ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿದ್ಯಾರ್ಥಿ ಜೀವನದಲ್ಲಿನ ಕಾರ್ಯ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಶಾಲೆಯ ಶಿಕ್ಷಣವನ್ನು ಮುಂಬೈಯಲ್ಲಿನ ಆರ್ಯನ್‌ ಎಜ್ಯುಕೇಶನ್‌ ಸೊಸೈಟಿಯ ಶಾಲೆಯಲ್ಲಿ , ಅದರ ನಂತರದ ಶಿಕ್ಷಣವನ್ನು ಮುಂಬೈಯ ವಿಲ್ಸನ್‌ ಮಹಾವಿದ್ಯಾಲಯದಲ್ಲಿ ಮತ್ತು ವೈದ್ಯಕೀಯ ಶಿಕ್ಷಣವನ್ನು ಗ್ರ್ಯಾಂಟ್‌ ಮೆಡಿಕಲ್‌ ಕಾಲೇಜಿನಲ್ಲಿ ಪಡೆದರು. ಶಾಲಾ ಜೀವನದಿಂದ ವೈದ್ಯಕೀಯ ಪದವಿಯನ್ನು (ಎಮ್‌.ಬಿ.ಬಿ.ಎಸ್‌.) ಪಡೆದುಕೊಂಡು ನೌಕರಿಗಾಗಿ ಇಂಗ್ಲೆಂಡ್‌ಗೆ ಹೋಗುವ ವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಸಂಸ್ಥೆಗಳಲ್ಲಿ ಜವಾಬ್ದಾರಿಯನ್ನು ಪಡೆದುಕೊಂಡು ಕಾರ್ಯ ಮಾಡಿದರು.

ಈ ಕಾರ್ಯದ ಸಂಕ್ಷಿಪ್ತ ಪಟ್ಟಿಯನ್ನು ಮುಂದೆ ಕೊಡಲಾಗಿದೆ.

ವಿದ್ಯಾರ್ಥಿದೆಸೆಯಲ್ಲಿ ಮಾಡಿದ ಕಾರ್ಯದಿಂದ ಮುಂದಿನ ಜೀವನದಲ್ಲಾದ ಲಾಭ

ಪರಾತ್ಪರ ಗುರು ಡಾಕ್ಟರರು ವಿದ್ಯಾರ್ಥಿದೆಸೆಯಲ್ಲಿ ವಿವಿಧ ಸಂಘಟನೆಗಳಲ್ಲಿ ಮಾಡಿದ ಕಾರ್ಯದ ಅನುಭವಗಳು ಅವರಿಗೆ ಮುಂದೆ ಅಧ್ಯಾತ್ಮಪ್ರಸಾರ ಕಾರ್ಯದ ನೇತೃತ್ವ ವಹಿಸುವುದು; ಆಧ್ಯಾತ್ಮಿಕ ಗ್ರಂಥಗಳ ಸಂಕಲನ; ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಸಂಪಾದಕರ ಸೇವೆಯನ್ನು ಮಾಡುವುದು, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳ ಸಂಘಟನೆ ಮುಂತಾದ ಕಾರ್ಯಗಳಿಗಾಗಿ ಲಾಭವಾಯಿತು.

ಪರಾತ್ಪರ ಗುರು ಡಾ. ಆಠವಲೆಯವರು ಶಾಲೆಯಲ್ಲಿ ಬರೆದ ಪ್ರಬಂಧ

ಗ್ರಾಮೋದ್ಧಾರ

ದಿ. ೧೨.೭.೧೯೫೭ ಜಯಂತ ಆಠವಲೆ

೧. ಸ್ವಾವಲಂಬಿ ಗ್ರಾಮಗಳಿಂದಾಗುತ್ತಿದ್ದ ಭಾರತೋತ್ಕರ್ಷ !

