Hindu Rashtra Intellectual Guidance : ಹಿಂದೂ ಧರ್ಮ ಅಪಮಾನಿಸುವವರಿಗೆ ಹಿಂದೂ ವಿಚಾರ ಪರಿಷತ್ತಿನ ಮೂಲಕ ಉತ್ತರ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಉದ್ಘಾಟನಾ ಸತ್ರ

ಸದ್ಗುರು ಡಾ. ಚಾರುದತ್ತ ಪಿಂಗಳೆ

ರಾಮನಾಥ ದೇವಸ್ಥಾನ : ಸದ್ಯದ ಸ್ಥಿತಿಯಲ್ಲಿ ಸಾಮ್ಯವಾದಿಗಳು ಪರಿಸ್ಥಿತಿಗನುಸಾರ ಯಾವ ಕಥಾನಕ(ನರೆಟಿವ್) ಉಪಯೋಗಿಸುವುದು, ಹೇಗೆ ಉಪಯೋಗಿಸುವುದು, ಅದಕ್ಕಾಗಿ ‘ಟೂಲ್ ಕಿಟ್’ (ಕೃತಿ ಕಾರ್ಯಕ್ರಮ ತಯಾರಿಸುವುದು) ಕ್ರಮಬದ್ಧವಾಗಿ ಉಪಯೋಗಿಸುತ್ತಿದ್ದಾರೆ. ಸಾಮ್ಯವಾದಿಗಳು ಸುಳ್ಳನ್ನು ಸತ್ಯವಾಗಿಸಲು ಕಥಾನಕಗಳನ್ನು ಉಪಯೋಗಿಸಿ ಪ್ರಸಾರಮಾಧ್ಯಮಗಳು, ರಾಜಕಾರಣಿಗಳು ಮೊದಲಾದವರ ಮೂಲಕ ಸಮಾಜವನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ನಾವು ನಮ್ಮ ಮೇಲಾಗುತ್ತಿರುವ ಅನ್ಯಾಯವನ್ನು ಸಹ ಸಮಾಜದೆದುರು ಮಂಡಿಸಲು ಕಮ್ಮಿ ಬೀಳುತ್ತಿದ್ದೇವೆ. ಈ ಕೊರತೆಯನ್ನು ತುಂಬಿಸಲು ಈ ಅಧಿವೇಶನಕ್ಕೆ ಬಂದಿರುವ ಕೆಲವು ವಿಚಾರವಂತಹ ಸಹಕಾರದಿಂದ ‘ಹಿಂದೂ ಇಂಟಲೆಕ್ಚುವಲ್ ಫೋರಮ್’ಅನ್ನು(ಹಿಂದೂ ವಿಚಾರ ಪರಿಷತ್ತು) ಸ್ಥಾಪಿಸಲಾಗಿದೆ. ಭವಿಷ್ಯದಲ್ಲಿ ಹಿಂದೂ ಧರ್ಮವನ್ನು ಅಪಮಾನಿಸುವವರಿಗೆ ಈ ಸಂಘಟನೆಯ ಮೂಲಕ ಉತ್ತರ ನೀಡಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಉದ್ಘಾಟನಾ ಸತ್ರದಲ್ಲಿ ಹೇಳಿದರು.

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಭಾಷಣದ ಮುಖ್ಯಾಂಶಗಳು

ಹಿಂದೂ ಸಮಾಜವು ತನ್ನ ಜವಾಬ್ದಾರಿಯನ್ನು ಮರೆತಿದೆ !

ಈ ಬಾರಿಯ ಲೋಕಸಭೆ ಚುನಾವಣೆ ಅಂದರೆ ಭಾಜಪ ಸಹಿತ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ನಮಗೆಲ್ಲರಿಗೂ ಒಂದು ಪಾಠವಾಗಿದೆ. ಹಿಂದುತ್ವದ ವಿಷಯದಲ್ಲಿ ಜಾಗರೂಕರಾಗಿರುವ ಹಿಂದೂಗಳ ಒಂದು ವರ್ಗಕ್ಕೆ, ‘ಈಗ ಕೇಂದ್ರದಲ್ಲಿ ನಮ್ಮ ಸರಕಾರವಿದೆ ಮತ್ತು ಎಲ್ಲವೂ ಆಗಲಿದೆ. ಹಾಗಾಗಿ ನಾವೇನೂ ಮಾಡುವ ಅವಶ್ಯಕತೆಯಿಲ್ಲ.’ ಎಂದು ಅನಿಸಬಹುದು. ಇನ್ನೊಂದು ವರ್ಗಕ್ಕೆ ‘ಯಾವುದು ಆಗಬೇಕಿತ್ತೋ ಅದು ಆಗುತ್ತಿಲ್ಲ. ಆದರೆ ಮುಂದಾದರೂ ಆಗಬಹುದು’, ಎಂದು ವಿಚಾರ ಮಾಡಿ ಆತ ಆಶಾವಾದಿ ಆಗುತ್ತಾನೆ. ಒಟ್ಟಿನಲ್ಲಿ ಹಿಂದೂ ಸಮಾಜವು ಊಹಿಸುತ್ತದೆ ಅಥವಾ ಯಾರ ಮೇಲಾದರೂ ಅವಲಂಬಿಸಿಕೊಂಡಿರುತ್ತದೆ ಮತ್ತು ತನ್ನ ಜವಾಬ್ದಾರಿಯನ್ನು ಮರೆಯುತ್ತದೆ. ಹಾಗಾಗಿ ಅದು ಮತದಾನ ಮಾಡುವ ಬಗ್ಗೆ ಇರಬಹುದು ಅಥವಾ ಸರಕಾರವು ಅಧಿಕಾರಕ್ಕೆ ಬಂದ ನಂತರ ಹಿಂದೂಹಿತದ ಕಾರ್ಯವನ್ನು ಮಾಡಿಸಿಕೊಳ್ಳುವ ಬಗ್ಗೆ ಇರಲಿ, ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಇದನ್ನು ನಾವು ಬದಲಾಯಿಸಬೇಕಾಗಿದೆ.

