ಚೈತನ್ಯದ ಸ್ರೋತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಪರಮ ಪವಿತ್ರ ಜನ್ಮಸ್ಥಳ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣ ದಿಂದ ಪರೀಕ್ಷಿಸುತ್ತಿರುವ ಶ್ರೀ. ಆಶೀಷ ಸಾವಂತ

ಸಂತರ ಜನ್ಮಸ್ಥಳವು ಚೈತನ್ಯದ ಸ್ರೋತವಾಗಿರುತ್ತದೆ. ಆದ್ದರಿಂದ ಸಂತರ ಜನ್ಮಸ್ಥಳವನ್ನು ಸಂರಕ್ಷಿಸುವುದು ಭಾರತದ ಪ್ರಾಚೀನ ಸಂಪ್ರದಾಯವಾಗಿದೆ. ವಿಶ್ವದೆಲ್ಲೆಡೆ ಸನಾತನ ಧರ್ಮದ ಪ್ರಸಾರವನ್ನು ಮಾಡುವ ಮತ್ತು ವಿಶ್ವಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ನಾಗೋಠಣೆ (ರಾಯಗಡ ಜಿಲ್ಲೆ, ಮಹಾರಾಷ್ಟ್ರ)ಯಲ್ಲಿನ ಜನ್ಮಸ್ಥಳದ ಕಡೆ ಹೋಗುವದಾರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ’ ಎಂದು ನಾಮಕರಣ ಮಾಡಿ ನಾಗೋಠಣೆ ಗ್ರಾಮಸ್ಥರು ಅವರ ಕಾರ್ಯವನ್ನು ಗೌರವಿಸಿದ್ದಾರೆ. ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಸದ್ಗುರು ಅನುರಾಧ ವಾಡೆಕರ ಮತ್ತು ಗಣ್ಯರ ಶುಭಹಸ್ತದಿಂದ ೧೨.೫.೨೦೨೩ ರಂದು ಈ ಮಾರ್ಗದ ನಾಮಫಲಕವನ್ನು ಅನಾವರಣಗೊಳಿಸಲಾಗಿತ್ತು.

ಶ್ರೀ ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ) ಪರಮ ಪಾವನ ಜನ್ಮಸ್ಥಳದ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಯು.ಎ.ಎಸ್‌ ಉಪಕರಣ ಮತ್ತು ಲೋಲಕ ಇದರ ಮಾಧ್ಯಮದಿಂದ ಆಧ್ಯಾತ್ಮಿಕ ಸಂಶೋಧನೆ ಮಾಡಲಾಯಿತು. ಈ ಎರಡೂ ಉಪಕರಣಗಳ ಮಾಧ್ಯಮದಿಂದ ವಸ್ತು ಮತ್ತು ವ್ಯಕ್ತಿಯಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಉರ್ಜೆಯನ್ನು ಅಳೆಯಬಹುದು. ಈ ಸಂಶೋಧನೆಯನ್ನು ಮುಂದೆ ನೀಡಲಾಗಿದೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳಲ್ಲಿ ಅಪಾರ ಚೈತನ್ಯವಿದೆ

ಶ್ರೀಗುರುವಿನ ಜನ್ಮಸ್ಥಳ (ಮನೆ) ಮತ್ತು ಅದರ ಪರಿಸರ (ಮಣ್ಣು, ನೀರು ಮತ್ತು ವಾತಾವರಣ), ಹಾಗೆಯೇ ಮನೆಯ ಸುತ್ತಲಿನ ಹೂವುಗಳು ಮತ್ತು ಮರಗಳು, ಯಾವುದರಲ್ಲಿಯೂ ನಕಾರಾತ್ಮಕ ಉರ್ಜೆ ಇಲ್ಲ, ಆದರೆ ಬಹಳಷ್ಟು ಸಕಾರಾತ್ಮಕ ಉರ್ಜೆಯಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಮನೆಯ ಮುಂದೆ ಹಾಕಿದ ನಾಮಫಲಕವನ್ನು ಮತ್ತು ರಸ್ತೆಯ ನಾಮಫಲಕವನ್ನು ಅನಾವರಣಗೊಳಿಸಿದ ನಂತರ, ಅದರಿಂದ ವಾತಾವರಣದಲ್ಲಿ ಹೆಸರಿನ ಫಲಕಗಳಿಂದ) ವಾತಾವರಣದಲ್ಲಿ ಬಹಳಷ್ಟು ಚೈತನ್ಯವು ಪ್ರಕ್ಷೇಪಿತವಾಯಿತು. ಇದು ಪಕ್ಕದಲ್ಲಿ ನೀಡಿದ ಕೋಷ್ಟಕದ ನೋಂದಣಿಯಿಂದ ಸ್ಪಷ್ಟವಾಗುತ್ತದೆ.