‘ಇತಿಹಾಸದಲ್ಲಿ ವೈಭವದ ಉತ್ತುಂಗದಲ್ಲಿದ್ದ ಭಾರತವು ಮುಖ್ಯ ವಾಗಿ ಅದರಲ್ಲಿರುವ ಹಳ್ಳಿಗಳ ಸಮೃದ್ಧಿಯಿಂದಲೇ ಸಾಧ್ಯವಾಗಿತ್ತು. ಈ ಹಿಂದೆ ವಿಶೇಷ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸರಕು ಸಾಗಾಣಿಕೆ ಕಷ್ಟವಾಗಿತ್ತು. ಆದ್ದರಿಂದ, ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಸರಕುಗಳನ್ನು ಆಮದು-ರಫ್ತು ಮಾಡುವ ಪದ್ಧತಿಯೇ ಇರಲಿಲ್ಲ. ಪ್ರತಿ ಗ್ರಾಮವು ತನ್ನ ಅಗತ್ಯತೆಗಳನ್ನು ತಾನೇ ಪೂರೈಸ ಬೇಕಾಗಿತ್ತು; ಆದುದರಿಂದ ಗ್ರಾಮದಲ್ಲಿ ಬಡಿಗ, ಕಮ್ಮಾರ, ಚಮ್ಮಾರ, ಅಕ್ಕಸಾಲಿಗ, ರೈತ, ವೈದಿಕ ಬ್ರಾಹ್ಮಣ ಮುಂತಾದ ಎಲ್ಲಾ ವರ್ಗದ, ಜಾತಿಗಳ ಮತ್ತು ಕೆಲಸದ ಜನರು ಒಟ್ಟಿಗಿರುತ್ತಿದ್ದರು. ಹೀಗೆ ಪ್ರತಿ ಹಳ್ಳಿಯೂ ಸ್ವಾವಲಂಬಿಯಾಗಿತ್ತು ಮತ್ತು ಈ ರೀತಿಯಲ್ಲಿ ಸ್ವಾವಲಂಬಿ ಗ್ರಾಮಗಳಿಂದಲೇ ಭಾರತೋತ್ಕರ್ಷವಾಗಿತ್ತು.

೨. ಯಂತ್ರ ಯುಗದಿಂದಾಗಿ ಕೃಷಿ ಇತ್ಯಾದಿ ಕೆಲಸಗಳು ಕುಸಿಯುವುದು

ಆದರೆ ಮುಂದೆ ‘ಯಂತ್ರ ಯುಗ’ ಬಂದಿತು. ಯಂತ್ರಗಳಿಂದ ಸಿದ್ಧವಾದ ಅಗ್ಗದ ಮತ್ತು ತೆಳುವಾದ ಸರಕುಗಳಿಂದ ಕೈಯಿಂದ ತಯಾರಿಸಿದ ಸರಕುಗಳು ಹಿಂದೆ ಬೀಳತೊಡಗಿದವು. ಕುಶಲಕರ್ಮಿಗಳಿಗೆ ಹೊಟ್ಟೆಪಾಡಿಗೆ ಸಮಸ್ಯೆಯಾದಾಗ ಅವರು ಕಸುಬನ್ನು ತ್ಯಜಿಸತೊಡಗಿದರು ಮತ್ತು ತಲೆಮಾರುಗಳಿಂದ ಬಂದ
ಕಲೆಯನ್ನು ತ್ಯಜಿಸಬೇಕಾಯಿತು. ದೊಡ್ಡ ಕೈಗಾರಿಕಾ ನಗರಗಳನ್ನು ಸ್ಥಾಪಿಸಲಾಯಿತು. ವ್ಯಾಪಾರ, ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಜನರನ್ನು ನಗರಗಳತ್ತ ಆಕರ್ಷಿಸಿದವು. ಆದ್ದರಿಂದ ನಗರಗಳ ಸಂಖ್ಯೆ ಮತ್ತು ಅಂತೆಯೇ ನಗರವಾಸಿಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಅನೇಕ ಜನರು ಕೃಷಿ ಯಂತಹ ಅಗತ್ಯ ಉದ್ಯೋಗಗಳನ್ನು ತೊರೆದು ನಗರಗಳಿಗೆ ತೆರಳಿದರು.

೩. ಪುನಃ ಉನ್ನತಿ

ಬ್ರಿಟಿಷರು ಈ ಸಮಸ್ಯೆಗಳನ್ನು ದುರ್ಲಕ್ಷಿಸಿದರು; ಆದರೆ ಕ್ರಿ.ಶ. ೧೯೪೭ರಲ್ಲಿ ಸ್ವರಾಜ್ಯ ಸಿಕ್ಕಿತು. ಹಿಂದಿಯ ಓರ್ವ ಕವಿಗಳಾದ ಶ್ರೀ ಶಿವ ನಾರಾಯಣದಾಸರು ಹೇಳಿದರು, ‘ಅಗರ ಹಮ್‌ ಚಾಹತೆ ಭಾರತ, ಸದಾ ಹೀ ಕೆ ಲಿಯೆ ಗುಜತ (ಟಿಪ್ಪಣಿ) | ಕೈಸೆ ಹಾಸಿಲ್‌ ಕರೇಂಗೆ ವೈಭವ, ಬಿನಾ ಇಸ್‌ ಗ್ರಾಮಸೇವಾಸೆ ?’