ಹಿಂದೂಗಳ ಮೇಲಾಗುವ ಅನ್ಯಾಯವನ್ನು ಪರಿಣಾಮಕಾರಿಯಾಗಿ ಹೇಗೆ ಮಂಡಿಸಬಹುದು ಎಂಬ ಅಭ್ಯಾಸ ಮಾಡಬೇಕಾಗಬಹುದು!

ಈ ಸಲದ ಲೋಕಸಭೆಯಲ್ಲಿ ದೇಶದ್ರೋಹದ ಆರೋಪವಿರುವ ಖಲಿಸ್ತಾನಿ ಭಯೋತ್ಪಾದಕ ಅಮೃತಪಾಲ, ಕಾಶ್ಮೀರವನ್ನು ವಿಭಜಿಸಲು ಪಯತ್ನಿಸುತ್ತಿರುವ ರಶೀದ ಇಂಜಿನಿಯರ ಮತ್ತು ಗೋವಾದಲ್ಲಿ ಸಂವಿಧಾನವನ್ನು ಹೇರಲಾಗಿದೆ ಎಂದು ಹೇಳುವ ಕ್ಯಾಪ್ಟನ್ ವಿರಿಯಾಟೋ ಫರ್ನಾಂಡೀಸ ರು ಶಾಸಕರಾಗಿ ಚುನಾಯಿತರಾಗಿದ್ದಾರೆ. ಇದು ದೇಶದ ದೃಷ್ಟಿಯಿಂದ ಅತ್ಯಂತ ಚಿಂತೆಯ ವಿಷಯವಾಗಿದೆ. ಇದರಿಂದ ದೇಶದ ಕಾನೂನುಗಳಲ್ಲಿ ಕೆಲವು ಆಮೂಲಾಗ್ರ ಬದಲಾವಣೆಯ ಅವಶ್ಯಕತೆಯಿದೆ. ಸರ್ವೋಚ್ಚ ನ್ಯಾಯಾಲಯವು ಎಪ್ರಿಲ್ ೨೦೨೩ರಲ್ಲಿ, ಇನ್ನೊಂದು ಧರ್ಮದ ವಿಷಯದಲ್ಲಿ ದ್ವೇಷವನ್ನು ಹುಟ್ಟಿಸುವಂತಹ ಹೇಳಿಕೆ ನೀಡುವುದು, ಅಪರಾಧ ಎಂದು ಹೇಳಿತ್ತು. ಸನಾತನದ್ವೇಷಿಗಳು ಸನಾತನ ಧರ್ಮದ ವಿರುದ್ದ ಮಾಡುತ್ತಿರುವ ವಿಷಕಾರಿ ಹೇಳಿಕೆಗಳ ಬಗ್ಗೆ ಕಾರ್ಯಾಚರಣೆಯಾಗುತ್ತಿಲ್ಲ; ಆದರೆ ಸುದರ್ಶನ ವಾಹಿನಿಯ ಮುಖ್ಯ ಸಂಪಾದಕ ಸುರೇಶ ಚವ್ಹಾಣಕೆ ಇವರು ತಮ್ಮ ಸಭೆಯಲ್ಲಿ ಜನರಿಗೆ ಹಿಂದವೀ ಸ್ವರಾಜ್ಯದ ಪ್ರತಿಜ್ಞೆ ಮಾಡಲು ಹೇಳಿದರೆಂದು ಅವರ ಮೇಲೆ ‘ಹೇಟ್ ಸ್ಪೀಚ್ (ದ್ವೇಷಯುಕ್ತ ಭಾಷಣ ಮಾಡಿದ) ಅಪರಾಧವನ್ನು ನೋಂದಾಯಿಸಲಾಯಿತು. ಭಾಗ್ಯನಗರದ ಸಂಸದ ಟಿ. ರಾಜಾ ಸಿಂಗ್, ಹಿಂದೂ ಜನಜಾಗೃತಿ ಸಮಿತಿಯ ಕೆಲವು ವಕ್ತಾರರ ಮೇಲೆಯೂ ಇಂತಹ ಅಪರಾಧಗಳನ್ನು ನೊಂದಾಯಿಸಲಾಗಿದೆ. ಹಾಗಾಗಿ ಈಗ ನಮ್ಮ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಹೇಳುವಾಗಲೂ ಸತರ್ಕರಾಗಿರಬೇಕಾಗಿದೆ. ಕಾನೂನಿನ ಹಿಡಿತದಲ್ಲಿ ಸಿಲುಕದೇ ಹಿಂದೂಗಳ ಮೇಲಿನ ಅನ್ಯಾಯವನ್ನು ಪರಿಣಾಮಕಾರಿಯಾಗಿ ಹೇಗೆ ಮಂಡಿಸಬಹುದು ಎಂದು ನಾವು ಅಭ್ಯಾಸ ಮಾಡಬೇಕಾಗಬಹುದು.