ಮಾವು ಎಲ್ಲರಿಗೂ ಪ್ರಿಯವಾದ ಹಣ್ಣು; ಆದರೆ ಮಾವಿನ ಹಣ್ಣಿನ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ‘ಮಾವಿನ ಹಣ್ಣು ತಿಂದರೆ ತೂಕ ಹೆಚ್ಚುತ್ತದೆ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ’ ಎಂದು ಜನರು ಭಾವಿಸುತ್ತಾರೆ. ಅದಕ್ಕಾಗಿಯೇ ಮಾವಿನ ಹಣ್ಣಿನ ಬಗ್ಗೆ ವೈಜ್ಞಾನಿಕ ಮಾಹಿತಿ ಇರುವುದು ಆವಶ್ಯಕವಾಗಿದೆ ಮತ್ತು ನಂತರವೇ ಮಾವು ತಿನ್ನಬೇಕೋ ಬೇಡವೋ ? ಎಂದು ನಿರ್ಧರಿಸಿ. ೧೦೦ ಗ್ರಾಂ ಮಾವು ಎಂದರೆ ೬೦ ರಿಂದ ೭೦ ಕ್ಯಾಲೋರಿಗಳು. ೧೦೦ ಗ್ರಾಂ ಮಾವು ಎಂದರೆ ಮಧ್ಯಮ ಗಾತ್ರದ ಅರ್ಧ ಮಾವು. ‘ಗ್ಲೈಸೆಮಿಕ್ ಇಂಡೆಕ್ಸ್’ (ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರ್ಬೋಹೈಡ್ರೇಟ್ ಆಹಾರದ ಸಾಪೇಕ್ಷ ಸಾಮರ್ಥ್ಯವನ್ನು ಸೂಚಿಸುವ ಸಂಖ್ಯೆ) ೫೬ ಆಗಿದೆ, ಇದು ಮಧ್ಯಮ ಸ್ವರೂಪದ್ದಾಗಿದೆ, ಅಂದರೆ ಮಾವಿನಿಂದ ಸಕ್ಕರೆ (ಶುಗರ್) ತ್ವರಿತವಾಗಿ ಹೆಚ್ಚಾಗುವುದಿಲ್ಲ; ಆದರೆ ಒಂದೇ ಬಾರಿಗೆ ೪ ಮಾವಿನ ಹಣ್ಣನ್ನು ತಿಂದರೆ ಸಕ್ಕರೆ ಅಂಶ ಹೆಚ್ಚುತ್ತದೆ.
೧. ಮಾವಿನಿಂದ ಯಾವ ಪೌಷ್ಠಿಕಾಂಶಮೌಲ್ಯಗಳು ಸಿಗುತ್ತದೆ ?
ಮಾವಿನಿಂದ ಯಾವ ಪೌಷ್ಠಿಕಾಂಶಮೌಲ್ಯಗಳು ಸಿಗುತ್ತದೆ ? ಇದು ನಮಗೆ ಎಲ್ಲಕ್ಕಿಂತ ಮೊದಲು ಗೊತ್ತಿರುವುದು ಮಹತ್ವದ್ದಾಗಿದೆ.
ಅ. ಜೀವಸತ್ವಗಳು (ವಿಟಮಿನ್ಸ್) : ಇದರಲ್ಲಿ ಎಲ್ಲಾ ರೀತಿಯ ಜೀವಸತ್ವಗಳು ಇವೆ, ಉದಾಹರಣೆಗಾಗಿ ನಮಗೆ ದಿವಸಪೂರ್ತಿ ಬೇಕಾಗುವ ವಿಟಮಿನ್ ‘ಸಿ’ ಮಾವಿನಿಂದ ಸಿಗುತ್ತದೆ, ಇದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದು ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಾವಿನ ಹಣ್ಣಿನಿಂದ ನಮಗೆ ವಿಟಮಿನ್ ‘ಎ’ ಸತ್ವಕೂಡ ಸಿಗುತ್ತದೆ, ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ತ್ವಚೆ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.
ಆ. ಮಾವಿನ ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ‘ಫೈಬರ್ಸ್’ ಇರುತ್ತದೆ. ಮಾವಿನ ಹಣ್ಣಿನಲ್ಲಿ ಫೈಬರ್ಸ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತೂಕವನ್ನು ಕಡಿಮೆ ಮಾಡಲು ಇದು ಪ್ರಯೋಜನಕಾರಿಯಾಗಿದೆ.