ಟಿಪ್ಪಣಿ – ಗುಜತ, ಅಂದರೆ ಸತತವಾಗಿ ಮುಂದುವರಿಯುವ ಅಂದರೆ ನಮಗೆ ಸತತವಾಗಿ ಭಾರತದ ಅಭಿವೃದ್ಧಿ, ಭಾರತದ ಪ್ರಗತಿ ಆಗಬೇಕು, ಎಂದು ಅನಿಸಿದರೆ, ಆ ಪ್ರಗತಿಯು ಗ್ರಾಮಸೇವೆ ಇಲ್ಲದೇ ಸಾಧ್ಯವಿಲ್ಲ, ಎಂದು ಕವಿಯ ಮಾತಿನ ಅರ್ಥ.

ಈ ವಚನವು ಸರಕಾರಕ್ಕೆ ಮನವರಿಕೆಯಾಗಿ ಸರಕಾರವು ತಕ್ಷಣ ಈ ಗಂಭೀರಸಮಸ್ಯೆಗಳ ವಿಚಾರ ಮಾಡಲು ಪ್ರಾರಂಭಿಸಿತು. ಹಳ್ಳಿಯಲ್ಲಿ ಕೆಲಸವಿಲ್ಲ ಮತ್ತು ಹೊಲದ ಬೆಳೆಯು ಸಾಕಾಗುವುದಿಲ್ಲ ‘ಹಾಗಾಗಿ ನಗರಕ್ಕೆ ಹೋಗೋಣ’ ಎಂಬ ಪರಿಸ್ಥಿತಿಯನ್ನು ಹೋಗಲಾಡಿಸಲು ಜನರು ಏನಾದರು ಉದ್ಯೋಗ-ವ್ಯವಸಾಯ ಮಾಡಬೇಕಾಗಿತ್ತು; ಆದ್ದರಿಂದ ಸರಕಾರವು

ಹಳ್ಳಿಯ ಸ್ಥಿತಿಯಂತೆ ಅಲ್ಲಿ ಯಾವ ಗ್ರಾಮೋದ್ಯೋಗ ನಡೆಸಬಹುದು ?, ಎಂದು ನೋಡಲು ಹೊಸ ಇಲಾಖೆ ತೆರೆದರು. ಅದರಂತೆ ಪ್ರತಿಯೊಬ್ಬ ರೈತನು ಭಾಗವಹಿಸಬಹುದೆಂದು, ೧೦-೧೫ ರೂಪಾಯಿಗಳ ಶೇರ್‌ (ಭಾಗ) ಇರುವ ಅಲ್ಪಬಂಡವಾಳದಿಂದ ಉದ್ಯೋಗಗಳನ್ನು ‘ಸಹಕಾರಿ’ ಪದ್ಧತಿಯಿಂದ ಪ್ರಾರಂಭಿಸಲಾಯಿತು. ೨-೪ ಸಹಕಾರ ಸಂಘಗಳು ಸೇರಿ ಸೊಸೈಟಿಯನ್ನು ರಚಿಸಲಾಯಿತು ಮತ್ತು ಅವುಗಳ ಮೂಲಕ (ಅವರಿಂದಲೇ) ಗ್ರಾಮೋದ್ಯೋಗ ದಲ್ಲಿ ಉತ್ಪಾದನೆಯಾದ ಸರಕುಗಳನ್ನು ಮಧ್ಯವರ್ತಿ ಗಳಿಲ್ಲದೆ ಮಾರಾಟ ಮಾಡಲು ಪ್ರಾರಂಭಿಸಿತು. ಇದರಿಂದ ಗ್ರಾಹಕರಿಗೆ ಅಗ್ಗವಾಯಿತು. ಕುಶಲಕರ್ಮಿಗಳು ಹೆಚ್ಚಿನ ವೇತನವನ್ನು ಪಡೆಯಲಾರಂಭಿಸಿದರು. ಜನರಿಗೂ ಕೆಲಸ ಸಿಕ್ಕಿತು. ಸರಕುಗಳ ತ್ವರಿತ ಸಾಗಾಣಿಕೆಗಾಗಿ ರಸ್ತೆಗಳನ್ನು ನಿರ್ಮಿಸಲಾಯಿತು.

ಆ ಸಮಯದಲ್ಲಿ ಅನೇಕ ಕಿವಿ-ಮೂಗು-ಗಂಟಲು ತಜ್ಞರು (ಇ.ಎನ್‌.ಟಿ. ಸ್ಪೆಶಲಿಸ್ಟ್‌) ಈ ಸಂಶೋಧನೆಯನ್ನು ಪ್ರಶಂಸಿಸಿದರು.

