ರಫಾಹ ಮೇಲೆ ಇಸ್ರೇಲ್ ನ ಎರಡನೆಯ ದೊಡ್ಡ ದಾಳಿ : ೨೫ ಸಾವು, ೫೦ ಜನರಿಗೆ ಗಾಯ !

ಮೇ ೨೬ ರ ದಾಳಿಯಲ್ಲಿ ೪೫ ಜನ ಹತ !

ತೇಲ್ ಅವಿವ್ (ಇಸ್ರೇಲ್) – ಇಸ್ರೇಲ್ ರಕ್ಷಣಾ ತಂಡ ಜೂನ್ ೨೧ ರಂದು ಗಾಝಾದ ದಕ್ಷಿಣದಲ್ಲಿನ ರಫಾಹನಗರದ ಮೇಲೆ ದಾಳಿ ಮಾಡಿದೆ. ಇದರ ಅಂತರ್ಗತ ನಗರದ ಹೊರಗೆ ‘ಅಲ್ ಮವಾಸಿ’ ಇಲ್ಲಿಯ ಪ್ಯಾಲೇಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಇದರಲ್ಲಿ ೨೫ ಜನರು ಸಾವನ್ನಪ್ಪಿದ್ದು ೫೦ ಜನರು ಗಾಯಗೊಂಡಿದ್ದಾರೆ. ಪ್ಯಾಲೆಸಟೈನ ಆರೋಗ್ಯ ಸಚಿವಾಲಯವು ಈ ದಾಳಿಯ ಮಾಹಿತಿ ನೀಡಿದೆ; ಆದರೆ ಇಸ್ರೇಲ್ ರಕ್ಷಣಾ ದಳದಿಂದ ದಾಳಿ ಮಾಡಿರುವ ಯಾವುದೇ ಸೂಚನೆ ನೀಡಿಲ್ಲ. ಭಯೋತ್ಪಾದಕ ಜನರ ಪ್ರದೇಶದಿಂದ ಭಯೋತ್ಪಾದಕರು ಚಟುವಟಿಕೆ ನಡೆಸುತ್ತಿದ್ದಾರೆ’, ಎಂದು ಇಸ್ರೇಲ್ ಯಾವಾಗಲೂ ಹೇಳುತ್ತದೆ.

ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದಿಂದಾಗಿ ಲಕ್ಷಾಂತರ ಜನರು ಮೊದಲೇ ಆ ಪ್ರದೇಶವನ್ನು ತ್ಯಜಿಸಿ ಪಲಾಯನ ಮಾಡಿದ್ದಾರೆ. ಈ ಹಿಂದೆ ಮೇ ೨೬ ರಂದು ಇಸ್ರೇಲ್ ನಿಂದ ರಫಾಹ ನಿರಾಶ್ರಿತರ ಶಿಬಿರದ ಮೇಲೆ ವಾಯು ದಾಳಿ ನಡೆಸಿತ್ತು. ಅದರಲ್ಲಿ ೪೫ ಜನರು ಸಾವನ್ನಪ್ಪಿದ್ದರು ಹಾಗೂ ೨೦೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಇದರ ನಂತರ ಇಸ್ರೇಲ್ ದ್ವೇಷಿಗಳಿಂದ #AllEyesOnRafah (ಜಗತ್ತಿನ ಗಮನ ರಫಾಹ ಮೇಲೆ) ಈ ಹ್ಯಾಶ್ ಟ್ಯಾಗ್ ಉಪಯೋಗಿಸಿ ಇಸ್ರೇಲನ್ನು ಗುರಿ ಮಾಡಲಾಗಿತ್ತು. ಇದರಲ್ಲಿ ಭಾರತದಲ್ಲಿನ ಪ್ರಗತಿ(ಅಧೋ)ಪರ ಗುಂಪಿನಿಂದ ಇದನ್ನು ಬೆಂಬಲಿಸಿತ್ತು.