ಇ. ಇದರಲ್ಲಿ ‘ಆಂಟಿ-ಆಕ್ಸಿಡೆಂಟ್’ಗಳು ಕೂಡ ಇದ್ದು, ಇದು ಹೃದಯದ ಆರೋಗ್ಯಕ್ಕೆ ಮಹತ್ವದ್ದಾಗಿದೆ ಮತ್ತು ಅರ್ಬುದರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಈ. ಸಮತೋಲಿತ ಆಹಾರದಲ್ಲಿ ನಮಗೆ ಎಲ್ಲಾ ರೀತಿಯ ಜೀವಸತ್ವಗಳು, ಖನಿಜಗಳು (ಮಿನರಲ್ಸ್), ಪ್ರೋಟಿನ್‌ಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬುಗಳನ್ನು ಪಡೆಯಬೇಕು ಇದರ ಉತ್ತಮ ಉದಾಹರಣೆ ಎಂದರೆ ಮಾವು. ಯಾವಾಗ ಮಾವಿನ ಹಣ್ಣಿನ ಸೀಸನ್ ಇರುತ್ತದೆಯೋ ಆಗ ಮಾವು ತಿಂದರೆ ತೊಂದರೆ ಇಲ್ಲಾ. ತೂಕವು ಸ್ಥಿರವಾಗಿದ್ದರೆ ದಿನಕ್ಕೆ ೧ ಮಾವಿನ ಹಣ್ಣು ತಿಂದರೆ ಏನು ತೊಂದರೆ ಇಲ್ಲ.
೨. ಮಧುಮೇಹ ಇದ್ದವರು ವಹಿಸಬೇಕಾದ ಕಾಳಜಿ
ಮಧುಮೇಹವಿದ್ದರೆ, ಅದೇ ಪ್ರಮಾಣವನ್ನು ಇಟ್ಟುಕೊಳ್ಳಿ. ಮಾವಿನಹಣ್ಣು ತಿಂದ ನಂತರ ಪ್ರತಿ ೨ ಗಂಟೆಗೊಮ್ಮೆ ಸಕ್ಕರೆ ಪರೀಕ್ಷಿಸಿ ಸಕ್ಕರೆ ಪ್ರಮಾಣ ಹೆಚ್ಚಾಗದಿದ್ದರೆ ಮಾವು ತಿಂದರೆ ತೊಂದರೆ ಇಲ್ಲ. ೨-೩ ಬಾರಿ ಸಕ್ಕರೆಯನ್ನು ಪರೀಕ್ಷಿಸಿ ಮಾವಿನಹಣ್ಣನ್ನು ತಿಂದ ನಂತರ ಮಾವಿನಹಣ್ಣನ್ನು ತಿನ್ನಬೇಕೇ ಅಥವಾ ಬೇಡವೇ ? ಎಂದು ನಿಮಗೆ ತಿಳಿಯುತ್ತದೆ. ಮಾವು ಪೌಷ್ಟಿಕವಾಗಿದೆ. ಹಾಗಿರುವಾಗ ಮಾವಿನ ಹಣ್ಣು ತಿನ್ನಲು ಭಯವೇಕೆ ? ಆದರೆ ಮಾವಿನ ಹಣ್ಣನ್ನು ಮಿತವಾಗಿ ಸೇವಿಸಿ ಇದು ತೂಕ ಮತ್ತು ಮಧುಮೇಹ ಎರಡನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹಾಗೆನೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ.
ಮಾವಿನಹಣ್ಣನ್ನು ತಿನ್ನುವ ಇಚ್ಛೆ ಪೂರ್ಣವಾದ್ದರಿಂದ ಸಮಾಧಾನ ಸಿಗುತ್ತದೆ ಮತ್ತು ಸ್ವತಃದ ದೇಹವು ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ. ಎಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣನ್ನು ತಿನ್ನುತ್ತೇವೋ ಅದರ ಮೇಲೆ, ಮಾವು ಇದು ಔಷಧಿಯೆಂದು ಆರೋಗ್ಯ ಚೆನ್ನಾಗಿರುವುದೋ ಅಥವಾ ಅದರಿಂದ ನಾವು ಔಷಧಿ ತೆಗೆದುಕೊಳ್ಳಬೇಕಾಗುವುದೋ ಎಂಬುದು ನಿರ್ಧರಿಸಲ್ಪಡುತ್ತದೆ. ಮಾವಿನ ಹಣ್ಣನ್ನು ಔಷಧಿಯಾಗಿ ಸೇವಿಸಬೇಕಾದರೆ ಮಿತವಾಗಿ ತಿಂದು ಆರೋಗ್ಯವಂತರಾಗಿರಿ.
– ಡಾ. ಪ್ರಣಿತಾ ಅಶೋಕ, ಎಮ್.ಬಿ.ಬಿ.ಎಸ್., ಎಮ್.ಡಿ., ಪಿಹೆಚ್‌ಡಿ. (ಆಹಾರ ಸಲಹೆಗಾರರು), ಪುಣೆ.