Rishi Sunak : ನಾನು ಹಿಂದೂ ಆಗಿದ್ದಕ್ಕೆ ಮತ್ತು ಶ್ರೀಮದ್ ಭಗವದ್ಗೀತೆಯ ಮೇಲೆ ಕೈಯಿಟ್ಟು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ! – ರಿಷಿ ಸುನಕ್

  • ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿಕೆ !

  • ಚುನಾವಣೆ ಹಿನ್ನೆಲೆಯಲ್ಲಿ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ !

ಲಂಡನ್ (ಬ್ರಿಟನ್) – ನಾನು ಓರ್ವ ಹಿಂದೂ ಆಗಿದ್ದು ನಿಮ್ಮೆಲ್ಲರಂತೆ ನನಗೆ ನನ್ನ ಹಿಂದೂ ಧರ್ಮದ ನಂಬಿಕೆಯಲ್ಲಿ ಸ್ಫೂರ್ತಿ ಮತ್ತು ಆನಂದ ಸಿಗುತ್ತದೆ. ನಾನು ಶ್ರೀಮದ್ ಭಗವದ್ಗೀತೆಯ ಮೇಲೆ ಕೈಯಿಟ್ಟು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ, ಎಂದು ಲಂಡನ್ ನ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಈ ವೇಳೆ ರಿಷಿ ಅವರ ಪತ್ನಿ ಅಕ್ಷತಾ ಕೂಡ ಜೊತೆಗಿದ್ದರು. ಬ್ರಿಟನ್‌ನಲ್ಲಿ ಶೀಘ್ರದಲ್ಲೇ ಚುನಾವಣೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸುನಕ್ ದೇವಸ್ಥಾನಕ್ಕೆ ಭೇಟಿ ನೀಡಿ ಈ ಮೇಲಿನ ಹೇಳಿಕೆ ನೀಡಿದ್ದಾರೆ.

ನಮ್ಮ ಶ್ರದ್ಧೆಯು ನಮಗೆ ನಮ್ಮ ಕರ್ತವ್ಯವನ್ನು ಮಾಡಲು ಕಲಿಸುತ್ತದೆ ಎಂದು ಪ್ರಧಾನಿ ಸುನಕ್ ಹೇಳಿದರು. ಯಾರು ಅದನ್ನು ನಿಷ್ಠೆಯಿಂದ ಮಾಡುತ್ತಾರೋ ಅವರು ಅದರ ಪರಿಣಾಮಗಳಿಗೆ ಹೆದರಬಾರದು. ನನ್ನ ಅಂತರ್ ಪ್ರೇರಣೆಯು ನನಗೆ ಇದನ್ನೇ ಒಪ್ಪಿಕೊಳ್ಳಲು ಕಲಿಸಿದೆ. ನಾನು ನನ್ನ ಜೀವನವನ್ನು ನಡೆಸಲು ಪ್ರಯತ್ನಿಸುತ್ತೇನೆ ಎಂದರು.

ಸಂಪಾದಕೀಯ ನಿಲುವು

ರಿಷಿ ಸುನಕ್ ಅವರ ಸ್ವ ಧರ್ಮದ ಮೇಲಿನ ಪ್ರೀತಿ ಶ್ಲಾಘನೀಯವಾಗಿದ್ದರೂ, ಅವರು ಅಲಂಕರಿಸಿರುವ ಹುದ್ದೆಯ ಮೂಲಕ ಸ್ವ ಧರ್ಮ ಮತ್ತು ಹಿಂದೂ ಧರ್ಮೀಯರಿಗಾಗಿ ಏನಾದರೂ ಮಾಡಿದ್ದಾರೆಯೇ ? ಅವರ ಜಾಗದಲ್ಲಿ ಒಬ್ಬ ಕ್ರಿಶ್ಚಿಯನ್ ಅಥವಾ ಮುಸಲ್ಮಾನ ಇದ್ದಿದ್ದರೆ, ಅವರು ತಮ್ಮ ಧರ್ಮಕ್ಕಾಗಿ ಯಥಾಶಕ್ತಿ ಪ್ರಯತ್ನ ಮಾಡುತ್ತಿದ್ದರು !