ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಉದ್ಘಾಟನಾ ಸತ್ರ
ರಾಮನಾಥ ದೇವಸ್ಥಾನ – ಭಾರತದಲ್ಲಿ ಇತ್ತೀಚೆಗಷ್ಟೇ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೂರನೇ ಬಾರಿ ಕೇಂದ್ರದಲ್ಲಿ ಸರಕಾರ ಸ್ಥಾಪನೆಯಾಗಿದೆ. ಈ ಸರಕಾರಕ್ಕೆ ಸಂಸದರ ಅಪೇಕ್ಷಿತ ಸಂಖ್ಯಾಬಲ ದೊರಕದ ಕಾರಣ ಹಿಂದುತ್ವನಿಷ್ಠರಲ್ಲಿ ಸ್ವಲ್ಪ ನಿರುತ್ಸಾಹ ಉಂಟಾಗಿದೆ; ಆದರೆ ಈಗ ಆರಂಭವಾದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಿಂದ ಈ ನಿರುತ್ಸಾಹ ದೂರವಾಗಿ ದೇಶದ ಸಮಸ್ತ ಹಿಂದುತ್ವನಿಷ್ಠರಲ್ಲಿ ಒಂದು ಹೊಸ ಉತ್ಸಾಹ ಸಂಚಾರವಾಗಲಿದೆ, ಎಂದು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ, ಮುಂಬಯಿಯ ಕಾರ್ಯಾಧ್ಯಕ್ಷ ರಣಜಿತ ಸಾವರಕರ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಉದ್ಘಾಟನೆಯ ಸತ್ರದಲ್ಲಿ ಹೇಳಿಕೆ ನೀಡಿದರು.‘ಹಿಂದೂಗಳು ಮಾಡುತ್ತಿರುವ ವ್ಯಾಪಾರೋದ್ಯಮಗಳಿಗೆ ಹಿಂದೂಗಳೇ ಉತ್ತೇಜನ ನೀಡುವುದು ಆವಶ್ಯಕ’, ಈ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
🕉️”The ‘Om Shuddh Certificate’ is the answer to the parallel economy created through #Halal certification!” – @RanjitSavarkar, Chairman, Swatantryaveer Savarkar Rashtriya Smarak, Mumbai, Maharashtra.
He emphasized the need for promoting the ‘Hindu To Hindu Business Model’ as the… pic.twitter.com/6BcHPIfvGi— HinduJagrutiOrg (@HinduJagrutiOrg) June 24, 2024
ನಮಗೆ ಹಿಂದೂ ರಾಷ್ಟ್ರ ಅನಾಯಾಸವಾಗಿ ಸಿಗುವುದಿಲ್ಲ, ಆದರೆ ಅದನ್ನು ಸಂಘರ್ಷ ಮಾಡಿಯೇ ಪಡೆಯಬೇಕಾಗಿದೆ. ಅದಕ್ಕಾಗಿ ನಾವು ಅಧ್ಯಯನ ಮತ್ತು ಹಿಂದುಸಂಘಟನೆ ಮಾಡುವುದು ಆವಶ್ಯಕವಾಗಿದೆ. ಮಹಾಭಾರತದಲ್ಲಿ ೧೨ ವರ್ಷಗಳ ವನವಾಸದ ನಂತರ ಪಾಂಡವರು ಶಮಿ ವೃಕ್ಷದಿಂದ ಶಸ್ತ್ರಗಳನ್ನು ತೆಗೆದಿದ್ದರು, ಅದು ಒಂದು ಮಹೋತ್ಸವವಾಗಿತ್ತು. ಅದೇ ರೀತಿ ಈಗಲೂ ಹಿಂದೂಗಳು ಶಸ್ತ್ರಗಳನ್ನು ತೆಗೆದು ಹಿಂದುವಿರೋಧಿ ಕಥಾನಕಗಳನ್ನು ನಾಶ ಮಾಡಬೇಕಾಗಿದೆ. ಇವು ಸಾಂಪ್ರದಾಯಿಕ ಶಸ್ತ್ರಗಳಲ್ಲ; ವೈಚಾರಿಕ ಸ್ವರೂಪದ್ದಾಗಿವೆ. ಅದರಲ್ಲಿ ಆರ್ಥಿಕ ಶಸ್ತ್ರವು ಪ್ರಮುಖವಾದುದಾಗಿದೆ. ಇದನ್ನು ಗಮನದಲ್ಲಿಟ್ಟು ಹಲಾಲ ಪ್ರಮಾಣಪತ್ರದ ಮಾಧ್ಯಮದಿಂದ ಮುಸಲ್ಮಾನರು ಸೃಷ್ಟಿಸಿರುವ ಸಮಾನಾಂತರ ಆರ್ಥಿಕತೆಯನ್ನು ಎದುರಿಸಲು ಹಿಂದುತ್ವನಿಷ್ಠ ಸಂಘಟನೆಗಳ ನೇತೃತ್ವದಲ್ಲಿ ತೀರ್ಥಕ್ಷೇತ್ರ ತ್ರ್ಯಂಬಕೇಶ್ವರದಿಂದ ‘ಓಂ ಶುದ್ಧ ಪ್ರಮಾಣಪತ್ರ’ವನ್ನು ಹಿಂದೂ ಅಂಗಡಿಕಾರರಿಗೆ ನೀಡಲು ಆರಂಭಿಸಲಾಗಿದೆ. ಅದನ್ನು ಕೇವಲ ಹಿಂದೂ ಅಂಗಡಿಕಾರರಿಗೆ ನೀಡಲಾಗುತ್ತದೆ. ತೀರ್ಥಕ್ಷೇತ್ರಗಳ ಸ್ಥಳದಲ್ಲಿ ಮುಸಲ್ಮಾನ ಅಂಗಡಿಕಾರರು ಸಹ ದೊಡ್ಡ ಪ್ರಮಾಣದಲ್ಲಿ ಪ್ರಸಾದದ ಅಂಗಡಿಗಳನ್ನು ಇಟ್ಟಿರುತ್ತಾರೆ. ಅವರ ಬಳಿ ಇರುವ ಪ್ರಸಾದ ಶುದ್ಧ ಮತ್ತು ಪವಿತ್ರ ಇರುತ್ತದೆ, ಎಂದು ಹೇಳಲಾಗುವುದಿಲ್ಲ. ಆದುದರಿಂದ ದೇವರಿಗೆ ಶುದ್ಧ ಮತ್ತು ಪವಿತ್ರ ಪ್ರಸಾದವನ್ನೇ ಅರ್ಪಿಸಲು ಈ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ.