ಅಮೆರಿಕದಿಂದ ೧೫೦ ಸ್ಟ್ರೈಕರ್ ಟ್ಯಾಂಕರ ಖರೀದಿ ಮಾಡಲಿರುವ ಭಾರತ !

ಅಮೇರಿಕಾ ತಂತ್ರಜ್ಞಾನ ನೀಡಲು ಸಿದ್ಧ, ಹಂತಹಂತವಾಗಿ ಭಾರತದಲ್ಲಿ ಉತ್ಪಾದನೆ !

(ಸ್ಟ್ರೈಕರ್ ಟ್ಯಾಂಕರ್ ಎಂದರೆ ೮ ಚಕ್ರದ ಯುದ್ಧದ ಟ್ಯಾಂಕರ್)

ನವ ದೆಹಲಿ – ಭಾರತ ಮತ್ತು ಅಮೆರಿಕಾ ನಡುವೆ ಒಂದು ಮಹತ್ವಪೂರ್ಣ ರಕ್ಷಣಾ ಒಪ್ಪಂದ ಆಗಲಿದೆ. ಇದರಲ್ಲಿ ಅಮೆರಿಕಾ ಭಾರತಕ್ಕೆ ೫೦ ಸ್ಟ್ರೈಕರ್ ಟ್ಯಾಂಕರ್ ಗಳನ್ನು ಪೂರೈಸಲಿದೆ. ಈ ಒಪ್ಪಂದದ ಚರ್ಚೆ ಕೊನೇಯ ಹಂತದಲ್ಲಿದೆ. ಈ ಒಪ್ಪಂದ ದೃಢವಾದರೆ ಚೀನಾ ಗಡಿಯಲ್ಲಿ ಅದಕ್ಕೆ ಸವಾಲು ನೀಡಲು ಭಾರತಕ್ಕೆ ಬೃಹತ್ ಶಕ್ತಿ ದೊರೆಯುತ್ತದೆ. ಅಮೇರಿಕಾದಿಂದ ಭಾರತಕ್ಕೆ ಸ್ಟ್ರೈಕರ್ ಟ್ಯಾಂಕರ್ ನ ವೇಗ ಮತ್ತು ದಾಳಿ ಕ್ಷಮತೆಯ ಪ್ರದರ್ಶನದ ಪ್ರಸ್ತಾವ ಕೂಡ ನೀಡಲಾಗಿದೆ.
ಈ ಒಪ್ಪಂದ ಆದರೆ, ಆಗ ‘ಮೇಕ್ ಇನ್ ಇಂಡಿಯಾ’ ಈ ಅಭಿಯಾನದ ಅಡಿಯಲ್ಲಿ ಭಾರತ ಕೇವಲ ಸಹ ಉತ್ಪಾದಕನಾಗದೆ, ಅಮೇರಿಕಾದ ತಂತ್ರಜ್ಞಾನ ಕೂಡ ಭಾರತಕ್ಕೆ ಹಸ್ತಾಂತರಿಸುವುದು. ಇದರಲ್ಲಿ ಭಾರತೀಯ ಪ್ರದೇಶಕ್ಕೆ ಅನುಕೂಲವಾಗುವ ತಂತ್ರಜ್ಞಾನ ಇದರಲ್ಲಿ ಅಳವಡಿಸಬಹುದು, ಇದರಿಂದ ಲಡಾಕ್ ಮತ್ತು ಸಿಕ್ಕಿಮ್ ಇವುಗಳಂತಹ ಎತ್ತರದ ಪ್ರದೇಶಗಳಲ್ಲಿ ಕೂಡ ಈ ಟ್ಯಾಂಕರ್ ಗಳು ಸುಲಭವಾಗಿ ಉಪಯೋಗಿಸಬಹುದು. ಈ ಟ್ಯಾಂಕರ್ ನ ತಂತ್ರಜ್ಞಾನ ಕೆನಡಾ ಮತ್ತು ಅಮೆರಿಕ ಈ ದೇಶಗಳು ಒಟ್ಟಾಗಿ ಅಭಿವೃದ್ಧಿಪಡಿಸಿದೆ.

ಸ್ಟ್ರೈಕರ್ ಟ್ಯಾಂಕರ್ ನ ವೈಶಿಷ್ಟಗಳು !

೧. ತಾಂತ್ರಿಕ ದೃಷ್ಟಿಯಿಂದ, ಸ್ಟ್ರೈಕರ್ ಟ್ಯಾಂಕರ್ ಇದು ಸೈನ್ಯಕ್ಕೆ ಅಂಗರಕ್ಷಕ ವಾಹನವಾಗಿದೆ.

೨. ಇದರಲ್ಲಿ ೩೦ ಮಿಮೀ ತೋಪು ಮತ್ತು ೧೦೫ ಮಿಮೀ ಮೊಬೈಲ್ ಗನ್ ಇರುತ್ತದೆ.

೩. ೯ ಸೈನಿಕರು ಕುಳಿತುಕೊಳ್ಳುವ ಕ್ಷಮತೆ ಇರುತ್ತದೆ.

೪. ‘ರೇಂಜ್’ ೪೮೩ ಕಿಮೀ ಇದೆ.

೫. ‘ಸ್ಟ್ರೈಕರ್ ಟ್ಯಾಂಕರ್’ನ ವೇಗ ೧೦೦ ಕಿಮೀ ಪ್ರತಿ ಗಂಟೆ ಇದೆ.