ಗುರುಮಹಿಮೆ !

(ಶ್ರೀಮತ್‌ಶಂಕರಾಚಾರ್ಯವಿರಚಿತ ಗುರ್ವಷ್ಟಕಮ್ |)

೧. ಮನಸ್ಸು ಗುರುಗಳ ಚರಣಗಳಲ್ಲಿ ರಮಿಸದಿದ್ದರೆ, ಎಲ್ಲ ವ್ಯರ್ಥವಾಗಿದೆ !

೧ ಅ. ವ್ಯವಹಾರಿಕದೃಷ್ಟಿಯಲ್ಲಿ ಎಲ್ಲವೂ ಉತ್ತಮವಾಗಿದ್ದರೂ ಮನಸ್ಸು ಗುರುಗಳ ಚರಣಗಳಲ್ಲಿ ಇಲ್ಲದಿದ್ದರೆ, ಏನು ಲಾಭ ?

ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೧ ||

ಅರ್ಥ : ಯಾರಾದರೊಬ್ಬನ ದೇಹವು ರೂಪವಂತವಾಗಿದ್ದರೆ, ಪತ್ನಿಯೂ ಸುಂದರವಾಗಿದ್ದಾಳೆ, ಅವನ ಸತ್ಕೀರ್ತಿಯು ನಾಲ್ಕು ದಿಕ್ಕುಗಳಲ್ಲಿ ಹರಡಿದೆ ಮತ್ತು ಅವನ ಬಳಿ ಮೇರು ಪರ್ವತದಷ್ಟು ಅಪಾರ ಧನವಿದೆ; ಆದರೆ ಅವನ ಮನಸ್ಸು ಮಾತ್ರ ಗುರುಗಳ ಶ್ರೀಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗಿರದಿದ್ದರೆ), ಈ ಎಲ್ಲ ವಿಷಯಗಳು ಲಭ್ಯವಿದ್ದರೂ ಅವನಿಗೆ ಏನು ಲಾಭವಾಗಲಿದೆ ?

ಕಲತ್ರಂ ಧನಂ ಪುತ್ರಪೌತ್ರಾದಿಸರ್ವಂ ಗೃಹೋ ಬಾನ್ಧಾವಾಃ ಸರ್ವಮೇತದ್ಧಿ ಜಾತಮ್ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೨ ||

ಅರ್ಥ : ಒಬ್ಬನಿಗೆ ಸುಂದರ ಪತ್ನಿ, ಧನ, ಪುತ್ರ-ಪೌತ್ರ, ಮನೆ ಮತ್ತು ಸ್ವಜನ ಮುಂತಾದವುಗಳು ಪ್ರಾರಬ್ಧದಿಂದ ಎಲ್ಲವೂ ಸುಲಭವಾಗಿ ಸಿಕ್ಕಿದೆ; ಆದರೆ ಒಂದು ವೇಳೆ ಅವನ ಮನಸ್ಸು ಗುರುಗಳ ಶ್ರೀ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗಿರದಿದ್ದರೆ), ಅವನಿಗೆ ಈ ಎಲ್ಲ ಪ್ರಾರಬ್ಧ-ಸುಖಗಳು ದೊರಕಿ ಏನು ಲಾಭವಾಗುತ್ತದೆ ?

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೧ ಆ. ಯಾವುದಾದರೊಬ್ಬನ ಇಚ್ಛೆ ಮತ್ತು ಕಾಮನೆಗಳ ಲೋಭವು ಮುಗಿದಿವೆ; ಆದರೂ ಅವನ ಮನಸ್ಸು ಗುರುಗಳ ಚರಣಗಳಲ್ಲಿ ರಮಿಸದಿದ್ದರೆ, ಅವನ ಈ ಅನಾಸಕ್ತಿಯ ಲಾಭವೇನು ?

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೮ ||

ಅರ್ಥ : ಯಾರ ಮನಸ್ಸು ಅರಣ್ಯದಲ್ಲಿ ಅಥವಾ ತನ್ನ ಮನೆಯಲ್ಲಿ, ತನ್ನ ಕಾರ್ಯದಲ್ಲಿ ಅಥವಾ ದೇಹದಲ್ಲಿ ಅಥವಾ ಅಮೂಲ್ಯ ಭಂಡಾರದಲ್ಲಿ ರಮಿಸುವುದಿಲ್ಲ; ಆದರೆ ಅವನ ಮನಸ್ಸು ಒಂದುವೇಳೆ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ, (ಆಸಕ್ತನಾಗದಿದ್ದರೆ) ಅವನ ಈ ಅನಾಸಕ್ತಿಯ ಲಾಭವೇನು ?

