ ವಿಧಿಯು ಅತ್ಯಾಚಾರವನ್ನು ವ್ಯಾಖ್ಯಾನಿಸುತ್ತದೆ, ಆದರೆ ಆರ್ಟಿಕಲ್ 64 ಶಿಕ್ಷೆಯನ್ನು ಒದಗಿಸುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಿ, ಅಪರಾಧಿಗೆ ಕನಿಷ್ಠ 10 ವರ್ಷಗಳ ಶಿಕ್ಷೆ ಇರುತ್ತದೆ. ಸೆಕ್ಷನ್ 70 (2) ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಶಿಕ್ಷೆಯನ್ನು ನೀಡುತ್ತದೆ. 16 ವರ್ಷದೊಳಗಿನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಶಿಕ್ಷೆಯನ್ನು 20 ವರ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೂ ಇದರಲ್ಲಿ ಗಲ್ಲು ಶಿಕ್ಷೆಯನ್ನು ಸಹ ಒದಗಿಸುತ್ತದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದರೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ಅಥವಾ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.

ಸಂಪಾದಕೀಯ ನಿಲುವು

ಈ ಕಾಯಿದೆಯಿಂದ ತನ್ನ ಧರ್ಮವನ್ನು ಮುಚ್ಚಿಟ್ಟು ಹಿಂದೂ ಹುಡುಗಿಯರನ್ನು ಮದುವೆಯಾಗುವ ಮುಸ್ಲಿಂ ಯುವಕರಲ್ಲಿ ಸದ್ದಡಗಿಸಬಹುದೇ, ಎಂಬುದು ಮುಂಬರುವ ದಿನಗಳಲ್ಲಿ ನೋಡಬೇಕು!