Modern Science from Indian knowledge : ಭಾರತೀಯ ಜ್ಞಾನದ ಆಧಾರದ ಮೇಲೆ ಪಾಶ್ಚಾತ್ಯ ವೈಜ್ಞಾನಿಕ ಪ್ರಗತಿ ! – ಡಾ. ನಿಲೇಶ್ ಓಕ್, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸಸ್, ಅಮೇರಿಕಾ

‘ವಿಶ್ವಗುರು ಭಾರತದ ಶಕ್ತಿ: ಸನಾತನ ಹಿಂದೂ ಧರ್ಮ’

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೊದಲ ದಿನದ 1 ನೇ ಅಧಿವೇಶನ

ಡಾ. ನೀಲೇಶ್ ಓಕ್

ರಾಮನಾಥಿ ದೇವಸ್ಥಾನ – ಸನಾತನ ಧರ್ಮವು ಶಬ್ದಪ್ರಾಮಾಣ್ಯವನ್ನು ಆಧರಿಸಿದೆ; ಆದರೆ ಪ್ರತ್ಯಕ್ಷ ಪ್ರಮಾಣವೂ ಮುಖ್ಯವಾಗಿದೆ. ನಮ್ಮ ಋಷಿಮುನಿಗಳಿಗೆ ಪ್ರತ್ಯಕ್ಷ ಅನುಭವವಿದೆ, ಅದನ್ನೇ ಶಬ್ದಪ್ರಮಾಣವೆಂದು ಹೇಳಿದ್ದಾರೆ. ಆದ್ದರಿಂದ, ನಮ್ಮ ಶಬ್ದಪ್ರಮಾಣವು ಋಷಿಗಳ ಪ್ರತ್ಯಕ್ಷ ಪ್ರಮಾಣವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಈ ಶಬ್ದಪ್ರಮಾಣವನ್ನು ನಾವು ಪ್ರತ್ಯಕ್ಷವಾಗಿ ಅನುಭವಿಸಲು ಪ್ರಯತ್ನಿಸಬೇಕು. ಪ್ರಸ್ತುತ, ಯುರೋಪಿನಲ್ಲಿ ವಿಜ್ಞಾನವು ಪ್ರಗತಿ ಹೊಂದಿದ್ದರೂ, ಆ ಜ್ಞಾನ ಭಾರತದಿಂದಲೇ ವಿದೇಶಕ್ಕೆ ಹೋಗಿದೆ. ಪಾಶ್ಚಾತ್ಯರು ಭಾರತದ ಸಮೃದ್ಧ ಗ್ರಂಥಗಳನ್ನು ಭಾಷಾಂತರಿಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದಾರೆ.

ರಾಮಾಯಣ ಮತ್ತು ಮಹಾಭಾರತಗಳಲ್ಲಿ ನೂರಾರು ಖಗೋಳ ಉಲ್ಲೇಖಗಳಿವೆ. ಅಮೆರಿಕ, ಕೆನಡಾದ 500-600 ವಿಶ್ವವಿದ್ಯಾಲಯಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರತಿಗಳಿವೆ. ಅಲ್ಲಿನ ಜನರು ಅವುಗಳನ್ನು ಅಧ್ಯಯನ ಮಾಡುತ್ತಾರೆ. ನಾವು ಮನಸ್ಸು ಮತ್ತು ಬುದ್ಧಿಯ ನಡುವಿನ ಸಂದೇಹವನ್ನು ಹೋಗಲಾಡಿಸಬೇಕು. ಬುದ್ಧಿಗೆ ಸತ್ಯ, ದೇಹಕ್ಕೆ ಸೇವೆ ಮತ್ತು ಮನಸ್ಸಿಗೆ ತಾಳ್ಮೆ ಅಳವಡಿಸಿಕೊಳ್ಳಬೇಕು ಎಂದು ಅಮೆರಿಕದ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನೀಲೇಶ್ ಓಕ್ ಹೇಳಿದರು. ಅವರು ‘ವಿಶ್ವಗುರು ಭಾರತದ ಶಕ್ತಿ: ಸನಾತನ ಹಿಂದೂ ಧರ್ಮ’ ವಿಷಯದ ಕುರಿತು ಮಾತನಾಡುತ್ತಿದ್ದರು.