ನ ಭೋಗೇ ನ ಯೋಗೇ ನ ವಾ ವಾಜಿರಾಜೌ ನ ಕಾನ್ತಾಮುಖೇ ನೈವ ವಿತ್ತೇಷು ಚಿತ್ತಮ್ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೭ ||

ಅರ್ಥ : ಯಾರ ಮನಸ್ಸು ಭೋಗ, ಯೋಗ, ಅಶ್ವ, ರಾಜ್ಯ, ಸ್ತ್ರೀಸುಖಭೋಗ ಮತ್ತು ಧನಭೋಗ ಇವುಗಳಿಂದ ವಿಚಲಿತವಾಗುವುದಿಲ್ಲ; ಆದರೆ ಅವನ ಮನಸ್ಸು ಮಾತ್ರ ಗುರುಗಳ ಶ್ರೀ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗದಿದ್ದರೆ), ಅವರ ಈ ಅವಿಚಲತೆಯ ಲಾಭವೇನು ?

೧ ಇ. ಯಾರೊಬ್ಬರಿಗೆ ಸಮಾಜದಲ್ಲಿ ಅಥವಾ ವಿದೇಶದಲ್ಲಿ ಗೌರವವಿದೆ; ಆದರೆ ಅವನ ಮನಸ್ಸು ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ, ಅವನಿಗೆ ಈ ಸದ್ಭಾಗ್ಯದ ಲಾಭವೇನು ?

ಕ್ಷಮಾಮಂಡಲೇ ಭೂಪಭೂಪಾಲವೃನ್‌ದೈಃ ಸದಾ ಸೇವಿತಂ ಯಸ್ಯ ಪಾದಾರವಿಂದಮ್ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೫ ||

ಅರ್ಥ : ಮಹಾಪುರುಷನ ಚರಣಕಮಲಗಳಿಗೆ ಪೃಥ್ವಿಯ ಮೇಲಿನ ರಾಜ-ಮಹಾರಾಜರಿಂದ ನಿತ್ಯ ಪೂಜೆ ಮಾಡಲಾಗುತ್ತದೆ, ಹಾಗೆಯೇ ಎಲ್ಲರಿಂದ ಸತತವಾಗಿ ಅವನ ಪ್ರಶಂಸೆ ಮಾಡ ಲಾಗುತ್ತಿದ್ದರೂ, ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗದಿದ್ದರೆ), ಅವರಿಗೆ ಈ ಸದ್ಭಾಗ್ಯವಿದ್ದರೂ ಏನು ಲಾಭ ?

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೪ ||

ಅರ್ಥ : ಯಾರಿಗೆ ವಿದೇಶದಲ್ಲಿ ಗೌರವ ಸಿಗುತ್ತದೆ, ತನ್ನ ದೇಶದಲ್ಲಿ ಅವರನ್ನು ನಿತ್ಯ ಜಯಜಯಕಾರ ಮಾಡಿ ಸ್ವಾಗತಿಸಲಾಗುತ್ತದೆ ಮತ್ತು ಯಾರು ಸದಾಚಾರವನ್ನು ಪಾಲಿಸಲು ಅನನ್ಯ ಸ್ಥಾನವನ್ನು ನೀಡುತ್ತಾನೆ; ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗದಿದ್ದರೆ), ಅವರಿಗೆ ಈ ಸದ್ಗುಣಗಳ ಲಾಭವೇನು ?

೧ ಈ. ಆರು ಶಾಸ್ತ್ರಗಳ ಕಂಠಪಾಠ ಮತ್ತು ಸಮಾಜದಲ್ಲಿ ಗೌರವ ಇದ್ದರೂ ಮನಸ್ಸು ಗುರುಗಳ ಚರಣಗಳಲ್ಲಿ ಇಲ್ಲದಿದ್ದರೆ, ಸದ್ಗುಣಗಳ ಲಾಭವೇನು ?

ಷಡಙ್‌ಗಾದಿವೇದೋ ಮುಖೇ ಶಾಸ್ತ್ರವಿದ್ಯಾ ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೩ ||

ಅರ್ಥ : ವೇದ ಮತ್ತು ವೇದಾಂಗಾದಿ ಆರು ಶಾಸ್ತ್ರಗಳು ಯಾರಿಗೆ ಕಂಠಪಾಠವಿದೆಯೋ,  ಯಾರಲ್ಲಿ ಸುಂದರ ಕಾವ್ಯ ರಚಿಸುವ ಪ್ರತಿಭೆ ಇದೆ; ಆದರೆ ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗಿರದಿದ್ದರೆ), ಅವರಿಗೆ ಈ ಸದ್ಗುಣಗಳ ಲಾಭವೇನು ?