ಇ. ಬಳಸಿ ಎಸೆಯುವ ಮೂಗು ತಪಾಸಣೆಯ ಪ್ಲಾಸ್ಟಿಕ್‌ ಉಪಕರಣ (ಆಇಸ್ಠಿಒಸ್ಚಿಬ್ಟಎ ಓಚಿಸ್ಚಿಟ ಶ್ಠಿಎಛಿಉಟಉಮ್), ಫೈಬರ್‌ ಗ್ಲಾಸ್‌ನ ಗುಳಿಗೆ ಎಣಿಸುವ ಯಂತ್ರ (ಟ್ಯಾಬ್ಲೆಟ್‌ ಕೌಂಟಿಂಗ್‌ ಮೆಶಿನ್‌), ಹಾಗೆಯೇ ‘ಸ್ಟೆತೋಸ್ಕೋಪ್‌’ನ (ಟಿಪ್ಪಣಿ) ಕಿವಿಗೆ ಹಾಕುವ ಬಳಸಿ ಎಸೆಯುವ ಭಾಗವನ್ನು (ಡಿಸ್ಪೋಸಬಲ್‌ ಇಯರ್‌ ಪೀಸ್) ತಯಾರಿಸುವ ವಿಚಾರ ನಡೆಯುತ್ತಿದ್ದಾಗ ಪರಾತ್ಪರ ಗುರು ಡಾ. ಆಠವಲೆಯವರು ಭಾರತಕ್ಕೆ ಹಿಂತಿರುಗುವುದು ನಿಗದಿಯಾಗಿದ್ದರಿಂದ ಸಂಶೋಧನಾ ಕಾರ್ಯವು ಪೂರ್ಣವಾಗಲಿಲ್ಲ.
ಟಿಪ್ಪಣಿ – ‘ಸ್ಟೆತೋಸ್ಕೋಪ್’ ಎಂದರೆ ಹೃದಯದ ಬಡಿತ ಅಥವಾ ಶ್ವಾಸೋಚ್ಛ್ವಾಸವನ್ನು ಕೇಳಲು ಉಪಯೋಗಿಸುವ ಉಪಕರಣ.

‘ಹಿಪ್ನೋಥೆರಪಿ ಎಕಾರ್ಡಿಂಗ್‌ ಟು ದಿ ಪರ್ಸನಾಲಿಟಿ ಡಿಫೆಕ್ಟ್ ಮಾಡೆಲ್‌ ಆಫ್‌ ಸೈಕೋಥೆರಪಿ’, ‘ಸಂಮ್ಮೋಹನಶಾಸ್ತ್ರ’, ‘ಸುಖೀ ಜೀವನಕ್ಕಾಗಿ ಸಮ್ಮೋಹನ ಉಪಚಾರ’, ‘ಶಾರೀರಿಕ ರೋಗಗಳಿಗೆ ಸಂಮ್ಮೋಹನ ಉಪಚಾರ’, ‘ಲೈಂಗಿಕ ಸಮಸ್ಯೆಗಳಿಗೆ ಸಂಮ್ಮೋಹನ ಉಪಚಾರ’, ‘ಮನೋರೋಗಗಳಿಗೆ ಸ್ವಸಂಮ್ಮೋಹನ ಉಪಚಾರ’ (೨ ಭಾಗಗಳು), ‘ಸ್ವಭಾವದೋಷ ನಿರ್ಮೂಲನೆ ಮತ್ತು ಗುಣವೃದ್ಧಿ ಪ್ರಕ್ರಿಯೆ’ (೩ ಭಾಗಗಳು) ಈ ಗ್ರಂಥಗಳು ಮತ್ತು ಜನಪ್ರಿಯ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಅವರ ೧೨೩ ಲೇಖನಗಳು ಹಾಗೂ ವಿದೇಶಗಳಲ್ಲಿ ಪ್ರಶಂಸಿಸಲ್ಪಟ್ಟ ಸಂಶೋಧನಾ ಪ್ರಬಂಧಗಳು ಅವರ ವೈದ್ಯಕೀಯ ಕ್ಷೇತ್ರದಲ್ಲಿನ ಯಶಸ್ವಿ ಕಾಲಘಟ್ಟದ, ಹಾಗೆಯೇ ಸಮ್ಮೋಹನ ಉಪಚಾರದ ಸಂದರ್ಭದಲ್ಲಿನ ಅಧ್ಯಯನಪೂರ್ಣ ಮತ್ತು ಅದ್ವಿತೀಯ ಸಂಶೋಧನೆಯ ಫಲಶ್ರುತಿಯಾಗಿದೆ.