ಟಿಪ್ಪಣಿ – ಕೆಲವು ಘಟಕಗಳ ಸಕಾರಾತ್ಮಕ ಉರ್ಜೆಯ ಪರಿಣಾಮವು ಯು.ಎ.ಎಸ್‌ ಸಾಧನದಿಂದ ೨೩೩೭ ಮೀಟರ್‌ ಗಳಿಗಿಂತ ಹೆಚ್ಚು ಇದೆ; ಪರೀಕ್ಷಾ ಸ್ಥಳದಲ್ಲಿ ಸಾಕಷ್ಟು ಸ್ಥಳಾವಕಾಶವಿರಲಿಲ್ಲ. ಆದ್ದರಿಂದ ಅದನ್ನು ನಿಖರವಾಗಿ ಅಳೆಯಲು ಲೋಲಕವನ್ನು ಬಳಸಲಾಯಿತು.

೨. ಪರೀಕ್ಷಣೆಯಲ್ಲಿದ್ದ ವಸ್ತುಗಳ ನೊಂದಣಿಯ ವಿಶ್ಲೇಷಣೆ

೨ ಅ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿತ ಶಕ್ತಿ ಒಟ್ಟಿಗೆ ಇರುತ್ತದೆ ಎಂಬ ಅಧ್ಯಾತ್ಮದ ಸಿದ್ಧಾಂತಕ್ಕನುಸಾರ ಎಲ್ಲಿ ಸಂತರ ಹೆಸರು(ನಾಮ) ಇರುತ್ತದೆಯೋ ಅಲ್ಲಿ ಅವರ ಶಕ್ತಿ (ಚೈತನ್ಯ)ವಿರುತ್ತದೆ. ಎರಡೂ ನಾಮಫಲಕಗಳ ಮೇಲೆ ಶ್ರೀಗುರುಗಳ ಹೆಸರು ಇರುವುದರಿಂದ ಅವುಗಳಲ್ಲಿ ಆರಂಭದಲ್ಲಿ (ಅನಾವರಣದ ಮೊದಲು) ಶ್ರೀಗುರುಗಳ ಚೈತನ್ಯವು ಸೇರಿಕೊಂಡಿತ್ತು. ಸಂತರು (ಸದ್ಗುರು ಅನುರಾಧಾ ವಾಡೆಕರ) ನಾಮಫಲಕವನ್ನು ಅತ್ಯಂತ ಭಾವಪೂರ್ಣವಾಗಿ ಅನಾವರಣಗೊಳಿಸಿದರು. ಇದರಿಂದ ನಾಮಫಲಕಗಳ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಚೈತನ್ಯ ಕಾರ್ಯನಿರತವಾಗಿ ಅಗಾಧ ಪ್ರಮಾಣದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಯಿತು.

೨. ಆ. ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಇವರ ಜನ್ಮಸ್ಥಾನ ಮತ್ತು ಅಲ್ಲಿನ ವಾತಾವರಣ ಚೈತನ್ಯಭರಿತವಾಗಿದೆ. ಹಾಗಾಗಿ ಮನೆಯಲ್ಲಿರುವ ಮಣ್ಣು, ನೀರು, ವಾಯುಮಂಡಲ, ಹಾಗೂ ಮನೆಯ ಪರಿಸರದಲ್ಲಿರುವ ತುಳಸಿ, ಹೂವುಗಳು ಮತ್ತು ವೃಕ್ಷಗಳಲ್ಲಿ ಸಹ ಅಪಾರ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯು ಕಂಡುಬಂತು. ‘ಮುಂದಿನ ಅನೇಕ ಪೀಳಿಗೆಗೆ ಇದರ ಲಾಭವಾಗಬೇಕು’ ಎಂದು ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಇವರ ಜನ್ಮಸ್ಥಾನದ ಸಂರಕ್ಷಣೆ ಮಾಡಲಾಗುತ್ತಿದೆ. ಈ ಸಂಶೋಧನೆಯಿಂದ ಸಂತರ ಜನ್ಮಸ್ಥಾನವನ್ನು ಸಂರಕ್ಷಿಸುವ ಮಹತ್ವವು ಗಮನಕ್ಕೆ ಬರುತ್ತದೆ.

– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೪.೨೦೨೪)