೧ ಉ. ಗುರುಗಳ ಕೃಪಾದೃಷ್ಟಿಯಿಂದ ಸಂಸಾರದಲ್ಲಿನ ಎಲ್ಲ ಸುಖ-ಐಶ್ವರ್ಯ ಲಭಿಸಿದೆ; ಆದರೆ ಮನಸ್ಸು ಗುರುಗಳ ಶ್ರೀ ಚರಣಗಳಲ್ಲಿ ರಮಿಸದಿದ್ದರೆ, ಐಶ್ವರ್ಯದ ಉಪಯೋಗವೇನು ?

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್ ಜಗದ್ವಸ್ತು ಸರ್ವಂ ಕರೇ ಯತ್‌ಪ್ರಸಾದಾತ್ |

ಮನಶ್ಚೇನ ಲಗ್ನಂ ಗುರೋರಙ್ಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ೬ ||

ಅರ್ಥ : ದಾನ ವೃತ್ತಿಯ ಪ್ರತಾಪದಿಂದ ಯಾರ ಕೀರ್ತಿಯು ದಶದಿಕ್ಕುಗಳಲ್ಲಿ ಹರಡಿದೆ, ಅತ್ಯಂತ ಉದಾತ್ತ ಗುರುಗಳ ಸಹಜ ಕೃಪಾದೃಷ್ಟಿಯಿಂದ ಯಾರಿಗೆ ಸಂಸಾರದಲ್ಲಿನ ಎಲ್ಲ ಸುಖ ಮತ್ತು ಐಶ್ವರ್ಯ ಲಭಿಸಿದೆ; ಆದರೆ ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗದಿದ್ದರೆ), ಅವರಿಗೆ ಈ ಐಶ್ವರ್ಯದ ಲಾಭವೇನು ?

೧ ಊ. ಯಾರು ಗುರು-ಅಷ್ಟಕವನ್ನು ಪಠಿಸುತ್ತಾರೆ, ಇತರರನ್ನು ಕಲಿಸುತ್ತಾರೆ ಮತ್ತು ಅವರ ಮನಸ್ಸು ಗುರುವಚನಗಳಲ್ಲಿಯೇ ರಮಮಾಣವಾದರೆ ಆ ಪುಣ್ಯವಂತ ದೇಹವು ‘ಇಚ್ಛಿತ ಧ್ಯೇಯ ಮತ್ತು ಬ್ರಹ್ಮಪದ’ವನ್ನು ಸಹಜವಾಗಿ ಪ್ರಾಪ್ತಿಸಿಕೊಳ್ಳುತ್ತದೆ.

ಗುರೋರಷ್ಟಕಂ ಯಃ ಪಠೇತ್‌ಪುಣ್ಯದೇಹೀ ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ |

ಲಭೇದ್ವಾಞ್‌ಛಿತಾರ್ಥಂ ಪದಂ ಬ್ರಹ್ಮಸಂಜ್ಞಂ ಗುರೋರುಕ್ತವಾಕ್ಯೆ ಮನೋ ಯಸ್ಯ ಲಗ್ನಮ್ || ೯ ||

ಅರ್ಥ : ‘ಯತಿ, ರಾಜ, ಬ್ರಹ್ಮಚಾರಿ ಮತ್ತು ಗೃಹಸ್ಥನು ಗುರು-ಅಷ್ಟಕವನ್ನು ಸ್ವತಃ ಪಠಿಸುತ್ತಾರೆ, ಇತರರಿಗೆ ಕಲಿಸುತ್ತಾರೆ ಮತ್ತು ಅವರ ಮನಸ್ಸು ಗುರುವಚನಗಳಲ್ಲಿಯೇ ಮಗ್ನವಾಗಿದ್ದರೆ, ಆ ಪುಣ್ಯಾತ್ಮನ ದೇಹವು ‘ಇಚ್ಛಿತ ಧ್ಯೇಯ ಮತ್ತು ಬ್ರಹ್ಮಪದ’ ಈ ಎರಡೂ ವಿಷಯಗಳು ಸಹಜವಾಗಿ ಪ್ರಾಪ್ತಿಸಿಕೊಳ್ಳುತ್ತದೆ’, ಇದು ಖಂಡಿತ.’ (ವಿವಿಧ ಜಾಲತಾಣಗಳಿಂದ ದೊರಕಿದ ಜ್ಞಾನ)

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ, ದೆಹಲಿ (೯.೬.೨೦೨೨)