ಆರೋಪಿ ನಿಖಿಲ ಗುಪ್ತ ಇವನನ್ನು ಚೇಕ್ ರಿಪಬ್ಲಿಕ್ ದೇಶದಿಂದ ಅಮೆರಿಕಕ್ಕೆ ಹಸ್ತಾಂತರ

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ರೂಪಿಸಿದ ಪ್ರಕಾರಣ

ವಾಷಿಂಗ್ಟನ್ (ಅಮೇರಿಕಾ) – ‘ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರ ರೂಪಿಸಿರುವ ಆರೋಪದಲ್ಲಿ ಭಾರತೀಯ ನಾಗರಿಕ ನಿಖಿಲ ಗುಪ್ತ ಇವನನ್ನು ಯುರೋಪದಲ್ಲಿನ ರಿಪಬ್ಲಿಕ್ ದೇಶದಿಂದ ಒಂದು ವರ್ಷದ ಹಿಂದೆ ಬಂಧಿಸಲಾಗಿತ್ತು. ಇಂದು ಗುಪ್ತ ಇವನನ್ನು ಅಮೇರಿಕಾಕ್ಕೆ ಹಸ್ತಾಂತರಿಸಲಾಗಿದೆ. ನಿಖಿಲ ಗುಪ್ತ ಇವನನ್ನು ಜೂನ್ ೧೬ ರಂದು ಅಮೇರಿಕಾದಲ್ಲಿನ ಬ್ರೂಕ್ಲಿನ್ ಇಲ್ಲಿಯ ಮೆಟ್ರೋಪಾಲಿಟಿನ್ ಡಿಟೆಂಶನ್ ಸೆಂಟರಿಗೆ ಕರೆತರಲಾಗಿತ್ತು. ಈಗ ಅವನಿಗೆ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.

೧. ನಿಖಿಲ್ ನನ್ನು ಪೊಲೀಸರು ಚೆಕ್ ರಿಪಬ್ಲಿಕ್ ಇಲ್ಲಿಂದ ಜೂನ್ ೩೦, ೨೦೨೩ ರಂದು ಅಮೆರಿಕಾದ ಗುಡಾಚಾರ ಸಂಸ್ಥೆಯು ನೀಡಿರುವ ಮಾಹಿತಿಯ ಮೇರೆಗೆ ಬಂಧಿಸಲಾಗಿತ್ತು. ಇದರ ನಂತರ ಚೆಕ್ ಪ್ರಜಾಸತ್ತಾಕ ನ್ಯಾಯಾಲಯವು ನಿಖಿಲ ಗುಪ್ತ ಇವನನ್ನು ಅಮೇರಿಕಾದಲ್ಲಿನ ಹಸ್ತಾಂತರಕ್ಕೆ ತಡೆ ನೀಡುವ ಅರ್ಜಿಯನ್ನು ತಿರಸ್ಕರಿಸಿತ್ತು.

೨. ಪನ್ನು ಇವನ ಅಮೇರಿಕಾದಲ್ಲಿ ಹತ್ಯೆಯ ಷಡ್ಯಂತ್ರ ರಚಿಸಿರುವ ಪ್ರಕರಣದಲ್ಲಿ ನ್ಯೂಯಾರ್ಕ್ ಪೊಲೀಸರು ನವೆಂಬರ್ ೨೯, ೨೦೨೩ ರಲ್ಲಿ ಆರೋಪ ಪತ್ರ ದಾಖಲಿಸಿರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಭಾರತೀಯ ನಾಗರಿಕ ನಿಖಿಲ ಗುಪ್ತ ಇವನ ಮೇಲೆ ಪನ್ನು ಹತ್ಯೆಯ ಷಡ್ಯಂತ್ರ ರಚಿಸಿರುವ ಆರೋಪವಿದೆ.

೩. ಅಮೆರಿಕ ಸರಕಾರವು ನ್ಯೂಯಾರ್ಕ್ ನಲ್ಲಿ ಪನ್ನು ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಷಡ್ಯಂತ್ರ ರಚಿಸಲಾಗಿರುವ ಆರೋಪ ಮಾಡಿತ್ತು. ‘ಇದರಲ್ಲಿ ಭಾರತದ ಕೈವಾಡವಿತ್ತು’ ಎಂದು ಕೂಡ ಆರೋಪಿಸಲಾಗಿತ್ತು. ಹತ್ಯೆಯ ಷಡ್ಯಂತ್ರ ವಿಫಲಗೊಳಿಸಲಾಯಿತು ಎಂದು ಅಮೇರಿಕಾ ದಾವೆ ಮಾಡಿತ್ತು; ಆದರೆ ಈ ಹತ್ಯೆ ಯಾವ ದಿನದಂದು ನಡೆಯುವುದು ಇದು ಅಮೆರಿಕಾ ಹೇಳಿರಲಿಲ್ಲ.

೪. ಜೂನ್ ೨೦೨೩ ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಅಮೇರಿಕಾ ಭೇಟಿಯ ನಂತರ ಅಮೆರಿಕಾ ಅಧಿಕಾರಿಗಳು ಈ ಅಂಶಗಳನ್ನು ಮಂಡಿಸಿದ್ದರು.

ಸಂಪಾದಕೀಯ ನಿಲುವು

ಪ್ರಧಾನಮಂತ್ರಿ ಮೋದಿ ಇವರ ಹತ್ಯೆಗಾಗಿ ಕರೆ ನೀಡುವ ಪನ್ನುವನ್ನು ಅಮೇರಿಕಾ ಎಂದು ಬಂಧಿಸಿ ಭಾರತದ ವಶಕ್ಕೆ ನೀಡಲಿದೆ ?