ಗಾಜಾ: ರಫಾದಲ್ಲಿ 900 ಉಗ್ರರ ಹತ್ಯೆ! – ಇಸ್ರೇಲ್ ಸೇನಾ ಮುಖ್ಯಸ್ಥ

ಟೆಲ್ ಅವಿವ್ – ಮೇ ತಿಂಗಳಲ್ಲಿ ಇಸ್ರೇಲ್ ಗಾಜಾದ ದಕ್ಷಿಣ ಭಾಗದ ರಫಾ ಪ್ರದೇಶದಲ್ಲಿ ಆಕ್ರಮಣ ಮಾಡಿತ್ತು. ಈ ದಾಳಿಯಲ್ಲಿ ಇದುವರೆಗೆ 900 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ. ಹಲೇವಿ ಮುಂದೆ ಮಾತನಾಡಿ, ರಾಫಾದಲ್ಲಿ ಮೂಲಭೂತ ಸೌಕರ್ಯಗಳನ್ನು ನಷ್ಟಗೊಳಿಸುವ ಅಭಿಯಾನವನ್ನು ಕೈಗೊಳ್ಳಲಾಗಿದೆ. ಈ ಅಭಿಯಾನ ಮುಂದಿನ ಕೆಲವು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು. ಇಸ್ರೇಲ್ ಮೇಲೆ ಆಕ್ರಮಣ ಪ್ರಾರಂಭಿಸುವ ಮೊದಲು, ಬಾಂಬ್ ಸ್ಫೋಟಗಳಿಂದ ತಪ್ಪಿಸಿಕೊಳ್ಳಲು ಪ್ಯಾಲೆಸ್ಟೀನಿಯಾದವರು ರಫಾದಲ್ಲಿ ಆಶ್ರಯ ಪಡೆದಿದ್ದರು ಎಂದವರು ತಿಳಿಸಿದರು.
ಹಮಾಸ್ ಸಂಪೂರ್ಣವಾಗಿ ನಾಶವಾಗುವವರೆಗೆ ಕದನ ವಿರಾಮ ಘೋಷಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ. ಹಮಾಸ್ ನ ದಾಳಿಯ ನಂತರ, ಇಸ್ರೇಲ್ ನ ಸೇನೆಯು ಗಾಜಾದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಈ ದಾಳಿಯಲ್ಲಿ ಇದುವರೆಗೆ ಸುಮಾರು 40 ಸಾವಿರ ಜನರು ಸಾವನ್ನಪ್ಪಿದ್ದಾರೆ.